ಚಂದ ಹಾಗೂ ಕವಿತಾಗೌಡ ಹೊಸ ಫೋಟೋ ಶೋಟ್ ಎಷ್ಟು ಕ್ಯೂಟ್ ಆಗಿದೆ

0

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಬಗ್ಗೆ ಕೇಳಿಬಂದ ಇಷ್ಟುದಿನದ ಗಾಸಿಪ್‌ಗಳಿಗೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಈ ಕುರಿತು ಚಂದನ್ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

ಕಳೆದ ಏಳು ವರ್ಷಗಳಿಂದ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಇಬ್ಬರೂ ಪರಿಚಯಸ್ಥರು. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿದ್ದ ಕವಿತಾ ಹಾಗೂ ಚಂದನ್ ಇವರಿಬ್ಬರ ಬಗ್ಗೆ ಅನೇಕ ದಿನಗಳಿಂದ ಸಾಕಷ್ಟು ಗಾಸಿಪ್ ಹರಿದಾಡುತ್ತಿತ್ತು. ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಅವರು ಏಪ್ರಿಲ್ 1ನೇ ತಾರೀಖಿನಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಕುರಿತು ಚಂದನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಮೂಲಕ ಅವರ ಸಂಬಂಧವನ್ನು ಅಧಿಕೃತ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಈ ಜೋಡಿ ಪ್ರೀತಿ ಮಾಡುತ್ತಿದೆ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ಪ್ರಶ್ನೆ ಮಾಡಿದ್ದರೂ ಕೂಡ ಚಂದನ್ ಹಾಗೂ ಕವಿತಾ ನಾವಿಬ್ಬರೂ ಸ್ನೇಹಿತರು ಅಂತೆಲ್ಲ ಹೇಳಿದ್ದರು. ಇನ್ನು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ಚಂದನ್ ವ್ಯಂಗ್ಯ ಮಾಡಿದ್ದರು.

ಇಷ್ಟೆಲ್ಲ ಆದನಂತರ ಈಗ ಚಂದನ್ ಕುಮಾರ್ ಅವರು ಏಪ್ರಿಲ್ 1ರಂದು ನಾವು ಮೂರ್ಖರಾಗುತ್ತಿದ್ದೇವೆ ಎಂಬ ಬರಹವಿರುವ ಕವಿತಾ ಗೌಡ ಜೊತೆಗಿನ ಫೋಟೋ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. ಇನ್ನು ಮಾಧ್ಯಮಗಳಿಗೂ ಕೂಡ ನಾವು ಸ್ನೇಹಿತರು ಎಂಬ ಹೇಳಿಕೆ ನೀಡಿದ್ದರು. ಕೆಲ ತಿಂಗಳುಗಳ ಹಿಂದೆ ಈ ಜೋಡಿ ಒಟ್ಟಾಗಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿತ್ತು. ಇನ್ನು ಎಷ್ಟೋ ಟ್ರಿಪ್, ಸಮಾರಂಭಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಹೀಗಾಗಿ ಚಂದನ್ ಹಾಗೂ ಕವಿತಾ ಗೌಡ ಪ್ರೀತಿ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಕವಿತಾ ಗೌಡ ಬರ್ತಡೇ ದಿನ ಚಂದನ್ ಅವರು ಮಧ್ಯರಾತ್ರಿ ಕವಿತಾ ಮನೆಗೆ ತೆರಳಿ ಸರ್ಪ್ರೈಸ್ ನೀಡಿದ್ದರು. ಇನ್ನು ಚಂದನ್, ಕವಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದ ಪೋಸ್ಟ್ ಕೂಡ ಅವರ ಪ್ರೀತಿಗೆ ಪುಷ್ಟಿ ನೀಡುವಂತಿತ್ತು.

ಇನ್ನು ಚಂದನ್ ಕುಮಾರ್ ಪೋಸ್ಟ್‌ಗೆ ನಟಿ ಶ್ವೇತಾ ಚೆಂಗಪ್ಪ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಅವುಗಳಿಗೆಲ್ಲ ಚಂದನ್ ಧನ್ಯವಾದ ತಿಳಿಸಿದ್ದಾರೆ. ಇನ್ನು ಕವಿತಾ ಗೌಡ ಹಾಗೂ ಚಂದನ್ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಜೋಡಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಕವಿತಾ ಗೌಡ ಬಿಗ್ ಬಾಸ್ ನಲ್ಲಿಯೂ ಭಾಗವಹಿಸಿದ್ದರು. ಒಟ್ಟಿನಲ್ಲಿ ಕಿರುತೆರೆಯ ಮತ್ತೊಂದು ಜೋಡಿ ಮದುವೆ ಬಂಧನಕ್ಕೆ ಒಳಗಾಗುತ್ತಿದ್ದು ನಮ್ಮ ಕಡೆಯಿಂದಲೂ ಶುಭಾಶಯಗಳು. ಹಾಗೂ ಈ ಜೋಡಿಯ ಹೊಸ ಫೋಟೋ ಶೂಟ್ ಗಳನ್ನು ನೀವಿಲ್ಲಿ ಕಾಣಬಹುದು.

Leave A Reply

Your email address will not be published.

error: Content is protected !!
Footer code: