ಚಿಕ್ಕ ವಯಸ್ಸಲ್ಲೇ MLA ಆಗಿರುವ ನಮ್ಮ ರಾಜ್ಯದ ಯುವ ರಾಜಕಾರಣಿಗಳು ಯಾರು ಗೊತ್ತಾ?

0

ರಾಜಕಾರಣಿಗಳು ಎಂದರೆ ಸುಮಾರಾಗಿ ವಯಸ್ಸಾದವರೇ ಆಗಿರುತ್ತಾರೆ ಸುಮಾರು ಐವತ್ತು ವರ್ಷ ದಾಟಿದ ವ್ಯಕ್ತಿಗಳೇ ಹೆಚ್ಚಾಗಿ ರಾಜಕಾರಣಿಗಳಾಗಿರುತ್ತಾರೆ ಎಂಬುದು ಎಲ್ಲರ ಊಹೆಯಾಗಿದೆ ರಾಜ್ಯದ 220 ಶಾಸಕರಲ್ಲಿ ಸುಮಾರು 150 ಶಾಸಕರು 50 ವರ್ಷ ದಾಟಿದವರಾಗಿದ್ದಾರೆ. ಯುವ ಜನಾಂಗದವರು ಎಂಎಲ್ಎ ಆದರೆ ಎಲ್ಲಾ ಕೆಲಸವನ್ನು ಚುರುಕಿನಿಂದ ಓಡಾಡಿಕೊಂಡು ಮಾಡುತ್ತಾರೆ ಹೀಗೆ ನಮ್ಮ ರಾಜ್ಯದಲ್ಲಿರುವ ಯುವ ರಾಜಕಾರಣಿಗಳು ಯಾರು ಎಂಬುದನ್ನು ನೋಡೋಣ,

ಮೊದಲನೆಯದಾಗಿ ಅನಿಲ್ ಕುಮಾರ್ ಸಿ (33 ವರ್ಷ) ಇವರು ಮೈಸೂರಿನ ಹೆಚ್ ಡಿ ಕೋಟೆ ಕ್ಷೇತ್ರದ ಕಾಂಗ್ರೆಸ್ ಎಂಎಲ್ಎ ಯಾಗಿದ್ದು ಈ ಮೂಲಕ ರಾಜ್ಯದ ಅತ್ಯಂತ ಕಿರಿಯ ಎಂಎಲ್ಎ ಎನ್ನಿಸಿಕೊಂಡಿದ್ದರು ಇದರ ಜೊತೆಗೆ ಕಾಂಗ್ರೆಸ್ ಪಕ್ಷದ ಕಿರಿಯ ಎಂಎಲ್ಎ ಕೂಡ ಆಗಿದ್ದಾರೆ ಜೆಡಿಎಸ್ ಶಾಸಕರಾಗಿದ್ದ ಇವರ ತಂದೆ ಚಿಕ್ಕಮಾದು ನಿಧಾನರಾದ ನಂತರ 2018ರ ವಿಧಾನಸಭಾ ಚುನಾವಣೆಗೆ ಇವರ ಮಗ ಕಾಂಗ್ರೆಸ್ ನಿಂದ ಆಯ್ಕೆಯಾದರು, ಚುನಾವಣೆ ಸಮಯದಲ್ಲಿ ಇವರಿಗೆ ಬರಿ 29 ವರ್ಷ ವಯಸ್ಸಾಗಿತ್ತು ಎಸ್ ಎಸ ಎಲ್ ಸಿ ಪಾಸಾಗಿರುವ ಇವರು 2.64 ಕೋಟಿ ಆಸ್ತಿಯ ಒಡೆಯ ಆಗಿದ್ದಾರೆ.

ಎರಡನೆಯದಾಗಿ ಡಾಕ್ಟರ್ ಅವಿನಾಶ್ ಜಾಧವ್ 33 ಇವರು ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಬಿಜೆಪಿ ಎಂಎಲ್ಎ 2019ರಲ್ಲಿ ಚಿಂಚೋಳ್ಳಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದು ಇವರು ಗೆದ್ದಾಗ ಕೇವಲ 30 ವರ್ಷ ವಯಸ್ಸಾಗಿತ್ತು ಈ ಮೂಲಕ ರಾಜ್ಯದ ಎರಡನೆಯ ಕಿರಿಯ ಶಾಸಕ ಎನಿಸಿಕೊಂಡಿದ್ದಾರೆ ಇವರು ಎಂ.ಬಿ.ಬಿ.ಎಸ್ ಮುಗಿಸಿ ಎಂ.ಡಿ ಮಾಡಿದ್ದಾರೆ ಇವರಿಗೆ ಕೇವಲ 77 ಲಕ್ಷ ಮೌಲ್ಯದ ಆಸ್ತಿ ಇರುವುದಾಗಿ ಹೇಳಿಕೊಂಡಿದ್ದಾರೆ ಇವರು ಕಲಬುರ್ಗಿ ಕ್ಷೇತ್ರದ ಡಾಕ್ಟರ್ ಉಮೇಶ್ ಜಾದವ ರವರ ಪುತ್ರ ಆಗಿದ್ದಾರೆ.

ಮೂರನೆಯದಾಗಿ ಸೌಮ್ಯ ರೆಡ್ಡಿ (39 ವರ್ಷ) ಇವರು ಬೆಂಗಳೂರಿನ ಜಯನಗರ ಕ್ಷೇತ್ರದ ಕಾಂಗ್ರೆಸ್ ಎಂಎಲ್ಎ ಬಿ.ಇ ಪದವಿ ಪಡೆದಿರುವ ಇವರ ಬಳಿ ಕೇವಲ 54 ಲಕ್ಷ ಮೌಲ್ಯದ ಆಸ್ತಿ ಇರುವುದಾಗಿ 2018 ರಲ್ಲಿ ಘೋಷಿಸಿಕೊಂಡಿದ್ದರು ಈ ಮೂಲಕ ಇವರು ರಾಜ್ಯದ ಬಡ ಶಾಸಕಿ ಎನಿಸಿಕೊಂಡಿದ್ದಾರೆ ಇವರು ಕಾಂಗ್ರೆಸ್ ನ ಹಿರಿಯ ನಾಯಕ ರಾಮಲಿಂಗ ರೆಡ್ಡಿ ಅವರ ಪುತ್ರಿಯಾಗಿದ್ದಾರೆ.

ಇವರ ನಂತರದಲ್ಲಿ ದತ್ತಾತ್ರೇಯ ರೇವೂರ 39 ವರ್ಷ ಇವರು ಗುಲ್ಬರ್ಗ ದಕ್ಷಿಣ ಕ್ಷೇತ್ರದ ಬಿಜೆಪಿ ಎಂಎಲ್ಎ ಈ ಮೂಲಕ ಇವರು ರಾಜ್ಯದ ನಾಲ್ಕನೇ ಕಿರಿಯ ಎಂಎಲ್ಎ ಎನಿಸಿಕೊಂಡಿದ್ದಾರೆ 2013ರಲ್ಲಿ ಗೆದ್ದಿದ್ದಾಗ ಎರಡನೇ ಎಂಎಲ್ಎ ಎನಿಸಿಕೊಂಡಿದ್ದರು. ಡಿಪ್ಲೋಮಾ ಓದಿರುವ ಇವರು 17 ಕೋಟಿ ಮೌಲ್ಯದ ಆಸ್ತಿಗೆ ಒಡೆಯರಾಗಿದ್ದಾರೆ ಇವರ ವಿರುದ್ಧ ಒಂದು ಕ್ರಿಮಿನಲ್ ಕೇಸ್ ಬಾಕಿ ಇದೆ.

ಐದನೆಯದಾಗಿ ಆನಂದ ನ್ಯಾಮಗೌಡ (40 ವರ್ಷ) ಇವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಎಂಎಲ್ಎ ಇವರ ತಂದೆ ಸಿದ್ದು ನ್ಯಾಮಗೌಡ ನಿಧನರಾದ ಬೆನ್ನಲ್ಲಿಯೇ ಜಮಖಂಡಿ ಕ್ಷೇತ್ರದ ಉಪಚುನಾವಣೆಯಲ್ಲಿ ಭಾಗವಹಿಸಿ ಗೆದ್ದರು ಇವರು ಎಂ.ಬಿ.ಎ ಸ್ನಾತಕೋತ್ತರ ಪದವಿ ಪಡೆದಿದ್ದು 5.34 ಕೋಟಿ ಮೌಲ್ಯದ ಆಸ್ತಿಗೆ ಇವರು ಒಡೆಯರಾಗಿದ್ದಾರೆ. ಆರನೆಯದಾಗಿ ಹರೀಶ್ ಪೂಂಜ 40 ವರ್ಷ ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಎಂಎಲ್ಎ ಬಿಎ ಪದವಿ ಪಡೆದು ನಂತರ ಎಲ್.ಎಲ್.ಬಿ ಓದಿರುವ ಇವರ ಬಳಿ ಸುಮಾರು 3 ಕೋಟಿ ಆಸ್ತಿ ಇರುವುದಾಗಿ ಹೇಳಿಕೊಂಡಿದ್ದಾರೆ ಇವರ ಮೇಲೆ ಎರಡು ಕ್ರಿಮಿನಲ್ ಕೇಸ್ ಗಳು ಬಾಕಿ ಇವೆ.

ಏಳನೆಯದಾಗಿ ಅಶ್ವಿನ್ ಕುಮಾರ್ ಎಂ (40 ವರ್ಷ) ಇವರು ಮೈಸೂರು ಜಿಲ್ಲೆ, ನರಸೀಪುರ ಕ್ಷೇತ್ರದ ಜೆಡಿಎಸ್ ಎಂಎಲ್ಎ ಈ ಮೂಲಕ ಜೆಡಿಎಸ್ ನ ಅತ್ಯಂತ ಕಿರಿಯ ಎಂಎಲ್ಎ ಅನಿಸಿಕೊಂಡಿದ್ದಾರೆ ಎಂ.ಟೆಕ್ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕೇವಲ 88 ಲಕ್ಷ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಇನ್ನು ಎಂಟನೆಯದಾಗಿ ಶರತ್ ಬಚ್ಚೇಗೌಡ 41ವರ್ಷ ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಅಮೇರಿಕಾದಲ್ಲಿ ಎಂ.ಎಸ್ ಓದಿರುವ ಇವರು ಬರೋಬ್ಬರಿ 150 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ 2019 ರಲ್ಲಿ ಈ ಕ್ಷೇತ್ರದ ಕಾಂಗ್ರೆಸ್ ನಾಯಕರಾಗಿದ್ದ ಎಂ ಟಿ ಬಿ ನಾಗರಾಜ್ ರಾಜೀನಾಮೆ ನೀಡಿ ಬಿಜೆಪಿ ಸೇರಿದ ನಂತರ ಪಕ್ಷೇತರರಾಗಿ ನಿಂತ ಶರತ್ ಬಚ್ಚೇಗೌಡ ಈ ಕ್ಷೇತ್ರಕ್ಕೆ ಆಯ್ಕೆಯಾದರು ಬಿಜೆಪಿ ಸಂಸದ ರಾಗಿರುವ ಬಿ ಎಂ ಬಚ್ಚೇಗೌಡರ ಮಗ ಇವರ ವಿರುದ್ಧ ಒಂದು ಕ್ರಿಮಿನಲ್ ಕೇಸ್ ಬಾಕಿ ಇದೆ.

ಇನ್ನೂ ಒಂಬತ್ತನೆಯದಾಗಿ ಪ್ರೀತಮ್ ಗೌಡ ಈತ ಹಾಸನ ಕ್ಷೇತ್ರದ ಬಿಜೆಪಿ ಎಂಎಲ್ಎ ಇವರಿಗೆ ಈಗ 40 ಒಂದು ವಯಸ್ಸು ಬಿಇ ಪದವಿ ಪಡೆದಿರುವ ಇವರು 19 ಕೋಟಿಯ ಆಸ್ತಿಗೆ ಒಡೆಯ ಆಗಿದ್ದಾರೆ. ಹತ್ತನೆಯದಾಗಿ ಡಾಕ್ಟರ್ ಯತೀಂದ್ರ (42 ವರ್ಷ) ಇವರು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಕಾಂಗ್ರೆಸ್ ಎಂಎಲ್ಎ ಎಂಬಿಬಿಎಸ್ ಮುಗಿಸಿ ಎಂಡಿ ಮಾಡಿರುವ ಡಾಕ್ಟರ್ ಯತೀಂದ್ರ 23 ಕೋಟಿಯ ಆಸ್ತಿಗೆ ಒಡೆಯರಾಗಿದ್ದಾರೆ ಇವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ.

ಇವರು ಟಾಪ್ ಟೆನ್ ಯುವ ಎಂಎಲ್ಎ ಗಳಾಗಿದ್ದು ನಂತರದಲ್ಲಿ ಬರುವವರು ಗುಲ್ಬರ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಮತ್ತಿ ಮುಡು 42 ವರ್ಷ ಕೊಪ್ಪಳದ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಡೆಸುಗೂರು 42 ವರ್ಷ ಕೋಲಾರದ ಕೆಜಿಎಫ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರೂಪಕಲಾಯಂ 42 ವರ್ಷ ಹೀಗೆ ಮುಂದುವರೆಯುತ್ತದೆ ಇನ್ನೂ ಇವರಲ್ಲಿ ಶರತ್ ಬಚ್ಚೇಗೌಡ ಹೆಚ್ಚು ಶ್ರೀಮಂತ ಎಂಎಲ್ಎ ಆಗಿದ್ದಾರೆ.

Leave A Reply

Your email address will not be published.

error: Content is protected !!