ದರ್ಶನ್ ಹುಟ್ಟು ಹಬ್ಬಕ್ಕೆ ಯಾರೆಲ್ಲ ಶುಭ ಕೋರಿದರು ಗೊತ್ತಾ

0

ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವಂತಹ ನಟ ದರ್ಶನ್ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದರ್ಶನ್ ಅವರು ನಟನಾಗಿ ನಿರ್ಮಾಪಕನಾಗಿ ಮತ್ತು ವಿತರಕರಾಗಿ ಕನ್ನಡ ಚಿತ್ರರಂಗದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ದರ್ಶನ್ ಅವರು ಎರಡು ಸಾವಿರದ ಒಂದರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಎನ್ನುವ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಅಭಿನಯ ಮಾಡುವುದರ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಾರೆ. ಇವರನ್ನ ಅವರ ಅಭಿಮಾನಿಗಳು ಪ್ರೀತಿಯಿಂದ ಡಿ ಬಾಸ್ ಎಂದೇ ಕರೆಯುತ್ತಾರೆ. ಅವರಿಗೆ ಅಪಾರವಾದ ಅಭಿಮಾನಿಗಳಿದ್ದು ಅವರ ಚಿತ್ರ ಬಿಡುಗಡೆಯಾದಾಗ ಹಬ್ಬದಂತೆ ಆಚರಣೆ ಮಾಡುತ್ತಾರೆ ಸಂಭ್ರಮಿಸುತ್ತಾರೆ.

ದರ್ಶನ್ ಅವರು ಒಂದು ಕರೆ ಕೊಟ್ಟರೆ ಸಾಕು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ಹೇಳಿದ ಕೆಲಸವನ್ನು ನಿರ್ವಹಿಸುತ್ತಾರೆ. ಫೆಬ್ರವರಿ 17ರಂದು ನಟ ದರ್ಶನ್ ಅವರ ಹುಟ್ಟುಹಬ್ಬ ಆ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಸಾಗರವೇ ಹರಿದು ಬಂದಿದೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ದರ್ಶನ್ ಅವರಿಗೆ ಶುಭಾಶಯವನ್ನು ಕೋರಿದ್ದಾರೆ.

ದರ್ಶನ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅಕ್ಷರಶಹ ಹಬ್ಬದಂತೆ ಆಚರಿಸುತ್ತಾರೆ ಆದರೆ ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನೋವು ಹಾಗೂ ಕರೋನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ದರ್ಶನ್ ಅವರು ನಿರ್ಧರಿಸಿದ್ದರು. ಹುಟ್ಟುಹಬ್ಬಕ್ಕೆ ಮೂರು ನಾಲ್ಕು ದಿನಗಳ ಹಿಂದೆಯೇ ದರ್ಶನ್ ಅವರು ಅಭಿಮಾನಿಗಳಿಗೆ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿಕೊಂಡಿದ್ದರು.

ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಅಭಿಮಾನಿಗಳಾರು ಮನೆಯ ಮುಂದೆ ಬರಬೇಡಿ ಮುಂದಿನ ವರುಷ ಖಂಡಿತ ಸಿಗುತ್ತೇನೆ ಎಂದು ಮನವಿ ಮಾಡಿಕೊಂಡಿದ್ದರು. ಇನ್ನು ಚಿತ್ರರಂಗದಲ್ಲಿನ ಗಣ್ಯರು ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ ನವರಸ ನಾಯಕ ಜಗ್ಗೇಶ್ ಅವರು ತಮ್ಮ ಮತ್ತು ದರ್ಶನ್ ಅವರ ಫೋಟೋವನ್ನು ಹಾಕಿ ಅವರಿಗೆ ಶುಭಾಶಯವನ್ನು ಕೋರಿದ್ದಾರೆ ಅದೇ ರೀತಿ ರಕ್ಷಿತಾ ರಚಿತಾ ರಾಮ್ ಶೈಲಜಾ ನಾಗ್ ಅವರು ಪ್ರಿಯಾಂಕಾ ಉಪೇಂದ್ರ ಅವರು ಶುಭಾಶಯವನ್ನು ಕೋರಿದ್ದರು.

ರಮೇಶ್ ಅರವಿಂದ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭಾಶಯವನ್ನು ಕೋರಿದ್ದಾರೆ. ಜೊತೆಗೆ ಪ್ರೇಮ್ ಅವರು ಡಾಲಿ ಧನಂಜಯ್ ಅವರು ನಟ ಧನ್ವೀರ್ ಧರ್ಮ ಕೀರ್ತಿರಾಜ್ ಅವರು ಸತೀಶ್ ನೀನಾಸಂ ಅವರು ಇನ್ನೂ ಅನೇಕ ಗಣ್ಯಾತಿಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ದರ್ಶನ್ ಅವರಿಗೆ ಶುಭಾಶಯವನ್ನು ಕೋರಿದ್ದಾರೆ. ದರ್ಶನ್ ಅವರು ಯಾವಾಗಲೂ ಆರೋಗ್ಯವಾಗಿ ಸಂತೋಷದಿಂದ ಇರಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅವರ ಚಿತ್ರಗಳು ತೆರೆಮೇಲೆ ಬರಲಿ ಎಂದು ನಾವು ಆಶಿಸೋಣ.

Leave A Reply

Your email address will not be published.

error: Content is protected !!