ತಿರುಪತಿಯ ಈ ರಹಸ್ಯಗಳು ವಿಜ್ಞಾನಿಗಳಿಗೂ ಇದುವರೆಗೂ ಅರ್ಥವಾಗಿಲ್ಲ, ಏನದು ನೋಡಿ

0

ವೆಂಕಟೇಶ್ವರ ಎಂದರೆ ವೆಂಕಟಗಳ ಅಧಿಪತಿ, ಅದರ ಅರ್ಥ ಭಗವಾನ್ ಶ್ರೀ ವೆಂಕಟೇಶ್ವರನು ನಮ್ಮ ಪಾಪಗಳನ್ನು ನಿವಾರಿಸುತ್ತಾನೆ. ವೆಂಕಟ ಗಿರಿ ಎನ್ನುವುದು ಆಂಧ್ರಪ್ರದೇಶದಲ್ಲಿರುವ ಒಂದು ಬೆಟ್ಟ. ಈಶ್ವರ ಎಂದರೆ ಒಡೆಯ. ಈ ಬೆಟ್ಟಗಳ ಒಡೆಯನೇ ವೆಂಕಟೇಶ್ವರ ಎಂದು ಹೇಳುತ್ತಾರೆ. ವೆಂ ಎಂದರೆ ಪಾಪ ಮತ್ತು ಕ್ಸ ನಿಹ್ ಕಟ ಎಂದರೆ ಶಕ್ತಿ ಮತ್ತು ನಿವಾರಕ ಎಂದು ಸಂಸ್ಕೃತದಲ್ಲಿ ವಿವರಿಸಿದ್ದಾರೆ, ವೆಂಕಟೇಶ್ವರನಿಗೆ ಗೋವಿಂದ ಬಾಲಾಜಿ ಎಂದು ಕರೆಯುತ್ತಾರೆ.

ಈ ದೇವನು ತನ್ನ ಭಕ್ತರನ್ನು ಸುಖ, ಶಾಂತಿ, ಯಶಸ್ಸು, ಸಂಪತ್ತನ್ನು ಕರುಣಿಸುತ್ತಾನೆ. ದೃವ, ಕೌತುಕ, ಸ್ನಪನ, ಉತ್ಸವ ಮತ್ತು ಬಲಿ ಬೆರಮ್ ಎನ್ನುವ ಐದು ದೇವತೆಗಳನ್ನು ವೆಂಕಟೇಶ್ವರನು ಪ್ರತಿನಿಧಿಸುತ್ತಾನೆ. ವೆಂಕಟೇಶ್ವರನನ್ನು ಕಲಿಯುಗ ದೈವ ಎಂದು ಕರೆಯುವ ಕಾರಣ ಆತ ನೆಲೆಸಿರುವ ತಿರುಪತಿಯನ್ನು ಕಲಿಯುಗ ವೈಕುಂಠ ಎಂದು ಹೇಳಲಾಗುತ್ತದೆ. ಆಂಧ್ರ ಪ್ರದೇಶದ ತಿರುಮಲ ವೆಂಕಟೇಶ್ವರ ದೇಗುಲದಲ್ಲಿ ಸ್ವಾಮಿಯೂ ನೆಲೆಸಿದ್ದು, ಪ್ರತಿದಿನ 2.3 ಕೋಟಿ ರೂ ದೇಣಿಗೆ ಸಂಗ್ರಹವಾಗುತ್ತದೆ, ಹಾಗಾಗಿ ಇದು ವಿಶ್ವದ ಅತಿ ಸಿರಿವಂತ ದೇಗುಲ ಎಂದು ಕರೆಯುತ್ತಾ

ಈ ವೆಂಕಟರಮಣನ ಮೂರ್ತಿಯನ್ನು ಇಟ್ಟಿರುವ ಸ್ಥಳ ಗರ್ಭಗುಡಿಯಾಗಿದೆ. ಆರಾಧ್ಯ ನೇರವಾಗಿ “ಆನಂದ ನಿಲಯ ದಿವ್ಯಾ ವಿಮಾನದ” ಎಂಬ ಗಿಲೀಟು ಗುಮ್ಮಟದ ಕೆಳಗೆ ಗರ್ಭಗುಡಿಯಲ್ಲಿ ಈ ವಿಗ್ರಹ ಭವ್ಯವಾಗಿ ನಿಂತಿದೆ. ಈ ವಿಗ್ರಹ ಅದರ ಮುಂಭಾಗದಲ್ಲಿ ಒಂದು ದೊಡ್ಡ ಪಚ್ಚೆ ಹೊಂದಿರುವ ಚಿನ್ನದ ಕಿರೀಟವನ್ನು ಮತ್ತು ವಿಶೇಷ ಸಂದರ್ಭಗಳಲ್ಲಿ ವಜ್ರದ ಕಿರೀಟವನ್ನು ಬದಲಾಯಿಸಲಾಗುತ್ತದೆ. ಎರಡು ಬಿಳಿ ತುಣುಕುಗಳ ನಡುವೆ ಕೇಸರಿನಿಂದ ಮಾಡಿದ ಕಸ್ತೂರಿ ತಿಲಕವನ್ನು ಹಾಕಲಾಗಿದೆ. ಚಿನ್ನದ ಮಕರ ಕುಂಡಲವನ್ನು ವಿಗ್ರಹದ ಕಿವಿಗೆ ಹಾಗೂ ಅಮೂಲ್ಯ ಆಭರಣಗಳನ್ನು ಹಾಕಲಾಗಿದೆ. ಎಡ ಭುಜದಿಂದ ದಾಟುವ ಹಾಗೆ ಒಂದು ಪವಿತ್ರ ದಾರವನ್ನು ಹಾಕಲಾಗಿದೆ. ಮತ್ತು ಎಡ ಹಾಗೂ ಬಲ ಎದೆಯ ಮೇಲೆ ಲಕ್ಷ್ಮಿ ಮತ್ತು ಶ್ರೀ ಪದ್ಮಾವತಿ ದೇವಿ ಹೊಂದಿದೆ. ಆನಂದ ನಿಲಯ ದಿವ್ಯಾ ವಿಮಾನದ ಗಿಲೀಟು ತಾಮ್ರದ ಫಲಕಗಳು ಒಳಗೊಂಡಿದೆ.

ಪ್ರತಿ ಗುರುವಾರದಂದು ನೆಡೆಯುವ ನಿಜರೂಪ ದರ್ಶನಂ ಕಾರ್ಯಕ್ರಮದಲ್ಲಿ ಸ್ವಾಮಿಯ ವಿಗ್ರಹವನ್ನು ಬಿಳಿಯ ಮರದ ಕೊರಡಿಂದ ತೇಯ್ದ ಲೇಪನದಿಂದ ಅಲಂಕರಿಸಲಾಗುತ್ತದೆ. ಬಳಿಕ ಒಣಗಿದ ಈ ಲೇಪನವನ್ನು ಸಿಪ್ಪೆಯಂತೆ ತೆಗೆದು ನಿವಾಳಿಸಿದಾಗ ಒಳಭಾಗದಲ್ಲಿ ಲಕ್ಷ್ಮಿ ದೇವಿಯ ಚಿತ್ರದ ಬಿಂಬವಿರುವುದು ಗೋಚರಿಸುತ್ತದೆ. ಗರ್ಭಗುಡಿಯಲ್ಲಿ ದೇವರ ಪೂಜೆಗೆ ಬಳಸಲ್ಪಡುವ ಹೂವುಗಳನ್ನು ಅಲ್ಲಿಂದ ಹೊರತರುವುದಿಲ್ಲಾ ಯಾಕೆಂದರೆ ಗರ್ಭಗುಡಿಯ ಹಿಂಭಾಗದಲ್ಲಿ ಚಿಕ್ಕ ಜಲಪಾತವೊಂದಿದ್ದು ಗರ್ಭಗುಡಿಯಿಂದ ನೀರು ನೇರವಾಗಿ ಕೆಳಕ್ಕೆ ಧಾವಿಸುತ್ತದೆ, ಈ ನೀರಿನ ಮೂಲಕವೇ ಎಲ್ಲಾ ಹೂವುಗಳನ್ನು ವಿಸರ್ಜಸಲಾಗುತ್ತದೆ. ಬಾಲಾಜಿಗೆ ನೈವೇದ್ಯವಾಗಿ ಅರ್ಪಿಸಲು ಬಳಸಲಾಗುವ ಹಾಲು ಹೂವು, ಬೆಣ್ಣೆ, ತುಪ್ಪ ಮೊದಲಾದವುಗಳನ್ನು ತಿರುಮಲದಿಂದ 23 km ದೂರವಿರುವ ಗ್ರಾಮವೊಂದರಿಂದ ಶತಮಾನಗಳಿಂದ ತರಲಾಗುತ್ತದೆ.

ವಿಶೇಷವೆಂದರೆ ಬಾಲಾಜಿಗೆ ಸೀರೆ ತೊಡಿಸಿ ಮಾಡುವ ಅಲಂಕಾರವು ಕೂಡ ಇದೆ, ಇದಕ್ಕೆ ಕಾರಣ ಬಾಲಾಜಿಯಲ್ಲೆ ಲಕ್ಷ್ಮಿಯ ರೂಪವು ಕೂಡ ಇದೆ ಎನ್ನೋದು, ಲಕ್ಷ್ಮಿ ದೇವಿಯು ತಿರುಮಲನ ಜೊತೆಯಲ್ಲೇ ನೆಲೆಸಿದ್ದಾರೆನ್ನುವ ನಂಬಿಕೆ. ವಿಷ್ಣುವಿನ ಅವತಾರದಂತಿರುವ ತಿರುಮಲೆಶನಿಗೂ ಕೂಡ ತುಳಸಿ ಎಂದರೆ ತುಂಬಾ ಇಷ್ಟ, ದೇವರಿಗೆ ಅರ್ಪಿಸಿದ ತುಳಸಿಯನ್ನ ಮೂರ್ತಿಗೆ ಹಾಕಿದ ನಂತರ ದೇವಾಲಯದ ಮುಂಭಾಗದಲ್ಲಿರುವ ಒಂದು ಬಾವಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ದೇವಾಲಯದ ಮುಖ್ಯ ದ್ವಾರದಲ್ಲಿ ಒಂದು ಕೋಲನ್ನು ಇರಿಸಲಾಗಿದೆ, ದಂತಕಥೆಯ ಪ್ರಕಾರ ವೆಂಕಟೇಶ್ವರ ದೇವರು ಬಾಲ್ಯದಲ್ಲಿರುವಾಗ ಅವರ ತಾಯಿ ಹೊಡೆದ ಬೆತ್ತವದು, ಅಮ್ಮ ಬೆತ್ತದಲ್ಲಿ ಹೊಡೆದ ಏಟಿಗೆ ಬಾಲಾಜಿಯ ಹಣೆಯ ಭಾಗದಲ್ಲಿ ಗಾಯವಾಗಿತ್ತಂತೆ ಈ ಗಾಯದ ನೋವು ಇವತ್ತಿಗೂ ಕೂಡ ಇದೆ ಎನ್ನುವ ನಂಬಿಕೆ ಇದೆ.. ಇದೇ ಕಾರಣಕ್ಕೆ ಪ್ರತಿ ಶುಕ್ರವಾರ ಬಾಲಾಜಿಯ ಹಣೆ ಭಾಗದಲ್ಲಿ ಚಂದನದ ಲೇಪನ ಹಾಕಲಾಗುತ್ತದೆ.

ಸಮುದ್ರ ಮಟ್ಟದಿಂದ 865 ಮೀಟರ್ ಎತ್ತರದಲ್ಲಿರುವ ಈ ದೇವಾಲಯದಲ್ಲಿ ಸ್ಥಾಪಿಸಲಾದ ಶ್ರೀ ವೆಂಕಟೇಶ್ವರ ನ ವಿಗ್ರಹವೂ ಸ್ವಯಂ ಚಾಲಿತವಾಗಿ ಕಾಣಿಸಿಕೊಂಡಿದೆ. ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ವಿಗ್ರಹದ ಬಳಿ ಕಿವಿಯಿಟ್ಟು ಕೇಳಿದಾಗ ಸಾಗರದ ಸದ್ದು ಸ್ಪಷ್ಟವಾಗಿ ಕೇಳಿಸುತ್ತದೆ, ಅಲ್ಲದೆ ವಿಗ್ರಹ ಕೂಡ ಯಾವಾಗಲೂ ತೇವವಾಗಿರುತ್ತದೆ. ದೇವಾಲಯದಲ್ಲಿ ಸ್ಥಾಪಿಸಲಾದ ವೆಂಕಟೇಶ್ವರ ಅಂದರೆ ಬಾಲಾಜಿಯನ್ನು ಗುರುವಾರ ಸಂಪೂರ್ಣ ಅಲಂಕಾರ ತೆಗೆದ ನಂತರ ಅಭಿಷೇಕ ಮಾಡಲಾಗುತ್ತದೆ. ಆ ಸಮಯದಲ್ಲಿ ಬಾಲಾಜಿಯ ಹೃದಯದಲ್ಲಿ ಲಕ್ಷ್ಮಿ ದೇವಿಯ ಆಕೃತಿ ಸ್ಪಷ್ಟವಾಗಿ ಗೋಚರಿಸುತ್ತದೆ ಇದು ಸ್ವತಃ ಆಳವಾದ ರಹಸ್ಯವಾಗಿದೆ. ಇದಲ್ಲದೆ ಬಾಲಾಜಿಯ ವಿಗ್ರಹಕ್ಕೆ ಯಾವುದೇ ಹೂವುಗಳು ಮತ್ತು ಹೂಮಾಲೆಗಳನ್ನು ಅರ್ಪಿಸಿದರೆ ಅವುಗಳನ್ನು ನೋಡುವುದು ಅಶುಭವೆಂದು ಅವುಗಳನ್ನು ವಿಗ್ರಹದ ಹಿಂದೆ ಎಸೆಯಲಾಗುತ್ತದೆ. ಹೀಗೇಕೆ ಮಾಡುತ್ತಾರೆ ಎನ್ನುವುದೇ ರಹಸ್ಯವಾಗಿ ಉಳಿದಿದೆ..

Leave A Reply

Your email address will not be published.

error: Content is protected !!