ಗಟ್ಟಿಮೇಳ ಸೀರಿಯಲ್ ಖ್ಯಾತಿಯ ನಟ ರಕ್ಷಿತ್ ಗೌಡ ಅವರ ಮನೆ ಹೇಗಿದೆ ನೋಡಿ

0

ಕನ್ನಡ ಕಿರುತೆರೆಯಲ್ಲಿ ಅನೇಕ ನಟ, ನಟಿಯರು ತಮ್ಮ ನಟನೆಯಿಂದ ಕನ್ನಡಿಗರ ಮನಸನ್ನು ಗೆದ್ದಿದ್ದಾರೆ, ಅವರಲ್ಲಿ ನಟ ರಕ್ಷಿತ್ ಗೌಡ ಅವರು ಒಬ್ಬರಾಗಿದ್ದಾರೆ. ಅವರು ಹಳ್ಳಿಯಿಂದ ಬಂದು ಕಠಿಣ ಪರಿಶ್ರಮದಿಂದ ಕಿರುತೆರೆಯಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ರಕ್ಷಿತ್ ಗೌಡ ಅವರ ಸೀರಿಯಲ್, ಅವರ ಹಳ್ಳಿ ಹಾಗೂ ಅವರ ಮನೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಕಲರ್ಸ್ ಕನ್ನಡ ಸೀರಿಯಲ್ ನಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ ಎಂಬ ಜನಪ್ರಿಯ ಧಾರವಾಹಿಯಲ್ಲಿ ಮಹೇಶನ ಪಾತ್ರದಲ್ಲಿ ನಟಿಸುತ್ತಿದ್ದ ನಟ ರಕ್ಷಿತ್ ಗೌಡ ಅವರು ಕನ್ನಡ ಕಿರುತೆರೆಯಲ್ಲಿ ಪ್ರಮುಖ ನಟರಾಗಿ ಹೊರಹೊಮ್ಮಿದ್ದಾರೆ. ಪುಟ್ಟಗೌರಿ ಮದುವೆ ಧಾರವಾಹಿ ನಂತರ ಇವರು ಕಾಣಿಸಿಕೊಂಡಿರಲಿಲ್ಲ. ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ವಸಿಷ್ಠನಾಗಿ ಎಲ್ಲರ ಮನೆ ಮಗನಾಗಿದ್ದಾನೆ. ಇವರು ಕನ್ನಡ ಕಿರುತೆರೆಯ ಬೇಡಿಕೆ ನಟರಾಗಿದ್ದಾರೆ. ಕಷ್ಟದಿಂದ ಹೆಸರು ಮಾಡಿದ ನಟರಲ್ಲಿ ರಕ್ಷಿತ್ ಗೌಡ ಕೂಡ ಒಬ್ಬರು. ಸತತ ಹತ್ತು ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಶ್ರಮಪಟ್ಟು ಹೆಸರು ಮಾಡಿದ್ದಾರೆ.

ನಟ ರಕ್ಷಿತ್ ಗೌಡ ಅವರು ಹಳ್ಳಿಯ ಅಪ್ಪಟ ರೈತ ಕುಟುಂಬದಿಂದ ಬಂದಿದ್ದಾರೆ. ಹಳ್ಳಿಯಲ್ಲಿ ಅವರ ಮನೆಯವರು ಗೋವು, ಕುರಿ ಹೀಗೆ ಪ್ರಾಣಿ ಸಾಕಾಣಿಕೆ ಮಾಡಿದ್ದಾರೆ. ಅವರ ಮನೆಯಲ್ಲಿ ಗೋವುಗಳಿಗೆ ವಿಶೇಷ ಸ್ಥಾನವಿದೆ ಇದು ವಿಶೇಷವಾಗಿದೆ. ನಟ ರಕ್ಷಿತ್ ಅವರು ಕ್ಲಾಸ್ ಮೇಟ್ ಹಾಗೂ ಹನ್ನೊಂದು ವರ್ಷದಿಂದ ಪ್ರೀತಿಸುತ್ತಿದ್ದ ಅನುಷಾ ಅವರೊಂದಿಗೆ ಬೆಂಗಳೂರಿನಲ್ಲಿ ವಿವಾಹವಾಗಿದ್ದಾರೆ. ಅವರ ಮದುವೆಗೆ ಅನೇಕ ಗಣ್ಯಾತಿಗಣ್ಯರು ಬಂದು ನವಜೋಡಿಗಳಿಗೆ ಶುಭಹಾರೈಸಿದ್ದರು. ಅವರು ಬೆಂಗಳೂರಿನಲ್ಲಿ ತಮ್ಮ ಕನಸಿನ ಮನೆಯನ್ನು ನಿರ್ಮಿಸಿದ್ದಾರೆ, ಅವರ ಮನೆಯು ವಿಶಾಲವಾಗಿ, ಭವ್ಯವಾಗಿ ನೋಡಲು ಸುಂದರವಾಗಿದೆ. ಮನೆಯಲ್ಲಿರುವ ವಸ್ತುಗಳು ಬಹಳ ಕಲಾತ್ಮಕವಾಗಿದೆ. ಮನೆಯನ್ನು ನೋಡಿದರೆ ಮನೆಗೆ ಒಮ್ಮೆ ಭೇಟಿ ನೀಡಬೇಕು ಎನ್ನುವಷ್ಟು ಸುಂದರವಾಗಿದೆ. ರಕ್ಷಿತ್ ಗೌಡ ಅವರ ಮನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ರಕ್ಷಿತ್ ಗೌಡ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿ ಎಂದು ಆಶಿಸೋಣ.

Leave A Reply

Your email address will not be published.

error: Content is protected !!
Footer code: