ದೇಹ ಶುದ್ದಿ ಮಾಡಿ ಕಾಯಿಲೆಗಳನ್ನು ನಿವಾರಿಸುವ ಮನೆಮದ್ದು

0

ನಾವು ತಿನ್ನುವಂತಹ ಆಹಾರವೇ ನಮ್ಮ ಆರೋಗ್ಯ ಹಾಗೂ ಅನಾರೋಗ್ಯವನ್ನು ನಿರ್ಧಾರ ಮಾಡುವುದು. ಅದರಲ್ಲೂ ಜೀರ್ಣಕ್ರಿಯೆ ವ್ಯವಸ್ಥೆಯು ಸರಾಗವಾಗಿದ್ದರೆ ಆಗ ಖಂಡಿತವಾಗಿಯೂ ಆರೋಗ್ಯವು ಉತ್ತಮವಾಗಿರುತ್ತದೆ. ಈಗಿನ ಆಧುನಿಕ ಆಹಾರ ಪದಾರ್ಥಗಳ ಸೇವನೆ ಆರೋಗ್ಯವನ್ನು ಹಾಳು ಮಾಡುತ್ತಿದೆ. ಆದ್ದರಿಂದ ನಾವು ಇಲ್ಲಿ ನಮ್ಮ ಹೊಟ್ಟೆಯನ್ನು ಹೇಗೆ ಶುದ್ಧವಾಗಿ ಇಟ್ಟುಕೊಳ್ಳಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಆಹಾರದಲ್ಲಿ ಇರುವಂತಹ ಎಲ್ಲಾ ರೀತಿಯ ಪೋಷಕಾಂಶಗಳನ್ನು ಕರುಳು ಹೀರಿಕೊಂಡು ಅದನ್ನು ದೇಹಕ್ಕೆ ಒದಗಿಸುವಂತಹ ಕೆಲಸ ಮಾಡುತ್ತದೆ. ಕರುಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ಆಗ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳು ಕೂಡ ಸಿಗದು. ಕರುಳು ಸರಿಯಾಗಿ ಕೆಲಸ ಮಾಡಬೇಕೆಂದರೆ ನಾರಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಅಗಸೆ ಬೀಜಗಳಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ. ಅಗಸೆ ಬೀಜದಲ್ಲಿ ಇರುವಂತಹ ನಾರಿನಾಂಶ ಜೀರ್ಣಕ್ರಿಯೆ ಸುಧಾರಣೆ ಮಾಡುತ್ತದೆ ಮತ್ತು ಕರುಳನ್ನು ಶುದ್ಧೀಕರಿಸುತ್ತದೆ.

ಹಾಗೆಯೇ ಲಿಂಬೆಯು ದೇಹದಲ್ಲಿರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕಲು ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬೆ ರಸವನ್ನು ಬಿಸಿ ನೀರು ಹಾಗೂ ಜೇನುತುಪ್ಪ ಹಾಕಿಕೊಂಡು ಸೇವನೆ ಮಾಡಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರಲ್ಲಿ ಇರುವಂತಹ ವಿಟಮಿನ್ ಸಿ ದೇಹದಲ್ಲಿ ಅಸಿಡಿಟಿಯನ್ನು ಸಮತೋಲನದಲ್ಲಿ ಇಡುತ್ತದೆ. ಹಾಗೆಯೇ ಬೆಳ್ಳುಳ್ಳಿಯು ಕರುಳನ್ನು ಶುದ್ಧೀಕರಿಸುತ್ತದೆ. ಬೆಳ್ಳುಳ್ಳಿಯು ಕೇವಲ ಕರುಳು ಮಾತ್ರವಲ್ಲದೆ ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ.

ಜೀರ್ಣಕ್ರಿಯೆ ಸಂಬಂಧಿ ಎಲ್ಲಾ ರೀತಿಯ ಸಮಸ್ಯೆಗಳಿಗೆ ಇದು ಅತ್ಯುತ್ತಮ ಗಿಡಮೂಲಿಕೆ ಮನೆಮದ್ದಾಗಿದೆ. ಹಾಗೆಯೇ ಸೇಬು ಯಾವಾಗಲೂ ತುಂಬಾ ಆರೋಗ್ಯಕಾರಿ ಹಣ್ಣು. ಇದನ್ನು ಯಾವುದೇ ರೂಪದಲ್ಲಿ ಸೇವನೆ ಮಾಡಿದರೂ ಅದು ಕರುಳನ್ನು ಶುದ್ಧೀಕರಿಸುತ್ತದೆ. ಸೇಬಿನ ರಸ ಸೇವನೆ ಮಾಡಿದರೂ ಅದು ಪರಿಣಾಮಕಾರಿ ಆಗಿರುವುದು. ಕರುಳನ್ನು ಶುದ್ಧವಾಗಿ ಇಡಲು ನಿಯಮಿತವಾಗಿ ಹಣ್ಣಿನ ರಸಗಳನ್ನು ಕುಡಿಯುತ್ತಿರಬೇಕು. ಹಣ್ಣಿನ ರಸದಲ್ಲಿ ಇರುವಂತಹ ಕಿಣ್ವಗಳು ಹಾಗೂ ಶುದ್ಧೀಕರಿಸುವ ಉಪ್ಪಿನಾಂಶವು ಕರುಳನ್ನು ವಿಷಕಾರಿ ಅಂಶದಿಂದ ದೂರವಿಡುತ್ತದೆ.  ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!