ಜೇಮ್ಸ್ ಸಿನಿಮಾ ಬಗ್ಗೆ ಪುನೀತ್ ಬಾಡಿಗಾರ್ಡ್ ಹೇಳಿದ್ದೇನು ಗೊತ್ತಾ, ಕಣ್ಣೀರ್ ಬರತ್ತೆ

0

ನಮ್ಮ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಮೂರು ತಿಂಗಳುಗಳು ಕಳೆದಿವೆ. ಅವರು ನಮ್ಮ ನಡುವೆ ಇಲ್ಲ ಎನ್ನುವ ನೋವು ಎಲ್ಲರಲ್ಲೂ ಮನೆ ಮಾಡಿದೆ. ಅವರನ್ನ ಕಳೆದುಕೊಂಡ ದುಃಖ ಅವರ ಅಭಿಮಾನಿಗಳಲ್ಲಿ ಇಷ್ಟು ನೋವನ್ನುಂಟು ಮಾಡುತ್ತಿರುವಾಗ ಇನ್ನು ಅವರ ಹತ್ತಿರದವರಿಗೆ ಇದರಿಂದ ಇನ್ನೂ ಹೆಚ್ಚಿನ ನೋವುಂಟಾಗುತ್ತಿದೆ. ಅವರನ್ನು ಹತ್ತಿರದಿಂದ ನೋಡಿದ ಅವರ ಬಾಡಿಗಾರ್ಡ್ ಚಲಪತಿ ಅವರು ಏನು ಹೇಳುತ್ತಾರೆ ಎಂಬುದರ ಕುರಿತು ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಪುನೀತ್ ರಾಜಕುಮಾರ್ ಅವರು ಮರಣ ಹೊಂದಿದ ನಂತರ ಎಲ್ಲಾ ಊರುಗಳಲ್ಲಿ ಎಲ್ಲಾ ಜನರು ತೋರಿಸುತ್ತಿರುವ ಪ್ರೀತಿ ವಿಶ್ವಾಸವನ್ನು ನೋಡಿದರೆ ಅವರು ಇಲ್ಲ ಎಂದು ಹೇಳುವುದಕ್ಕೆ ಯಾರಿಂದಲೂ ಸಾಧ್ಯ ಇಲ್ಲ. ಅವರು ಎಲ್ಲಾ ಕಡೆಗಳಲ್ಲಿಯೂ ಇದ್ದಾರೆ ಎಲ್ಲರನ್ನು ಗಮನಿಸುತ್ತಿದ್ದಾರೆ. ಕೆಲವರು ತೀರಿಕೊಂಡಾಗ ಅವರ ಫೋಟೋವನ್ನು ನೋಡಿದಾಗ ಹೀಗಾಗಬಾರದಿತ್ತು ಅವರಿಗೆ ಎಂದುಕೊಂಡು ಸುಮ್ಮನಾಗುತ್ತೇವೆ.

ಆದರೆ ಪುನೀತ್ ರಾಜಕುಮಾರ್ ಅವರ ವಿಷಯದಲ್ಲಿ ಅದು ಸಾಧ್ಯವಿಲ್ಲ. ಪುನೀತ್ ರಾಜಕುಮಾರ್ ಅವರು ಇಲ್ಲದೆ ಅವರ ಮನೆಗೆ ಹೋದಾಗ ಅಲ್ಲಿ ತುಂಬಾ ಬದಲಾವಣೆಗಳಾಗಿವೆ ಅವರು ಇದ್ದಿದ್ದರೆ ಚೆನ್ನಾಗಿತ್ತು ಎಂದು ಪ್ರತಿಕ್ಷಣವೂ ಯೋಚನೆ ಬರುತ್ತದೆ. ಪುನೀತ್ ರಾಜಕುಮಾರ್ ಅವರ ಜೊತೆ ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಸಿನಿಮಾಕ್ಕೆ ಹೋಗಲಿ ಎಲ್ಲೆ ಹೋಗಲಿ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಯಾರಿಗೂ ಬೇಸರವನ್ನು ಮಾಡುತ್ತಿರಲಿಲ್ಲ ಹೊರಗಡೆ ಹೋದಾಗ ತಮಗೆ ಎಲ್ಲಿ ಬೇಕೋ ಅಲ್ಲಿ ಊಟ ಮಾಡುತ್ತಿದ್ದರು.

ಇವಾಗ ಪುನೀತ್ ರಾಜಕುಮಾರ್ ಅವರು ಇಲ್ಲದೆ ಮನೆಯಲ್ಲಿ ಅಶ್ವಿನಿ ಅವರು ಕೂಡ ತುಂಬಾ ದುಃಖದಿಂದ ಇದ್ದಾರೆ ಯಾವಾಗಲೂ ಮೌನವಾಗಿರುತ್ತಾರೆ. ನಾವು ಹೆಚ್ಚಾಗಿ ಅವರನ್ನು ಮಾತನಾಡಿಸುವುದಿಲ್ಲ ಅವರ ದುಃಖ ನಮಗೆ ಅರ್ಥವಾಗುತ್ತದೆ ಪುನೀತ್ ರಾಜಕುಮಾರ್ ಇಲ್ಲದೆ ನಮಗೆ ಇಷ್ಟು ನೋವಾಗುತ್ತಿದೆ ಅವರಿಗೂ ಕೂಡ ತುಂಬಾ ನೋವಾಗುತ್ತದೆ ಆ ಕಾರಣಕ್ಕೆ ಆ ವಿಷಯದ ಕುರಿತು ಅವರ ಬಳಿ ಮಾತನಾಡುವುದಿಲ್ಲ ಎಂದು ಚಲಪತಿ ಅವರು ಹೇಳಿದ್ದಾರೆ.

ಈಗಾಗಲೇ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬಕ್ಕೆ ಜೇಮ್ಸ್ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೆ. ಆ ಕುರಿತು ಚಲಪತಿ ಅವರು ಏನು ಹೇಳಿದ್ದಾರೆ ಎಂದರೆ ಪುನೀತ್ ರಾಜಕುಮಾರ್ ಅವರ ಅವರ ಹುಟ್ಟು ಹಬ್ಬದ ದಿನ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ ಏಕೆಂದರೆ ಮೊದಲು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬಕ್ಕೆ ಜನ ಅವರನ್ನು ನೋಡುವುದಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದರು ಈಗ ಅವರ ಹುಟ್ಟು ಹಬ್ಬದ ದಿನ ಸಿನಿಮಾ ಬಿಡುಗಡೆಯಾದರೆ ಎಲ್ಲರೂ ಅವರವರ ಊರಿನಲ್ಲಿ ಹಬ್ಬದ ರೀತಿ ಆಚರಿಸಿಕೊಳ್ಳುತ್ತಾರೆ.

ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ಮಿಲಿಟರಿ ಗೆಟಪ್ ತುಂಬಾ ನೈಜವಾಗಿ ಕಾಣಿಸುತ್ತದೆ ಈ ಚಿತ್ರ ಕೂಡ ದೊಡ್ಡಮಟ್ಟದಲ್ಲಿ ನೆನಪಿನಲ್ಲಿ ಇರುತ್ತದೆ. ಈ ಸಿನಿಮಾದ ಮೂಲಕ ಪ್ರತಿಯೊಬ್ಬರೂ ಅವರ ಹುಟ್ಟುಹಬ್ಬದ ದಿನ ಅವರನ್ನ ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತದೆ. ಪುನೀತ್ ರಾಜಕುಮಾರ್ ಅವರಿಗೆ ಪ್ರಕೃತಿಯಲ್ಲಿ ಸುತ್ತಾಡುವುದು ಬೆಟ್ಟಗುಡ್ಡಗಳನ್ನು ಹತ್ತುವುದೆಂದರೆ ತುಂಬಾ ಇಷ್ಟ ಮರ-ಗಿಡಗಳು ಪ್ರಾಣಿ-ಪಕ್ಷಿಗಳ ಶಬ್ದವನ್ನು ಕೇಳಿ ತುಂಬಾ ಖುಷಿ ಪಡುತ್ತಿದ್ದರು.

ಅವರಿಗೆ ಮರಗಿಡಗಳನ್ನು ಬೆಳೆಸುವುದು ತುಂಬಾ ಇಷ್ಟ ಪ್ರಕೃತಿಯನ್ನು ನಾವು ಕಾಪಾಡಿಕೊಂಡು ಹೋದರೆ ಅದು ಮುಂದೆ ನಮ್ಮನ್ನು ಕಾಪಾಡುತ್ತದೆ. ಇದಿಷ್ಟು ಪುನೀತ್ ರಾಜಕುಮಾರ್ ಅವರ ಬಾಡಿಗಾರ್ಡ್ ಆದಂತಹ ಚಲಪತಿಯವರು ಪುನೀತ್ ರಾಜಕುಮಾರ್ ಅವರ ಬಗ್ಗೆ ಹಂಚಿಕೊಂಡಿರುವ ಅಂತಹ ವಿಷಯವಾಗಿದೆ. ಪುನೀತ್ ರಾಜಕುಮಾರ್ ಅವರಂತಹ ಒಬ್ಬ ಒಳ್ಳೆಯ ಮಾಣಿಕ್ಯವನ್ನು ಕಳೆದುಕೊಂಡು ಕರುನಾಡು ಹಾಗೂ ಕನ್ನಡ ಚಿತ್ರರಂಗ ತುಂಬಾ ನೋವನ್ನು ಅನುಭವಿಸುತ್ತಿದೆ ಎಂದರೆ ತಪ್ಪಾಗಲಾರದು.

Leave A Reply

Your email address will not be published.

error: Content is protected !!
Footer code: