ಸಿಂಹ ರಾಶಿಯವರ ಅಧಿಪತಿ ಸೂರ್ಯದೇವ ಆಗಿರುವುದರಿಂದ ಇವರ ಜೀವನ ಹೇಗಿರತ್ತೆ ಗೊತ್ತೇ

0

ಜನ್ಮ ಕುಂಡಲಿಯ ಪ್ರಕಾರ ಬಂದ ರಾಶಿಯು ವ್ಯಕ್ತಿಯ ಭವಿಷ್ಯದ ಬಗೆಗೆ ಹೇಳುತ್ತವೆ ಎಂಬ ನಂಬಿಕೆ ಹಿಂದಿನ ಕಾಲದಿಂದಲೂ ಇದೆ. ಜ್ಯೋತಿಷಿಗಳು ಹೇಳಿದ ಕೆಲವು ಭವಿಷ್ಯಗಳು, ಅವರ ವ್ಯಕ್ತಿತ್ವದ ಪರಿಚಯ ನಿಜವಾಗುತ್ತವೆ ಕೂಡ. ಹನ್ನೆರಡು ರಾಶಿಗಳಲ್ಲಿ ಒಂದಾದ ಸಿಂಹ ರಾಶಿಯ ವ್ಯಕ್ತಿತ್ವದ ಬಗ್ಗೆ ತಿಳಿಯೋಣ.

ಸಿಂಹ ರಾಶಿಯ ತತ್ವ ಅಗ್ನಿತತ್ವ. ಅಧಿಪತಿ ಸೂರ್ಯದೇವ ಆಗಿರುತ್ತಾನೆ. ಸಿಂಹ ರಾಶಿಯಲ್ಲಿ ಸೂರ್ಯಕಾರಕಗಳು ಹೆಚ್ಚಿರುತ್ತವೆ. ಸಿಂಹ ರಾಶಿಯವರಿಗೆ ಎಲ್ಲರೂ ತಮ್ಮನ್ನೂ ಗಮನಿಸಬೇಕೆಂದು ಹಂಬಲ ಇರುತ್ತದೆ. ಹುಟ್ಟಿನಿಂದಲೇ ಸಿಂಹ ರಾಶಿಯವರದು ಆಳುವವರ ಗುಂಪಿಗೆ ಸೇರಿದವರು. ಇವರ ಇಚ್ಛಾಶಕ್ತಿ ಇವರು ಏನು ಮಾಡದೆ ಇದ್ದರೂ ಎಲ್ಲವೂ ಈಡೇರುತ್ತದೆ. ಇವೆಲ್ಲವೂ ಸೂರ್ಯನ ಲಕ್ಷ್ಮಣದಿಂದ ತೇಜಸ್ವಿಯಾಗಿರುತ್ತಾರೆ. ಸಿಂಹ ರಾಶಿಯವರು ಗೌರವಕ್ಕೆ ಬೆಲೆ ಕೊಡುತ್ತಾರೆ. ಮಾತನಾಡುವಾಗ ಗೌರವ ನೀಡದೆ ಮಾತನಾಡಿದರೆ ಸಿಂಹ ರಾಶಿಯವರಿಗೆ ಸರಿಬರುವುದಿಲ್ಲ. ಸಮಾಜದಲ್ಲಿ ಜವಾಬ್ದಾರಿಯಿಂದ ಇರಲು ಬಯಸುತ್ತಾರೆ.

ತನ್ನ ಪ್ರತಿಷ್ಠೆಗೆ ದಕ್ಕೆ ಬರುವಂತ ಯಾವ ಕೆಲಸಗಳನ್ನು ಇವರು ಮಾಡಲು ಇಷ್ಟ ಪಡುವುದಿಲ್ಲ. ಆದೇಶ ಮಾಡುವ ಸ್ಥಾನದಲ್ಲಿ ಇರಲು ಇಷ್ಟ ಪಡುತ್ತಾರೆ ಆದರೆ ಆದೇಶ ತೆಗೆದುಕೊಳ್ಳುವುದಿಲ್ಲ. ಸಿಂಹ ರಾಶಿಯವರು ಪ್ರತಿಭೆ ಹೊಂದಿರುತ್ತಾರೆ. ಸುಂದರ ವ್ಯಕ್ತಿತ್ವ ಹೊಂದಿರುತ್ತಾರೆ. ಸಿಂಹ ರಾಶಿಯವರ ಕಣ್ಣುಗಳು ತುಂಬಾ ತೇಜಸ್ಸಿನಿಂದ ಕೂಡಿರುತ್ತದೆ. ಯಾವುದೇ ಹೊಸ ಕೆಲಸಗಳನ್ನು ಹಿಂಜರಿಯದೆ ಮುಂದುವರೆಯುತ್ತಿರುತ್ತಾರೆ. ಇವರಿಗೆ ಅಹಂ ಇರುತ್ತದೆ. ಒಂದು ವೇಳೆ ಇವರ ಅಹಂ ಗೆ ಪೆಟ್ಟಾದರೆ ಯಾವ ಮಟ್ಟಕ್ಕೆ ಬೇಕಾದರು ಹೋಗುತ್ತಾರೆ ಇವರು.

ವಿಶಾಲ ಮನಸ್ಸುಳ್ಳವರು ಕೂಡ ಮನಸಾರೆ ಕೇಳಿದ ಕ್ಷಮೆಗೆ ಬೇಗ ಕ್ಷಮಿಸಿ ಬಿಡುತ್ತಾರೆ. ಯಾವುದೇ ರೀತಿಯ ಸಮಾರಂಭದ ಜವಾಬ್ದಾರಿ ತೆಗೆದುಕೊಂಡರೆ ಅದನ್ನು ಸರಿಯಾಗಿ, ಒಳ್ಳೆಯ ರೀತಿಯಲ್ಲಿ ನಿರ್ವಹಣೆ ಮಾಡುತ್ತಾರೆ. ಅತ್ಯುತ್ತಮ ವಸ್ತುಗಳನ್ನು ಇಷ್ಟಪಡುತ್ತಾರೆ. ಇವರು ಚೌಕಾಸಿ ಮಾಡಲು ಬರುವುದಿಲ್ಲ. ಪ್ಯಾಶನ್ ತುಂಬಾ ಇರುತ್ತದೆ ಇದರಿಂದಾಗಿ ಗುರಿ ತಲುಪುತ್ತಾರೆ. ತುಂಬಾ ಕಾಳಜಿ ಮಾಡುತ್ತಾರೆ. ಸಮಸ್ಯೆಗೆ ಪರಿಹಾರವನ್ನು ತುಂಬಾ ಚೆನ್ನಾಗಿ ಹೇಳಿ ಕೊಡುತ್ತಾರೆ. ವ್ಯಕ್ತಿತ್ವ ಬದಲಾವಣೆ ಮಾಡಿಕೊಳ್ಳುವವರು ಅಲ್ಲವೇ ಅಲ್ಲ. ಧೈರ್ಯ ನಿಲ್ಲುತ್ತಾರೆ. ತಮಗೆ ಅನ್ನಿಸಿದಂತೆ ಮಾಡುತ್ತಾರೆ. ಪ್ರೀತಿಗೆ ಹೆಗಲು ಕೊಡುತ್ತಾರೆ. ಹೊಗಳುವಿಕೆಗೆ ಬೇಗ ಕರಗುತ್ತಾರೆ ಈ ರಾಶಿಯವರು. ‌

ಜೀವನದಲ್ಲಿ ಕುಗ್ಗಿದರೂ ಬೇಗನೆ ತಿರುಗಿ ಬರುತ್ತಾರೆ. ತಮ್ಮ ಕೆಲಸ ಬೇಗ ಮುಗಿಸಿ ಆರಾಮ ಮಾಡುತ್ತಾರೆ. ಆರೋಗ್ಯದ ವಿಷಯಕ್ಕೆ ಬಂದರೆ ಸಿಂಹ ರಾಶಿಯವರಿಗೆ ಬೆನ್ನು, ಸ್ಪೈನ್, ಹೃದಯದ ಭಾಗದಲ್ಲಿ ನೋವು ಆಗುವುದು ಹೆಚ್ಚು. ಸಿಂಹ ರಾಶಿಯವರು ನಿಯತ್ತಿಗೆ ಹೆಸರಾಗಿರುತ್ತಾರೆ ಮೋಸ ಮಾಡುವುದರ ವಿರುದ್ದ ಇರುತ್ತಾರೆ. ಸಿಂಹ ರಾಶಿಯವರಿಗೆ ಸರಕಾರಿ ಕೆಲಸ, ಸಲಹೆ ನೀಡುವ ಕೆಲಸ, ಸೇವೆ ನೀಡುವ ಕೆಲಸ, ಅಡ್ಮೀನ್ ಕೆಲಸಗಳು ಹೊಂದಿ ಬರುತ್ತವೆ ಹಾಗೂ ಪ್ರಗತಿ ಕೂಡ ಸಿಗುತ್ತದೆ. ಹಣ ವೆಚ್ಚ ಮಾಡುವ ಸಮಯದಲ್ಲಿ ಸ್ವಲ್ಪ ಯೋಚಿಸಿ ಮಾಡಬೇಕು.ಇವೆಲ್ಲವೂ ಸಿಂಹ ರಾಶಿಯವರ ವ್ಯಕ್ತಿತ್ವದ ಪರಿಚಯವಾಗಿರುತ್ತದೆ. ಸಂಬಂಧಗಳ ಮದ್ಯ ಅಹಂ ಅನ್ನು ತರುವುದು ಉತ್ತಮವಲ್ಲ. ಹಾಗೂ ತಮ್ಮನ್ನು ಮಾತ್ರ ಗಮನಿಸಬೇಕು ಅಂದುಕೊಳ್ಳುವುದು ಬಿಟ್ಟರೆ ಒಳ್ಳೆಯದು.

Leave A Reply

Your email address will not be published.

error: Content is protected !!