ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಾಮಾನ್ಯವಾಗಿ ಎದುರಿಸುತ್ತಿರುವ ಸಮಸ್ಯೆ ಎಂದರೆ ಕೂದಲು ಉದುರುವಿಕೆ ಮನೆಯಲ್ಲಿ ಇದನ್ನು ತಡೆಯುವುದುಕೋಸ್ಕರ ಅನೇಕ ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ ಕೆಲವರು ಈರುಳ್ಳಿ ರಸವನ್ನು ಹಚ್ಚುತ್ತಾರೆ. ಈರುಳ್ಳಿಯನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆಯೆ ಅಥವಾ ಕೂದಲು ಉದುರುವಿಕೆ ಹೆಚ್ಚಾಗುತ್ತದೆ? ಹಾಗಾದರೆ ಎಷ್ಟು ಪ್ರಮಾಣದಲ್ಲಿ ಈರುಳ್ಳಿ ರಸವನ್ನು ಹಚ್ಚುವುದರಿಂದ ಮತ್ತು ಯಾವೆಲ್ಲಾ ರೀತಿಯಲ್ಲಿ ಈರುಳ್ಳಿ ರಸವನ್ನು ಹಚ್ಚುವುದರಿಂದ ನಿಮಗೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುವುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತಿದೆ. ಒಂದು ದಿನಕ್ಕೆ ನಲವತ್ತರಿಂದ ನೂರಾ ಇಪ್ಪತ್ತು ಕೂದಲು ಉದುರಲೆಬೇಕು ಅದು ಮುಖದಲ್ಲಿ ಇರುವಂತಹ ಕುದಲಾಗಿರಬಹುದು ದೇಹದಲ್ಲಿ ಇರುವಂತಹ ಕುದಲಾಗಿರಬಹುದು ಅಥವಾ ತಲೆಯಲ್ಲಿರುವ ಕುದಲಾಗಿರಬಹುದು ಅದು ಉದುರುತ್ತದೆ ಅದಕ್ಕೆ ಗಾಬರಿ ಪಡುವಂತಹ ಅವಶ್ಯಕತೆ ಇಲ್ಲ. ಇದಕ್ಕಿಂತ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಕೂದಲು ಉದುರುತ್ತಿದ್ದರೆ ಅದು ಆರೋಗ್ಯದ ಸಮಸ್ಯೆ ಇಂದ ಆಗಿರುತ್ತದೆ. ಯಾವೆಲ್ಲ ಸಮಸ್ಯೆಯಿಂದ ಕೂದಲು ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಒಂದು ತಲೆಯಲ್ಲಿ ಹೊಟ್ಟು ಆಗಿರುವುದರಿಂದ ಇರಬಹುದು ಥೈರಾಯ್ಡ್ ಸಮಸ್ಯೆ ಇರಬಹುದು ಕೆಲವೊಮ್ಮೆಹಾರ್ಮೋನ್ ವ್ಯತ್ಯಯದಿಂದ ಇರಬಹುದು ಅಥವಾ ಬಾಣಂತನ ಸಮಯದಲ್ಲಿ ಸರಿಯಾಗಿ ಆರೈಕೆ ಆಗದಿದ್ದಲ್ಲಿ ಈ ಎಲ್ಲ ಕಾರಣಗಳಿಂದಾಗಿ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಈರುಳ್ಳಿಯನ್ನು ಬಳಸುವುದರಿಂದ ಈ ಎಲ್ಲ ಸಮಸ್ಯೆಗಳನ್ನು ಹೋಗಲಾಡಿಸಬಹುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ.

ಈರುಳ್ಳಿಯನ್ನು ಬಳಸುವುದರಿಂದ ಯಾವುದೇ ಕಾರಣಕ್ಕೂ ಥೈರಾಯ್ಡ್ ಸಮಸ್ಯೆಯನ್ನು ಹೋಗಲಾಡಿಸುವುದಕ್ಕೆ ಸಾಧ್ಯವಿಲ್ಲ. ಹಾರ್ಮೋನ್ ವ್ಯತ್ಯಯವನ್ನು ಸ್ವಲ್ಪಮಟ್ಟಿಗೆ ಸರಿಪಡಿಸಬಹುದು ಆದರೆ ಕೂದಲು ಉದುರುವಿಕೆ ಸಮಸ್ಯೆಯನ್ನು ಈರುಳ್ಳಿ ರಸದಿಂದ ನಿವಾರಣೆ ಮಾಡಬಹುದು. ಅದರಲ್ಲಿ ಒಂದು ಆಸಿಡ್ ಕಂಟೆಂಟ್ ಇರುತ್ತದೆ ಇದರಿಂದ ಈರುಳ್ಳಿ ರಸವನ್ನು ತಲೆಗೆ ಹಚ್ಚುವಾಗ ಕಣ್ಣು ಉರಿಯುವುದು ಮೂಗಲ್ಲಿ ಕಣ್ಣಲ್ಲಿ ನೀರು ಬರುವುದು ಸರ್ವೇಸಾಮಾನ್ಯ. ಹಾಗಾಗಿ ನೀವು ಯಾವುದೇ ಕಾರಣಕ್ಕೂ ಈರುಳ್ಳಿ ರಸವನ್ನು ತುಂಬಾ ಹೊತ್ತು ಬಳಕೆ ಮಾಡಬಾರದು.

ಹಾಗಾದರೆ ಎಷ್ಟು ಪ್ರಮಾಣದಲ್ಲಿ ಬಳಕೆಮಾಡಬೇಕು ಎಷ್ಟು ಸಮಯದವರೆಗೆ ಬಳಸಬೇಕು ಎಂದರೆ ಈರುಳ್ಳಿ ರಸವನ್ನು ಹೆಚ್ಚೆಂದರೆ ಹತ್ತರಿಂದ ಹದಿನೈದು ನಿಮಿಷಗಳವರೆಗೆ ಮಾತ್ರ ಬಳಕೆ ಮಾಡಬೇಕು. ಇದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ ಇನ್ನು ಯಾವೆಲ್ಲ ರೀತಿಯಲ್ಲಿ ಬಳಸಬಹುದು ಎಂಬುದನ್ನು ನೋಡುವುದಾದರೆ.

ಕೆಲವೊಬ್ಬರು ಯಾವುದಾದರೂ ಎಣ್ಣೆಯನ್ನು ತಯಾರಿಸುವಾಗ ಅದಕ್ಕೆ ಈರುಳ್ಳಿ ರಸವನ್ನು ಮಿಶ್ರಣ ಮಾಡುತ್ತಾರೆ ಆದರೆ ಎಣ್ಣೆಯನ್ನು ಹತ್ತರಿಂದ ಹದಿನೈದು ನಿಮಿಷಗಳಷ್ಟು ಇಟ್ಟುಕೊಳ್ಳುವುದಿಲ್ಲ ಹಾಗಾಗಿ ಎಣ್ಣೆಯ ರೀತಿಯಲ್ಲಿ ಈರುಳ್ಳಿ ರಸವನ್ನು ಬಳಸುವುದನ್ನು ದೂರ ಮಾಡಿ ಏಕೆಂದರೆ ಅದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವ ಸಂಭವ ಇರುತ್ತದೆ. ತಲೆಗೆ ಎಣ್ಣೆ ಹಚ್ಚಿದಾಗ ಒಂದರಿಂದ ಎರಡು ದಿನಗಳವರೆಗೆ ಹಾಗೆ ಇಟ್ಟುಕೊಳ್ಳುತ್ತಾರೆ ಈ ರೀತಿ ಈರುಳ್ಳಿ ರಸವನ್ನು ಬಳಸಿದ ಎಣ್ಣೆಯನ್ನು ತಲೆಯಲ್ಲಿಟ್ಟುಕೊಂಡರೆ ಪ್ರಾರಂಭದಲ್ಲಿ ಕೂದಲು ಉದುರುವ ಸಮಸ್ಯೆ ಕಡಿಮೆಯಾದಂತೆ ಕಂಡರು ನಂತರದ ದಿನಗಳಲ್ಲಿ ಕೂದಲು ಉದುರುವಿಕೆ ಹೆಚ್ಚಾಗುತ್ತದೆ.

ತಲೆಗೆ ಪ್ಯಾಕನ್ನು ಹಾಕಿಕೊಳ್ಳುವಾಗ ಮೆಂತೆ ಸೊಪ್ಪು ಕರಿಬೇವು ಪುದೀನಾ ಸೊಪ್ಪನ್ನು ಹಾಕಿ ಅದಕ್ಕೆ ಸ್ವಲ್ಪ ಈರುಳ್ಳಿ ರಸವನ್ನು ಹಾಕಿ ಚೆನ್ನಾಗಿ ರುಬ್ಬಿಕೊಂಡು ಅದನ್ನು ಕೂದಲಿಗೆ ಹಚ್ಚಿ ಅದನ್ನು ಅರ್ಧದಿಂದ ಒಂದು ಗಂಟೆಯವರೆಗೆ ಬಿಡಬಹುದು ನಂತರ ತಲೆಸ್ನಾನ ಮಾಡಬೇಕು ಇದರಿಂದ ನಿಮ್ಮ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಇನ್ನೊಂದು ವಿಧಾನವನ್ನು ನೋಡುವುದಾದರೆ ಮೆಂತೆಕಾಳನ್ನು ರುಬ್ಬಿ ಹಚ್ಚಿಕೊಳ್ಳುವ ಸಮಯದಲ್ಲಿ ಅದಕ್ಕೆ ಈರುಳ್ಳಿ ರಸವನ್ನು ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ಬಳಿಕ ಸ್ನಾನ ಮಾಡಿದರೆ ಖಂಡಿತವಾಗಿಯೂ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ಇನ್ನು ಕೆಲವರು ತಲೆಗೆ ಮೆಹಂದಿಯನ್ನು ಹಚ್ಚಿಕೊಳ್ಳುತ್ತಾರೆ ಆ ಸಮಯದಲ್ಲಿಯೂ ಕೂಡ ಈರುಳ್ಳಿ ರಸವನ್ನು ಬಳಸಬಹುದು ಹೀಗೆ ಈರುಳ್ಳಿ ರಸವನ್ನು ಮಿಶ್ರಣ ಮಾಡಿ ಮೆಹಂದಿಯನ್ನು ಹಚ್ಚಿಕೊಳ್ಳುವುದನ್ನು ಒಂದರಿಂದ ಎರಡು ತಾಸುಗಳ ವರೆಗೆ ಮಾತ್ರ ಬಿಡಬೇಕು ನಂತರ ತಲೆಯನ್ನು ತೊಳೆದುಕೊಳ್ಳಬೇಕು.

ಕೂದಲು ಉದುರುವಿಕೆಗೆ ತಲೆಯಲ್ಲಿ ಹೊಟ್ಟು ಆಗುವುದು ಒಂದು ಕಾರಣ ಎಂದು ಹೇಳಬಹುದು. ಹಾಗಾಗಿ ಬೇವಿನ ಎಣ್ಣೆಗೆ ನಿಂಬೆ ಹಣ್ಣಿನ ರಸ ಅಥವಾ ಈರುಳ್ಳಿ ರಸವನ್ನು ಹಾಕಿ ತಲೆಗೆ ಹಚ್ಚುವುದರಿಂದ ತಲೆಯಲ್ಲಿರುವ ಹೊಟ್ಟಿನ ಸಮಸ್ಯೆ ದೂರವಾಗುತ್ತದೆ ಇದರಿಂದಾಗಿ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ. ಈ ರೀತಿಯಾಗಿ ಈರುಳ್ಳಿ ರಸವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದರಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ನಿಮಗೂ ಕೂಡ ಕೂದಲು ಉದುರುವ ಸಮಸ್ಯೆ ಇದ್ದರೆ ನಾವು ಮೇಲೆ ತಿಳಿಸಿರುವ ರೀತಿಯಲ್ಲಿ ಈರುಳ್ಳಿ ರಸವನ್ನು ಬಳಕೆ ಮಾಡುವುದರಿಂದ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

By admin

Leave a Reply

Your email address will not be published. Required fields are marked *

error: Content is protected !!
Footer code: