ದೇವರ ಮನೆ ಎಲ್ಲಿದ್ದರೆ ಉತ್ತಮ? ವಾಸ್ತು ಟಿಪ್ಸ್

0

ಪ್ರತಿಯೊಬ್ಬರೂ ಮನೆಯಲ್ಲೂ ಕೂಡ ದೇವರನ್ನು ಇಟ್ಟಿರಲಾಗುತ್ತದೆ. ಏಕೆಂದರೆ ಕಣ್ಣಿಗೆ ಕಾಣದೇ ಬದುಕಿನ ಕಷ್ಟಗಳನ್ನು ಬಗೆಹರಿಸುವವನು ಅವನು ಮಾತ್ರ. ಕೆಲವರ ಮನೆಯಲ್ಲಿ ಜಾಗ ಬಹಳ ಚಿಕ್ಕದಾಗಿ ಇರುತ್ತದೆ. ಹಾಗಾಗಿ ದೇವರ ಫೋಟೋಗಳನ್ನು ಗೋಡೆಗೆ ಹಾಕಿರುತ್ತಾರೆ. ಆದರೆ ಇನ್ನೂ ಕೆಲವರ ಮನೆಯಲ್ಲಿ ದೇವರಿಗೆ ಎಂದು ಒಂದು ಕೋಣೆಯನ್ನು ಮಾಡಿರುತ್ತಾರೆ. ಹಾಗೆಯೇ ಅದರ ಬಗ್ಗೆ ನಾವು ಇಲ್ಲಿ ಸ್ವಲ್ಪ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಹೆಚ್ಚಾಗಿ ಎಲ್ಲಾ ಕಡೆ ಮನೆಯ ಬಾಗಿಲನ್ನು ದಕ್ಷಿಣ ದಿಕ್ಕಿಗೆ ಮಾಡಿಡಲಾಗುತ್ತದೆ. ಆದರೆ ಎಲ್ಲಾ ಕಡೆ ಹಾಗೆಯೇ ಇರುವುದಿಲ್ಲ. ಹಿಂದೂ ಧರ್ಮದಲ್ಲಿ ಹೆಚ್ಚಾಗಿ ಹೀಗೆ ಇರುತ್ತದೆ. ದೇವರ ಮನೆಯನ್ನು ಕೂಡ ಒಂದು ಸರಿಯಾದ ದಿಕ್ಕಿಗೆ ಮಾಡಿದರೆ ಮಾತ್ರ ಮನೆಯ ಉದ್ಧಾರವಾಗುತ್ತದೆ. ಯಾವುದಾದರೂ ದಿಕ್ಕಿಗೆ ಮಾಡಿದರೆ ಸರಿಯಾಗಿ ಇರುವುದಿಲ್ಲ. ಹಾಗಾಗಿ ಮನೆಯನ್ನು ಕಟ್ಟಿಸುವಾಗ ಜ್ಯೋತಿಷ್ಯ ಶಾಸ್ತ್ರ ಕೇಳಿಕೊಂಡು ಮನೆಯನ್ನು ಕಟ್ಟುವ ಜಾಗವನ್ನು ನೋಡಲಾಗುತ್ತದೆ.

ಏಕೆಂದರೆ ಕೆಲವೊಂದು ಜಾಗಗಳ ಮೇಲೆ ಒಳ್ಳೆಯದು ಮತ್ತು ಕೆಟ್ಟದು ನಿರ್ಧಾರವಾಗುತ್ತದೆ. ಹಾಗೆಯೇ ದೇವರ ಮನೆ ಯಾವುದೇ ಕಾರಣಕ್ಕೂ ಈಶಾನ್ಯ ದಿಕ್ಕಿನಲ್ಲಿ ಇರಬಾರದು. ಹಾಗೆಯೇ ಕೆಲವೊಬ್ಬರು ಪೂರ್ವ ದಿಕ್ಕಿನಲ್ಲಿ ದೇವರನ್ನು ಇಡುತ್ತಾರೆ. ಯಾವುದೇ ತೊಂದರೆಯಿಲ್ಲ. ಹಾಗೆಯೇ ಕೆಲವೊಬ್ಬರು ಪಶ್ಚಿಮ ದಿಕ್ಕಿನಲ್ಲಿ ದೇವರನ್ನು ಇಡುತ್ತಾರೆ. ಇದರಿಂದಾಗಿ ಯಾವುದೇ ತೊಂದರೆ ಇಲ್ಲ.

ಉತ್ತರ ದಿಕ್ಕಿನಲ್ಲಿ ಮಧ್ಯಮದಲ್ಲಿ ದೇವರ ಮನೆಯನ್ನು ಇಡಬಾರದು. ಏಕೆಂದರೆ ಇದರಿಂದ ಮನೆಯಲ್ಲಿ ವಾಸ ಮಾಡುವವರಿಗೆ ಹಾನಿ ಉಂಟಾಗಬಹುದು. ಮನೆಯ ಸದಸ್ಯರಿಗೆ ಆರೋಗ್ಯದಲ್ಲಿ ಏರುಪೇರು ಆಗಬಹುದು. ಇಲ್ಲಿ ಗಜಕೇಸರಿ ಯೋಗ ಬಂದರೆ ಹೋಗುತ್ತದೆ. ದಕ್ಷಿಣ ದಿಕ್ಕಿನಲ್ಲಿ ಸಹ ದೇವರ ಮನೆಯನ್ನು ಕಟ್ಟಿಕೊಳ್ಳಬಹುದು. ಇದರಿಂದ ಸಹ ಒಳ್ಳೆಯದಾಗುತ್ತದೆ.

Leave A Reply

Your email address will not be published.

error: Content is protected !!