ಸುಧಾರಾಣಿ ಕನ್ನಡ ಸಿನಿಮಾರಂಗದಲ್ಲಿ ಹೆಸರುಗಳಿಸಿದರು ನಟಿಮಣಿಯರಲ್ಲಿ ಇವರು ಕೂಡ ಒಬ್ಬರು. ಎಂಬತ್ತು ತೊಂಬತ್ತರ ದಶಕದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡವರು ಸುಧಾರಾಣಿ. ತಮ್ಮ ನಟನೆಯ ಮೂಲಕ ಅನೇಕ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ. ತಮ್ಮ ಚಿಕ್ಕವಯಸ್ಸಿನಲ್ಲಿಯೇ ಸಿನಿಮಾರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ ಇವರು ಅನೇಕ ಉತ್ತಮ ಸಿನಿಮಾಗಳಲ್ಲಿ ನಟನೆಯನ್ನ ಮಾಡಿ ಜನರನ್ನು ರಂಜಿಸಿದ್ದಾರೆ. ಈಗ ಇವರಿಗೆ ನಲವತ್ತೆಂಟು ವರ್ಷ ವಯಸ್ಸಾಗಿದ್ದರೂ ಈಗಲೂ ಕೂಡ ಬೇಡಿಕೆಯಲ್ಲಿರುವ ನಟಿಯಾಗಿದ್ದಾರೆ. ಇಪ್ಪತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ನಟಿಸಿದ ಇವರು ಸದ್ಯ ಪೋಷಕ ನಟಿ ಪಾತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇವರು ಶಿವರಾಜ್ ಕುಮಾರ್ ಅವರ ಸಿನಿಮಾಕ್ಕೆ ನಾಯಕ ನಟಿಯಾಗಿ ನಟಿಸುವ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟವರು. ನಂತರ ಕನ್ನಡದ ಎಲ್ಲ ಮೇರು ಕಲಾವಿದರ ಜೊತೆ ನಟಿಸುತ್ತಾರೆ ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಸಿನಿಮಾಗಳಲ್ಲಿಯೂ ಕೂಡ ನಟನೆಯನ್ನ ಮಾಡಿ ಸೈ ಎನಿಸಿಕೊಳ್ಳುತ್ತಾರೆ. ಇನ್ನು ಇವರ ವೈಯಕ್ತಿಕ ಜೀವನವನ್ನು ನೋಡುವುದಾದರೆ ಸುಧಾರಾಣಿ ಅವರು ಬೆಂಗಳೂರಿನಲ್ಲಿ ವಾಸವಿದ್ದಾರೆ ತಮ್ಮದೇ ಆದ ಸುಂದರ ಮನೆಯನ್ನು ಕಟ್ಟಿಕೊಂಡಿದ್ದಾರೆ ಚಾರ್ಟೆಡ್ ಅಕೌಂಟೆಂಟ್ ಗೋವರ್ಧನ್ ಅವರನ್ನು ವಿವಾಹವಾಗಿದ್ದಾರೆ ಇವರಿಗೆ ಒಬ್ಬಳು ಮಗಳಿದ್ದಾಳೆ ಇವರ ಮಗಳ ಹೆಸರು ನಿಧಿ.

ಪತಿ ಗೋವರ್ಧನ್ ಹಾಗೂ ಮಗಳು ನಿಧಿ ಅವರೊಂದಿಗೆ ಕಾಲ ಕಳೆಯುವುದರ ಮೂಲಕವಾಗಿ ತಮ್ಮ ಕುಟುಂಬಕ್ಕೆ ತುಂಬಾ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ತಮ್ಮ ಮಗಳು ನಿಧಿಗೆ ಮನೆ ಕೆಲಸ ಎಲ್ಲವನ್ನೂ ಸುಧಾರಾಣಿ ಅವರು ಕಲಿಸಿದ್ದಾರೆ ನಿಧಿ ಅವರಿಗೆ ತಾಯಿಯಂತೆ ತಾನು ಸಿನಿಮಾರಂಗಕ್ಕೆ ಬರಬೇಕು ಎಂಬ ಯಾವುದೇ ಆಸೆಗಳು ಇಲ್ಲ. ಇತ್ತೀಚಿಗೆ ಸುಧಾರಾಣಿ ಅವರು ತಮ್ಮ ಕುಟುಂಬದೊಂದಿಗೆ ಕಳೆದ ಸುಂದರ ಕ್ಷಣಗಳ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿಯನ್ನು ಉಂಟುಮಾಡಿದೆ. ಸುಧಾರಾಣಿಯವರಿಗೆ ಸಿನಿಮಾ ರಂಗದಲ್ಲಿ ಅವರು ಆಸೆಪಡುವ ಪಾತ್ರಗಳು ಇನ್ನೂ ಹೆಚ್ಚು ಹೆಚ್ಚು ಸಿಗಲಿ ಅವರ ಕುಟುಂಬ ಯಾವಾಗಲೂ ಸದಾ ಖುಷಿಯಿಂದ ಇರಲಿ ಎಂದು ನಾವೆಲ್ಲರೂ ಹಾರೈಸೋಣ.

By admin

Leave a Reply

Your email address will not be published. Required fields are marked *

error: Content is protected !!
Footer code: