WhatsApp Group Join Now
Telegram Group Join Now

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಉಮಾಶ್ರೀ ಅವರು ಯಾವ ಪಾತ್ರಕ್ಕಾದರೂ ಜೀವ ತುಂಬುತ್ತಿದ್ದರು. ಅವರು ತಮ್ಮ ನಟನೆಯಿಂದ ಜನರನ್ನು ಗೆದ್ದಿದ್ದಾರೆ. ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ, ಅಲ್ಲದೆ ಕಾಮಿಡಿಯಿಂದ ಜನರನ್ನು ನಗಿಸಿದ್ದಾರೆ. ಅವರು ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಇದರ ಮಧ್ಯೆ ಅವರು ಮನೆಯಲ್ಲಿ ಇಲ್ಲದಿರುವ ಸಮಯದಲ್ಲಿ ಕಳ್ಳರು ಉಮಾಶ್ರೀ ಅವರ ಮನೆಗೆ ನುಗ್ಗಿ ಹಣ ದೋಚಿದ್ದಾರೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಚಿತ್ರರಂಗ ಅನೇಕ ಅಪ್ರತಿಮ ಕಲಾವಿದರನ್ನು ನೋಡಿದೆ. ಕನ್ನಡ ಚಿತ್ರರಂಗದಲ್ಲಿ ಫೇಮಸ್ಸಾದ ಪ್ರಮುಖ ಕಲಾವಿದರಲ್ಲಿ ನಟಿ ಉಮಾಶ್ರೀ ಅವರು ಒಬ್ಬರು. ಉಮಾಶ್ರೀ ಅವರ ನಟನೆಯ ಶೈಲಿ ಮತ್ತು ಮಾತುಗಾರಿಕೆ ಎಂಥವರನ್ನಾದರೂ ಬೆರಗಾಗಿಸುತ್ತದೆ. ಕೆಲವು ಸಿನಿಮಾಗಳು ನಟಿ ಉಮಾಶ್ರೀ ಅವರ ನಟನೆಯಿಂದಲೆ ಸಕ್ಸೆಸ್ ಆಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಸಿನಿಮಾ ಹೀರೊ, ಹೀರೋಯಿನ್ ಅವರ ನಟನೆಯಿಂದ ಸಕ್ಸೆಸ್ ಪಡೆಯಿತಾ ಅಥವಾ ನಟಿ ಉಮಾಶ್ರೀ ಅವರ ನಟನೆಯಿಂದ ಸಕ್ಸೆಸ್ ಪಡೆದುಕೊಂಡಿದೆಯಾ ಎಂಬ ಗೊಂದಲಕ್ಕೆ ಸಿನಿಮಾ ವಿಮರ್ಶಕರು ಒಳಗಾಗುತ್ತಿದ್ದರು, ಇದರಿಂದಲೆ ತಿಳಿಯುತ್ತದೆ ನಟಿ ಉಮಾಶ್ರೀ ಅವರ ನಟನಾ ಕೌಶಲ್ಯ ಹೇಗಿತ್ತು ಎಂದು. ಉಮಾಶ್ರೀ ಅವರು ಸಿನಿಮಾದಲ್ಲಿ ನಟಿಸಿ ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಿನಿಮಾದಲ್ಲಿ ನಟಿಸಿದ ಅವರ ಪಾತ್ರವನ್ನು ಜನರು ಇಂದಿಗೂ ಮರೆತಿಲ್ಲ. ನಂತರ ಉಮಾಶ್ರೀ ಅವರು ಸಿನಿಮಾದಿಂದ ದೂರ ಉಳಿದು ರಾಜಕೀಯದಲ್ಲಿ ಹೆಚ್ಚು ತೊಡಗಿಸಿಕೊಂಡರು.

ಬಾಗಲಕೋಟೆ ಜಿಲ್ಲೆಯ ರಬಕವಿ, ಬನಹಟ್ಟಿಯ ವಿದ್ಯಾನಗರದಲ್ಲಿ ಉಮಾಶ್ರೀ ಅವರ ಸುಂದರವಾದ, ವಿಶಾಲವಾದ ಮನೆಯಿದೆ. ಈ ಮನೆಯೆಂದರೆ ಉಮಾಶ್ರೀ ಅವರಿಗೆ ಅಚ್ಚುಮೆಚ್ಚು. ಸಿನಿಮಾದ ನಂತರ ರಾಜಕಾರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಉಮಾಶ್ರೀ ಅವರು ಸುಂದರ ಪರಿಸರದ ನಡುವೆ ಇರುವ ಈ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಉಮಾಶ್ರೀ ಅವರು ಬೆಂಗಳೂರಿನ ಆರ್ ಆರ್ ನಗರದ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾಗ ಉಮಾಶ್ರೀ ಅವರು ಮನೆಯಲ್ಲಿಲ್ಲದ ವಿಷಯವನ್ನು ತಿಳಿದು ಕಳ್ಳರು ಮನೆಯನ್ನು ದೋಚಲು ಹೊಂಚು ಹಾಕಿದರು. ರಾತ್ರಿ ಸಮಯದಲ್ಲಿ ಉಮಾಶ್ರೀ ಅವರ ಮನೆಯನ್ನು ನುಗ್ಗಿದ ಕಳ್ಳರು ಲಾಕರ್ ತೆಗೆದು ಮನೆಯಲ್ಲಿರುವ ಹಣವನ್ನು ದೋಚಿದರು. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಕಳ್ಳರನ್ನು ಹಿಡಿದು ಹಾಕಿದರು ಮತ್ತು ಕಳ್ಳರು ಉಮಾಶ್ರೀ ಅವರ ಮನೆಯಲ್ಲಿ ದೋಚಿದ 1,90,000 ರೂಪಾಯಿಗಳನ್ನು ಕಳ್ಳರಿಂದ ವಶಪಡಿಸಿಕೊಂಡರು. ಕಳ್ಳರು ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕೊರೋನ ವೈರಸ್ ಕಾರಣದಿಂದ ಕೆಲಸವಿಲ್ಲದೆ ಕೆಲವರು ಕಳ್ಳತನಕ್ಕೆ ಇಳಿದಿದ್ದಾರೆ. ಕಳ್ಳರ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: