ಗಂಡುಮಕ್ಕಳು ಉಡುದಾರ ಕಟ್ಟಿಕೊಳ್ಳುವುದರಿಂದ ಏನಾಗುತ್ತೆ?

0

ಹಿಂದೂ ಸಂಪ್ರದಾಯದಲ್ಲಿ ಅನಾದಿ ಕಾಲದಿಂದಲೂ ನಾನಾ ರೀತಿಯ ಆಚರಣೆಗಳು ಸಂಪ್ರದಾಯಗಳು ನಡೆದುಕೊಂಡು ಬರುತ್ತಿವೆ. ಭಾರತೀಯ ಸಂಸ್ಕೃತಿಯ ಒಂದೊಂದು ರೂಢಿ ಸಂಪ್ರದಾಯದಲ್ಲೂ ಒಂದೊಂದು ಅರ್ಥ ಹಾಗೂ ವೈಜ್ಞಾನಿಕ ಕಾರಣ ಇರುತ್ತೆ. ನಾವು ಧರಿಸುವ ಪ್ರತಿಯೊಂದು ವಸ್ತು ಕೂಡ ಆರೋಗ್ಯದ ಜೊತೆಗೆ ಹೊಸ ವಿಕಾಸಕ್ಕೂ ಕಾರಣವಾಗುತ್ತೆ. ಉಳಿದದ್ದು ಉಡುದಾರ. ಇದನ್ನ ಇಂದಿನ ಯುವಜನತೆಗೆ ಉಡುದಾರ ಅಂದ್ರೆ ಏನು, ಅದನ್ನ ಯಾಕೆ ಕಟ್ಟಿಕೊಳ್ಳಬೇಕು ಅಂತಾನೆ ಗೊತ್ತಿಲ್ಲ. ಹಾಗದ್ರೆ ಏನೂ ಅದು ಎಲ್ಲಿ ಸಿಗುತ್ತೆ ಅಂತಾನೂ ಗೊತ್ತಿಲ್ಲದ ಜನರಿದ್ದಾರೆ. ಕೆಲವರು ಅದನ್ನ ನಂಬೋದಿಲ್ಲ. ಕೆಲವರು ಮನೆಯವರ ಬಲವಂತಕ್ಕೆ ಕಟ್ಟಿಕೊಂಡಿರ್ತಾರೆ.

ಕೆಲ ಯುವಕರಿಗೆ ಕಟ್ಟಿಕೊಳ್ಳಬೇಕೆಂಬ ಭಾವನೆ ಇರುತ್ತೆ. ಆದ್ರೆ ಕೆಲವರು ಅದೆಲ್ಲಾ ಮೂಢನಂಬಿಕೆ ಅಂತಾ ಕಟ್ಟಿಕೊಳ್ಳೋದಿಲ್ಲ. ಕೆಲವರಿಗೆ ಸಮಯವೇ ಇರೋದಿಲ್ಲ. ಉಡುದಾರ ಧರಿಸುವುದು ಹಿಂದೂ ಸಂಪ್ರದಾಯದಲ್ಲಿ ಒಂದು ಭಾಗ. ಪ್ರತಿ ಹಿಂದೂ ಪುರುಷರು ಇದನ್ನು ಕಟ್ಟಿಕೊಳ್ಳಬೇಕು. ಮಕ್ಕಳು ಚಿಕ್ಕವಿದ್ದಾಗ ಅವರಿಗೆ ಉಡುದಾರ ಕಟ್ಟಿದರೆ ಅವರ ಬೆಳವಣಿಗೆ ಸಮಯದಲ್ಲಿ ಮೂಳೆಗಳು, ಸ್ನಾಯುಗಳು ಸರಿಯಾದ ರೀತಿಯಲ್ಲಿ ಬೆಳವಣಿಗೆ ಹೊಂದುತ್ತವೆ ಅನ್ನೋದು ಹಿಂದೂ ಸಂಪ್ರದಾಯ.

ಅದೆಲ್ಲಕ್ಕೂ ಮುಖ್ಯವಾಗಿ ಗಂಡು ಮಕ್ಕಳಿಗೆ ಬೆಳವಣಿಗೆಯ ಹಂತದಲ್ಲೇ ಇದನ್ನ ಕಟ್ಟುತ್ತಾರೆ. ಯಾಕಂದ್ರೆ, ಪುರುಷಾಂಗ ಯಾವುದೇ ಅಸಮತೋಲನಕ್ಕೆ ಗುರಿಯಾಗದೆ ಸರಿಯಾಗಿ ಬೆಳವಣಿಗೆ ಹೊಂದುತ್ತದೆ ಎಂದು. ಅದಕ್ಕಾಗಿ ಉಡುದಾರ ಕಟ್ಟುತ್ತಾರೆ. ಉಡುದಾರ ಕಟ್ಟಿಕೊಂಡ್ರೆ ರಕ್ತ ಸಂಚಲನೆ ಕೂಡ ಚೆನ್ನಾಗಿರುತ್ತೆ.ಪುರುಷರಲ್ಲಿ ಹರ್ನಿಯಾ ಬರದಂತೆ ಉಡುದಾರ ಕಾಪಾಡುತ್ತೆ. ಇದನ್ನ ವಿಜ್ಞಾನಿಗಳೂ ನಿರೂಪಿಸಿದ್ದಾರೆ.

ಚಿಕ್ಕಮಕ್ಕಗಳಿಗೆ ಬೆಳ್ಳಿಯಿಂದ ಮಾಡಿದ ಉಡುದಾರ ಕಟ್ಟುವುದು ಅನಾದಿಕಾಲದಿಂದ ಬಂದ ಸಂಪ್ರದಾಯ. ಆದರೆ ಬೆಳ್ಳೆಯದ್ದೇ ಆಗಬೇಕೆಂದೇನು ಇಲ್ಲ. ಯಾವುದೇ ಆದ್ರು ಆಗತ್ತೆ. ಆದ್ರೆ ಪ್ರತಿಯೊಬ್ಬರು ಉಡುದಾರ ಕಟ್ಟಿಕೊಂಡ್ರೆ ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ಒಳ್ಳೆದು. ಕಟ್ಟಿಕೊಳ್ಳೋಣ ಬಿಡಿ ಅದರಿಂದ ಆಗುವ ತೊಂದರೆಯಾದ್ರು ಏನೂ.

Leave A Reply

Your email address will not be published.

error: Content is protected !!