WhatsApp Group Join Now
Telegram Group Join Now

ಮಾನವನ ದೇಹದ ಕೆಲವು ವಿಚಿತ್ರ ರಹಸ್ಯಗಳ ಬಗ್ಗೆ ತಿಳಿದು ಕೊಳ್ಳೋಣ. ಇವು ನಿಮಗೆ ಅಚ್ಚರಿ ಮೂಡಿಸುತ್ತವೆ. ಒಬ್ಬರ ನಾಲಿಗೆ ಇನ್ನೊಬ್ಬರ ತರಹ ಇರುವುದಿಲ್ಲ. ಬೆರಳಿನ ಅಚ್ಚು ಹೇಗೋ ಹಾಗೆ ಸಹಿ ಹಾಕುವುದಕ್ಕೆ ಬರದೆ ಇರುವವರು ಹೆಬ್ಬೆಟ್ಟು ಯಾಕೆ ಹೊತ್ತುತ್ತಾರೆ ಹೇಳಿ. ಯಾಕೆ ಅಂದರೆ ಬೆರಳಿನ ಅಚ್ಚು ಒಬ್ಬೊಬ್ಬರಿಗೂ ಬೇರೆ ಬೇರೆ ಹಾಗೆ ನಿಮ್ಮ ನಾಲಿಗೆಯ ಅಚ್ಚು ಕೂಡ ಬೇರೆಯವರ ತರಹ ಇರುವುದಿಲ್ಲ. ಒಂದು ಕೂದಲಲ್ಲಿ ಒಂದು ಸೇಬು ನೇತು ಹಾಕಬಹುದು. ಅಷ್ಟು ಶಕ್ತಿ ಇರುತ್ತದೆ ಒಂದು ಕೂದಲಿಗೆ.

ಭೂಮಿಯ ಮೇಲೆ ಎಷ್ಟು ಜನ ಇರುತ್ತಾರೋ ಅಷ್ಟೇ ಕೀಟಾಣುಗಳು ಸಹ ನಿಮ್ಮ ಬಾಯಿಯಲ್ಲೂ ಇರುತ್ತವೆ. ಆದರೆ ಅವು ನಿಮಗೆ ಯಾವ ರೀತಿಯಲ್ಲೂ ತೊಂದರೆ ಮಾಡುವುದಿಲ್ಲ. ನಿಮ್ಮ ಉಗುರಿನಲ್ಲಿ ಈ ತರಹ ಅರ್ಧ ಚಂದ್ರಾಕೃತಿಯ ಕಾಣಿಸುತ್ತಾ ಇಲ್ಲದೇ ಹೋದಲ್ಲಿ ಅಥವಾ ಉಗುರು ತುಂಬಾ ಮೃದುವಾಗಿದ್ದು ಬೇಗನೆ ಮುರಿದು ಹೋಗುತ್ತಿದ್ದರೆ ನಿಮ್ಮ ದೇಹದಲ್ಲಿ ಥೈರಾಯ್ಡ್ ಹಾರ್ಮೋನ ಹೆಚ್ಚಾಗಿದೆ ಅಂತ ಅರ್ಥ.

ನಿಮ್ಮ ಮೆದುಳಿಗೆ ತಲುಪುವ ವಿಚಾರಗಳು ಗಂಟೆಗೆ ನಾನ್ನೂರು ಕಿಲೋಮೀಟರ್ ವೇಗದಲ್ಲಿ ಚಲಿಸುತ್ತವೆ. ಮನುಷ್ಯನ ರಕ್ತದಲ್ಲಿ ಇಪ್ಪತ್ತೊಂದು ಬಗೆಯ ರಕ್ತವಿದೆ. ಅತೀ ಅಪರೂಪದ್ದು ಜಪಾನಿನ ಒಂದು ಸಣ್ಣ ಕುಟುಂಬದಲ್ಲಿ ಸಿಗುತ್ತದೆ. ಒಂದು ದಿನಕ್ಕೆ ನಮ್ಮ ರಕ್ತ ಇಡೀ ದೇಹ ಸುತ್ತು ಹಾಕಿ 19,312 ಕಿಲೋಮೀಟರ್ ಚಲಿಸುತ್ತದೆ. ನಮ್ಮ ದೇಹದ ನರಗಳನ್ನೆಲ್ಲಾ ಒಟ್ಟುಗೂಡಿಸಿ ನೋಡಿದರೆ ಅದರ ಉದ್ದ 75 ಕಿಲೋಮೀಟರ್ ಆಗುತ್ತದೆ. ಒಂದು ದಿನಕ್ಕೆ ಸರಿ ಸುಮಾರು ಇಪ್ಪತ್ತು ಸಾವಿರ ಬಾರಿ ಉಸಿರಾಡುತ್ತೇವೆ.

ನಮ್ಮ ಕಣ್ಣುಗಳು ಸುಮಾರು ಒಂದು ಕೋಟಿ ಬಣ್ಣಗಳನ್ನು ಗುರುತಿಸುತ್ತದೆ. ಆದರೆ ನಮ್ಮ ಮಿದುಳಿಗೆ ಅವನ್ನೆಲ್ಲ ನೆನಪಿನಲ್ಲಿ ಇಟ್ಟುಕೊಳ್ಳುವ ಶಕ್ತಿ ಇಲ್ಲ. ಮನುಷ್ಯ ಬದುಕಿರುವವರೆಗೂ ಅವನ ಕಿವಿ ಬೆಳಿತಾನೇ ಇರುತ್ತೆ. ವರ್ಷಕ್ಕೆ 0.25 ಮಿಲಿ ಮೀಟರ್ ನಷ್ಟು ಬೆಳೆಯುತ್ತದೆ. ನಮ್ಮ ಹೃದಯ ವರ್ಷಕ್ಕೆ ಮೂವತ್ತೈದು ಕೋಟಿ ಸಲ ಬಡಿದುಕೊಳ್ಳುತ್ತದೆ. ಪ್ರತಿದಿನ ನಮ್ಮ ದೇಹ ಸುಮಾರು ಒಂದು ಕೋಟಿ ಚರ್ಮಗಳನ್ನು ಪಡೆದುಕೊಳ್ಳುತ್ತದೆ. ಸರಿಯಾಗಿ ತೂಕ ಮಾಡಿದರೆ ಒಂದು ವರ್ಷಕ್ಕೆ ಎರಡು ಕಿಲೋ ಗೊತ್ತಾ.

ನಮ್ಮ ಚರ್ಮದ ಒಂದು square ಸೆಂಟಿಮೀಟರ್ ವಿಸ್ತೀರ್ಣದಲ್ಲಿ ನೂರಾರು ನೋವಿನ ಕೋಶಗಳಿರುತ್ತವೆ. ಹೆಣ್ಣು ಮಕ್ಕಳ ನಾಲಿಗೆಯಲ್ಲಿ ಗಂಡು ಮಕ್ಕಳಿಗಿಂತ ಜಾಸ್ತಿ ರುಚಿಯ ಕಣಗಳು ಇರುತ್ತವೆ. ಒಬ್ಬ ಮನುಷ್ಯ ತನ್ನ ಜೀವಿತ ಅವಧಿಯಲ್ಲಿ ಒಟ್ಟು 35 ಟನ್ ಆಹಾರ ತಿನ್ನುತ್ತಾನೆ. ಒಬ್ಬ ಮನುಷ್ಯ ಕೇವಲ ಕಣ್ಣು ಮಿಟುಕಿಸುವುದರಲ್ಲಿ ಐದು ವರ್ಷ ಕಳೆಯುತ್ತಾನೆ. ಕಣ್ಣು ಮಿಟುಕಿಸುತ್ತಲೆ ಕೆಲವರು ಬೇರೆ ಕೆಲಸವನ್ನು ಸಹ ಮಾಡುತ್ತಾರೆ. ಒಂದು ಸೆಕೆಂಡಿನಲ್ಲಿ ನಮ್ಮ ಮೆದುಳಿನಲ್ಲಿ ಒಂದು ಲಕ್ಷ ರಾಸಾಯನಿಕ ಕ್ರಿಯೆಗಳು ಆಗುತ್ತವೆ.

ನೀವು ಶೀತಾ ಆದಾಗ ಸೀನು ಬರುತ್ತದೆಯಲ್ಲ ಅದರ ವೇಗ ಗಂಟೆಗೆ 160 ಕಿಲೋಮೀಟರ್ ಇರುತ್ತದೆ. ನಕ್ಕಾಗ ನಿಮ್ಮ ಮುಖದ ಹದಿನೇಳು ಬೇರೆ ಬೇರೆ ಮಾಂಸ ಖಂಡಗಳು ಕೆಲಸ ಮಾಡುತ್ತದೆ. ಆದರೆ ಅತ್ತಾಗ ನಲವತ್ತಮೂರು ಮಾಂಸ ಖಂಡಗಳು ಕೆಲಸ ಮಾಡುತ್ತವೆ. ಗಂಡಸರಿಗೆ ಒಂದು ದಿನಕ್ಕೆ ನಲವತ್ತು ಕೂದಲು ಉದುರಿದರೆ ಹೆಂಗಸರಿಗೆ ಎಪ್ಪತ್ತು ಕೂದಲು ಉದುರುತ್ತದೆ. ಮನುಷ್ಯನಿಗೆ ನೀರಿನಿಂದ ಸಿಗುವ ಶಕ್ತಿ, ಆಹಾರ ಬೇರೆ ಪದಾರ್ಥಗಳಿಂದ ಸಿಗುವುದಿಲ್ಲ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: