ಕೊರೊನ ಗುಣಪಡಿಸುವ ಆಯುರ್ವೇದಿಕ್ ಔಷಧಿ ಉಚಿತವಾಗಿ ಕೊಡುತ್ತಿರುವ ವ್ಯಕ್ತಿ, ಸಾವಿರಾರು ಜನ ಕ್ಯೂನಲ್ಲಿ ನಿಲ್ತಾರೆ

0

ಕೊರೊನಾ ವೈರಸ್ ದೇಶದಾದ್ಯಂತ ಪಸರಿಸಿದೆ. ಕರ್ನಾಟಕದಲ್ಲಂತೂ ವೈರಸ್ ತೀವ್ರ ಸ್ವರೂಪದಲ್ಲಿ ಏರಿಕೆಯಾಗುತ್ತಿದೆ. ಕೊರೊನಾ ರೋಗಕ್ಕೆ ಮದ್ದು ಕಂಡುಹಿಡಿಯಲು ವಿಜ್ಞಾನಿಗಳು ಪ್ರತಿದಿನ ಶ್ರಮಿಸುತ್ತಿದ್ದಾರೆ. ಆದರೆ ಈವರೆಗೆ ಯಾವುದೇ ನಿರ್ದಿಷ್ಟ ಔಷಧ ಕಂಡುಹಿಡಿಯಲೂ ಆಗಲಿಲ್ಲ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ದೇಶಾದ್ಯಂತ ಮಹಾ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಆದರೆ ಕೊರೊನಾ ಔಷಧ ತಯಾರಿಸಿದ್ದೇವೆ ಎಂದು ಕೆಲವರು ಹೇಳಿದರಾದರೂ ಅದೂ ಸಾಮಾಜಿಕ ಜಾಲತಾಣ ಬಿಟ್ಟು ನಿಜ ರೋಗಿಗಳ ಮೇಲೆ ಪ್ರಯೋಗವಾಗಿ ಯಶಸ್ಸು ಗಳಿಸಲಿಲ್ಲ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಯಾವುದೇ ಶುಲ್ಕ ಇಲ್ಲದೇ ಉಚಿತವಾಗಿ ಕೋವಿಡ್ ಗುಣಪಡಿಸುವ ಔಷಧ ನೀಡಲಾಗುತ್ತದೆ ಎಂಬ ಭರವಸೆ ಹಿನ್ನೆಲೆಯಲ್ಲಿ ನೆಲ್ಲೂರ್ ನ ಮುತ್ತುಕೂರ್ ಮಂಡಲದ ಕೃಷ್ಣಪಟ್ಟಣಂ ಗ್ರಾಮದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಸಾವಿರಾರು ಮಂದಿ ಸೇರುತ್ತಿದ್ದಾರೆ ಎಂದು ವರದಿ ಆಗಿದೆ. ಕೋವಿಡ್ 19 ಸೋಂಕು ಗುಣಪಡಿಸಲು ಇಡೀ ಜಗತ್ತು ಆಧುನಿಕ ಔಷಧಿಯ ಮೂಲಕ ಪರಿಹಾರ ಕಂಡುಹಿಡಿಯಲು ಹೆಣಗಾಡುತ್ತಿದ್ದರೆ ಮತ್ತೊಂದೆಡೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸುತ್ತ ಮುತ್ತಲಿನ ಸಾವಿರಾರು ಜನರು ಆಯುರ್ವೇದ ಔಷಧಕ್ಕೆ ಆದ್ಯತೆ ನೀಡುತ್ತಲಿದ್ದಾರೆ ಐವತ್ತು ಸಾವಿರಕ್ಕೂ ಅಧಿಕ ಜನರು ಔಷಧಕ್ಕಾಗಿ ಮುಗಿಬೀಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಕೋರೋನ ಗುಣಪಡಿಸಲು ಉಚಿತ ಆಯುರ್ವೇದ ಔಷಧ ಸಿಗುತ್ತಿದೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಜಿಲ್ಲಾಡಳಿತ ಸೂಕ್ತ ಕ್ರಮವನ್ನು ಜರಗಿಸಲು ಮುಂದಾಗಿತ್ತು.

ಅದರಂತೆ ಅಧಿಕಾರಿಗಳ ತಂಡವನ್ನು ಆ ಗ್ರಾಮಕ್ಕೆ ಕಳುಹಿಸಿದಾಗ ಅಲ್ಲಿ ಆಯುರ್ವೇದ ಚಿಕಿತ್ಸೆಯ ಬಗ್ಗೆ ಜನರು ಸಕಾರಾತ್ಮಕ ಹಾಗೂ ಒಲೆಲ್ಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದರಿಂದಾಗಿ ಅಧಿಕಾರಿಗಳು ವಾಪಸ್ ಆಗಿದ್ದು ಮಾತ್ರವಲ್ಲದೆ ಈ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಶೀಘ್ರವಾಗಿ ಸಂಪೂರ್ಣ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಬೋಗಿನಿ ಆನಂದಯ್ಯ ಎಂಬ ಹೆಸರಿನ ವ್ಯಕ್ತಿ ಜನರಿಗೆ ಉಚಿತ ಆಯುರ್ವೇದ ಚಿಕಿತ್ಸೆಯನ್ನು ನೀಡುವುದಾಗಿ ತಿಳಿಸಿದ್ದಾರೆ ಹಾಗೂ ಈಗಾಗಲೇ ಸಾಕಷ್ಟು ಜನರಿಗೆ ಉಚಿತವಾಗಿ ಆಯುರ್ವೇದದ ಪ್ರಕಾರ ಈ ಔಷಧಿಯನ್ನು ಸಹ ನೀಡಿದ್ದಾರೆ. ಇಲ್ಲಿನ ಸಂಘಟಕರ ಹೇಳಿಕೆಯ ಪ್ರಕಾರ ದಿನದಿಂದ ದಿನಕ್ಕೆ ಔಷಧ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈಗಾಗಲೇ 20ಸಾವಿರಕ್ಕೂ ಅಧಿಕ ಮಂದಿಗೆ ಔಷಧ ಹಂಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆಯುರ್ವೇದ ಔಷಧ ನೀಡುತ್ತಿದ್ದ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಅಧಿಕಾರಿ ಧನಲಕ್ಷ್ಮೀ, ಆರ್ ಡಿಒ ಸುವರ್ಣಮ್ಮ, ನೆಲ್ಲೂರ್ ಗ್ರಾಮೀಣ ಡಿಎಸ್ ಪಿ ವೈ.ಹರನಾಥ್ ರೆಡ್ಡಿ ಮತ್ತು ಆಯುಷ್ ವೈದ್ಯರು ಭೇಟಿ ನೀಡಿದ್ದರು. ಅಲ್ಲದೇ ಸ್ಯಾಂಪಲ್ಸ್ ಅನ್ನು ಸಹ ಪಡೆದುಕೊಂಡು ಹೋಗಿದ್ದಾರೆ. ಇಲ್ಲಿ ಆಂದ್ರಪ್ರದೇಶದಲ್ಲಿ ಔಷಧಿಗಾಗಿ ಗಿಡಮೂಲಿಕೆಗಳನ್ನು ಉಪಯೋಗಿಸಲಾಗುತ್ತದೆ. ಇದು ಕೋರೋನ ಮುಂಜಾಗ್ರತೆಗಾಗಿ ಹಾಗೂ ರೋಗ ಬಂದಾಗಲೂ ಸಹ ಗುಣಪಡಿಸಲು ಉಪಯೋಗವಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಆಯುರ್ವೇದ ಔಷಧ ನೀಡುತ್ತಿದ್ದಾರೆ ಬೋಗಿನಿ ಆನಂದಯ್ಯ. ಇವರಿಗೆ ಮೊದಲು ಬಂಡವಾಳ ಎಂದು ಮಗ ಆರಂಭಿಕವಾಗಿ ಒಂದು ಲಕ್ಷ ರೂಪಾಯಿ ಹಣವನ್ನು ನೀಡಿದ್ದರಂತೆ. ಕಾಲ ಕ್ರಮೇಣ ಇದೀಗ ಗಿಡಮೂಲಿಕೆಗಳನ್ನು ತರಲು ಹಾಗೂ ಇತರ ಅಗತ್ಯವಸ್ತುಗಳಿಗಾಗಿ ಜನರು ದೇಣಿಗೆ ನೀಡುತ್ತಿದ್ದಾರೆ ಎಂದು ಆನಂದಯ್ಯ ತಿಳಿಸಿದ್ದಾರೆ.

ಈ ಔಷಧಕ್ಕೆ ಉಪಯೋಗಿಸುವ ಗಿಡಮೂಲಿಕೆಯ ಮಾಹಿತಿಗಳನ್ನು ಸಂಗ್ರಹ ಮಾಡಲಾಗಿದೆ. ಈ ಕುರಿತ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗುವುದು ಎಂದು ಆಯುಷ್ ವೈದ್ಯರು ತಿಳಿಸಿದ್ದಾರೆ. ಜನರು ಔಷಧ ತೆಗೆದುಕೊಳ್ಳುವಾಗ ಕೋವಿಡ್ ನಿಯಮ ಪಾಲಿಸುವಂತೆ ಧನಲಕ್ಷ್ಮಿ ಎಂಬವರು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!
Footer code: