WhatsApp Group Join Now
Telegram Group Join Now

ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಅವರ ನಂತರದಲ್ಲಿ ಪುತ್ರ ದರ್ಶನ್ ಸಹ ದೊಡ್ಡ ಸ್ಟಾರ್ ನಟನಾಗಿ ಬೆಳೆದರು. ದರ್ಶನ್ ಸಹೋದರ ದಿನಕರ್ ತೂಗುದೀಪ ಕೂಡ ನಿರ್ದೇಶಕನಾಗಿ ಒಳ್ಳೆಯ ಖ್ಯಾತಿ ಗಳಿಸಿದ್ದಾರೆ. ಈ ಮೂವರ ಹಿಂದೆ ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದವರು ದರ್ಶನ್ ತಾಯಿ ಮೀನಾ ತೂಗುದೀಪ. ಚಿತ್ರರಂಗದ ಖ್ಯಾತ ಕಲಾವಿದ ತೂಗುದೀಪ ಶ್ರೀನಿವಾಸ್ ಅವರಿಗೆ ಕಿಡ್ನಿ ಸಮಸ್ಯೆಯಿತ್ತು. ಎರಡು ಕಿಡ್ನಿಗಳು ವೈಫಲ್ಯವಾಗಿ ಸಾವು ಬದುಕಿನಲ್ಲಿ ಹೋರಾಡುತ್ತಿದ್ದರು. ಈ ಸಂದರ್ಭದಲ್ಲಿ ಪತ್ನಿ ಮೀನಾ ತೂಗುದೀಪ ಅವರೇ ಗಂಡನಿಗೆ ಒಂದು ಕಿಡ್ನಿ ದಾನ ಮಾಡಿ ಅವರ ಪ್ರಾಣ ಉಳಿಸಿಕೊಂಡಿರು.

ಕಿಡ್ನಿ ಕೊಟ್ಟ ಮೇಲೆ ತೂಗುದೀಪ ಶ್ರೀನಿವಾಸ ಮೊದಲಿನಂತೆ ಆಗ್ತಾರೆ ಎಂಬ ಬಹುದೊಡ್ಡ ಆಸೆ ಮನೆಯವರಲ್ಲಿತ್ತು. ಆ ಆಸೆ ಹೆಚ್ಚು ಕಾಲ ಉಳಿಯಲಿಲ್ಲ ಎನ್ನುವುದು ತೀರಾ ನೋವಿನ ಸಂಗತಿ. 52 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಖ್ಯಾತ ಕಲಾವಿದ ಶ್ರೀನಿವಾಸ ನಿಧನರಾದರು.

ಶ್ರೀನಿವಾಸ್ ಅವರು ಇದ್ದಾಗಲೇ ದರ್ಶನ್ ನೀನಾಸಂಗೆ ಹೋಗಿದ್ದ, ಒಬ್ಬ ತಾಯಿಯಾಗಿ ನಾನು ಅವನಿಗಾಗಿ ಮಾಡಬಹುದಾದ ಎಲ್ಲಾ ಕರ್ತವ್ಯ ಮಾಡಿದ್ದೇನೆ, ನಂತರ ದಿನಕರ್ ಕೂಡ ಅದೇ ರೀತಿ ಹೆಸರು ಮಾಡಬೇಕು ಅಂತ ಕನಸು ಕಂಡೆ. ಚಿಕ್ಕ ವಯಸ್ಸಿನಿಂದಲೇ ಅವನಿಗೆ ಕಥೆ ಬರೆಯುವ ಆಸಕ್ತಿ ಇತ್ತು ನಾನು ಗಮನ ಕೊಟ್ಟಿರಲಿಲ್ಲ. ಸರ್ಕಾರಿ ಕೆಲಸ ಸಿಗಲಿ ಎಂದು ಬಯಸಿದ್ದೆ ಆದರೆ ಅವನು ಜೊತೆ ಜೊತೆಯಲಿ ಸಿನಿಮಾ ಮಾಡಿ ಯಶಸ್ವಿಯಾದ ನಾನು ನಿರ್ಮಾಪಕಿ ಆದೆ. ತೂಗುದೀಪ ಪ್ರೊಡಕ್ಷನ್ಸ್ ಮೂಲಕ ದರ್ಶನ್ ತಂದೆಯ ಹೆಸರನ್ನು ಚಿರಾಯುವಾಗಿ  ಎಂದು ಮಕ್ಕಳ ಬಗ್ಗೆ ಮೀನಾ ಹೆಮ್ಮೆಯಿಂದ ಮಾತಾಡಿದ್ದಾರೆ.

ತೂಗುದೀಪ ಶ್ರೀನಿವಾಸ್ ಅವರ 2 ಕಿಡ್ನಿ ವೈಫಲ್ಯವಾದಾಗ ಮೀನಾ ಅವರು ಒಂದು ಕಿಡ್ನಿ ನೀಡಿದ್ದರು. ಕಿಡ್ನಿ ಕೊಟ್ಟ ಮೇಲೆ ಒಂದು ವರ್ಷ ಅವರು ನಮ್ಮ ಜೊತೆ ಚನ್ನಾಗಿ ಇದ್ದರು. ನಾನು ಕಿಡ್ನಿ ಕೊಡುವಾಗ ನಮ್ಮ ಮೂರು ಮಕ್ಕಳಿಗೆ ತುಂಬಾ ಬೇಜಾರಾಗಿತ್ತಂತೆ. ಆಪರೇಷನ್ ಆದ ಮೇಲೆ ನಂಗೆ ಪ್ರಜ್ಞೆ ಬಂದಿದ್ದೆ ಮೂರು ದಿನದ ನಂತರ. ತೂಗುದೀಪ ಅವರಿಗೆ ಕೂಡಲೇ ಪ್ರಜ್ಞೆ ಬಂದಿದೆ, ಒಂದೇ ಆಸ್ಪತ್ರೆಯಲ್ಲಿ ಇದ್ದರು ನನಗೆ ಪತ್ರ ಬರೆದು, ‘ಮೀನಾ, ನಾನು ಚೆನ್ನಾಗಿದ್ದೆನೆ, ನಿನಗೆ ಪ್ರಜ್ಞೆ ಬಂತಾ ಎಂದು ಬರೆದಿದ್ದರು ಎಂದು ಸಂದರ್ಶನದಲ್ಲಿ ನೆನಪಿಸಿ ಕೊಂಡಿದ್ದಾರೆ.

ಕಿಡ್ನಿ ವೈಫಲ್ಯ,, ತನ್ನ ಗಂಡನಿಗೆ ತನ್ನಲ್ಲಿದ್ದ ಎಲ್ಲ ಒಡವೆಗಳನ್ನು ಮಾರಿದ್ದ ಮೀನಾ ತೂಗುದೀಪ ಅ ಅಂದು ಪಟ್ಟ ಕಷ್ಟ ಹೇಳತೀರದು. ಅದು ಕಣ್ಣೀರಿನ ದಿನಗಳು ಎಂದು ಸಂದರ್ಶನ ಒಂದರಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಭಾವುಕರಾಗಿದ್ದರು. ಮಕ್ಕಳ ಭವಿಷ್ಯಕ್ಕಾಗಿ ಅವರನ್ನು ಬೆಳಸಿ, ಪೋಷಿಸಿದ್ದ ಗಟ್ಟಿಗಿತ್ತಿ ಮೀನಾ ತೂಗುದೀಪ. ಇಂತಹ ಕಷ್ಟದ ದಿನಗಳಲ್ಲಿ ದರ್ಶನ್ ಹಾಲು ಮಾರಿ ನಂತರ ಸಿನಿಮಾ ರಂಗದಲ್ಲಿ ಲೈಟ್ ಬಾಯ್ ಆಗಿ ದುಡಿದು ತಾಯಿಗೆ ನೆರವಾಗಿದ್ದರು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: