ಆತ್ಮೀಯ ಓದುಗರೇ ಕನ್ನಡದ ಸಿನಿಮಾಗಳಲ್ಲಿ ತನ್ನದೆಯಾದ ವಿಶೇಷ ಪಾತ್ರಗಳಿಂದ ಗುರುತಿಸಿಕೊಂಡಿದ್ದ ಖಳನಟ ವಜ್ರಮುನಿ ನಿಜಕ್ಕೂ ಒಂದುಕಾಲದಲ್ಲಿ ವಿಲನ್ ಆಗಿ ದೂಳೆಬ್ಬಿಸಿದ್ದಂತ ನಟ ಅಂತಹ ನಟ ನಮ್ಮ ಕಣ್ಣಮುಂದೆ ಇನ್ನು ಎಲ್ಲ ಅನ್ನೋದೇ ದುರಂತ, ಬಹಳಷ್ಟು ಜನಕ್ಕೆ ಈ ಖಳನಟ ಏನಾದ್ರು ಹಾಗೂ ಇವರ ಫ್ಯಾಮಿಲಿ ಈಗ ಏನ್ ಮಾಡ್ತಿದೆ ಅನ್ನೋದೇ ಗೊತ್ತಿಲ್ಲ ಅದರ ಕುರಿತು ಇಲ್ಲಿ ಸಂಪೂರ್ಣವಾಗಿ ಹೇಳುತ್ತಾ ಹೋಗುತ್ತೇವೆ ಬನ್ನಿ. ಕನ್ನಡ ಚಿತ್ರರಂಗದಲ್ಲಿ ತನ್ನ ಕಂಚಿನ ಕಂಠದಿಂದಲೇ ಕರ್ನಾಟಕದ ಮನೆ ಮಾತಾಗಿದ್ದವರು ವಜ್ರಮುನಿ. ಇಂದು ನಾವು ವಜ್ರಮುನಿ ಅವರಜೀವನದ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳೋಣ. ಸುಮಾರು ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ವಜ್ರಮುನಿ ಅವರು ತಮ್ಮ ಖಳನಾಯಕನ ಪಾತ್ರದಲ್ಲಿ ತುಂಬಾ ಮೆಚ್ಚುಗೆಯನ್ನು ಪಡೆದಿದ್ದರು ಅನೇಕ ಬಿರುದುಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಹೌದು ಚಿತ್ರ ರಂಗದಲ್ಲಿ ಯಶಸ್ಸುಕಂಡ ಇವರ ವಯಕ್ತಿಕ ಜೀವನ ಹೇಗಿತ್ತು ಎಂಬುದನ್ನು ನೋಡುವುದಾದರೆ ವಜ್ರಮುನಿ ಅವರು ಭೋಜನ ಪ್ರಿಯರಾಗಿದ್ದರಂತೆ ಅವರ ಚಿಕ್ಕಮ್ಮಂದಿರು ಮಾಡುವ ಅಡುಗೆಯನ್ನು ತುಂಬಾ ಇಷ್ಟ ಪಡುತ್ತಿದ್ದರಂತೆ ಅವರು ಮನೆಗೆ ಬಂದಾಗ ವಜ್ರಮುನಿ ಅವರು ಮೀನುಗಳನ್ನು ತಂದು ಚಿಕ್ಕಮ್ಮಂದಿರ ಕೈಯಲ್ಲಿ ಅಡುಗೆ ಮಾಡಿಸಿಕೊಂಡು ತಿನ್ನುತ್ತಿದ್ದರಂತೆ.

ವಜ್ರಮುನಿ ಸಿನಿಮಕ್ಕಾಗಿ ತಮ್ಮ ಸ್ವಲ್ಪ ಆಸ್ತಿಯನ್ನು ಕಳೆದುಕೊಂಡಿದ್ದರು ಆದರೆ ಮನೆಯಲ್ಲಿ ಊಟ ತಿಂಡಿಗೆ ಯಾವುದೇ ಸಮಸ್ಯೆ ಇಲ್ಲವಾಗಿತ್ತು ವಜ್ರಮುನಿ ಅವರು ತರಕಾರಿಗಳಿಗಿಂತ ಮಾಂಸಾಹಾರ ತುಂಬಾ ಇಷ್ಟ ಪಡುತ್ತಿದ್ದರಂತೆ. ಇವರು ಮನೆಯಲ್ಲಿದ್ದಾಗ ಊಟಕ್ಕೆ ಮನೆಯವರನ್ನು ಬಿಟ್ಟು ಯಾರಾದರೂ ಐದುಜನ ಹೊರಗಡೆಯವರು ಊಟಕ್ಕಿರುತ್ತಿದ್ದರಂತೆ.

ಮನೆಗೆ ಯಾರೇ ಬಂದರೂ ಹಾಗೆ ಹೋಗುವಂತಿಲ್ಲ ಊಟ ಮಾಡಿಕೊಂಡು ಹೋಗಬೇಕು ಎನ್ನುವುದು ಇವರ ನಿಯಮವಾಗಿತ್ತಂತೆ. ಬೆಂಗಳೂರಿನಲ್ಲಿ ಇವರ ಚಿತ್ರೀಕರಣ ನಡೆಯುತ್ತಿದ್ದರೆ ಮನೆಯಿಂದಲೇ ಊಟ ತರಿಸಿಕೊಳ್ಳುತ್ತಿದ್ದರಂತೆ. ಮನೆಯಲ್ಲಿ ತುಂಬಾ ಸಾಧಾರಣವಾದ ಬಟ್ಟೆಯನ್ನು ಧರಿಸುತ್ತಿದ್ದರಂತೆ ಇವರಿಗೆ ಆಭರಣಗಳ ಮೇಲೆ ಅಷ್ಟು ಆಸಕ್ತಿ ಇಲ್ಲವಾಗಿತ್ತಂತೆ ಕೈಯಲ್ಲಿ ಒಂದು ಉಂಗುರ ಕೊರಳಲ್ಲಿ ಒಂದು ಚೈನು ಮತ್ತು ಕೈಗಡಿಯಾರವನ್ನು ಧರಿಸುತ್ತಿದ್ದರು.

ಇವರ ಮನೆ ತುಂಬು ಕುಟುಂಬವಾಗಿದ್ದು ಮೂವತ್ತು ಜನರು ಒಟ್ಟಿಗೆ ವಾಸಿಸುತ್ತಿದ್ದರಂತೆ ಈಗ ಬೇರೆ ಬೇರೆ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಇವರು ಮದುವೆ ಅಥವಾ ಬೇರೆ ಕಾರ್ಯಕ್ರಮಗಳಿಗೆ ಹೋದಾಗ ಅಲ್ಲಿ ಊಟವನ್ನುಮಾಡುತ್ತರಲಿಲ್ಲ. ಇವರು ತಮ್ಮ ಮಕ್ಕಳನ್ನು ಯಾರನ್ನು ಚಿತ್ರೀಕರಣ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿರಲಿಲ್ಲ. ಆದ ಕಾರಣ ಇವರ ಮಕ್ಕಳು ಯಾರು ಚಲನ ಚಿತ್ರಗಳಲ್ಲಿ ಅಭಿನಯಿಸುವ ಆಸಕ್ತಿಯನ್ನು ತೋರಿಸಲಿಲ್ಲವಂತೆ ಆದರೆ ಈಗ ಇವರ ಮೊಮ್ಮಗ ಚಿತ್ರಗಳಲ್ಲಿ ನಟಿಸುವುದಕ್ಕೆ ಪ್ರಾರಂಭಿಸಿದ್ದಾರೆ.

ವಜ್ರಮುನಿ ಅವರು ಸ್ವಲ್ಪ ಆಸ್ತಿಯನ್ನು ಮಾಡಿದ್ದರು ಆದರೆ ಅದನ್ನು ಸಿನಿಮಾಕ್ಕಾಗಿ ಕಳೆದುಕೊಂಡರು ಈಗ ಅವರ ಕುಟುಂಬದವರ ಬಳಿ ಸುಮಾರು ಇಪ್ಪತ್ತು ಏಕರೆ ಜಾಗ ಇದೆ ಈ ಜಾಗದಲ್ಲಿರುವ ತೋಟದಲ್ಲಿ ವಜ್ರಮುನಿಯವರ ಸಮಾಧಿ ಇದೆ ಇದನ್ನು ಮನೆಯವರೇ ಕಟ್ಟಿಸಿಕೊಂಡಿದ್ದಾರೆ. ಮೇ ಹನ್ನೊಂದು ಇವರ ಜನ್ಮದಿನ ಆದ್ದರಿಂದ ಇವರ ಅಭಿಮಾನಿಗಳು ಅಲ್ಲಿಗೆ ಹೋಗಿಬರುತ್ತಾರೆ ಮತ್ತು ಜನವರಿ ಐದರಂದು ಇವರ ಅಭಿಮಾನಿಗಳು ಅಲ್ಲಿಗೆ ಬಂದು ಪೂಜೆ ಮಾಡಿಕೊಂಡು ಹೋಗುತ್ತಾರಂತೆ.

ಅಂಜನಾಪುರ ವಜ್ರಮುನಿ ಅವರ ಮೂಲ ಸ್ಥಳ ಕೆಂಪೇಗೌಡರ ಆಳ್ವಿಕೆಯ ಕಾಲದಲ್ಲಿ ಒಂದು ಹುಲಿ ಊರನ್ನು ಸೆರಿಕೊಂಡಿತ್ತಂತೆ ಅದನ್ನು ಇವರ ಮುತ್ತಾತಂದಿರು ಹಿಡಿದುಕೊಟ್ಟ ಕಾರಣ ಮೈಸೂರು ರಾಜರು ಅವರಿಗೆ ಬಿರುದನ್ನು ಕೊಟ್ಟು ಅವರನ್ನು ಅಂಜನಾಪುರದ ಪಾಳೆಗಾರರು ಎಂದು ಹೇಳಿದರಂತೆ. ವಜ್ರಮುನಿ ಅವರು ಮಾತುಗಾರರು ಯಾರಾದರೂ ಮಾತಿಗೆ ಕುತ್ತರೆ ತುಂಬಾ ಮಾತನಾಡುತ್ತಿದ್ದರು. ಕೆಲವೊಮ್ಮೆ ಮನೆಯಲ್ಲಿ ಊಟ ಸರಿ ಆಗದಿದ್ದಲ್ಲಿ ಹೋಟೆಲ್ ಗಳಿಂದ ತರಿಸಿಕೊಂಡು ತಿನ್ನುತ್ತಿದ್ದರಂತೆ ಅವರು ಭೋಜನ ಪ್ರಿಯರಾಗಿದ್ದು ನಾಲ್ಕು ಜನರಿಗೆ ಊಟ ಹಾಕಿ ನಾವು ತಿನ್ನಬೇಕು ಎಂದು ಯಾವಾಗಲೂ ಹೇಳುತ್ತಿದ್ದರಂತೆ.

ನಿಜ ಜೀವನದಲ್ಲಿ ತಾವು ಕಷ್ಟದಲ್ಲಿದ್ದರೂ ಪರರ ಕಷ್ಟವನ್ನಾಲಿಸಿ ಸಹಾಯ ಮಾಡುತ್ತಿದ್ದಂತಹ ಸಹೃದಯಿ ಅವರು ತೆರೆಮೇಲೆ ಮಾತ್ರ ಕಠಿಣ ಹೃದಯದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ವಜ್ರಮುನಿ ಅವರು ತಮ್ಮ ಕಿಡ್ನಿ ವೈಫಲ್ಯದಿಂದಾಗಿ ಎರಡು ಸಾವಿರದ ಆರು ಜನೆವರಿ ಐದರಂದು ತಮ್ಮ ಕೊನೆಯುಸಿರನ್ನೇಳೆದರು. ತಮ್ಮ ಚಿತ್ರಗಳಲ್ಲಿ ಮಾತ್ರ ಖಳನಾಯಕರಾಗಿದ್ದ ಇವರು ನಿಜ ಜೀವನದಲ್ಲಿ ತುಂಬಾ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು ತಮ್ಮ ಅಮೋಘವಾದ ನಟನೆಯ ಮೂಲಕ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ನಿಮಗೆ ಇವರ ಜೀವನ ಕಥೆ ಇಷ್ಟವಾದಲ್ಲಿ ಮರೆಯದೆ ಇದನ್ನ ನಿಮ್ಮ ಸ್ನೇಹಿತರಲ್ಲಿ ಹಂಚಿಕೊಳ್ಳಿ

By admin

Leave a Reply

Your email address will not be published. Required fields are marked *

error: Content is protected !!
Footer code: