ನಟಿ ಶ್ರೀ ಲೀಲಾ ದತ್ತು ಪಡೆದ ಮಕ್ಕಳು ಯಾರು ಗೊತ್ತಾ? ನಿಜಕ್ಕೂ ಇವರ ಹಿನ್ನಲೆ ಏನು ನೋಡಿ

0

ಹುಟ್ಟಿದ ಮಗು ಖಾಲಿ ಮಣ್ಣಿನ ಮುದ್ದೆಯಂತಿರುತ್ತದೆ ಆ ಮಗುವಿಗೆ ಪ್ರಪಂಚದ ಜ್ಞಾನವಾಗಲಿ, ಸ್ವಾರ್ಥವಾಗಲಿ ಏನೂ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಮಕ್ಕಳು ಸೂಕ್ಷ್ಮ ಇರುತ್ತಾರೆ ಅದರಲ್ಲೂ ವಿಶೇಷ ಚೇತನ ಮಕ್ಕಳಂತೂ ಬಹಳ ಸೂಕ್ಷ್ಮ ಇರುತ್ತಾರೆ. ಇಂತಹ ಮಕ್ಕಳನ್ನು ಎಷ್ಟೊ ತಂದೆ ತಾಯಿಗಳು ಕಸದ ತೊಟ್ಟಿಗಳಲ್ಲಿ ಬಿಟ್ಟು ಹೋಗುತ್ತಾರೆ ಅಂತಹ ಮಕ್ಕಳಿಗೆ ಕೆಲವು ಸಂಸ್ಥೆಗಳು ಇರುತ್ತವೆ. ಈ ಕುರಿತು ಒಂದು ಅಮೂಲ್ಯ ಸಂದೇಶವನ್ನು ನೀಡುವ ಬೈಟು ಲವ್ ಸಿನಿಮಾ ಖ್ಯಾತಿಯ ನಟಿ ಶ್ರೀಲೀಲಾ ಅವರು ಮಾತೃಶ್ರೀ ವಿಶೇಷ ಚೇತನ ಮಕ್ಕಳ ಶಾಲೆಗೆ ಭೇಟಿ ಕೊಟ್ಟರು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಮಾತೃಶ್ರೀ ಮನೋವಿಕಾಸ ಕೇಂದ್ರ ಬುದ್ದಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಗೆ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ಶ್ರೀಲೀಲಾ ಅವರು ನಟಿಸಿದ ಬೈಟು ಲವ್ ಸಿನಿಮಾ ಚಿತ್ರತಂಡ ಭೇಟಿಕೊಟ್ಟು ಕೆಲವು ವಿಷಯವನ್ನು ಕೇಳಿ ತಿಳಿದುಕೊಂಡರು. ಈ ಸಂಸ್ಥೆಗೆ 8 ದಿನಗಳ ಮಗುವನ್ನು ಸಹ ಕೊಡುತ್ತಾರೆ. ಮಗುವಿನ ಎಮ್ಆರ್ ಐ ಸ್ಕ್ಯಾನಿಂಗ್ ಮಾಡುವುದರಿಂದ ಅವರು ವಿಶೇಷ ಚೇತನ ಮಕ್ಕಳೆನ್ನುವುದು ತಿಳಿಯುತ್ತದೆ, ಅಂತಹ ಮಕ್ಕಳನ್ನು ತಂದೆ ತಾಯಿ ಬಿಟ್ಟು ಹೋಗುತ್ತಾರೆ. ಈ ಸಂಸ್ಥೆಗೆ ಮಾರಾಟವಾದ ಮಕ್ಕಳನ್ನು ತಂದು ಬಿಡಲಾಗುತ್ತದೆ. ಕೆಲವೊಂದು ಮಕ್ಕಳನ್ನು ಹೆತ್ತ ತಾಯಿಯೆ ಬಿಟ್ಟು ಹೋಗುವ ಘಟನೆಯನ್ನು ಈ ಸಂಸ್ಥೆಯಲ್ಲಿ ನೋಡುತ್ತೇವೆ. ಕೆಲವು ತಂದೆ ತಾಯಿ ಸಂಸ್ಥೆಗೆ ಬಂದು ಆಗಾಗ ತಮ್ಮ ಮಕ್ಕಳನ್ನು ನೋಡಿ ಹೋಗುತ್ತಾರೆ.

ಶ್ರೀಲೀಲಾ ಅವರು ಸಂಸ್ಥೆಯ ಮಕ್ಕಳಿಗೆ ಸಿಹಿಯನ್ನು ವಿತರಿಸಿದರು, ಊಟವನ್ನು ಬಡಿಸಿದರು ಮಕ್ಕಳೊಂದಿಗೆ ಮಕ್ಕಳಾಗಿ ಕೆಲವು ಸಮಯ ಕಳೆದರು. ಅಲ್ಲಿಯ ಮಕ್ಕಳು ಸಂಗೀತ ಕೇಳುವುದನ್ನು ಬಹಳ ಇಷ್ಟಪಡುತ್ತಾರೆ ಆದ್ದರಿಂದ ಸಂಸ್ಥೆಯಲ್ಲಿ ಹಾಡು ಹಾಕಿಕೊಂಡು ಶ್ರೀಲೀಲಾ ಅವರು ಕೂಡ ಮಕ್ಕಳೊಂದಿಗೆ ಡ್ಯಾನ್ಸ್ ಮಾಡಿದರು. ಶ್ರೀಲೀಲಾ ಅವರು ನಟಿಸಿದ ಬೈಟು ಲವ್ ಚಿತ್ರ ವಿಶೇಷಚೇತನ ಮಕ್ಕಳಿಗೆ ಸಂಬಂಧಪಟ್ಟಿರುವ ಚಿತ್ರವಾಗಿದೆ. ವಿಶೇಷ ಚೇತನ ಮಕ್ಕಳ ಬಗ್ಗೆ ನನಗೆ ಗೊತ್ತಿತ್ತು ಆದರೆ ಇಂತಹ ಸಂಸ್ಥೆಗೆ ನಾನೆಂದು ಭೇಟಿ ಕೊಟ್ಟಿರಲಿಲ್ಲ ಎಂದು ಭಾವುಕರಾಗಿ ಶ್ರೀಲೀಲಾ ಅವರು ಹೇಳಿದರು. ಮಕ್ಕಳನ್ನು ರೇಲ್ವೆ ಸ್ಟೇಷನ್ ನಲ್ಲಿ, ಬಸ್ ಸ್ಟಾಂಡ್ ನಲ್ಲಿ ಬಿಟ್ಟು ಹೋಗುತ್ತಾರೆ ಆದರೆ ಆ ಮಗುವಿಗೆ ಏನೂ ತಿಳಿದಿರುವುದಿಲ್ಲ ಎಂದು ಹೇಳುತ್ತಾ ದುಃಖಿತರಾದರು.

ಒಬ್ಬ ಮಹಿಳೆ ತನ್ನ ಮಗನನ್ನು ವಿಶೇಷ ಚೇತನ ಎಂಬ ಕಾರಣಕ್ಕೆ ಮಾತೃಶ್ರೀ ಸಂಸ್ಥೆಗೆ ಮಗುವನ್ನು ಸೇರಿಸಬೇಕೆಂದು ಬರುತ್ತಾಳೆ ಸಂಸ್ಥೆ ಮಗುವನ್ನು ಪಡೆಯುವಾಗ ಕೆಲವು ನಿಯಮಗಳು ಇರುತ್ತವೆ. ಮಗುವಿಗೆ ಸಂಬಂಧಿಸಿದ ಮೆಡಿಕಲ್ ಕಾರ್ಡ್ ಗಳನ್ನು ತೆಗೆದುಕೊಂಡು ಬಾ ಎಂದು ಹೇಳುತ್ತಾರೆ ಆಗ ಮಹಿಳೆ ಸಂಸ್ಥೆಯ ವಿಸಿಟಿಂಗ್ ಕಾರ್ಡ್ ತೆಗೆದುಕೊಂಡು ಹೋಗುತ್ತಾಳೆ. ಆ ಮಹಿಳೆ ಒಂದು ಚರ್ಚ್ ಹತ್ತಿರ ಮಗುವಿನೊಂದಿಗೆ ಸಂಸ್ಥೆಯ ವಿಸಿಟಿಂಗ್ ಕಾರ್ಡ್ ಇಟ್ಟು ಹೋಗುತ್ತಾಳೆ. ಅದನ್ನು ನೋಡಿದ ಪೊಲೀಸರು

ವಿಸಿಟಿಂಗ್ ಕಾರ್ಡ್ ನಲ್ಲಿರುವ ನಂಬರಿಗೆ ಫೋನ್ ಮಾಡಿ ನಿಮ್ಮ ಸಂಸ್ಥೆಯ ಮಗು ಇಲ್ಲಿದೆ ಎಂದು ಹೇಳುತ್ತಾರೆ. ಮಾತೃಶ್ರೀ ಸಂಸ್ಥೆಯಿಂದ ಯಾವ ಮಕ್ಕಳನ್ನು ಹೊರಗೆ ಬಿಡುವುದಿಲ್ಲ ಇದು ಯಾವ ಮಗುವೆಂದು ಪರಿಶೀಲನೆ ಮಾಡಿದಾಗ ತಿಳಿದುಬರುತ್ತದೆ. ಇಂತಹ ಮಕ್ಕಳಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಶ್ರೀಲೀಲಾ ಅವರು ಹೇಳಿದರು. ಶ್ರೀಲೀಲಾ ಅವರು ನಟಿಸಿದ ಬೈಟು ಲವ್ ಸಿನಿಮಾ ಇಂತಹ ಮಕ್ಕಳಿಗೆ ಸಂಬಂಧಪಟ್ಟ ಸಂದೇಶವನ್ನು ಜನರಿಗೆ ನೀಡುತ್ತದೆ. ಶ್ರೀಲೀಲಾ ಅವರು ಬೈಟು ಲವ್ ಸಿನಿಮಾದಲ್ಲಿ ನಾನು ನಟಿಸಿರುವುದು ನನಗೆ ಹೆಮ್ಮೆ ತರುತ್ತದೆ, ಇಂತಹ ಒಂದು ವಿಷಯವನ್ನು ಇಟ್ಟುಕೊಂಡು ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ಖುಷಿಯಿಂದ ಹೇಳಿಕೊಂಡರು.

Leave A Reply

Your email address will not be published.

error: Content is protected !!