ಜಿರಳೆಗಳ ಕಾಟವೇ, ಇಲ್ಲಿದೆ ಸಿಂಪಲ್ ಉಪಾಯ ಜನ್ಮದಲ್ಲೇ ಜಿರಳೆಗಳು ಮನೆ ಕಡೆ ಸುಳಿಯೋದಿಲ್ಲ

0

ಮನೆಯಲ್ಲಿ ಸಾಮಾನ್ಯವಾಗಿ ಪ್ರತಿನಿತ್ಯ ಹಲವಾರು ಕೀಟಗಳು ಕಾಡಿಸುತ್ತವೆ ಆದರೆ ಅವುಗಳನ್ನು ಓಡಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ಎಲ್ಲರೂ ಮಲಗಿದ ನಂತರ ಆ ಕೀಟಗಳು ಬಂದು ಮನೆಯ ಸುತ್ತ ಓಡಾಡುವುದನ್ನು ಗಮನಿಸಬಹುದಾಗಿದೆ ಅದರಲ್ಲಿ ಜಿರಲೆ ಮತ್ತು ಇರುವೆಗಳು ಕೂಡಾ ಒಂದು. ಇವುಗಳನ್ನು ಹೋಗಲಾಡಿಸಲು ಮನೆಯಲ್ಲಿ ಮಾಡುವ ಮದ್ದುಗಳು ಹೀಗಿವೆ.

ಸಾಮಾನ್ಯವಾಗಿ ಮನೆಯಲ್ಲಿ ಊದುಬತ್ತಿ ಮತ್ತು ಕರ್ಪೂರ ಯಾವಾಗಲೂ ಇರುತ್ತದೆ ಇವುಗಳನ್ನು ದೇವರನ್ನು ಒಲಿಸಿಕೊಳ್ಳಲು ಅವುಗಳಿಗೆ ಪೂಜೆ ಮಾಡಲು ಬಳಸುವಂತಹ ಸಾಮಗ್ರಿಗಳು ಈ ಸಾಮಗ್ರಿಗಳಿಂದ ಈ ದಿನದ ಮನೆ ಮದ್ದನ್ನು ತಯಾರಿಸೋಣ. ಮೊದಲು ಒಂದು ಗಾಜಿನ ಬೌಲ್ ಗೆ ಸ್ವಲ್ಪ ನೀರನ್ನು ತೆಗೆದುಕೊಳ್ಳಿ ಬಿಸಿನೀರಿನ ಅಗತ್ಯವಿಲ್ಲ ತಣ್ಣೀರು ತೆಗೆದುಕೊಂಡರೆ ಸಾಕು ಅದಾದ ನಂತರ ಕರ್ಪೂರವನ್ನು ಕೈಯಿಂದ ಪುಡಿ ಮಾಡಿ ರೆಡಿ ಮಾಡಿಟ್ಟುಕೊಳ್ಳಿ ಐದು ಬಿಲ್ಲೆ ಕರ್ಪೂರ ಆದರೆ ಸಾಕು ಮತ್ತು ನಾಲ್ಕರಿಂದ ಐದು ಊದು ಬತ್ತಿಗಳನ್ನು ತೆಗೆದುಕೊಂಡು ಅವುಗಳನ್ನು ಕೂಡ ಪುಡಿ ಮಾಡಿ ಇಟ್ಟುಕೊಳ್ಳಿ ಈ ಎರಡೂ ಪುಡಿಗಳು ಆದ ನಂತರ ನಾನು ಮೊದಲೆ ಹೇಳಿದ ರೀತಿಯಲ್ಲಿ ಬೌಲಿನಲ್ಲಿ ನೀರು ತಯಾರಾಗಿದೆ. ಈ ಎರಡೂ ಪುಡಿಗಳನ್ನು ಆ ನೀರಿಗೆ ಕಲಸಿ ಅದಾದ ನಂತರ ಅವು ಎರಡೂ ಕೂಡ ಕರಗಲು ಸ್ವಲ್ಪ ಸಮಯ ಬಿಡಿ ಸುಮಾರು ಇಪ್ಪತ್ತರಿಂದ ಮೂವತ್ತು ನಿಮಿಷಗಳ ಕಾಲ ಬಿಟ್ಟರೆ ಆ ಎರಡೂ ಪುಡಿಗಳು ಕೂಡ ನೀರಿನಲ್ಲಿ ಚೆನ್ನಾಗಿ ಕಲೆತು ಮಿಶ್ರಣವಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಅದಾದ ನಂತರ ಮನೆಯಲ್ಲಿ ಇರುವ ಹತ್ತಿ ಯನ್ನು ತೆಗೆದುಕೊಳ್ಳಿ ಅವುಗಳನ್ನು ಸಣ್ಣ ಸಣ್ಣ ಉಂಡೆಗಳಾಗಿಟ್ಟು ಕೊಳ್ಳಿ ಆ ಉಂಡೆಗಳನ್ನು ಮಾಡುವ ಕಾರಣ ಆ ನೀರಿನಲ್ಲಿ ಅದ್ದಿ ಅವುಗಳನ್ನು ನಿಮ್ಮ ಮನೆಯಲ್ಲಿ ಜಿರಳೆಗಳು ಎಲ್ಲಿ ಓಡಾಡುವ ಸಾಧ್ಯತೆಯಿದೆ ಅಲ್ಲಿ ಇಡಬೇಕು .

ಸಿಂಕ್ ಕೆಳಗಡೆ ಅಥವಾ ಕಟ್ಟೆ ಕೆಳಗಡೆ ಪಲಾವ್ ಎಲೆಯನ್ನು ಇಟ್ಟರೆ ಅದು ಜಿರಲೆಗೆ ಅಲರ್ಜಿ ಇವುಗಳನ್ನು ಹೋಗಲಾಡಿಸಬಹುದು ನಂತರ ಬೆಳ್ಳುಳ್ಳಿ ಪುಡಿ ಅಥವಾ ಈರುಳ್ಳಿ ಪುಡಿ ಎರಡು ಪುಡಿಯನ್ನು ಮಿಕ್ಸ್ ಮಾಡಿ ಜಿರಲೆ ಓಡಾಡುವ ದಾರಿಯಲ್ಲಿ ಹರಡಿದರೆ ರೋಗಗಳನ್ನು ನಿಯಂತ್ರಿಸಬಹುದು. ವಿನೆಗರ್ ಅಥವಾ ಲಿಂಬೆ ಹಣ್ಣಿನ ರಸವನ್ನು ಮುಕ್ಕಾಲು ಭಾಗ ಹಾಕಿ ಕಾಲು ಭಾಗ ನೀರನ್ನು ಹಾಕಿ ಹರಡಿದರೆ ಇದರಿಂದ ಸಹ ಜಿರಲೆಯನ್ನು ನಿಯಂತ್ರಿಸಬಹುದು. ಬೇವಿನ ಎಣ್ಣೆಯನ್ನು ಸಹ ಜಿರಳೆ ನಿವಾರಕ ಕ್ಕೆ ಉಪಯೋಗಿಸಬಹುದು. ಡಬಲ್ ಸೈಡ್ ಟೇಪ್ ಉಪಯೋಗಿಸಿ ಅದರ ಮೇಲೆ ಕಾಫಿ ಪುಡಿಯನ್ನು ಹರಡಿದರೆ ಅದರ ಪರಿಮಳಕ್ಕೆ ಜಿರಳೆ ಇರುವೆ ಬಂದು ಅಲ್ಲಿಯೇ ಸ್ತಬ್ಧವಾಗುತ್ತದೆ. ಎಲ್ಲಿ ತಿಳಿಸಿದಂತೆ ಎಲ್ಲಾ ವಿಧಾನಗಳನ್ನು ಅನುಸರಿಸಿದರೆ ಜಿರಳೆ ಇರುವೆಗಳಿಂದ ನುಸಿಗಳಿಂದ ಪಡೆಯಬಹುದು.

Leave A Reply

Your email address will not be published.

error: Content is protected !!