ದೀಪಾವಳಿ ವೇಳೆ ಧನ ಲಕ್ಷ್ಮಿ ಪೂಜೆ ಮಾಡುವುದು ಹೇಗೆ? ನೋಡಿ.

0

ನಾವು ದೇವರ ಪೂಜೆ, ವೃತ ಮಾಡುವುದರಿಂದ ನಮ್ಮ ಬೇಡಿಕೆಗಳನ್ನು ದೇವರು ಈಡೇರಿಸುತ್ತಾನೆ. ದೀಪಾವಳಿಯ ಸಮಯದಲ್ಲಿ ಧನಲಕ್ಷ್ಮಿ ಪೂಜೆ ಮಾಡುವುದರಿಂದ ಹಣದ ಸಮಸ್ಯೆ ಇನ್ನೂ ಅನೇಕ ಕಷ್ಟಗಳು ನಿವಾರಣೆಯಾಗುತ್ತದೆ. ಹಾಗಾದರೆ ಧನಲಕ್ಷ್ಮೀ ಪೂಜೆಯನ್ನು ಯಾವಾಗ, ಯಾವ ವಿಧಾನದಲ್ಲಿ ಮಾಡಬೇಕು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ದೀಪಾವಳಿ ಸಮಯದಲ್ಲಿ ಧನಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ಈ ವರ್ಷ ನವೆಂಬರ್ 14 ನರಕ ಚತುರ್ದಶಿ ಹಾಗೂ ಧನಲಕ್ಷ್ಮೀ ಪೂಜೆ ಎರಡು ಒಂದೆ ದಿನ ಬಂದಿದೆ. ಅಮಾವಾಸ್ಯೆ ನವೆಂಬರ್ 14 ಮದ್ಯಾಹ್ನ 2-18ರಿಂದ ಪ್ರಾರಂಭವಾಗಿ 15 ನೇ ತಾರೀಖು 10-57ಕ್ಕೆ ಮುಗಿಯುತ್ತದೆ. ನರಕ ಚತುರ್ದಶಿ ದಿನದಂದು ಧನಲಕ್ಷ್ಮೀ ಪೂಜೆ ಮಾಡುವುದು ಒಳ್ಳೆಯದು ಆವತ್ತು ಬೆಳಗ್ಗೆ ಮಾಡುವುದಾದರೆ 10.30 ರ ಒಳಗೆ ಪೂಜೆ ಮಾಡಬೇಕು. ನರಕ ಚತುರ್ದಶಿ ದಿನ ಸಾಯಂಕಾಲ ನಾಲ್ಕು ಗಂಟೆ ನಂತರ 7 ಗಂಟೆ ಒಳಗಡೆ ಪೂಜೆ ಮಾಡಬಹುದು. ಬೆಳಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಧನಲಕ್ಷ್ಮೀ ಪೂಜೆ ಮಾಡಬಹುದು.

ದೇವರ ಮನೆಯಲ್ಲಿ ಸರಳವಾಗಿ ದೇವರ ಫೋಟೋವನ್ನು ಇಡಬಹುದು ಅಥವಾ ಪ್ರತ್ಯೇಕವಾಗಿ ಮಂಟಪದಲ್ಲಿ ದೇವರ ಫೋಟೊ ಇಟ್ಟು ಪೂಜೆಗೆ ಸಿದ್ಧತೆ ಮಾಡಬಹುದು. ದೇವರನ್ನು ಪೂರ್ವಕ್ಕೆ ಅಥವಾ ಉತ್ತರಕ್ಕೆ ಮುಖಮಾಡಿ ಇಡುವುದರಿಂದ ಬಹಳ ಒಳ್ಳೆಯದಾಗುತ್ತದೆ. ಯಾವುದೆ ಪೂಜೆ ಮಾಡುವಾಗ ಕಳಶ ಇಟ್ಟು ಪೂಜೆ ಮಾಡುವುದು ಒಳ್ಳೆಯದು. ಮನೆಯಲ್ಲಿ ಈಗಾಗಲೆ ಇರುವ ಕಳಶ ಶಾಶ್ವತವಾಗಿರುತ್ತದೆ. ವೃತಗಳಲ್ಲಿ ಇಡುವ ಕಳಶವನ್ನು ಬೆಳಗ್ಗೆ ಇಟ್ಟು ಸಾಯಂಕಾಲ ತೆಗೆಯಲಾಗುತ್ತದೆ.

ಮನೆಯಲ್ಲಿ ಇರುವ ಕಳಶವನ್ನು ಬಿಟ್ಟು ಪ್ರತ್ಯೇಕವಾಗಿ ಧನಲಕ್ಷ್ಮೀ ಪೂಜೆಗೆ ಕಳಶ ಇಡುವುದು ಒಳ್ಳೆಯದು. ಈ ಪೂಜೆಯನ್ನು ಮಾಡುವುದರಿಂದ ಹಣಕಾಸಿನ ತೊಂದರೆ, ಸಾಲಬಾಧೆ ಸಮಸ್ಯೆ ನಿವಾರಣೆಯಾಗುತ್ತದೆ. ಧನಲಕ್ಷ್ಮೀ ಪೂಜೆ ಯಾರು ಬೇಕಾದರೂ ಯಾವುದೆ ಜಾತಿ ಮತದ ಭೇದವಿಲ್ಲದೆ ಮಾಡಬಹುದು.

ಗಣಪತಿ ಪೂಜೆ ಮಾಡುವಾಗ ಗಣಪತಿ ವಿಗ್ರಹ ಇಲ್ಲದೆ ಇದ್ದಾಗ ಅರಿಶಿಣದಿಂದ ಅಥವಾ ಸಗಣಿಯಿಂದ ವಿಗ್ರಹ ಮಾಡಿ ಪೂಜೆ ಮಾಡಬಹುದು ಅದರಂತೆ ಲಕ್ಷ್ಮೀ ಪೂಜೆ ಮಾಡುವಾಗ ಲಕ್ಷ್ಮೀ ವಿಗ್ರಹ ಇಲ್ಲವೆಂದರೆ ಕಳಶಕ್ಕೆ ಪೂಜೆ ಮಾಡಬಹುದು, ಕೇವಲ ಲಕ್ಷ್ಮೀ ಫೋಟೊ ಪೂಜೆ ಮಾಡುವುದರಿಂದ ಯಾವುದೆ ತೊಂದರೆಯಿಲ್ಲ ಕಳಶ ಇಡುವುದರಿಂದ ಇನ್ನು ಒಳ್ಳೆಯದಾಗುತ್ತದೆ. ವಿಗ್ರಹ ಇಲ್ಲದೆ ಇದ್ದಾಗ ಅಭಿಷೇಕ ಮಾಡಲು ಸಮಸ್ಯೆಯಾಗುತ್ತದೆ ಆಗ ಪಂಚಾಮೃತವನ್ನು ತಯಾರಿಸಿ ಗ್ಲಾಸ್ ನಲ್ಲಿ ಇಟ್ಟುಕೊಂಡು ಒಂದು ಹೂವನ್ನು ಅದ್ದಿಕೊಂಡು ಲಕ್ಷ್ಮೀ ಕಳಶ ಅಥವಾ ಫೋಟೋಕ್ಕೆ ಪ್ರೋಕ್ಷಣೆ ಮಾಡಬೇಕು‌.

ಧನಲಕ್ಷ್ಮೀ ಪೂಜೆಯಲ್ಲಿ ಮಡಲಕ್ಕಿ ಎಂಬುದು ಪ್ರಮುಖವಾಗಿದೆ. ಮಡಲಕ್ಕಿ ಮಾಡಲು 5 ಸೇರು ಅಕ್ಕಿ, ಬೆಲ್ಲದ ಅಚ್ಚು, ಕೊಬ್ಬರಿ, ಡ್ರೈಫ್ರೂಟ್ಸ್ ಅಥವಾ ಹುರಿಗಡಲೆ ವೀಳ್ಯದೆಲೆ, ಅಡಿಕೆ, ದಕ್ಷಿಣೆಗೆ ಹಣ, 1ಡಜನ್ ಬಳೆ, ಅರಿಶಿಣ ಕೊಂಬು, ಬಾಗಿನ ಸಾಮಾನು, ಮೂರು ನಾಲ್ಕು ರೀತಿಯ ಹಣ್ಣು, ಬ್ಲೌಸ್ ಪೀಸ್ ಅಥವಾ ಸೀರೆಯನ್ನು ಇಟ್ಟು ಮಡ್ಲಕ್ಕಿಯನ್ನು ದೇವರ ಮುಂದೆ ಇಡಬಹುದು ಅಥವಾ ದೇವಸ್ಥಾನಗಳಿಗೆ ಕೊಡಬಹುದು. ನೈವೇದ್ಯಕ್ಕೆ ಒಬ್ಬಟ್ಟು ಮಾಡಬಹುದು ಅಥವಾ ದೀಪಾವಳಿಯ ವಿಶೇಷಕ್ಕೆ ಮಾಡುವ ಅಡುಗೆಯನ್ನು ನೇವೇದ್ಯಕ್ಕೆ ಇಡಬಹುದು. ಬೆಲ್ಲ ಕಾಯಿ ರವೆಯಿಂದ ಮಾಡಿದ ಸಿಹಿ ತಿನಿಸನ್ನು ನೇವೇದ್ಯಕ್ಕೆ ಇಡಬಹುದು.

ಪೂಜೆಯ ದಿನದಂದು ಪೂಜೆ ಮುಗಿದ ನಂತರ ಮಲಗುವಾಗ ದೇವಿಯನ್ನು ಕದಲಿಸಿ ಅಂದರೆ ವಿಸರ್ಜಿಸಬೇಕು. ದೇವಿಯ ಮೇಲಿರುವ ಹೂವುಗಳನ್ನು ಬಲಭಾಗಕ್ಕೆ ಮೂರು ಸಾರಿ ಕದಲಿಸಿ. ಪೂಜೆಗೆ ಬಳಸಿದ ತೆಂಗಿನಕಾಯಿಯನ್ನು ಸ್ವೀಟ್ ಮಾಡಿ ಸೇವಿಸಬಹುದು. ಕಳಶದಲ್ಲಿರುವ ನೀರನ್ನು ಮನೆಯಲ್ಲಿ ಪ್ರೋಕ್ಷಣೆ ಮಾಡಬೇಕು ನಂತರ ಗಿಡದ ಬುಡಕ್ಕೆ ನೀರನ್ನು ಹಾಕಬೇಕು. ಬಾಗಿನದ ಸಾಮಾನುಗಳನ್ನು ಮಡಲಕ್ಕಿ ಜೊತೆಗೆ ದೇವಸ್ಥಾನಗಳಿಗೆ ಕೊಡಬಹುದು. ಈ ರೀತಿ ಧನಲಕ್ಷ್ಮೀ ಪೂಜೆ ಮಾಡುವುದರಿಂದ ಮನಸಿನ ಬೇಡಿಕೆ ಈಡೇರುತ್ತದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!