ದೇವಾಲಯಗಳಲ್ಲಿ ದೇವರನ್ನು ದರ್ಶನ ಮಾಡಿ ಪ್ರಾರ್ಥನೆ ಮಾಡಿ ಪೂಜೆ ಮಾಡಿಸುವುದು ಆಚಾರವಾಗಿ ನಮ್ಮ ಸಂಪ್ರದಾಯ ಆಗಿದೆ. ದೇವಾಲಯಗಳಿಗೆ ನಾವು ಹೋದಾಗ ಆ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ, ಪೂಜಿಸಿ ಮಾಡಿದರೆ ದೇವರು ನಮ್ಮ ಇಚ್ಛೆಯನ್ನು ಈಡೇರಿಸುತ್ತಾನೆ. ಏಕೆಂದರೆ ಮನುಷ್ಯನ ಕಷ್ಟಗಳಿಗೆ ಕಣ್ಣಿಗೆ ಕಾಣದೆ ಪರಿಹಾರವನ್ನು ನೀಡುತ್ತಾನೆ ಆ ದೇವರು. ದೇವರನ್ನು ಪೂಜಿಸುವಾಗ ಅದರದೇ ಆದ ರೀತಿಗಳು ಇವೆ.ಆದ್ದರಿಂದ ನಾವು ಇಲ್ಲಿ ದೇವರನ್ನು ಪೂಜಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ದೇವಸ್ಥಾನಕ್ಕೆ ಹೋದಾಗ ತೀರ್ಥವನ್ನು 3 ಬಾರಿ ತೆಗೆದುಕೊಳ್ಳಬೇಕು. ಆದರೆ ಕೆಲವರು ತೀರ್ಥವನ್ನು ಒಂದು ಬಾರಿ ತೆಗೆದುಕೊಳ್ಳುತ್ತಾರೆ.ದೇವರಿಗೆ ದೀಪವನ್ನು ಹಚ್ಚುವಾಗ ದೀಪದ ಬತ್ತಿಯನ್ನು ಎಣ್ಣೆ ಅಥವಾ ತುಪ್ಪದಲ್ಲಿ ನೆನೆಸಿ ಹಚ್ಚಬೇಕು.ಹಾಗೆಯೇ ದೀಪವನ್ನು ಪೂರ್ವ ದಿಕ್ಕಿನಲ್ಲಿ ಹಚ್ಚಬೇಕು.ಎರಡು ಬತ್ತಿಯನ್ನು ಹಚ್ಚಬೇಕು.ಒಂದೇ ಬತ್ತಿಯನ್ನು ಹಚ್ಚಬಾರದು. ಶಿವ ಅಭಿಷೇಕ ಪ್ರಿಯನಾಗಿದ್ದಾನೆ.ಆದ್ದರಿಂದ ಶಿವನನ್ನು ಅಭಿಷೇಕ ಮಾಡಬೇಕು.ಆದ್ದರಿಂದ ಇವನನ್ನು ಜೇನುತುಪ್ಪ, ಹಾಲು ಮುಂತಾದವುಗಳಿಂದ ಅಭಿಷೇಕ ಮಾಡಬೇಕು. ಹಾಗೆಯೇ ವಿಷ್ಣುವು ಅಲಂಕಾರ ಪ್ರಿಯನಾಗಿದ್ದಾನೆ. ಆದ್ದರಿಂದ ಅವನನ್ನು ಹೂವುಗಳಿಂದ ಚೆನ್ನಾಗಿ ಅಲಂಕಾರ ಮಾಡಬೇಕು.
ಸುಗಂಧದ್ರವ್ಯ ಗಳನ್ನು ಬಳಸಬೇಕು.ಸೂರ್ಯನು ನಮಸ್ಕಾರ ಪ್ರಿಯನಾಗಿದ್ದಾನೆ. ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ಸೂರ್ಯನಿಗೆ ನಮಸ್ಕಾರ ಮಾಡಬೇಕು.

ಪ್ರಸಾದವನ್ನು ಸ್ವೀಕರಿಸುವಾಗ ಮಹಾಪ್ರಸಾದವೆಂದು ತಿಳಿದು ಕಣ್ಣಿಗೆ ಅದ್ದುಕೊಂಡು ತಿನ್ನಬೇಕು. ಯಾವುದೇ ಕಾರಣಕ್ಕೂ ಅದನ್ನು ಬಿಸಾಕಬಾರದು.ದೀಪವನ್ನು ಬಾಯಿಯಿಂದ ಆರಿಸಬಾರದು.ದೀಪ ಹಚ್ಚಿದ ತಕ್ಷಣವೇ ಬಾಗಿಲು ಹಾಕಿ ಹೋಗಬಾರದು.ಸ್ವಲ್ಪ ಹೊತ್ತು ನಿತ್ತು ಧ್ಯಾನ ಮಾಡಿದ ನಂತರ ಬಾಗಿಲು ಹಾಕಿ ಹೊರ ಹೋಗಬೇಕು.ಪೂಜೆಗೆ ಉಪಯೋಗಿಸಿದ ಆಸನವನ್ನು ಬೇರೆ ಕಡೆ ಉಪಯೋಗಿಸಬಾರದು.ದೇವರಿಗೆ ಎದುರಿಗೆ ನಿಂತು ಮಂತ್ರ, ಸ್ತೋತ್ರವನ್ನು ಪಠಿಸಬಾರದು. ಅಕ್ಕಪಕ್ಕದಲ್ಲಿ ನಿಂತು ಎರಡೂ ಕೈಗಳನ್ನು ಜೋಡಿಸಿ ಪಠಿಸಬೇಕು.

ನಮಸ್ಕಾರ ಮಾಡುವಾಗ ಪುರುಷರು ಸಾಷ್ಟಾಂಗ ನಮಸ್ಕಾರ ಮಾಡಬೇಕು. ಮಹಿಳೆಯರು ಮೊಳಕಾಲಿನ ಮೇಲೆ ಕುಳಿತು ಹಣೆಯನ್ನು ನೆಲಕ್ಕೆ ತಗುಲಿಸಿ ನಮಸ್ಕಾರ ಮಾಡಬೇಕು.ಕೃಷ್ಣನು ಯುದ್ಧಕ್ಕೆ ಸನ್ನದ್ಧನಾಗಿರುವ, ಕೃಷ್ಣ ಕೊಳಲು ಹಿಡಿದುಕೊಂಡಿರುವ ಫೋಟೋ ಅಥವಾ ಮೂರ್ತಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.ಕಮಲದಲ್ಲಿ ಕುಳಿತ ಲಕ್ಷ್ಮೀಯನ್ನು ಪೂಜಿಸಬೇಕು. ನಿಂತುಕೊಂಡ ಲಕ್ಷ್ಮಿಯನ್ನು ಪೂಜಿಸಬಾರದು.

ಧ್ಯಾನದಲ್ಲಿ ಇರುವ ಹನುಮಂತ ಹಾಗೂ ಶಿವನ ಚಿತ್ರಪಟವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.ದೇವಾಲಯಕ್ಕೆ ಹೋದಾಗ ಶಿವ ಮತ್ತು ನಂದಿಯ ಮಧ್ಯದಲ್ಲಿ ಯಾರೂ ಓಡಾಡಬಾರದು.ಸಂಜೆ ಹೊತ್ತಿನಲ್ಲಿ ಮರೆಯದೇ ದೀಪವನ್ನು ಹಚ್ಚಬೇಕು.ಹೂಗಳನ್ನು ದಳ ದಳವಾಗಿ ಕಿತ್ತು ದೇವರಿಗೆ ಅರ್ಪಿಸಬಾರದು. ಇಡೀ ಹೂವನ್ನೇ ಅರ್ಪಿಸಬೇಕು. ಭಾನುವಾರ ಸೂರ್ಯನನ್ನು, ಸೋಮವಾರ ಶಿವನನ್ನು,ಮಂಗಳವಾರ ಆಂಜನೇಯ ಮತ್ತು ಸುಬ್ರಹ್ಮಣ್ಯ ಸ್ವಾಮಿಯನ್ನು, ಬುಧವಾರ ವಿನಾಯಕ ಮತ್ತು ಅಯ್ಯಪ್ಪ ಸ್ವಾಮಿಯನ್ನು, ಗುರುವಾರ ಸಾಯಿಬಾಬಾ ಮತ್ತು ರಾಘವೇಂದ್ರ ಸ್ವಾಮಿಗಳನ್ನು, ಶುಕ್ರವಾರ ದೇವಿ, ದುರ್ಗಿ, ಶಾರದೆ ಮತ್ತು ಶನಿವಾರ ವೆಂಕಟೇಶ್ವರನ ದರ್ಶನ ಮಾಡಬೇಕು.

ಶಿವಾಲಯಕ್ಕೆ ಹೋದಾಗ ಮೊದಲು ನವಗ್ರಹಗಳನ್ನು ಪೂಜಿಸಿ ನಂತರ ಕಾಲು ತೊಳೆದುಕೊಂಡು ನಂತರ ಶಿವನ ದರ್ಶನ ಮಾಡಬೇಕು.ವಿಷ್ಣುವಿನ ದೇವಾಲಯಕ್ಕೆ ಹೋದಾಗ ಮೊದಲು ವಿಷ್ಣುವನ್ನು ದರ್ಶನ ಮಾಡಿ ನಂತರ ಉಳಿದ ದೇವರುಗಳ ದರ್ಶನ ಮಾಡಬೇಕು.ಮಹಿಳೆಯರು ಓಂಕಾರವನ್ನು ನುಡಿಸಬಾರದು. ಹಾಗೆಯೇ ಗಣಪತಿಗೆ ಒಂದು ಪ್ರದಕ್ಷಿಣೆ, ಶಿವನಿಗೆ 3 ಪ್ರದಕ್ಷಿಣೆ, ವಿಷ್ಣುವಿಗೆ 4 ಪ್ರದಕ್ಷಿಣೆ, ದೇವಿಗೆ 4 ಪ್ರದಕ್ಷಿಣೆ ಹಾಗೂ ಆಲದಮರಕ್ಕೆ 7 ಪ್ರದಕ್ಷಿಣೆಯನ್ನು ತಪ್ಪದೇ ಹಾಕಬೇಕು.

By admin

Leave a Reply

Your email address will not be published. Required fields are marked *

error: Content is protected !!
Footer code: