ನಮ್ಮ ಸಿನಿಮಾ ತಾರೆಯರ ಅಮ್ಮ ಮಗಳು ಹೇಗಿದ್ದಾರೆ ನೋಡಿ

0

ಸ್ಯಾಂಡಲ್ ವುಡ್ ನಲ್ಲಿ ಅನೇಕ ನಟಿಯರು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಕೆಲವರು ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ಇನ್ನು ಕೆಲವರು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲು ಸಿನಿಮಾಗಳಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದು ಇದೀಗ ಕುಟುಂಬದವರೊಂದಿಗೆ ಜೀವನ ನಡೆಸುತ್ತಿದ್ದಾರೆ. ಅವರ ಮಕ್ಕಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಸಾಮಾನ್ಯವಾಗಿರುತ್ತದೆ. ಯಾವ ನಟಿಯ ಮಗಳು ಯಾರು ಎಂದು ಈ ಲೇಖನದಲ್ಲಿ ನೋಡೋಣ.

ಸ್ಯಾಂಡಲ್ ವುಡ್ ನಲ್ಲಿ ಅನೇಕ ನಟಿಯರು ಸಿನಿಮಾಗಳಲ್ಲಿ ನಟಿಸಿ ಜೀವನವನ್ನು ಕಟ್ಟಿಕೊಂಡಿದ್ದಾರೆ ಅವರಲ್ಲಿ ಪ್ರಮುಖರಾದವರೆಂದರೆ. ನಟಿ ಶ್ರುತಿ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ. ಅವರ ಮಗಳ ಹೆಸರು ಗೌರಿ ಅವರು ಕೂಡ ಹಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ನಟಿ ರೋಜಾ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಮಗಳ ಹೆಸರು ಅಂಶು ಮಾಲೀಕ. ಜಯಮಾಲಾ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮಗಳ ಹೆಸರು ಸೌಂದರ್ಯ ಜಯಮಾಲಾ. ಸುಧಾರಾಣಿ ಅವರ ಬಗ್ಗೆ, ಅವರ ನಟನೆಯ ಬಗ್ಗೆ ಎಷ್ಟು ಹೇಳಿದರೂ ಸಾಕಾಗುವುದಿಲ್ಲ. ಆಗಿನಕಾಲದ ಫೇಮಸ್ ನಟಿಯಾಗಿದ್ದರು, ಅವರ ಮಗಳ ಹೆಸರು ನಿಧಿ.‌ ನಟಿ ಲಕ್ಷ್ಮೀ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯ ನಟಿಯಾಗಿದ್ದಾರೆ ಅಲ್ಲದೆ ಇತ್ತೀಚೆಗೆ ಡ್ರಾಮಾ ಜೂನಿಯರ್ಸ್ ಶೋನ ಜಡ್ಜ್ ಆಗಿದ್ದರು. ಅವರ ಮಗಳ ಹೆಸರು ಐಶ್ವರ್ಯಾ ಭಾಸ್ಕರನ್.

ಮಾಲಾಶ್ರೀ ಅವರು ಸಿನಿಮಾಗಳಲ್ಲಿ ವಿಭಿನ್ನವಾಗಿ, ವಿಶೇಷವಾಗಿ ನಟಿಸುತ್ತಿದ್ದರು. ಅವರ ಮಗಳ ಹೆಸರು ಅನನ್ಯ.‌ ರೇಖಾದಾಸ್ ಅವರು ಅನೇಕ ಸಿನಿಮಾಗಳಲ್ಲಿ ಕಾಮಿಡಿ ಪಾತ್ರದಲ್ಲಿ ನಟಿಸಿ ಜನರನ್ನು ನಕ್ಕು ನಗಿಸಿದ್ದಾರೆ. ಅವರ ಮಗಳ ಹೆಸರು ಶ್ರಾವ್ಯ ರಾವ್ ಅವರು ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಲೋಕೇಶ್ ಅವರ ಪತ್ನಿ ಗಿರಿಜಾ ಲೋಕೇಶ್ ಅವರು ಮೊದಲು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು ನಂತರ ಸಿನಿಮಾಗಳಲ್ಲಿ ನಟಿಸಿದ್ದಾರೆ, ಪೋಷಕ ಪಾತ್ರದಲ್ಲೂ ಕೂಡ ಜನರನ್ನು ರಂಜಿಸಿದ್ದಾರೆ. ಅವರ ಮಗಳ ಹೆಸರು ಪೂಜಾ ಲೋಕೇಶ್. ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರು ಮಲ್ಲ, ಶ್ರೀಮತಿ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರ ಮಗಳ ಹೆಸರು ಐಶ್ವರ್ಯಾ ಉಪೇಂದ್ರ. ಮಧುಬಾಲ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ, ಸುದೀಪ್ ಅವರ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಅವರ ಮಕ್ಕಳ ‌ ಹೆಸರು ಅಮಯಾ ಮತ್ತು ಕೀಯಾ‌. ವಿನಯ ಪ್ರಸಾದ್ ಅವರು ಅನೇಕ ಸಿನಿಮಾಗಳಲ್ಲಿ ನಟಿಯಾಗಿ, ಪೋಷಕ ನಟಿಯಾಗಿ ನಟಿಸಿದ್ದಾರೆ ಅಲ್ಲದೆ ಈಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅವರ ಮಗಳ ಹೆಸರು ಪ್ರಥಮಾ ಪ್ರಸಾದ್. ಅರುಂಧತಿ ನಾಗ್ ಅವರು ಕೂಡ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮಗಳ ಹೆಸರು ಕಾವ್ಯ ನಾಗ್.

ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ರಾಜಕುಮಾರ್ ಅವರ ಜೊತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮಗಳ ಹೆಸರು ಕೀರ್ತಿ ವಿಷ್ಣುವರ್ಧನ್. ಸುಧಾ ಬೆಳವಾಡಿ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ, ಮುಂಗಾರುಮಳೆ ಚಿತ್ರದಲ್ಲಿ ಗಣೇಶ್ ಅವರ ತಾಯಿಯಾಗಿ ನಟಿಸಿದ್ದಾರೆ. ಅವರ ಮಗಳು ಸಂಯುಕ್ತ ಹೊರನಾಡು ಅವರು ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುಂದರರಾಜ್ ಅವರ ಪತ್ನಿ ಪ್ರಮೀಳಾ ಜೋಷಾಯಿ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮಗಳು ಮೇಘನಾ ರಾಜ್ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಮನೆ ಮಗಳಾಗಿದ್ದಾರೆ. ಅರ್ಜುನ್ ಸರ್ಜಾ ಅವರ ಪತ್ನಿ ಆಶಾರಾಣಿ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮಕ್ಕಳ ಹೆಸರು ಐಶ್ವರ್ಯಾ ಹಾಗೂ ಅಂಜನಾ. ಐಶ್ವರ್ಯಾ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೈ ಜಗದೀಶ್ ಅವರ ಪತ್ನಿ ವಿಜಯಲಕ್ಷ್ಮೀ ಸಿಂಗ್ ಅವರು ಪ್ರಸ್ತುತ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಮಕ್ಕಳ ಹೆಸರು ವೈಸಿರಿ, ವೈಭವಿ, ವೈನಿದಿ. ಖುಷ್ಬೂ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ರವಿಚಂದ್ರನ್ ಹಾಗೂ ಖುಷ್ಬೂ ಜೋಡಿ ಅಭಿಮಾನಿಗಳನ್ನು ಮೋಡಿ ಮಾಡಿತ್ತು. ಅವರ ಮಕ್ಕಳ ಹೆಸರು ಆನಂದಿತಾ ಹಾಗೂ ಅವಂತಿಕಾ. ತಾಯಿಗೆ ಕಡಿಮೆ ಇಲ್ಲ ಎನ್ನುವಂತೆ ಕನ್ನಡ ಚಿತ್ರರಂಗದ ನಟಿಯರ ಮಕ್ಕಳು ಇದ್ದಾರೆ. ಅವರ ಫೋಟೋಸ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.

Leave A Reply

Your email address will not be published.

error: Content is protected !!
Footer code: