ದೇವರ ಮುಂದೆ ಇಷ್ಟಾರ್ಥವನ್ನು ನೆರವೇರಿಸು ಎಂದು ಕೇಳಿ ಕೊಳ್ಳುವ ಬದಲು ಈ 2 ಪದ ಹೇಳಿ ಸಾಕು ಎಲ್ಲವು ನೆರವೇರುತ್ತೆ

0

ನಮ್ಮ ಜೀವನದಲ್ಲಿ ಏನೇ ಆದರೂ ಅದು ಭಗವಂತನ ಅನುಗ್ರಹದಿಂದ ಮಾತ್ರ. ಇಂದು ನಮಗೆ ಸಮಸ್ಯೆ ಅಥವಾ ಕಷ್ಟ ನೋವು ಬಂದರೆ ಅದು ಶಾಶ್ವತ ಅಲ್ಲ. ಮುಂದೆ ಭಗವಂತ ನಮಗೆ ಸುಖಾಂತ್ಯ ನೀಡಲಿದ್ದಾನೆ ಎನ್ನುವ ಭಾವನೆಯಲ್ಲಿ ಸ್ವೀಕರಿಸಿದರೆ ನಮ್ಮ ಜೀವನ ಉತ್ತಮವಾಗುತ್ತದೆ. ಕತ್ತಲೆಯಿದ್ದರೆ ಮಾತ್ರ ಬೆಳಕಿನ ಬೆಲೆ ಅರಿವಿಗೆ ಬರುತ್ತದೆ. ನಮಗೆ ಏನಾದರೂ ಕಷ್ಟಗಳು ಬಂದಾಗ ನಾವು ದೇವರ ಮೊರೆ ಹೋಗುತ್ತೇವೆ. ನನಗೆ ಬಂದಿರುವ ಕಷ್ಟಗಳು ದೂರ ಆದರೆ ಇಷ್ಟು ಹಣವನ್ನು ಕಾಣಿಕೆ ಹಾಕುತ್ತೇನೆ ಎಂದು ಹೇಳಿ ಸಾಕಷ್ಟು ಹರಕೆಗಳನ್ನು ಹೊತ್ತಿಕೊಳ್ಳುತ್ತೆವೆ. ಆದರೆ ಎಲ್ಲಾ ಸಮಯದಲ್ಲಿಯೂ ನಮಗೆ ಹರಕೆ ಹೇಳಿಕೊಂಡಿರುವುದು ನೆನಪಿಗೆ ಬರುತ್ತದೆ ಎಂದು ಹೇಳುವುದು ಅಸಾಧ್ಯ ಅದರ ಬದಲು ಹರಕೆ ಕಟ್ಟಿಕೊಳ್ಳುವುದರ ಬದಲು ನಿಮ್ಮ ಇಷ್ಟಾರ್ಥಗಳು ಈಡೇರಲು ಬೇರೆ ಯಾವ ಉತ್ತಮ ಮಾರ್ಗ ಇದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಾವು ನಮಗೆ ಏನೇ ಕಷ್ಟ ಬಂದರೂ ಅಥವಾ ನಮ್ಮ ಇಚ್ಚೆಗಳು ಏನಾದರೂ ಇಡೇರಬೇಕು ಎಂದಾಗ ನಮಗೆ ಆ ಕ್ಷಣಕ್ಕೆ ನೆನಪಿಗೆ ಬರುವುದು ದೇವರು. ಆ ಸಮಯದಲ್ಲಿ ನಾವು ಕಾಣದ ದೇವರಿಗೆ ಮೊರೆ ಹೋಗುತ್ತೇವೆ. ಯಾವಾಗಲೂ ದೇವರನ್ನು ಪ್ರಾರ್ಥಿಸದೇ ಇದ್ದವರು ಕಷ್ಟ ಬಂದಾಗ ದೇವರ ಮೊರೆ ಹೋಗುತ್ತೇವೆ. ನನಗೆ ಇಂತಹ ಕಷ್ಟ ಬಂದಿದೆ ಇಲ್ಲವೇ ನನ್ನ ಈ ಇಚ್ಛೆ ಇಡೇರಬೇಕಿದೆ ಹಾಗೆ ನೀನು ಅನುಗ್ರಹ ತೋರಿದರೆ ನಾನು ಇಷ್ಟು ಹಣವನ್ನು ಕಾಣಿಕೆ ಎಂದು ನೀಡುತ್ತೇನೆ, ದೇವರಿಗೆ ಪೂಜೆ ಮಾಡಿಸುತ್ತೇನೆ ಬೆಳ್ಳಿ ಬಂಗಾರದ ವಸ್ತುಗಳನ್ನು ನೀಡುತ್ತೇನೆ ಎಂದೆಲ್ಲ ಹರಕೆ ಹೊತ್ತುಕೊಳ್ಳುತ್ತಾರೆ. ಆದರೆ ನಾವು ಹೇಳಿಕೊಂಡ ಹರಕೆ ನಮ್ಮ ಕೆಲಸ ಆದಮೇಲೆ ಅಥವಾ ನಮ್ಮ ಕಷ್ಟ ಮುಗಿದ ಮೇಲೆ ನಮಗೇ ನೆನಪು ಇರುವುದಿಲ್ಲ. ಇದು ಕೂಡಾ ಒಂದು ನಮಗೆ ಇನ್ನೊಂದು ಕಷ್ಟ ಇಲ್ಲವೇ ಸಮಸ್ಯೆ ಉದ್ಭವ ಆಗಲು ಒಂದು ಕಾರಣ ಆಗುತ್ತದೆ. ಇದರ ಬದಲು ನಾವು ಯಾವುದೇ ಆಡಂಬರದ ಹರಕೆಯನ್ನು ಕಟ್ಟಿಕೊಳ್ಳದೆ ಇರುವುದು ಉತ್ತಮ.

ಆದರೆ ದೇವರು ನಾವು ಕೊಡುವ ಆಡಂಬರದ ಬೆಳ್ಳಿ ಬಂಗಾರದ ವಸ್ತುಗಳಿಗೆ ಆಗಲಿ ಅಥವಾ ಹಣಕ್ಕೆ ಆಗಲಿ ದೇವರು ಒಲಿಯುವುದಿಲ್ಲ. ಈ ರೀತಿ ಮಾಡುವುದು ನಾವು ದೇವರಿಗೂ ಲಂಚ ಕೊಟ್ಟ ಹಾಗೆಯೇ ಆಗುವುದು. ಹಾಗಾಗಿ ಇದರ ಬದಲು ದೇವರಿಗೆ ಭಕ್ತಿಯಿಂದ ಬೇಡಿಕೊಂಡು ಕೇಳಿಕೊಳ್ಳಬೇಕು. ನಾವೆಲ್ಲ ಸಾಮಾನ್ಯವಾಗಿ ಕೇಳುವುದು ನನಗೆ ಇಂತಹ ಕೆಲಸ ಆಗಬೇಕು ನನ್ನ ಕೆಲಸ ಆದರೆ ನೂರಾ ಒಂದು ರೂಪಾಯಿ ಕಾಣಿಕೆ ಹಾಕುತ್ತೇನೆ ಎಂದು. ಆದರೆ ನಾವು ದೇವರ ಬಳಿ ಈ ರೀತಿ ಕೇಳುವುದು ಸಮಂಜಸವಲ್ಲ. ದೇವರಿಗೆ ಭಕ್ತಿಯಿಂದ ಕೇಳಿಕೊಳ್ಳಬೇಕು. ಹೇಗೆಂದರೆ , ಭಗವಂತ ನನಗೆ ಈ ಕೆಲಸ ತುಂಬಾ ಮುಖ್ಯವಾದದ್ದು ಅಗತ್ಯವಿದೆ ನನಗೆ ಈ ಕೆಲಸ ಇದು ನನ್ನ ಕುಟುಂಬಕ್ಕೆ ಕೂಡಾ ಬಹಳ ಉಪಯೋಗ ಆಗುವುದು ಎಂದು ನಿಮ್ಮೆಲ್ಲಾ ಸಮಸ್ಯೆಗಳನ್ನು ಹೇಳಿಕೊಂಡು ಈ ಕೆಲಸದಿಂದ ನಿಮಗೆ ಸಮಾಧಾನ ದೊರೆಯಬೇಕು ಎಂದು ದೇವರ ಬಳಿ ಭಕ್ತಿ ಭಾವದಿಂದ ಕೇಳಿಕೊಳ್ಳಬೇಕು. ದೇವರನ್ನು ಕೂಡಾ ನಾವು ನಮ್ಮ ಒಬ್ಬ ಆತ್ಮೀಯ ಸ್ನೇಹಿತ ಎಂದು ತಿಳಿದು ನಮ್ಮ ಕಷ್ಟವನ್ನು ಹೇಳಿಕೊಳ್ಳಬೇಕು. ದೇವರು ನಮ್ಮನ್ನು ಸದಾಕಾಲ ಪರೀಕ್ಷಿಸುತ್ತಾರೆ. ಕಷ್ಟ ಮುಗಿದ ನಂತರವೂ ನಾವು ಯಾವ ರೀತಿ ಇರುತ್ತೇವೆ ಎಂದು. ಕಷ್ಟ ಮುಗಿದ ನಂತರವೂ ನಾವು ದೇವರನ್ನು ಪೂಜಿಸಿ ಪ್ರಾರ್ಥಿಸುತ್ತಾ ಬಂದರೆ ನಮಗೆ ಮುಂದೆ ಎಂದೂ ಕಷ್ಟಗಳು ಬರುವುದೇ ಇಲ್ಲ. ದೇವರನ್ನು ಪೂಜಿಸುವುದು ಬಿಟ್ಟರೆ ದೇವರು ಮತ್ತೆ ನಮಗೆ ಕೊಟ್ಟಿದ್ದನ್ನು ಕಿತ್ತುಕೊಳ್ಳುತ್ತಾರೆ. ಆದಷ್ಟು ದೇವರ ವಿಚಾರದಲ್ಲಿ ಭಕ್ತಿ ಭಾವ ಅತೀ ಮುಖ್ಯ. ತನ್ನನ್ನು ನಂಬಿದವರಿಗೆ ದೇವರು ಎಂದಿಗೂ ಕೈ ಬಿಡುವುದಿಲ್ಲ.

Leave A Reply

Your email address will not be published.

error: Content is protected !!
Footer code: