ಚಿರು ಇಲ್ಲದ ಮೇಘನಾರಾಜ್ ಅವರ 3ನೇ ವರ್ಷದ ವಿವಾಹ ವಾರ್ಷಿಕೋತ್ಸವ ಹೇಗಿತ್ತು ನೋಡಿ

0

ಮೇ 2ರಂದು ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಅವರ ವಿವಾಹದ ಮೂರನೆ ವಾರ್ಷಿಕೋತ್ಸವ. ಹೀಗಾಗಿ ನಟಿ ಮೇಘನಾ ರಾಜ್‌ ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವದಂದು ತಮ್ಮ ಮಗ ಚಿರು ಸರ್ಜಾ ಅವರ ಪೋಟೋವನ್ನ ಸ್ಪರ್ಶಿಸುತ್ತಿರುವ ಹೃದಯಸ್ಪರ್ಶಿ ದೃಶ್ಯವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮೇ ಮೂರಕ್ಕೆ ಮೇಘನಾ ರಾಜ್ ಅವರ ಹುಟ್ಟಿದ ದಿನ ಕೂಡಾ ಆಗಿತ್ತು. ಪತಿ ಚಿರಂಜೀವಿ ಸರ್ಜಾ ಇಲ್ಲದ ಮೊದಲ ಹುಟ್ಟು ಹಬ್ಬ ಹಾಗೂ ಮೊದಲ ವಿವಾಹ ವಾರ್ಷಿಕೋತ್ಸವ ಮೇಘನಾ ಅವರದ್ದು. ಪತಿಯ ನೆನಪು ಹಾಗೂ ಮುದ್ದು ಮಗನ ಜೊತೆಗೆ ಮೊದಲ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಮೇಘನಾ.

ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರದ್ದು ಸುಮಾರು ಹತ್ತು ವರ್ಷಗಳ ಸ್ನೇಹ ಹಾಗೂ ಐದು ವರ್ಷದ ಪ್ರೀತಿ ಕೊನೆಗೆ ರೋಮನ್ ಕ್ಯಾಥೋಲಿಕ್ ಸಂಪ್ರದಾಯದ ಪ್ರಕಾರ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೇಘನಾ ರಾಜ್ ತನ್ನ ಹುಟ್ಟುಹಬ್ಬಕ್ಕೂ ಒಂದು ದಿನ ಮೊದಲು ಅಂದರೆ ಮೇ ಎರಡರಂದು ಚಿರಂಜೀವಿ ಸರ್ಜಾ ಅವರ ಜೊತೆ ಹಸೆಮಣೆ ಏರಿದ್ದಾರೆ. ಮೇ 3 ಮೇಘನಾ ಹುಟ್ಟುಹಬ್ಬವಾದರೇ, ಮೇ 2 ಮೇಘನಾ ಮತ್ತು ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನ. ಮೇಘನಾ ತಮ್ಮ ವಿವಾಹ ವಾರ್ಷಿಕೋತ್ಸವದ ದಿನದಂದು ತನ್ನ ಮಗುವಿಗೆ ಅಪ್ಪನ ಫೋಟೋ ತೋರಿಸಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಚಿರು ಫೋಟೋ ಮುಂದೆ ಜೂನಿಯಾರ್ ಚಿರು ಆಟವಾಡುತ್ತಿರುವ ವಿಡಿಯೋ ಪ್ರತಿಯೊಬ್ಬರ ಮನಮುಟ್ಟುವಂತಿದೆ. ಈ ವಿಡಿಯೋಗೆ ಅನೇಕ ಗಣ್ಯರು ಪ್ರತಿಕ್ರಿಯೆ ನೀಡಿ ಹಾರ್ಟ್ ಇಮೋಜಿ ಹಾಕಿದ್ದಾರೆ.

2009ರಲ್ಲಿ ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಘನಾ ಬಳಿಕ ಪುಂಡ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾರಂಗದಲ್ಲೂ ಮೇಘನಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೊನೆಯದಾಗಿ ಮೇಘನಾ ನಟಿಸಿದ್ದು ಕುರುಕ್ಷೇತ್ರ ಸಿನಿಮಾದಲ್ಲಿ ಈ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈಗ ಮೇಘನಾ ರಾಜ್ ಅವರು ಮತ್ತೆ ಸಿನಿಮಾ ಲೋಕಕ್ಕೆ ಹಿಂದಿರುಗಿ ಬರುತ್ತಾರೆ ಎನ್ನುವ ಸುದ್ಧಿ ಹರಡುತ್ತಿದೆ. ಮೇಘನಾ ಹುಟ್ಟುಹಬ್ಬಕ್ಕೆ ಸ್ನೇಹಿತರು, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಸದ್ಯ ಮುದ್ದು ಮಗನ ಆರೈಕೆಯಲ್ಲಿ ಬ್ಯುಸಿಯಾಗಿರುವ ಮೇಘನಾ ಮತ್ತೆ ಬಣ್ಣಹಚ್ಚಲಿ ಎನ್ನುವುದು ಅಭಿಮಾನಿಗಳ ಆಶಯ.

Leave A Reply

Your email address will not be published.

error: Content is protected !!
Footer code: