ದುಬಾರಿ ಬೆಲೆಯ ಮಾಸ್ಕ್ ಧರಿಸಿದ ನಟಿ, ಇದರ ಬೆಲೆ ಕೇಳಿದ್ರೆ ಸುಸ್ತಾಗ್ತೀರಾ

0

ಹೊಸ ವಸ್ತುಗಳು ಮಾರ್ಕೆಟ್ ಗೆ ಬಂದರೆ ಜನಸಾಮಾನ್ಯರಿಗಿಂತ ಮೊದಲು ಖರೀದಿಸುವುದು ಸ್ಟಾರ್ ನಟ, ನಟಿಯರು. ಕೊರೊನ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದುಬಾರಿ ಬೆಲೆಯ ವಿಭಿನ್ನ ಶೈಲಿಯ ಮಾಸ್ಕ್ ಮಾರ್ಕೆಟ್ ನಲ್ಲಿ ಕಾಣಬಹುದು. ಬಾಲಿವುಡ್ ನಟಿಯೊಬ್ಬರು ದುಬಾರಿ ಮಾಸ್ಕ್ ತೊಟ್ಟು ಫೇಮಸ್ ಆಗಿದ್ದಾರೆ. ಅವರು ಯಾರು ಹಾಗೂ ಆ ದುಬಾರಿ ಮಾಸ್ಕ್ ಬೆಲೆಯ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಯಾವುದೆ ಹೊಸ ವಸ್ತು, ಬಟ್ಟೆ ಮಾರುಕಟ್ಟೆಗೆ ಬಂದಾಗ ದುಬಾರಿ ಬೆಲೆಕೊಟ್ಟು ಅವುಗಳನ್ನು ಮೊದಲು ಖರೀದಿಸುವುದು ಸ್ಟಾರ್ ನಟ, ನಟಿಯರು ಮಾತ್ರ. ಚಪ್ಪಲಿ ಇರಲಿ ಡೈಮಂಡ್ ರಿಂಗ್ ಇರಲಿ ಯಾವುದೇ ವಸ್ತುವಾದರೂ ಸರಿ ದುಬಾರಿ ಬೆಲೆ ಕೊಟ್ಟು ಖರೀದಿಸಿ ಅದನ್ನು ತೊಟ್ಟುಕೊಂಡು ಒಂದು ಫೋಟೋಕ್ಕೆ ಫೋಸ್ ಕೊಟ್ಟರೇನೆ ಸ್ಟಾರ್ ನಟ, ನಟಿಯರಿಗೆ ಸಮಾಧಾನ. ಕೊರೊನ ವೈರಸ್ ಬಂದಾಗಿನಿಂದ ನಮ್ಮೆಲ್ಲರ ಮುಖವನ್ನು ಮಾಸ್ಕ್ ಆವರಿಸಿಕೊಂಡಿದೆ. ಕೊರೊನಾದಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸಬೇಕಾಗಿ ಬಂತು. 300 ರೂಪಾಯಿ ಇರುವ ಮಾಸ್ಕ್ ಬೆಲೆ ಹತ್ತು ರೂಪಾಯಿಗೆ ಇಳಿಯಿತು. ಪ್ರಾರಂಭದಲ್ಲಿ ಸರಳ ಮಾಸ್ಕ್ ಗಳನ್ನು ಮಾತ್ರ ಬಳಸುತ್ತಿದ್ದರು. ನಂತರ ಅದೆ ಫ್ಯಾಶನ್ ಆಗಿ ಬದಲಾಯಿತು, ಅದರಂತೆ ಅದರ ಬೆಲೆಯೂ ಗಗನಕ್ಕೇರಿತು. ಎನ್ 95, ವೈಲ್ಡ್ ಕ್ರಾಫ್ಟ್ ಬ್ರ್ಯಾಂಡ್ ಸೇರಿದಂತೆ ಹಲವು ಪ್ರಖ್ಯಾತ ವಸ್ತ್ರ ಕಂಪನಿಗಳು ಮಾಸ್ಕ್ ತಯಾರಿಸಲು ಪ್ರಾರಂಭಿಸಿದವು. ಅವುಗಳಲ್ಲಿ ಲೂಯಿಸ್ ವಿಟಾಲ್ ಫೇಸ್ ಮಾಸ್ಕ್ ಕಂಪನಿ ಮೂಂಚೂಣಿಯಲ್ಲಿದೆ. ಸರಳ ಕಪ್ಪುಬಣ್ಣದ ಲೂಯಿಸ್ ವಿಟಾಲ್ ಫೇಸ್ ಮಾಸ್ಕ್ ಅನ್ನು ಸೆಲೆಬ್ರಿಟಿಗಳು ಹೆಚ್ಚು ಬಳಸುತ್ತಿದ್ದರು. ಎಲ್ ವಿ ಲೋಗೊ ಇರುವ ಮಾಸ್ಕ್ ಹಾಕಿಕೊಂಡರೆ ಅದರ ಲೆವೆಲ್ಲೆ ಬೇರೆ ಹಾಗಾಗಿ ಈ ಮಾಸ್ಕ್ ಬೆಲೆ ಗಗನಕ್ಕೇರಿತು.

ದೀಪಿಕಾ ಪಡುಕೋಣೆ, ಕರೀನಾ ಕಪೂರ್, ರಣಬೀರ್ ಕಪೂರ್ ಹೀಗೆ ಬಾಲಿವುಡ್ ಸ್ಟಾರ್ ಗಳು ಎಲ್ ವಿ ಫೇಸ್ ಮಾಸ್ಕ್ ಅನ್ನು ಬಳಸುತ್ತಾರೆ. ಯಾರು ಹೆಚ್ಚು ಬೆಲೆಯ ಬ್ರಾಂಡೆಡ್ ಮಾಸ್ಕ ಬಳಸುತ್ತಾರೆ ಎಂಬ ಸ್ಪರ್ಧೆಯೂ ನಡೆಯಿತು. ಈ ಸ್ಪರ್ಧೆಯಲ್ಲಿ ಬಾಲಿವುಡ್ ನಟಿ ಒಬ್ಬರು ಸದ್ಯದಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಅವರು ಬೇರೆ ಯಾರೂ ಅಲ್ಲ ಬಾಲಿವುಡ್ ನಟಿ ಕರೀನಾ ಕಪೂರ್ ಅವರು ದುಬಾರಿ ಬೆಲೆಯ ಲೂಯಿಸ್ ವಿಟಾನ್ ಫೇಸ್ ಮಾಸ್ಕ್ ತೊಟ್ಟು ಸೆಲ್ಫಿ ಫೋಟೋಗೆ ಫೋಸ್ ಕೊಟ್ಟು, ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮಾಸ್ಕ್ ಬೆಲೆ ಬರೋಬ್ಬರಿ 26 ಸಾವಿರ ರೂಪಾಯಿ. ಲೂಯಿಸ್ ವಿಟಾನ್ ಕಂಪನಿಯ ವೆಬ್ಸೈಟ್ ನಲ್ಲಿ ಈ ಮಾಸ್ಕ್ ಬೆಲೆ ಅಮೆರಿಕನ್ ಡಾಲರ್ 355 ಎಂದು ತೋರಿಸುತ್ತಿದೆ ಅಂದರೆ ನಮ್ಮ ಭಾರತೀಯ ರುಪಾಯಿಯಲ್ಲಿ ಅದರ ಬೆಲೆ 26,000 ರೂಪಾಯಿ. 40 ವರ್ಷದ ಕರೀನಾ ಕಪೂರ್ ಅವರು ದುಬಾರಿ ಬೆಲೆಯ ಮಾಸ್ಕ ಧರಿಸಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಜನರಿಗೆ ಮಾಸ್ಕ್ ಧರಿಸುವಂತೆ ಒತ್ತಾಯಿಸಿ, ನೀವು ಕೂಡ ಮಾಸ್ಕ ಧರಿಸಿ ಎಂದು ತಮ್ಮ ಫೋಟೋಕ್ಕೆ ಶೀರ್ಷಿಕೆ ನೀಡಿದ್ದಾರೆ.

Leave A Reply

Your email address will not be published.

error: Content is protected !!