WhatsApp Group Join Now
Telegram Group Join Now

ಕಳೆದ 2020ನೇ ವರ್ಷ ಬಹಳ ದುಃಖವನ್ನು ಕೊಟ್ಟಿದೆ. ಕೊರೋನ ವೈರಸ್ ವಿಶ್ವದಾದ್ಯಂತ ಹರಡಿ ಅನೇಕರನ್ನು ಬಲಿತೆಗೆದುಕೊಂಡಿತ್ತು ಜೊತೆಗೆ ಅದೇ ವರ್ಷ ಸಿನಿಮಾರಂಗದ ಸೆಲೆಬ್ರಿಟಿಗಳು ನಿಧನರಾದರು ಅದರಲ್ಲಿ ಚಿರು ಸರ್ಜಾ ಅವರು ನಿಧನರಾಗಿರುವುದು ವಿಷಾದನೀಯ. ಅವರ ಅಗಲಿಕೆಯಿಂದ ಸಿನಿಮಾರಂಗಕ್ಕೆ ಬಹಳ ನಷ್ಟವಾಯಿತು. ಜೂನ್ 7ಕ್ಕೆ ಚಿರು ಅವರ ಮೊದಲ ಪುಣ್ಯತಿಥಿ ಇರುವುದರಿಂದ ಹಲವು ನಟ-ನಟಿಯರು ಚಿರು ಅವರೊಂದಿಗಿನ ನೆನಪನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ದರ್ಶನ್ ಅವರು ಕೂಡ ಚಿರು ಅವರ ನೆನಪನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ದರ್ಶನ್ ಅವರು ಚಿರು ಬಗ್ಗೆ ಏನು ಹೇಳಿದ್ದಾರೆ ಹಾಗೂ ಚಿರು ಅವರ ಮೊದಲ ಪುಣ್ಯತಿಥಿ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ನಮ್ಮೆಲ್ಲರ ಪ್ರೀತಿಯ ಚಿರು ಸರ್ಜಾ ಅವರು ನಿಧನರಾಗಿ ಜೂನ್ 7 ಕ್ಕೆ ಒಂದು ವರ್ಷ ಕಳೆಯಿತು. ಈ ದುಃಖದ ಸಮಯದಲ್ಲಿ ಚಿತ್ರರಂಗದ ಅನೇಕ ನಟ, ನಟಿಯರು ಚಿರು ಅವರ ನೆನಪನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ಕನ್ನಡ ಚಿತ್ರರಂಗದ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿರು ಸರ್ಜಾ ಅವರ ನೆನಪನ್ನು ಹಂಚಿಕೊಂಡಿದ್ದಾರೆ. ನಮ್ಮ ದೇಶದಲ್ಲಿ, ಕರ್ನಾಟಕದಲ್ಲಿಯೂ ಕೂಡ ಅತಿಹೆಚ್ಚು ಕೊರೋನ ವೈರಸ್ ಹರಡುತ್ತಿರುವುದರಿಂದ ಕೊರೋನ ವೈರಸ್ ನಿಯಂತ್ರಣ ಮಾಡಲು ಲಾಕ್ ಡೌನ್ ಮಾಡಿರುವ ಕಾರಣ ಚಿರು ಸರ್ಜಾ ಅವರ ಮೊದಲ ಪುಣ್ಯತಿಥಿಯನ್ನು ಸರಳವಾಗಿ ಚಿರು ಸರ್ಜಾ ಅವರ ಮನೆಯವರು, ಮೇಘನಾ ಅವರ ಸ್ನೇಹಿತರು ಆಚರಣೆ ಮಾಡಿದ್ದಾರೆ.

ಮೇಘನಾ ರಾಜ್ ಅವರು ತಮ್ಮ ಮಗನೊಂದಿಗೆ ಕನಕಪುರ ರಸ್ತೆಯ ನೆಲಗುಡಿ ಬಳಿ ಇರುವ ಫಾರ್ಮ್ ಹೌಸ್ ನಲ್ಲಿ ಚಿರು ಅವರ ಅಂತ್ಯಸಂಸ್ಕಾರ ಮಾಡಲಾಗಿತ್ತು ಅಲ್ಲಿಯ ಚಿರು ಸರ್ಜಾ ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಮೇಘನಾ ಅವರು ಪೂಜೆ ಮಾಡುತ್ತಾ ಚಿರು ಸರ್ಜಾ ಅವರನ್ನು ನೆನೆದು ದುಃಖದಿಂದ ಕುಸಿದರು ನಂತರ ಅವರ ತಾಯಿ ಪ್ರಮೀಳಾ ಅವರು ಮಗಳನ್ನು ಮತ್ತು ಮೊಮ್ಮಗನನ್ನು ಮನೆಗೆ ಸುರಕ್ಷಿತವಾಗಿ ಕರೆದುಕೊಂಡು ಬಂದರು. ಚಿರು ಸರ್ಜಾ ಅವರ ಅಭಿಮಾನಿಗಳು ಚಿರು ಸರ್ಜಾ ಅವರ ನೆನಪನ್ನು ಹಂಚಿಕೊಳ್ಳುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಜ್ವಲ್ ದೇವರಾಜ್ ಹಾಗೂ ಸ್ನೇಹಿತರೊಂದಿಗೆ ಚಿರು ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ ಅಷ್ಟೇ ಅಲ್ಲದೆ ದರ್ಶನ್ ಅವರು ಚಿರು ಅವರ ಸಮಾಧಿ ಬಳಿ ಒಂದು ನಿಮಿಷ ಮೌನಾಚರಣೆ ಮಾಡಿದ್ದಾರೆ. ನಂತರ ದರ್ಶನ್ ಅವರು ಚಿರು ಅವರ ಬಗ್ಗೆ ಟ್ವೀಟ್ ಮಾಡಿದ್ದಾರೆ. ಚಿರು ನೀನು ನನ್ನ ಆತ್ಮೀಯ ಸ್ನೇಹಿತ, ನೀನು ಯಾವಾಗಲೂ ನೆನಪಿನಲ್ಲಿ ಇರುತ್ತೀಯ ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ ಅಲ್ಲದೆ ದರ್ಶನ್ ಅವರು ಚಿರು ಸರ್ಜಾ ಅವರೊಂದಿಗಿನ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ ಫೋಟೋ ನೋಡಿದರೆ ಕಣ್ಣಲ್ಲಿ ನೀರು ತುಂಬುತ್ತದೆ.

2020ನೇ ವರ್ಷವನ್ನು ಅತ್ಯಂತ ಕೆಟ್ಟ ವರ್ಷ ಎಂದು ಪರಿಗಣಿಸಲಾಗುತ್ತದೆ. 2020ರ ಆರಂಭದಲ್ಲಿ ಕೊರೋನ ವೈರಸ್ ಮಹಾಮಾರಿ ವಿಶ್ವದಾದ್ಯಂತ ಹರಡಿತ್ತು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ನಿಧನರಾದರು. ಚಿರು ಅವರು ಲಾಕ್ ಡೌನ್ ಇದ್ದ ಕಾರಣ ಸಿನಿಮಾ ಶೂಟಿಂಗ್ ಇಲ್ಲದೆ ಮನೆಯಲ್ಲೇ ಎಲ್ಲರೊಂದಿಗೆ ಸಮಯ ಕಳೆಯುತ್ತಿದ್ದರು ಜೂನ್ 7 ರಂದು ಇದ್ದಕಿದ್ದಂತೆ ಕುಸಿದು ಬಿದ್ದರು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೂ ಉಳಿಯಲಿಲ್ಲ. ಚಿರು ಹೃದಯಾಘಾತದಿಂದ ನಿಧನರಾದರು ಇದನ್ನು ಅರಗಿಸಿಕೊಳ್ಳಲು ಮೇಘನಾ ರಾಜ್ ಅವರು ಬಹಳ ಕಷ್ಟಪಟ್ಟರು. ಅವರ ಮಗನ ರೂಪದಲ್ಲಿ ಚಿರು ಅವರು ಮತ್ತೆ ಬಂದಿದ್ದಾರೆ ಎಂದು ನಂಬಲಾಗಿದೆ. ಮೇಘನಾ ರಾಜ್ ಹಾಗೂ ಅವರ ಕುಟುಂಬದವರಿಗೆ ಚಿರು ಅಗಲಿಕೆಯ ನೋವನ್ನು ಸಹಿಸುವ. ಶಕ್ತಿಯನ್ನು ದೇವರು ಕೊಡಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: