ಟಗರು ಸಿನಿಮಾದಲ್ಲಿ ಮಿಂಚಿದ್ದ ಈ ಕಾಕ್ರೋಚ್ ಸುಧಿ ಅವರ ಹೆಂಡ್ತಿ ಮಕ್ಕಳು ಹೇಗಿದ್ದಾರೆ ನೋಡಿ ಮೊದಲಬಾರಿಗೆ

0

ಆತ್ಮೀಯ ಓದುಗರೇ ಈ ಕಾಕ್ರೋಚ್ ಸುಧಿ ಅನ್ನೋ ಹೆಸರು ಖ್ಯಾತಿಯಾಗಿದ್ದು ಟಗರು ಸಿನಿಮಾದಿಂದ ಟಗರು ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಹೊಸ ಪ್ರತಿಭೆ ಸುಧಿ ಅವರ ಬಗ್ಗೆ ಕೆಲವು ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸೂರಿ ಅವರು ನಿರ್ದೇಶನ ಮಾಡಿದ 2018ರಲ್ಲಿ ತೆರೆಕಂಡ ಟಗರು ಸಿನಿಮಾ ಕನ್ನಡ ಚಿತ್ರರಂಗದ ಸೂಪರ್ ಸಿನಿಮಾಗಳಲ್ಲಿ ಒಂದಾಗಿದೆ. ಸುಕ್ಕಾ ಸೂರಿ ಎಂದು ಖ್ಯಾತಿ ಪಡೆದ ಸೂರಿ ಅವರು ನಿರ್ದೇಶನ ಮಾಡಿದ ಮಾಸ್ ಸಿನಿಮಾ ಟಗರು 2018 ರ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಸಿನಿಮಾ ಆಗಿತ್ತು. ಜೀವನದಲ್ಲಿ ಸೋಲನ್ನೆ ಅನುಭವಿಸಿದ ಧನಂಜಯ್ ಅವರಿಗೆ ಈ ಸಿನಿಮಾದಿಂದ ದೊಡ್ಡ ಯಶಸ್ಸು ಸಿಕ್ಕಿತು, ಇನ್ನು ಶಿವಣ್ಣ ಅವರಿಗೆ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಆಯಿತು.

ಈ ಸಿನಿಮಾ ಮೂಲಕ ಚಂದನವನಕ್ಕೆ ಸಿಕ್ಕ ಮತ್ತೊಂದು ಅದ್ಭುತ ಪ್ರತಿಭೆ ನಟ ಸುಧಿ. ಟಗರು ಸಿನಿಮಾದಲ್ಲಿ ಕಾಕ್ರೋಚ್ ಪಾತ್ರದಲ್ಲಿ ಸುಧಿ ಅವರು ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈ ಪಾತ್ರ ಜನಪ್ರಿಯತೆ ಪಡೆದುಕೊಂಡಿತು ಇವರ ನಿಜವಾದ ಹೆಸರನ್ನು ಮರೆತು ಜನರು ಇವರನ್ನು ಕಾಕ್ರೋಚ್ ಎಂದೇ ಕರೆಯುತ್ತಾರೆ.

ಟಗರು ಸಿನಿಮಾ ಯಶಸ್ಸನ್ನು ಕಂಡ ನಂತರ ಚಂದನವನಕ್ಕೆ ಸಿಕ್ಕ ಮತ್ತೊಬ್ಬ ಅದ್ಭುತ ವಿಲ್ಲನ್ ಸುಧಿ. ಈಗಿನ ಖ್ಯಾತ ವಿಲ್ಲನ್ ಗಳಲ್ಲಿ ಇವರು ಒಬ್ಬರು ಎಂದು ಹೇಳಿದರೆ ತಪ್ಪಾಗಲಾರದು. ಸುಧಿ ಅವರು ಮೂಲತಃ ಚಂದನವನದಲ್ಲಿ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಅನೇಕ ಕನ್ನಡ ಸಿನಿಮಾಗಳಿಗೆ ಪೋಸ್ಟರ್ ವಿನ್ಯಾಸ ಮಾಡುವ ಕೆಲಸ ಮಾಡಿದ್ದಾರೆ 2012 ರಲ್ಲಿ ತೆರೆಕಂಡ ಸಂತು ಅವರು ನಿರ್ದೇಶನ ಮಾಡಿದ ಲೂಸ್ ಮಾದ ಯೋಗಿ ಮತ್ತು ರಾಧಿಕಾ ಪಂಡಿತ್ ಜೋಡಿಯಾಗಿ ನಟಿಸಿದ ಅಲೆಮಾರಿ ಸಿನಿಮಾದಲ್ಲಿ ಮೊದಲಿಗೆ ನಟಿಸಿದ್ದಾರೆ. ನಿರ್ದೇಶಕ ಸೂರಿ ಅವರು ಟಗರು ಸಿನಿಮಾಗೆ ಪೋಸ್ಟರ್ ಕೆಲಸಕ್ಕಾಗಿ ಸುಧಿ ಅವರನ್ನು ಕಾಂಟ್ಯಾಕ್ಟ್ ಮಾಡಿದ್ದರು.

ಸುಧಿ ಅವರನ್ನು ನೋಡಿದ ನಂತರ ಕಾಕ್ರೋಚ್ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ನಂತರ ಅವರ ಜೀವನ ಬದಲಾಯಿತು. ಟಗರು ನಂತರ ಪುನೀತ್ ರಾಜ್ ಕುಮಾರ್ ಅವರೊಡನೆ ಯುವರತ್ನ, ದರ್ಶನ್ ಅವರೊಡನೆ ರಾಬರ್ಟ್ ಸಿನಿಮಾದಲ್ಲಿ ಕಾಣಿಸಿಕೊಂಡರು. ಪ್ರಸ್ತುತ ಸುಧಿ ಅವರಿಗೆ ಚಿತ್ರರಂಗದಿಂದ ಸಾಕಷ್ಟು ಆಫರ್ ಗಳು ಬರುತ್ತಿವೆ, ಸ್ಟಾರ್ ನಟರ 10 ಸಿನಿಮಾಗಳನ್ನು ಸುಧಿ ಅವರು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇವರು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ವಿಲ್ಲನ್ ಆಗುವುದರಲ್ಲಿ ಯಾವುದೆ ಸಂದೇಹವಿಲ್ಲ. ಸದ್ಯ ಸುಧಿ ಅವರು ನಮ್ಮ ದುನಿಯಾ ವಿಜಿ ಅವರ ನಿರ್ದೇಶನದ ಸಲಗ ಚಿತ್ರದಲ್ಲಿ ಸಾವಿತ್ರ ಎಂಬ ಪಾತ್ರವನ್ನು ಮಾಡಿ ಜನರಿಂದ ಪ್ರಶಂಸೆ ಪಡೆದಿದ್ದಾರೆ.

ಸುಧಿ ಹಾಗೂ ಡಾಲಿ ಧನಂಜಯ್ ಅವರ ಕಾಂಬಿನೇಷನ್ ಕನ್ನಡಿಗರಿಗೆ ಅಷ್ಟೆ ಅಲ್ಲದೆ ಸಿನಿಮಾ ಪ್ರಿಯರಿಗೆ ಇಷ್ಟವಾಗಿದೆ. ಹಲವಾರು ಸಿನಿಮಾಗಳಲ್ಲಿ ಇವರಿಬ್ಬರೂ ಜೊತೆಯಾಗಿ ನಟನೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುಧಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು ಆಗಾಗ ಸುಧಿ ಅವರು ತಮ್ಮ ಕುಟುಂಬದ ಫೋಟೋಗಳನ್ನು ತಮ್ಮ ಫ್ಯಾನ್ಸ್ ಜೊತೆ ಹಂಚಿಕೊಳ್ಳುತ್ತಾರೆ.

ಸದ್ಯ ಸುಧಿ ಅವರಿಗೆ ಹಲವಾರು ಕನ್ನಡ ಸಿನಿಮಾಗಳಲ್ಲಿ ವಿಲ್ಲನ್ ಪಾತ್ರಗಳಿಗೆ ಅವಕಾಶ ಸಿಗುತ್ತಿದೆ. ಇಲ್ಲಿಯವರೆಗೆ ಸುಧಿ ಅವರು ಶಿವಣ್ಣ, ಪುನೀತ್ ರಾಜಕುಮಾರ್, ಡಿಬಾಸ್ ದರ್ಶನ್, ದುನಿಯಾ ವಿಜಿ ಸೇರಿದಂತೆ ಹಲವಾರು ಕನ್ನಡದ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸುಧಿ ಅವರ ಅತ್ಯದ್ಭುತ ಹಾಗೂ ಮುಗ್ಧ ನಟನೆಯಿಂದ ಕರ್ನಾಟಕದ ಮನೆ ಮಾತಾಗಿದ್ದಾರೆ. ಸುಧಿ ಅವರು ಇನ್ನಷ್ಟು ಒಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿ ಎಂದು ಆಶಿಸೋಣ. ಅವರು ತಮ್ಮ ಕುಟುಂಬದವರೊಂದಿಗಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!
Footer code: