ನರೇಗಾ ಯೋಜನೆಯಡಿ ಪುರುಷ ಮತ್ತು ಮಹಿಳೆಯರಿಗೆ ವಿವಿಧ ಹುದ್ದೆಗಳು ವೇತನ 40 ಸಾವಿರ

0

ವಿಷಯ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೊರ ಗುತ್ತಿಗೆ ಆಧಾರದ ಮೇಲೆ ಎ,ಡಿ,ಪಿ,ಸಿ, ಜಿಲ್ಲಾ ಎಂ ಐ ಎಸ್ ಸಂಯೋಜಕರು, ಹಾಗೂ ಜಿಲ್ಲಾ ಐ,ಇ,ಸಿ ಹಾಗೂ ಅಕೌಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುವ ಬಗ್ಗೆ.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಹೊಸದಾಗಿ ಸೃಜನೆಯಾಗಿರುವ ವಿಜಯನಗರ ಜಿಲ್ಲೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ, ಸಹಾಯಕ ಕಾರ್ಯಕ್ರಮ ಸಂಯೋಜನಾಧಿಕಾರಿ(ಎ,ಡಿ,ಪಿ,ಸಿ), ಜಿಲ್ಲಾ ಎಂ,ಐ,ಎಸ್ ಸಂಯೋಜಕರು, ಮತ್ತು ಜಿಲ್ಲಾ ಐ,ಇ ಸಂಯೋಜಕರು ಹಾಗೂ ಜಿಲ್ಲಾ ಅಕೌಂಟ್ ಮ್ಯಾನೇಜರ್ ಹುದ್ದೆಗಳನ್ನು ಉಲ್ಲೇಖ (2)ಹಾಗೂ (3)ರ ಮಾನ್ಯ ಸರ್ಕಾರದ ಪತ್ರದಲ್ಲಿ ನೀಡಲಾಗಿರುವ ನಿರ್ದೇಶನದಂತೆ ಹೊರಗುತ್ತಿಗೆ ಆಧಾರದ ಮೇಲೆ ಹೊರಗುತ್ತಿಗೆ ಸಂಸ್ಥೆಯ ಮೂಲಕ ಸೇವೆಯನ್ನು ಪಡೆಯಲು ಈ ಕೆಳಕಂಡ ಪಟ್ಟಿಯಲ್ಲಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ಹೆಸರು: ಸಹಾಯಕ ಕಾರ್ಯಕ್ರಮ ಸಂಯೋಜನಾಧಿಕಾರಿ(ADPC)=ಹುದ್ದೆಗಳ ಸಂಖ್ಯೆ 01
ವಿದ್ಯಾರ್ಹತೆ – BE/B. Techor,, MBA/MSW or Equivalent post Graduation Qualification from Indian institutes of Management or equivalent institution, or master in social welfare.
ವಯೋಮಿತಿ /ಸೇವಾನುಭವ – 25 ರಿಂದ 40 ವರ್ಷ ನರೇಗಾ ಅಥವಾ ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ 3 ವರ್ಷಕ್ಕಿಂತ ಹೆಚ್ಚಿನ ಸೇವಾನುಭವ.

ಜಿಲ್ಲಾ ಐ,ಇ,ಸಿ ಸಂಯೋಜಕರು
ಹುದ್ದೆಗಳ ಸಂಖ್ಯೆ 01. ವಿದ್ಯಾರ್ಹತೆ – post Graduation in Mass communication, or any graduation with diploma in Mass communication, related subjects and computer knowledge in the such candidates mentione above any post Graduation with computer knowledge.
ವಯೋಮಿತಿ /ಸೇವಾನುಭವ – 25 ರಿಂದ 40 ವರ್ಷ ಹಾಗೂ ಕನಿಷ್ಠ 03 ವರ್ಷಗಳ ಸೇವಾನುಭವ.

ಜಿಲ್ಲಾ ಎಂ,ಐ,ಎಸ್ ಸಂಯೋಜಕರು
ವಿದ್ಯಾರ್ಹತೆ – MCA or Bachelor of Engineering in computer /information science, MSC in computer science or any other equivalent qualification from recognised university.
ವಯೋಮಿತಿ /ಸೇವಾನುಭವ – 25 ರಿಂದ 40 ವರ್ಷ ಹಾಗೂ 03 ವರ್ಷಗಳ ಕನಿಷ್ಠ ಸೇವಾನುಭವ.

ಜಿಲ್ಲಾ ಅಕೌಂಟ್ ಮ್ಯಾನೇಜರ್ : ಹುದ್ದೆಗಳ ಸಂಖ್ಯೆ 01… ವಿದ್ಯಾರ್ಹತೆ – ಎಂಕಾಂ /MBA Finance, Articleship Certificate, GST Filling Certificate, Tally 9.0 ವಯೋಮಿತಿ / ಸೇವಾನುಭವ – 25 ರಿಂದ 35 ವರ್ಷ ಹಾಗೂ 02 ವರ್ಷಗಳ ಸಂಬಂಧಿಸಿದ ಕಾರ್ಯ ಕ್ಷೇತ್ರದಲ್ಲಿ ಸೇವಾನುಭವ.

ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ NIC ಜಿಲ್ಲಾ ವೆಬ್ ಸೈಟ್ bellary.nic.in ಮೂಲಕ ಅರ್ಜಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 20/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12/01/2022. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ ಜಿ,ಪಂ ಕಾರ್ಯಾಲಯಕ್ಕೆ ಹಾಜರಾಗಬೇಕಾದ ದಿನಾಂಕ 12/01/2022.

ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಪ್ರಕಟಣೆ ಮಾಡುವ ದಿನಾಂಕ 17/1/2022
ತಾತ್ಕಾಲಿಕ ಮೆರಿಟ್ ಪಟ್ಟಿಗಳಿಗೆ ಅಭ್ಯರ್ಥಿಗಳಿಂದ ಆಕ್ಷೇಪಣೆ ಆಹ್ವಾನ ದಿನಾಂಕ 18/01/2022 ರಿಂದ 25/01/2022  ರ ವರೆಗೆ. ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಶೀಲನೆ ಮಾಡಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆ ದಿನಾಂಕ 04/02/2022.

ಮಾಸಿಕ ಸಂಭಾವನೆ:ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕರು(ಎ,ಡಿ,ಪಿ,ಸಿ) ಹುದ್ದೆಗೆ ಮಾಸಿಕ ಸಂಭಾವನೆ ರೂ. 38000/-  ಹಾಗೂ ಪ್ರಯಾಣ ಭತ್ಯೆ 2000/- ರೂ ಗಳು.
ಜಿಲ್ಲಾ ಡಿ,ಎ,ಐ,ಎಸ್ /ಜಿಲ್ಲಾ ಐ,ಇ,ಸಿ ಸಂಯೋಜಕರು / ಜಿಲ್ಲಾ ಅಕೌಂಟ್ ಮ್ಯಾನೇಜರ್ ಹುದ್ದೆ ಮಾಸಿಕ ಸಂಭಾವನೆ 30000/- ರೂ ಗಳು ಹಾಗೂ ಪ್ರಯಾಣ ಭತ್ಯೆ 2000/- ರೂಗಳು.

Leave A Reply

Your email address will not be published.

error: Content is protected !!
Footer code: