ನಟ ಶಿವರಾಜಕುಮಾರ್ ಅವರ ಮಗಳು ಈಗ ಹೇಗಿದ್ದಾರೆ ಗೊತ್ತೇ?

0

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಅವರು ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರ ಮಗನಾದ ಶಿವರಾಜಕುಮಾರ್ ಅವರು ಅನೇಕ ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟಿಯರೊಂದಿಗೆ ಶಿವರಾಜಕುಮಾರ್ ಅವರು ನಟಿಸಿದ್ದಾರೆ. ಶಿವರಾಜಕುಮಾರ್ ಅವರ ಕುಟುಂಬದವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ಐದು ಜನ ಮಕ್ಕಳಲ್ಲಿ ಶಿವರಾಜಕುಮಾರ್ ಅವರು ಹ್ಯಾಟ್ರಿಕ್ ಹೀರೊ ಎಂದೆ ಪ್ರಸಿದ್ಧರಾಗಿದ್ದಾರೆ. ಅವರಿಗೆ ಪುನೀತ್ ರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಎಂಬ ಇಬ್ಬರು ಸಹೋದರರಿದ್ದಾರೆ ಹಾಗೂ ಪೂರ್ಣಿಮಾ ಮತ್ತು ಲಕ್ಷ್ಮೀ ಎಂಬ ಸಹೋದರಿಯರಿದ್ದಾರೆ. ಶಿವರಾಜಕುಮಾರ್ ಅವರು ಗೀತಾ ಎಂಬವವರೊಂದಿಗೆ ವಿವಾಹವಾಗಿದ್ದಾರೆ. ಅವರಿಗೆ ನಿರುಪಮಾ ಮತ್ತು ನಿವೇದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇತ್ತೀಚೆಗೆ ನಿರುಪಮಾ ಮತ್ತು ದಿಲೀಪ್ ಅವರ ಮದುವೆಯನ್ನು ಅದ್ದೂರಿಯಾಗಿ ಮಾಡಲಾಯಿತು. ಅನೇಕ ಗಣ್ಯರು ಮದುವೆಯಲ್ಲಿ ಪಾಲ್ಗೊಂಡು ನವ ವಧುವರರಿಗೆ ಶುಭ ಹಾರೈಸಿದರು.

ಶಿವರಾಜಕುಮಾರ್ ಅವರು ತಮ್ಮ ಕುಟುಂಬದವರ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ, ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಶಿವರಾಜಕುಮಾರ್ ಅವರು ಮಕ್ಕಳ ವಿದ್ಯಾಭ್ಯಾಸಕ್ಕೆ ಗಮನಕೊಟ್ಟು ಅವರೆ ಟ್ಯೂಷನ್ ಹೇಳಿ ಕೊಡುತ್ತಿದ್ದರು ಎನ್ನುವುದು ವಿಶೇಷ. ಶಿವರಾಜಕುಮಾರ್ ಹಾಗೂ ಅವರ ಮಗಳು ನಿವೇದಿತಾ ಅಭಿನಯದ ತಂದೆ ಮಗಳ ಡ್ಯಾಡಿ ಮೈ ಲವ್ಲಿ ಡ್ಯಾಡಿ ಎಂಬ ಹಾಡು ಸೂಪರ್ ಹಿಟ್ ಆಗಿತ್ತು. ಈಗ ನಿವೇದಿತಾ ಅವರು ಸಿನಿಮಾದಲ್ಲಿ ನಟನೆ ಮಾಡುತ್ತಿಲ್ಲ ಆದರೆ ವೆಬ್ ಸಿರೀಸ್ ಗೆ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಶಿವರಾಜಕುಮಾರ್ ಅವರದು ಭವ್ಯವಾದ ಮನೆ ಇದೆ, ಅಲ್ಲದೆ ಅವರ ಬಳಿ ಉತ್ತಮ ಕಂಪನಿಯ ಕಾರುಗಳಿವೆ. ಶಿವರಾಜಕುಮಾರ್ ಅವರ ಕುಟುಂಬದವರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಈಗಲೂ ಯಂಗ್ ಅಂಡ್ ಎನರ್ಜಿಟಿಕ್ ಆಗಿ ತೆರೆಯ ಮೇಲೆ ನಟಿಸುತ್ತಿರುವ ಶಿವರಾಜಕುಮಾರ್ ಅವರು ಹೆಚ್ಚು ಸಿನಿಮಾಗಳಲ್ಲಿ ನಟಿಸಲಿ ಹಾಗೂ ಅವರ ಮಗಳು ನಿವೇದಿತಾ ಅವರಿಗೂ ಅವಕಾಶಗಳು ಸಿಗಲಿ ಎಂದು ಆಶಿಸೋಣ.

Leave A Reply

Your email address will not be published.

error: Content is protected !!