WhatsApp Group Join Now
Telegram Group Join Now

ನಾವಿಂದು ನಿಮಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ತಿಳಿಸಿಕೊಡುತ್ತೇವೆ. ಆ ಕುತೂಹಲಕಾರಿ ವಿಷಯಗಳು ಯಾವುದು ಎಂದು ನೋಡುವುದಾದರೆ ಮೊದನೆಯದಾಗಿ ಸ್ನೇಹಿತರೆ ನಮಗೆ ನಿಂತುಕೊಂಡು ನಿದ್ದೆ ಮಾಡುವುದಕ್ಕೆ ಸಾಧ್ಯವಿಲ್ಲ ಯಾಕೆ ಗೊತ್ತಾ ನಿದ್ದೆಯಲ್ಲಿ ನಮ್ಮ ಪೂರ್ತಿ ದೇಹ ಮಾಂಸಖಂಡಗಳು ಮೆದುಳು ಎಲ್ಲವೂ ಕೂಡ ವಿಶ್ರಾಂತ ಸ್ಥಿತಿಗೆ ಹೋಗಿಬಿಡುತ್ತವೆ. ನಾವು ನಿಂತು ಕೊಳ್ಳುವುದಕ್ಕೆ ಕಾರಣವಾಗುವಂತಹ ಮಜಲ್ಸ್ ಕೂಡ ವಿಶ್ರಾಂತ ಸ್ಥಿತಿಗೆ ಹೋಗಿರುತ್ತದೆ.

ನಿದ್ದೆ ಮಾಡುವಾಗ ಜಾಸ್ತಿ ಹೊತ್ತು ಕದಲದೇ ನಿಂತು ಕೊಳ್ಳುವುದಕ್ಕೆ ಆಗುವುದಿಲ್ಲ ಕಾರಣ ನಮ್ಮ ಮೆದುಳು ಹೆಚ್ಚಾಗಿ ವಿಶ್ರಾಂತ ಸ್ಥಿತಿಗೆ ಹೋಗಿರುತ್ತದೆ. ಒಂದು ಸಲ ನಮ್ಮ ಮೆದುಳು ಮಾಂಸಖಂಡಗಳು ಕೆಲಸ ಮಾಡುವುದನ್ನು ನಿಲ್ಲಿಸಿದರೆ ನಾವು ಮಲಗಲೇ ಬೇಕು. ಒಂದು ವೇಳೆ ನಿಂತುಕೊಂಡೆ ಹೆಚ್ಚು ಅವಧಿ ಮಲಗಬೇಕು ಎಂದುಕೊಂಡರೆ ನಮ್ಮ ಬೆನ್ನು ಮೂಳೆಯ ಮೇಲೆ ಒತ್ತಡ ಹೆಚ್ಚಾಗಿ ವಿಪರೀತ ವಾದಂತಹ ನೋವು ಕಾಣಿಸಿಕೊಳ್ಳುತ್ತದೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮನುಷ್ಯ ನಿದ್ರಿಸುವುದು ಮತ್ತು ನಿಂತುಕೊಳ್ಳುವುದು ಈ ಎರಡು ಕೆಲಸವನ್ನು ಒಟ್ಟಿಗೆ ಮಾಡುವುದಕ್ಕೆ ಸಾಧ್ಯವಿಲ್ಲ.

ಎರಡನೇ ವಿಷಯ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮಾಡಬೇಕು ಎಂದರೆ ಖಂಡಿತ ನಿಮಗೆ ಅದರ ಮೇಲೆ ಅವಗಾಹನೆ ಇರಬೇಕು. ಅದೇ ರೀತಿ ಸ್ಟಾಕ್ ಮಾರುಕಟ್ಟೆಯಲ್ಲಿ ಟ್ರೆಡಿಂಗ್ ಮಾಡಬೇಕು ಎಂದರೇ ನಿಮ್ಮ ಬಳಿ ಡಿಮ್ಯಾಟ್ ಅಕೌಂಟ್ ಇರಬೇಕು. ನಮ್ಮ ದೇಶದಲ್ಲಿ ಮೂವತ್ತು ವರ್ಷಗಳಿಂದ ಬ್ರೋಕೆ ಸೇವೆಯನ್ನು ಒದಗಿಸುತ್ತಾ ಇಪ್ಪತ್ತೆರಡು ಲಕ್ಷಕ್ಕಿಂತ ಹೆಚ್ಚು ಗ್ರಾಹಕರನ್ನು ಹೊಂದಿರುವ ಮೋತಿಲಾಲ್ ಓಸ್ವಾಲ್ ಅವರು ನಿಮಗೆ ಉಚಿತವಾಗಿ ಡಿಮ್ಯಾಟ್ ಅಕೌಂಟ್ ಅನ್ನು ಮಾಡಿಕೊಳ್ಳುವ ಅವಕಾಶವನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಇವರು ನಿಮಗೆ ವೈಯಕ್ತಿಕವಾಗಿ ಸ್ಟಾಕ್ ಅಡ್ವೈಸರ್ ಅನ್ನು ನೀಡುತ್ತಾರೆ. ಅವರು ಯಾವ ಸ್ಟಾಕನ್ನು ಎಲ್ಲಿ ಕೊಂಡುಕೊಳ್ಳಬೇಕು ಎಲ್ಲಿ ಮಾರಾಟ ಮಾಡಬೇಕು ಎನ್ನುವುದರ ಬಗ್ಗೆ ಗೈಡ್ ಮಾಡುತ್ತಾರೆ ಅದೇ ರೀತಿ ನಿಮ್ಮ ಬಳಿ ಅಕೌಂಟ್ ಮೆಂಟೇನೆನ್ಸ್ ಚಾರ್ಜ ಕೇಳುವುದಿಲ್ಲ. ಅದೇ ರೀತಿ ಕ್ಯಾಶ್ ಪ್ರೈಜ್ ಗೆಲ್ಲುವ ಅವಕಾಶವಿರುತ್ತದೆ.

ಮೂರನೆಯದಾಗಿ ಇವತ್ತಿನ ದಿನಗಳಲ್ಲಿ ಪ್ರತಿಯೊಂದು ದಾಖಲೆಗಳನ್ನು ಜೆರಾಕ್ಸ್ ಮಾಡಿ ಇಟ್ಟುಕೊಳ್ಳುತ್ತೇವೆ. ಪ್ರತಿಯೊಬ್ಬರೂ ಕೂಡ ಸಾಮಾನ್ಯವಾಗಿ ಜೆರಾಕ್ಸ್ ಮಾಡುವ ಯಂತ್ರವನ್ನು ನೋಡಿರುತ್ತೇವೆ ಜೆರಾಕ್ಸ್ ಮಾಡುವ ಯಂತ್ರ ಯಾವ ರೀತಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಅದಕ್ಕೂ ಮೊದಲು ಎಲೆಕ್ಟ್ರಿಕ್ ಚಾರ್ಜಸ್ ಯಾವ ರೀತಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಎಲೆಕ್ಟ್ರಿಕ್ ಚಾರ್ಜರ್ ನಲ್ಲಿ ಎರಡು ವಿಧಗಳಿರುತ್ತವೆ ಒಂದು ನಕಾರಾತ್ಮಕ ಅಂಶ ಇನ್ನೊಂದು ಸಕಾರಾತ್ಮಕ ಅಂಶ ಇವುಗಳಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳು ಬೆರೆತಾಗ ಆಕರ್ಷಣೆ ಉಂಟಾಗುತ್ತದೆ

ಅದೇ ರೀತಿ ಪೊಸಿಟಿವ್ ಪೋಸಿಟಿವ್ ನೆಗೆಟಿವ್ ನೆಗೆಟಿವ್ ಬೆರೆತಾಗ ವಿಕರ್ಷಣೆಯ ಉಂಟಾಗುತ್ತದೆ. ಇದರ ಆಧಾರದ ಮೇಲೆ ಜೆರಾಕ್ಸ್ ಯಂತ್ರ ಕೆಲಸ ಮಾಡುತ್ತದೆ. ಮೊದಲು ಜೆರಾಕ್ಸ್ ಯಂತ್ರದಲ್ಲಿರುವ ಭಾಗಗಳ ಬಗ್ಗೆ ತಿಳಿದುಕೊಳ್ಳೋಣ ಮೊದಲನೇದು ಹೆಲೋಜಿನ್ ಲ್ಯಾಂಪ್ ಎರಡನೆಯದು ಫೋಟೋ ಸೆನ್ಸಿಟಿವ್ ಡ್ರಮ್ ಮೂರನೇದು ಟೋನರ್. ನಾವು ಜೆರಾಕ್ಸ್ ಮಾಡಬೇಕು ಎಂದು ಕೊಂಡಿರುವ ದಾಖಲೆಯನ್ನು ಯಂತ್ರದಲ್ಲಿ ತಿರುಗಿಸಿಟ್ಟು ಸ್ಟಾರ್ಟ್ ಬಟನ್ ಅನ್ನು ಒತ್ತಿದಾಗ ಹೆಲೋಜಿನ್ ಲ್ಯಾಂಪ್ ನಿಂದ ಬರುವ ಬೆಳಕು ಕಾಗದದ ಮೇಲೆ ಬಿದ್ದು ರಿಪ್ಲೆಕ್ಟ್ ಆಗಿ ಫೋಟೋ ಸೆನ್ಸಿಟಿವ್ ಡ್ರಮ್ ಮೇಲೆ ಬೀಳುತ್ತದೆ.

ಈ ಡ್ರಮ್ ಸೆಲೆನಿಯಂ ಎನ್ನುವ ಫೋಟೋ ಸೆನ್ಸಿಟಿವ್ ಕೆಮಿಕಲ್ಸ್ ನಿಂದ ಕೊಟಿಂಗ್ ಆಗಿರುತ್ತದೆ ಸೆಮಿಕಂಡಕ್ಟರ್ ಎನ್ನುವ ವಸ್ತು ಇರುತ್ತದೆ ಯಾವ ಭಾಗದಲ್ಲಿ ಬೆಳಕು ಬೀಳುತ್ತದೆ ಅಂತಹ ಜಾಗದಲ್ಲಿ ವಿದ್ಯುತ್ ಸಂಚಾರವಾಗುತ್ತದೆ ಯಾವ ಜಾಗದಲ್ಲಿ ಬೆಳಕು ಬೀಳುವುದಿಲ್ಲ ಅಂತಹ ಜಾಗದಲ್ಲಿ ವಿದ್ಯುತ್ ಸಂಚಾರ ಆಗೋದಿಲ್ಲ. ನಾವು ಜೆರಾಕ್ಸ್ ಅನ್ನು ತೆಗೆಯುವುದಕ್ಕಾಗಿ ಯಂತ್ರದಲ್ಲಿ ಹಾಕಿರುವ ದಾಖಲೆಯಲ್ಲಿ ಬಿಳಿ ಇರುವ ಭಾಗ ಬೆಳಕನ್ನು ರಿಫ್ಲೆಕ್ಟ್ ಮಾಡುತ್ತದೆ.

ಯಾವ ಭಾಗದಲ್ಲಿ ಕಪ್ಪು ಅಕ್ಷರಗಳು ಇರುತ್ತವೆ ಆ ಭಾಗದಲ್ಲಿ ಬಿದ್ದ ಬೆಳಕು ರಿಫ್ಲೆಕ್ಟ್ ಆಗುವುದಿಲ್ಲ ಕಾಗದದ ಮೇಲೆ ಇರುವ ಅಕ್ಷರಗಳು ಯಾವ ರೀತಿ ಇದೆಯೋ ಆ ರೀತಿಯಲ್ಲಿ ಡ್ರಮ್ ನ ಮೇಲೆ ಪೋಸಿಟಿವ್ ಚಾರ್ಜ್ ಫಾಲಿಕಲ್ಸ್ ಇರುತ್ತದೆ ಅದೇ ರೀತಿ ಟೋನರ್ ಎನ್ನುವ ಭಾಗ ಇರುತ್ತದೆ. ಇದರಲ್ಲಿ ಕಪ್ಪುಮಸಿ ಪೌಡರ್ ರೀತಿಯಲ್ಲಿ ಇರುತ್ತದೆ ಇದಕ್ಕೆ ನಕಾರಾತ್ಮಕ ಚಾರ್ಜ್ ಇರುತ್ತದೆ ಡ್ರಮ್ ಮೇಲೆ ಯಾವ ಜಾಗದಲ್ಲಿ ಪಾಸಿಟಿವ್ ಫಾಲಿಕಲ್ಸ್ ಚಾರ್ಜ್ ಉಂಟಾಗುತ್ತದೆ ಆಕ್ಜಾಗದಲ್ಲಿ ಟೋನರ್ ನಿಂದ ನೆಗೆಟಿವ್ ಫಾಲಿಕಲ್ಸ್ ಚಾರ್ಜ್ ಆಕರ್ಷಣೆಗೆ ಒಳಗಾಗುತ್ತದೆ ಟೋನರ್ ನಲ್ಲಿ ಇರುವಂತಹ ಕಪ್ಪುಬಣ್ಣದ ಮಶಿ ಡ್ರಮ್-ಗೆ ಅಂಟಿಕೊಳ್ಳುತ್ತದೆ ನಾವು ಇಟ್ಟಂತಹ ಬಿಳಿ ಬಣ್ಣದ ಹಾಳೆಗಳು ಬೆಲ್ಟ್ ಮುಖಾಂತರ ಒಳಗೆ ಬಂದಾಗ ಪೋಸಿಟಿವ್ ಚಾರ್ಜ್ ಕೊಡಲಾಗುತ್ತದೆ ಆಗ ಪೇಪರ್ ಡ್ರಮ್ ಅನ್ನು ತಾಗಿಕೊಂಡು ಹೋಗುವಾಗ ಡ್ರಮ್ ಗೆ ಅಂಟಿಕೊಂಡಿದ್ದ ಕಪ್ಪು ಬಣ್ಣದ ಮಷೀನ್ ಪೇಪರ್ ನ ಮೇಲೆ ಅಂಟಿಕೊಳ್ಳುತ್ತದೆ ಈ ರೀತಿಯಾಗಿ ನಕಾರಾತ್ಮಕ ಮತ್ತು ಸಕಾರಾತ್ಮಕ ಗಳ ಆಧಾರದ ಮೇಲೆ ಜೆರಾಕ್ಸ್ ಯಂತ್ರ ಕೆಲಸ ಮಾಡುತ್ತದೆ.

ಸಾಮಾನ್ಯವಾಗಿ ನಮಗೆ ಚಳಿಯಾದಾಗ ನಾವು ನಡುಗುತ್ತೆವೆ ಯಾಕೆ ಎಂದರೆ ಮನುಷ್ಯ ಬದುಕಬೇಕು ಎಂದರೆ ನಮ್ಮ ದೇಹ ಒಂದು ನಿರ್ದಿಷ್ಟ ಉಷ್ಣತೆಯನ್ನು ಪಾಲನೆ ಮಾಡಬೇಕು ಅದು ಮೂವತ್ತೇಳು ಡಿಗ್ರಿ ಸೆಂಟಿಗ್ರೇಡ್. ನಮಗೆ ಚಳಿಯಾದಾಗ ನಮ್ಮ ದೇಹದಲ್ಲಿ ಇರುವಂತಹ ಚಿಕ್ಕ-ಚಿಕ್ಕ ಸೆನ್ಸರ್ ಮೆದುಳಿಗೆ ಸಂದೇಶವನ್ನು ಕಳುಹಿಸುತ್ತದೆ ದೇಹ ಬೆಚ್ಚಗಾಗ ಬೇಕು ಎಂದು. ಕೂಡಲೇ ಮೆದುಳು ನರಮಂಡಲಕ್ಕೆ ಸಂದೇಶವನ್ನು ಕಳುಹಿಸುತ್ತದೆ

ಮಾಂಸಖಂಡಗಳು ಬೇಗ ಬಿಗಿಯಾಗಿ ಸಡಿಲವಾಗಲಿ ಎಂದು ಇದನ್ನೇ ನಡುಗುವುದು ಎಂದು ಕರೆಯುತ್ತೇವೆ. ಮನುಷ್ಯನ ಮಾಂಸಖಂಡಗಳು ಹೀಗೆ ವೇಗವಾಗಿ ನಡುಗುವುದರಿಂದ ದೇಹದ ತಾಪಮಾನ ಹೆಚ್ಚಾಗುತ್ತದೆ. ದೇಹಕ್ಕೆ ಬೇಕಾಗುವ ಉಷ್ಣತೆ ಅಲ್ಲಿ ಉಂಟಾಗುತ್ತದೆ. ಇದು ನಾವು ಅಂದುಕೊಳ್ಳದೆ ಇದ್ದರೂ ನಡೆಯುವ ಪ್ರಕ್ರಿಯೆಯಾಗಿದೆ. ಇದಿಷ್ಟು ನಾವಿಂದು ನಿಮಗೆ ತಿಳಿಸುತ್ತಿರುವ ಕೆಲವು ಕುತೂಹಲಕಾರಿ ಮಾಹಿತಿಯಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: