ನಟಿ ರಕ್ಷಿತಾ ಪ್ರೇಮ್ ಅವರ ತೋಟದ ಮೆನೆ ಎಷ್ಟು ಸುಂದರವಾಗಿದೆ

0

ಪ್ರೇಮ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲೊಬ್ಬರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕರಿಯ ಚಿತ್ರದ ಮೂಲಕ ನಿರ್ದೇಶನ ಪ್ರಾರಂಭಿಸಿದ ಪ್ರೇಮ್ ನಂತರ ಎಕ್ಸ್‍ಕ್ಯೂಸ್ ಮಿ ಮತ್ತು ಶಿವರಾಜ್ ಕುಮಾರ್ ಜೊತೆ ಜೋಗಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಮೂರೂ ಚಿತ್ರಗಳು ಶತದಿನೋತ್ಸವದ ಯಶಸ್ಸನ್ನು ಕಂಡಿರುವುದು ಗಮನಾರ್ಹ. ಇವರ ನಿರ್ದೇಶನದ ನಾಲ್ಕನೇ ಚಿತ್ರ ಪ್ರೀತಿ ಏಕೆ ಭೂಮಿ ಮೇಲಿದೆ. ಈ ಚಿತ್ರದಲ್ಲಿ ಪ್ರೇಮ್ ನಾಯಕನಟನಾಗಿ ನಟಿಸಿದ್ದಾರೆ. ನಿರ್ದೇಶನದ ಐದನೆ ಚಿತ್ರ ಪುನೀತ್ ರಾಜ್ ಕುಮಾರ್ ಜೊತೆ ರಾಜ್ ದಿ ಶೋ ಮ್ಯಾನ್. ಆದ್ದರಿಂದ ನಾವು ಇಲ್ಲಿ ಪ್ರೇಮ್ ಮತ್ತು ರಕ್ಷಿತಾ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಜೋಗಿ ಚಿತ್ರಕ್ಕೆ ಗೀತ ರಚನೆ ಮಾಡುವ ಮೂಲಕ ಪ್ರೇಮ್ ಚಿತ್ರಕ್ಕೆ ಸಾಹಿತಿಯಾಗಿಯೂ ಕೆಲಸ ಮಾಡಿದ್ದಾರೆ. ಇದೇ ಚಿತ್ರದಲ್ಲಿನ ಹೊಡಿ ಮಗ ಹೊಡಿ ಮಗ ಮತ್ತು ಬೇಡುವನು ವರವನ್ನು ಹಾಡುಗಳಿಗೆ ಹಿನ್ನೆಲೆಗಾಯನ ಮಾಡಿದ್ದಾರೆ. ನಿರ್ದೇಶನದ ಆರನೇ ಚಿತ್ರ ಶಿವರಾಜ್ ಕುಮಾರ್ ಜೊತೆ ಜೋಗಯ್ಯ ಚಿತ್ರದಲ್ಲಿ ಪತ್ನಿ ರಕ್ಷಿತಾ ನಿರ್ಮಾಪಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ರಕ್ಷಿತಾ ಅವರು  ಕನ್ನಡ ಚಿತ್ರರಂಗದನಾಯಕಿಯರಲ್ಲಿ ಒಬ್ಬರು. ಮುಂಬೈನಲ್ಲಿ ಹುಟ್ಟಿದ ಶ್ವೇತಾ ಅಂದ್ರೆ ಕನ್ನಡಿಗರ ಪ್ರೀತಿಯ ಫೇವರಿಟ್ ಹೀರೋಯಿನ್ ಕ್ರೇಜಿ ಕ್ವೀನ್ ರಕ್ಷಿತಾ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಕನ್ನಡಿಗರ ಸುಂಟರಗಾಳಿಯ ಬೆಡಗಿ. ಇವರು ಮಮತಾ ರಾವ್ ಹಾಗೂ ಬಿ.ಸಿ. ಗೌರಿಶಂಕರ್ ರವರ ಮಗಳು. ಬಿ.ಸಿ. ಗೌರಿಶಂಕರ್ ಕನ್ನಡ ಚಿತ್ರರಂಗದ ಪ್ರಸಿದ್ಧ ಛಾಯಾಗ್ರಹಕರು.

ಕ್ರೇಜಿ ಕ್ವೀನ್ ರಕ್ಷಿತಾ ಅವರು ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾಗಿ ಇಂದು ಖುಷಿ ಖುಷಿಯಿಂದ ಜೀವನ ಕಳೆಯುತ್ತಿದ್ದಾರೆ. ಇವರಿಬ್ಬರದೂ ತದ್ವಿರುದ್ಧ ಗುಣಗಳು. ಇವರ ಮದುವೆ ಆದದ್ದೇ ನಿಜಕ್ಕೂ ಆಶ್ಚರ್ಯಕರವಾದ ವಿಷಯವಾಗಿದೆ. ಪ್ರೇಮ್ ಅವರು ಮಂಡ್ಯದವರು ಇಂಗ್ಲಿಷ್ ಗೊತ್ತಿಲ್ಲ. ಆದರೆ ರಕ್ಷಿತಾ ಮಾತ್ರ ಸಿಟಿಯಲ್ಲಿ ಶ್ರೀಮಂತ ಮನೆಯಲ್ಲಿ ಬೆಳೆದವರು. ರಕ್ಷಿತಾಗೆ ಹಳ್ಳಿಯ ಬದುಕು ಸೊಗಡಿನ ಬಗ್ಗೆ ಏನೂ ಗೊತ್ತಿಲ್ಲ. ಇವರಿಬ್ಬರು ಹೇಗೆ ಪ್ರೀತಿ ಮಾಡಿದರು? ಹೇಗೆ ಮದುವೆಯಾದರು ಎಂಬುದು ಹಲವರಿಗೆ ಇನ್ನೂ ಆಶ್ಚರ್ಯವಾಗಿ ಉಳಿದಿದೆ. ಮನಸು ಮನಸುಗಳು ಒಂದಾದರೆ ಇನ್ನೇನು ಬೇಕು ಅಲ್ಲವೇ ಹಾಗೆಯೇ ರಕ್ಷಿತಾ ಮತ್ತು ಪ್ರೇಮ್ ಪ್ರೀತಿಸಿ ಮದುವೆಯಾದರು. ಇಂದು ಈ ದಂಪತಿಗೆ ಸೂರ್ಯ ಎಂಬ ಮಗನಿದ್ದಾನೆ.

ರಕ್ಷಿತಾ ಪ್ರೇಮ್ ಅವರು ತಮ್ಮ ಸಮಯವನ್ನು ತೋಟದ ಮನೆಯಲ್ಲಿ ಕಳೆಯುತ್ತಾರೆ. ತೋಟದ ಮನೆಯಲ್ಲಿ ಆಕಳುಗಳು, ಎತ್ತು, ಕುರಿಗಳನ್ನು ಸಾಕಿದ್ದಾರೆ. ರಕ್ಷಿತಾ ಮತ್ತು ಪ್ರೇಮ್ ಅವರಿಗೆ ಇವುಗಳೆಂದರೆ ಪಂಚಪ್ರಾಣ. ರಕ್ಷಿತಾ ತಮ್ಮ ತೋಟದ ಮನೆಯಲ್ಲಿರುವ ಹಸು, ಕರು, ಕುರಿ ಹಾಗೂ ಇನ್ನಿತರ ಪ್ರಾಣಿಗಳ ಜೊತೆ ಸೇರಿ ಪ್ರೇಮ್ ಕುಟುಂಬ ಈ ಬಾರಿಯ ಸಂಕ್ರಾಂತಿ ಸೆಲೆಬ್ರೆಟ್ ಮಾಡಿದ್ದಾರೆ. ಎಕ್ ಲವ್ ಯಾ ಸಿನಿಮಾದ ಶೂಟಿಂಗ್‌ಗಾಗಿ ಲೋಕೇಶನ್ ನೋಡಲು ಗುಜರಾತ್‌ಗೆ ತೆರಳಿದ್ದ ಪ್ರೇಮ್ ಅಲ್ಲಿಂದ ಎರಡು ಎಮ್ಮೆ ಮರಿಗಳನ್ನು ಖರೀದಿ ಮಾಡಿಕೊಂಡು ಬಂದಿದ್ದರು. ಆ ಮರಿ ಎಮ್ಮೆಗಳನ್ನು ಮನೆಯಲ್ಲಿ ಸಾಕುತ್ತಿದ್ದಾರೆ. ರಕ್ಷಿತಾ ಮತ್ತು ಪ್ರೇಮ್ ಅವರು ತೋಟದ ಮನೆಯನ್ನು ತುಂಬಾ ಇಷ್ಟ ಪಡುತ್ತಾರೆ.

Leave A Reply

Your email address will not be published.

error: Content is protected !!
Footer code: