ನಟಿ ಅಮೂಲ್ಯ ಸೀಮಂತ ಶಾಸ್ತ್ರದ ಸುಂದರ ಕ್ಷಣಗಳು ನೋಡಿ

0

ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ನಟಿ ಅಮೂಲ್ಯ ಅವರು. ಕೆಲವು ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು ನಂತರ ಮುಖ್ಯ ನಟಿಯಾಗಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಪ್ರಸಿದ್ಧಿಗೆ ಬಂದರು. ಇವರನ್ನು ಸ್ಯಾಂಡಲ್ ವುಡ್ ಗೋಲ್ಡನ್ ಕ್ವೀನ್ಎಂದು ಕರೆಯಲಾಗುತ್ತದೆ. ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಮೊದಲ ಬಾರಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡರು ಆ ಚಿತ್ರ ಯಶಸ್ಸನ್ನು ಕಂಡು ಅಮೂಲ್ಯ ಅವರ ಸಿನಿಜೀವನ ಬದಲಾಯಿತು. ತದನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿ ರಸಿಕರ ಮನಸ್ಸನ್ನು ಗೆದ್ದಿದ್ದರು.

ಚೆಲುವಿನ ಚಿತ್ತಾರ ಚೈತ್ರದ ಚಂದ್ರಮ ಶ್ರಾವಣ್ ಸುಬ್ರಹ್ಮಣ್ಯ ಗಜಕೇಸರಿ ಇನ್ನು ಹಲವಾರು ಕನ್ನಡ ಸಿನಿಮಾಗಳಲ್ಲಿ ಮುಖ್ಯ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡು ಸಿನಿಮಾರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಎರಡು ಸಾವಿರದ ಹದಿನೇಳರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಎರಡು ಸಾವಿರದ ಹದಿನೇಳರಲ್ಲಿ ಉದ್ಯಮಿ ಜಗದೀಶ್ ಆರ್ ಚಂದ್ರ ಅವರನ್ನು ವಿವಾಹವಾಗುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೇ ತಾವಿಬ್ಬರು ಅಪ್ಪ-ಅಮ್ಮ ಆಗುವ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದರು. ಇದೀಗ ಅಮೂಲ್ಯ ಅವರು ಏಳು ತಿಂಗಳ ಗರ್ಭಿಣಿ ಆಗಿರುವುದರಿಂದ ಅವರಿಗೆ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಅಮೂಲ್ಯ ಜಗದೀಶ್ ದಂಪತಿಗಳು ಅದ್ದೂರಿಯಾಗಿ ಅಲಂಕಾರಗೊಂಡ ಹೊರಾಂಗಣ ವೇದಿಕೆಯಲ್ಲಿ ಶ್ರೀಮಂತ ಶಾಸ್ತ್ರವನ್ನು ಏರ್ಪಾಡು ಮಾಡಿದ್ದರು. ಹಸಿರು ಬಣ್ಣದ ಸೀರೆಯಲ್ಲಿ ಸಿಂಗಾರಗೊಂಡಿದ್ದ ಅಮೂಲ್ಯ ಅವರನ್ನು ಸೀಮಂತ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ ಅತಿಥಿಗಳು ಮನಸಾರೆ ಹಾರೈಸಿದರು. ತಮ್ಮ ಜೀವನದ ಈ ಅಮೂಲ್ಯ ಕ್ಷಣವನ್ನು ಜಗದೀಶ ಹಾಗೂ ಅಮೂಲ್ಯ ಅವರು ಸುಂದರವಾದ ಫೋಟೋಶೂಟ್ ಮೂಲಕ ಸೆರೆ ಹಿಡಿದಿದ್ದಾರೆ. ಪರಿಸ್ಥಿತಿ ಅನುಕೂಲಿಸದ ಕಾರಣ ಚಿತ್ರರಂಗದಿಂದ ಹಾಗೂ ಸ್ನೇಹಿತರ ಬಳಗದಿಂದ ಆಪ್ತರನ್ನು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಹ್ವಾನಿಸಲಾಗಿತ್ತು. ಅದ್ದೂರಿಯಾಗಿ ನಡೆದ ನಟಿ ಅಮೂಲ್ಯ ಅವರ ಸೀಮಂತ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Leave A Reply

Your email address will not be published.

error: Content is protected !!
Footer code: