ಸಹಸ್ರಾರು ವರ್ಷಗಳಿಂದ, ಜೇನುತುಪ್ಪ ವು ಅಡುಗೆ ಮನೆಯ ಒಂದು ವಿಶೇಷ ಆಹಾರ ಹಾಗೂ ಪ್ರಮುಖವಾದ ವೈದ್ಯಕೀಯ ಪರಿಹಾರವಾಗಿದೆ. ಜಗತ್ತಿನಾದ್ಯಂತ ನಮ್ಮ ಪೂರ್ವಜರು ಜೇನುತುಪ್ಪದ ಅನೇಕ ಪ್ರಯೋಜನಗಳನ್ನು ಅರಿತು ಕೊಂಡಿದ್ದಾರೆ. ವೈದ್ಯರಿಂದ ಪ್ರಿಸ್ಕ್ರಿಪ್ಶನ್ ಮೂಲಕವಾಗಿ ಇದರ ಮೊದಲ ಬಳಕೆಯ ದಾಖಲೆಯು ಸುಮೇರಿಯಾದಲ್ಲಿ 4 ಸಾವಿರ ವರ್ಷ ಹಳೆಯದಾದ ಜೇಡಿಮಣ್ಣಿನ ಹಲಗೆಯಲ್ಲಿ ಕಂಡು ಬರುತ್ತದೆ. ಶೇ ೩೦% ಸುಮೇರಿಯನ್ನರ ವೈದ್ಯಕೀಯ ಚಿಕಿತ್ಸೆಗಳಲ್ಲಿ ಜೇನು ತುಪ್ಪದ ಬಳಕೆಯಿತ್ತು. ಭಾರತದಲ್ಲಿ ಜೇನುತುಪ್ಪವು ಪುರಾತನ ಪ್ರಾಚೀನ ಸಾಂಪ್ರದಾಯಿಕ ಔಷಧಗಳಾದ ಸಿದ್ಧ ಮತ್ತು ಆಯುರ್ವೇದದ ಪ್ರಮುಖ ಭಾಗವಾಗಿದೆ.
ಜೇನುತುಪ್ಪ ಹಾಕಿದರೆ ಕೂದಲು ಬಿಳಿ ಆಗುತ್ತಾ? ಎನ್ನುವ ಪ್ರಶ್ನೆ ಹಿಂದಿನ ಕಾಲದಿಂದ ಈಗಿನ ಕಾಲದವರೆಗೂ ಜನರಲ್ಲಿ ಕಾಡುತ್ತಿರುವ ಪ್ರಶ್ನೆ..ಜೇನುತುಪ್ಪ ಕೂದಲಿಗೆ ಹಚ್ಚಿದರೆ ಅಥವಾ ಕೂದಲಿಗೆ ಅಪ್ಪಿ ತಪ್ಪಿಯೂ ಬಿದ್ದರೆ ಕೂದಲು ಬಿಳಿಯಾಗುತ್ತದೆ ಅಥವಾ ಬಿಳಿ ಕೂದಲು ಬರುತ್ತದೆ ಎನ್ನುವುದು ಶುದ್ಧ ಸುಳ್ಳು. ಜೇನಿನಲ್ಲಿ ಗ್ಲೂಕೋಸ್ ಅಂಶ ಇದೆ. ಜೇನುತುಪ್ಪವನ್ನು ಕೂದಲಿಗೆ ಹಾಕಿದರೆ ಈ ಗ್ಲೂಕೋಸ್ ಬ್ರೇಕ್ ಡೌನ್ ಆಗಿ ಹೈಡ್ರೋಜನ್ ಕೊರಕ್ಸೈಡ್ ಬಿಡುಗಡೆ ಮಾಡುತ್ತದೆ. ಹೈಡ್ರೋಜನ್ ಕೊರಕ್ಸೈಡ್ ಗೆ ನ್ಯಾಚುರಲ್ ಪವರ್ ಇದೆ ಅದೇನೆಂದರೆ ಇದು ಕೂದಲನ್ನು ಬ್ಲೀಚ್ ಮಾಡುತ್ತದೆ. ನಮ್ಮ ಕೂದಲಿನಲ್ಲಿ ಮೆಲಾನಿನ್ನ್ ಅನ್ನುವಂತಹ ಪೀಗ್ಮೆಂಟ್ ಇದೆ. ಈ ಪೀಗ್ಮೆಂಟ್ ಕೂದಲಿಗೆ ಅದರದ್ದೇ ಆದ ಕಲರ್ ಕೊಡುವುದು.
ಕೆಲವರಿಗೆ ಬ್ರೌನ್, ಕೆಲವರಿಗೆ ಬ್ಲಾಕ್ ಇನ್ನೂ ಕೆಲವರಿಗೆ ಗ್ರೇ ಕಲರ್ ಇರುತ್ತದೆ ಇದು ಅವರವರ ಮೆಲಾನಿನ್ನ್ ಮೇಲೆ ಅವಲಂಬಿತವಾಗಿರುತ್ತದೆ. ಈ ಹೈಡ್ರೋಜನ್ ಕೊರಕ್ಸೈಡ್ ಮೆಲಾನಿನ್ನ್ ಎನ್ನುವಂತಹ ಒರಿಜಿನಲ್ ಕಲರ್ ಅನ್ನು ಬ್ಲೀಚ್ ಮಾಡಿಸುತ್ತೆ. ಇದು ಬ್ಲೀಚ್ ಆದಾಗ ಕೂದಲು ಬಿಳಿ ಆಗುತ್ತೆ, ಹಾಗಾದರೆ ಜೇನುತುಪ್ಪ ಹಾಕಿದರೆ ಕೂದಲು ಬಿಳಿ ಆಗುತ್ತೆ ಅಲ್ವಾ ಎನ್ನುವ ಪ್ರಶ್ನೆ ಉದ್ಭವಿಸುವದು ಸಹಜ. ಹೌದು ಕೂದಲು ಬಿಳಿ ಆಗುತ್ತೆ ಆದರೆ ಯಾವ ಪ್ರಮಾಣದಲ್ಲಿ ಆಗುವುದು ಅನ್ನೋ ಮಾಹಿತಿ ಕೂಡ ಇದೆ.
ಹೈಡ್ರೋಜನ್ ಕೊರಕ್ಸೈಡ್ ಬಿಡುಗಡೆಯಿಗುವುದು ತುಂಬಾ ತುಂಬಾ ಕಡಿಮೆ ಪ್ರಮಾಣದಲ್ಲಿ ಅಂದರೆ ಒಂದು ಹನಿ ಜೇನು ಕೂದಲಿಗೆ ತಾಕಿದರೆ ತಕ್ಷಣ ಬಿಳಿ ಆಗುವುದಿಲ್ಲ. ಯಾಕೆಂದರೆ ಅದು ತುಂಬಾ ಚಿಕ್ಕ ಪ್ರಮಾಣದಲ್ಲಿರುವುದರಿಂದ ಅದರ ಪ್ರತಿಕ್ರಿಯೆ ಅಷ್ಟು ದೊಡ್ಡದಾಗಿ ಕಾಣುವುದಿಲ್ಲ, ನಾವು ಜಾಸ್ತಿ ಪ್ರಮಾಣದ ಜೇನುತುಪ್ಪವನ್ನು ದಿನೇ ದಿನೇ ಹಾಕುವುದರಿಂದ ಮಾತ್ರ ಕೂದಲು ಬಿಳಿಯಾಗುವ ಸಾಧ್ಯತೆ ಇದೆ. ಹಾಗೆ ಪ್ರಾಕೃತಿಕವಾಗಿ ಜೇನುತುಪ್ಪ ಕೂಡ ಕೂದಲಿಗೆ ತುಂಬಾ ಒಳ್ಳೆಯದು.
ಕೂದಲನ್ನು ಮೃದು ಮಾಡುತ್ತದೆ, ಡ್ಯಾಮೇಜ್ ಅನ್ನು ಕಮ್ಮಿ ಮಾಡುತ್ತದೆ. ನಾವು ಜೇನನ್ನು ನೇರವಾಗಿ ಅಪ್ಲೈ ಮಾಡುವುದಕ್ಕಿಂತ ಯಾವುದಾದರ ಜೊತೆ ಬೆರೆಸಿ ಹಾಕಬಹುದು ಇದರಿಂದ ತೊಂದರೆಯಾಗುವುದಿಲ್ಲ. ವಾರದಲ್ಲಿ ಎರಡು ಸಲ ಧಾರಾಳವಾಗಿ ಜೇನನ್ನು ತಲೆಗೆ ಹಚ್ಚಿಕೊಳ್ಳಬಹುದು ಇದರಿಂದ ಯಾವ ತೊಂದರೆಯಿಲ್ಲ ಹಾಗೆ ಸ್ವಲ್ಪ ಪ್ರಮಾಣದಲ್ಲಿ ಹಚ್ಚಿದರೆ ಕೂದಲು ಬಿಳಿಯಾಗುವುದಿಲ್ಲಾ.