ತನ್ನ ಅಭಿಮಾನಿ ಕಾರ್ ಹಿಂಬಾಲಿಸಿದ್ದಕ್ಕೆ ಅಪ್ಪು ಅವತ್ತು ಏನ್ ಮಾಡಿದ್ರು ನೋಡಿ ಎಂತ ಸರಳತೆ

0

ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಸುಮಾರು ಮೂರು ತಿಂಗಳುಗಳು ಕಳೆದಿವೆ ಆದರೆ ಈಗಲೂ ಕೂಡ ಜನರು ಅವರ ಬಗ್ಗೆ ಮಾತನಾಡುತ್ತಿರುತ್ತಾರೆ ಅದು ಅವರು ಮಾಡಿರುವಂತಹ ಸಾಧನೆ. ಅವರು ಒಬ್ಬ ಉತ್ತಮ ನಟನ ಜೊತೆಗೆ ಒಬ್ಬ ಒಳ್ಳೆಯ ಮನಸ್ಸಿನ ವ್ಯಕ್ತಿಯಾಗಿದ್ದರು. ಎಂದಿಗು ಯಾರಿಗೂ ನೋವನ್ನುಂಟು ಮಾಡದ ಆಜೀವ ಬಹಳ ಬೇಗನೆ ಈ ಭೂಮಿಯನ್ನು ಬಿಟ್ಟು ಹೋಗಿದೆ. ಬಾಲನಟನಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರನ್ನು ಗಳಿಸಿ ಸ್ವಲ್ಪ ಸಮಯ ಚಿತ್ರರಂಗದಿಂದ ದೂರವಿದ್ದು ನಂತರ ಮತ್ತೆ ಸಿನಿ ಜೀವನವನ್ನು ಆರಂಭಿಸುವುದರ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅವರು ಜನರಿಗೆ ಮಾಡುತ್ತಿದ್ದಂತಹ ಸೇವೆಗಳು ಒಂದು ಕೈಯಿಂದ ಇನ್ನೊಂದು ಕೈಯಿಗೆ ತಿಳಿಯುತ್ತಿರಲಿಲ್ಲ ಅಂತಹ ವಿಶಾಲ ಹೃದಯದವರಾಗಿದ್ದರು.

ಪುನೀತ್ ರಾಜಕುಮಾರ್ ಅವರ ಮರಣದ ಸುದ್ದಿ ಇಡೀ ದೇಶಕ್ಕೆ ಆಘಾತವನ್ನುಂಟುಮಾಡಿತ್ತು. ಒಬ್ಬ ವ್ಯಕ್ತಿ ಅಥವಾ ನಟ ಜೀವಂತ ಇರುವಾಗ ಅಭಿಮಾನಿಗಳನ್ನು ಸಂಪಾದಿಸುತ್ತಾನೆ ಆದರೆ ಸತ್ತನಂತರ ಹೊಸ ಅಭಿಮಾನಿಗಳನ್ನು ಸಂಪಾದಿಸಿದವರಲ್ಲಿ ಪುನೀತ್ ರಾಜಕುಮಾರ್ ಮೊದಲಿಗರು. ಅದಕ್ಕೆ ಕಾರಣ ಅವರು ಮಾಡಿರುವಂತಹ ನಿಸ್ವಾರ್ಥ ಸೇವೆ ಅವರ ವ್ಯಕ್ತಿತ್ವ. ಅವರು ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಮಹತ್ವವನ್ನು ನೀಡುತ್ತಿದ್ದರು ಅದು ತಮ್ಮ ಆಪ್ತರ ಇರಬಹುದು ಅಭಿಮಾನಿಗಳೇ ಇರಬಹುದು ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಪುನೀತ್ ರಾಜಕುಮಾರ್ ಅವರು ಒಂದು ದಿನ ತಮ್ಮ ಪತ್ನಿ ಅಶ್ವಿನಿ ಅವರೊಂದಿಗೆ ಸಕ್ಕರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ್ದರು ಕಾಡನ್ನ ವೀಕ್ಷಣೆ ಮಾಡಿ ಅಪ್ಪು ತಮ್ಮ ಮನೆಗೆ ಹೊರಡುತ್ತಾರೆ.

ಮನೆಗೆ ಹೊರಡುವಂತಹ ಸಮಯದಲ್ಲಿ ಅಪ್ಪು ಅವರ ಅಭಿಮಾನಿಗಳಿಬ್ಬರು ಅಪ್ಪು ಅವರ ಕಾರನ್ನು ಹಿಂಬಾಲಿಸಿದ್ದಾರೆ. ನಂತರ ಅಪ್ಪು ಅವರು ಸ್ವಲ್ಪವೂ ಕೋಪಗೊಳ್ಳದೆ ತಮ್ಮ ಕಾರಿನ ಗ್ಲಾಸ್ ಅನ್ನು ಇಳಿಸಿ ಥಂಬ್ಸ್ ಅಪ್ ಮಾಡಿದ್ದಾರೆ ಇದು ಅವರ ಸರಳತೆಯನ್ನು ಎತ್ತಿತೋರಿಸುತ್ತದೆ. ಇಂತಹ ಒಬ್ಬ ಹೃದಯವಂತನನ್ನ ಕಳೆದುಕೊಂಡು ನಿಜವಾಗಿಯೂ ಕನ್ನಡ ಚಿತ್ರರಂಗ ವ್ಯಥೆ ಪಡುತ್ತಿದ್ದೆ. ಪುನೀತ್ ಈಗ ನಮ್ಮೊಂದಿಗೆ ಇಲ್ಲ ಎಂಬುದು ಅರಗಿಸಿಕೊಳ್ಳಲಾಗದ ಸತ್ಯ ಆದರೆ ತಮ್ಮ ಸರಳ ಸಜ್ಜನಿಕೆ ಹೃದಯ ವೈಶಾಲ್ಯ ಸಮಾಜ ಸೇವೆ ಹಾಗೂ ಸಿನಿಮಾಗಳ ಮೂಲಕ ಅವರು ಎಂದೆಂದಿಗೂ ಕನ್ನಡಿಗರ ಮನೆ-ಮನದಲ್ಲಿ ನೆಲೆಸಿರುತ್ತಾರೆ. ಅವರು ತಿಳಿಸಿ ಕೊಟ್ಟಿರುವಂತಹ ಆದರ್ಶಗಳನ್ನು ನಾವು ಪಾಲಿಸಿದರೆ ಅದು ನಾವು ಅವರಿಗೆ ಸಲ್ಲಿಸುವ ಗೌರವವಾಗಿರುತ್ತದೆ. ಅವರ ಸರಳತನ ಹಾಗೂ ಸಮಾಜಸೇವೆಯ ಗುಣಗಳನ್ನು ನಾವು ಕೂಡ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.

Leave A Reply

Your email address will not be published.

error: Content is protected !!