ಜಾನ್ ಸಿನಾ ಮೂರನೇ ಬಾರಿ ಮದುವೆಯಾಗಿರುವ ಈ ಹುಡುಗಿ ಯಾರು ಗೊತ್ತೆ

0

ಡಬ್ಯ್ಲುಡಬ್ಯ್ಲುಇ ಸೂಪರ್ ಸ್ಟಾರ್ ಜಾನ್ ಸಿನಾ ಅವರು ಮೂರನೇ ಬಾರಿಗೆ ವಿವಾಹವಾಗಿದ್ದು, ತಮ್ಮ ಗೆಳತಿ ಶೇ ಶರಿಯತ್‍ಜಾಡೆ ಅವರನ್ನು ವರಿಸಿದ್ದಾರೆ. ಇವರ ಮೂರನೆಯ ವಿವಾಹದ ಬಗ್ಗೆ ಸುದ್ಧಿ ಆಗಿದ್ದು ಇದರ ಕುರಿತಾಗಿ ನಾವು ಈ ಲೇಖನದಲ್ಲಿ ನೋಡೋಣ.

ಡಬ್ಯ್ಲುಡಬ್ಯ್ಲುಇ ಸೂಪರ್ ಸ್ಟಾರ್ ಜಾನ್ ಸಿನಾ ಮದುವೆಯಾಗಿರುವುದನ್ನು ಇನ್ನೂ ಸಹ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಫ್ಲೋರಿಡಾದ ಸುದ್ದಿ ಮಾಧ್ಯಮಗಳು ಜಾನ್ ಸಿನಾ ಮತ್ತು ಅವರ ಗೆಳತಿ ಶೇ ಶರಿಯತ್‍ಜಾಡೆ ಅವರು ಬುಧವಾರ ನಡೆದ ಸರಳ ಮತ್ತು ಶಾಂತ ರೀತಿಯ ಮದುವೆ ಕಾರ್ಯಕ್ರಮದಲ್ಲಿ ವಿವಾಹವಾಗಿದ್ದಾರೆ ಎಂದು ವರದಿ ಮಾಡಿವೆ. ಜಾನ್ ಸಿನಾ ತನಗಿಂತ 12 ವರ್ಷ ಚಿಕ್ಕವರಾದ ಶೇ ಶರಿಯತ್‍ಜಾಡೆ ಅವರನ್ನು ಮೂರನೇ ಬಾರಿಗೆ ವಿವಾಹವಾಗಿದ್ದಾರೆ. ಇನ್ನು ಜಾನ್ ಸಿನ ಬರಿಸಿದ ಈ ಶೇ ಶರಿಯತ್‍ಜಾಡೆ ಯಾರೂ ಅಂತ ನೋಡುವುದಾದರೆ ಶೇ ಶರಿಯತ್‍ಜಾಡೆ ಜನಿಸಿದ್ದು ಇರಾನ್‍ನಲ್ಲಿ ಆದರೆ ಕೆನಡಾದ ಪ್ರಜೆ. 31 ವರ್ಷದ ಶೇ, ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ ಹಾಗೂ ಜೊತೆಗೆ 2013ರಲ್ಲಿ ಸ್ನಾತಕೋತ್ತರ ಪದವಿಯನ್ನು ಕೂಡಾ ಪಡೆದಿದ್ದಾರೆ. ಶರಿಯತ್‍ಜಾಡೆ ವ್ಯಾಂಕೋವರ್ ನಲ್ಲಿರುವ ಟೆಕ್ ಕಂಪನಿಯೊಂದರಲ್ಲಿ ಉತ್ಪನ್ನ ಮಟ್ಟದ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಜಾನ್ ಸಿನಾ ಮತ್ತು ಶೇ ಶರಿಯತ್‍ಜಾಡೆ ಇವರಿಬ್ಬರೂ ಮೊದಲು ಭೇಟಿಯಾಗಿದ್ದು 2019ರಲ್ಲಿ ನಡೆದ ಡಬ್ಯ್ಲುಡಬ್ಯ್ಲುಇ ತಾರೆಯರ ಚಿತ್ರೀಕರಣದ ಸಮಯದಲ್ಲಿ. ಈ ವೇಳೆ ಪರಿಚಯವಾದ ಸಿನಾ ಮತ್ತು ಶರಿಯತ್‍ಜಾಡೆ ನಂತರ ಪ್ರೇಮಪಾಶದಲ್ಲಿ ಸಿಲುಕಿಕೊಂಡು ಇದಾದ ನಂತರ ಪ್ಲೇಯಿಂಗ್ ವಿತ್ ಫೈರ್ ಇನ್ ವ್ಯಾಂಕೋವರ್ ಎಂಬ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ರೆಡ್ ಕಾರ್ಪೆಟ್‍ನಲ್ಲಿ ಕಾಣಿಸಿಕೊಂಡಿದ್ದರು. ಆದರೆ 43 ವರ್ಷದ ಜಾನ್ ಸಿನಾ ಈಗಾಗಲೇ ಇಬ್ಬರನ್ನು ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದು ಈಗ ಶೇ ಶರಿಯತ್‍ಜಾಡೆ ಜೊತೆ ನಡೆದಿದ್ದು ಮೂರನೇ ಮದುವೆ ಆಗಿದೆ. 1999ರಲ್ಲಿ ಡಬ್ಯ್ಲುಡಬ್ಯ್ಲುಇಗೆ ಪಾದಾರ್ಪಣೆ ಮಾಡಿದ ಸಿನಾ 2009ರಲ್ಲಿ ಡಬ್ಯ್ಲುಡಬ್ಯ್ಲುಇ ಲೇಡಿ ಸೂಪರ್ ಸ್ಟಾರ್ ಎಲಿಜಬೆತ್ ಹಬಡ್ರ್ಯೂ ಅವರನ್ನು ವಿವಾಹವಾಗಿದ್ದರು. ಆದರೆ 2012ರಲ್ಲಿ ಈ ಜೋಡಿ ವಿಚ್ಛೇದನ ಪಡೆದು ಬೇರೆಯಾಗಿತ್ತು.

ಇದಾದ ನಂತರ ಸಿನಾ ಡಬ್ಯ್ಲುಡಬ್ಯ್ಲುಇದ ಲೇಡಿ ಕುಸ್ತಿಪಟು ನಿಕ್ಕಿ ಬೆಲ್ಲಾ ಅವರ ಜೊತೆ ಡೇಟಿಂಗ್‍ನಲ್ಲಿ ಇದ್ದರು. ಸುಮಾರು ಐದು ವರ್ಷಗಳ ಕಾಲ ಜೊತೆಗಿದ್ದ ಸಿನಾ ಮತ್ತು ನಿಕ್ಕಿ ಬೆಲ್ಲಾ ಜೋಡಿ 2018ರಲ್ಲಿ ತಾವು ಬೇರೆಯಾಗುತ್ತೇವೆ ಎಂದು ಘೋಷಿಸಿಕೊಂಡರು. ಇದಾದ ನಂತರ 2019ರಲ್ಲಿ ನಿಕ್ಕಿ ಡ್ಯಾನ್ಸರ್ ಆರ್ಟೆಮ್ ಜೊತೆ ಮದುವೆಯಾದರು. ಜೊತೆಗೆ ಅವರಿಗೆ 2020ರ ಜುಲೈನಲ್ಲಿ ಮಗು ಜನಿಸಿದೆ. ಈಗ ಜಾನ್ ಸಿನಾ ಶೇ ಶರಿಯತ್‍ಜಾಡೆ ಅವರನ್ನು ವರಿಸಿ ಮೂರನೇ ವಿವಾಹ ಆಗಿದ್ದಾರೆ ಎಂದು ಪ್ಲೋರಿಡಾದ ಮಾಧ್ಯಮಗಳು ತಿಳಿಸಿವೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: