WhatsApp Group Join Now
Telegram Group Join Now

ಕೊರೊನಾ ಇದೊಂದು ದೊಡ್ಡ ಮಹಾಮಾರಿ ಆಗಿದ್ದು ಇಡೀ ಪ್ರಪಂಚವನ್ನೇ ಬದಲಾಯಿಸಿ ಬಿಟ್ಟಿದೆ. ಕೊರೊನಾ ಎಂಬ ವೈರಸ್ ಜನರನ್ನು ಒಂದು ವರ್ಷಗಳು ಕಳೆದರೂ ಬಿಟ್ಟು ಹೋಗುತ್ತಿಲ್ಲ. ಹಾಗೆಯೇ ಇದಕ್ಕೆ ಯಾವುದೇ ರೀತಿಯ ಔಷಧಿಗಳು ಸಿಗುತ್ತಿಲ್ಲ. ಹಾಗೆಯೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವ್ಯಾಕ್ಸಿನ್ ನ್ನು ಬಳಸಲಾಗುತ್ತಿದೆ. ಹಾಗೆಯೇ ಕೊರೊನಾದಿಂದ ದೂರ ಇರಲು ಕುಡಿಯುವ ಕಷಾಯದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕೊರೊನಾ ಕಷಾಯವನ್ನು ಮಾಡಲು ಮನೆಯಲ್ಲಿ ಇರುವ ಸಾಮಗ್ರಿಗಳು ಸಾಕು. ಯಾವುದನ್ನು ವಿಶೇಷವಾಗಿ ಹೊರಗಡೆಯಿಂದ ತರುವ ಅವಶ್ಯಕತೆ ಇಲ್ಲ. ಹತ್ತು ತುಳಸೀ ಎಲೆಯನ್ನು ತೆಗೆದುಕೊಳ್ಳಬೇಕು. ನಂತರದಲ್ಲಿ ನಾಲ್ಕು ದೊಡ್ಡಪತ್ರೆಯನ್ನು ತೆಗೆದುಕೊಳ್ಳಬೇಕು. ಹಾಗೆಯೇ ಹತ್ತು ಪುದೀನಾ ಎಲೆಯನ್ನು ತೆಗೆದುಕೊಳ್ಳಬೇಕು. ನಂತರ ಒಂದು ಇಂಚಿನಷ್ಟು ಶುಂಠಿಯನ್ನು ತೆಗೆದುಕೊಳ್ಳಬೇಕು. ಹಾಗೆಯೇ ಎರಡರಿಂದ ಮೂರು ಯಾಲಕ್ಕಿಯನ್ನು ತೆಗೆದುಕೊಳ್ಳಬೇಕು. ಹಾಗೆಯೇ ಅದಕ್ಕೆ ನಾಲ್ಕು ಕಾಲುಮೆಣಸನ್ನು ತೆಗೆದುಕೊಳ್ಳಬೇಕು. ಅದಕ್ಕೆ ಕಾಲು ಚಮಚ ಅರಿಷಿಣವನ್ನು ತೆಗೆದುಕೊಳ್ಳಬೇಕು.

ಅದಕ್ಕೆ ಕಾಲು ಚಮಚ ಓಂ ಕಾಳನ್ನು ತೆಗೆದುಕೊಳ್ಳಬೇಕು. ಅದಕ್ಕೆ ಕಾಲು ಚಮಚ ಜೀರಿಗೆಯನ್ನು ತೆಗೆದುಕೊಳ್ಳಬೇಕು. ಹಾಗೆಯೇ ನಾಲ್ಕರಿಂದ ಐದು ಲವಂಗವನ್ನು ತೆಗೆದುಕೊಳ್ಳಬೇಕು. ಅದಕ್ಕೆ ಕಾಲು ಚಮಚ ಬಡೆಸೊಪ್ಪನ್ನು ತೆಗೆದುಕೊಳ್ಳಬೇಕು. ಹಾಗೆಯೇ ಒಂದು ಇಂಚಿನಷ್ಟು ದಾಲ್ಚಿನ್ನಿ ಚಕ್ಕೆಯನ್ನು ತೆಗೆದುಕೊಳ್ಳಬೇಕು. ಕೊನೆಯದಾಗಿ ಅರ್ಧ ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು. ಒಲೆಗೆ ಉರಿಯನ್ನು ಹಚ್ಚಿ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಬೇಕು. ನಂತರದಲ್ಲಿ ನೀರು ಕುದಿಯಲು ಬಂದ ಮೇಲೆ ಎಲ್ಲಾ ಎಲೆಗಳನ್ನು ಹಾಕಬೇಕು.

ಮಧ್ಯಮ ಉರಿಯಲ್ಲಿ ಒಲೆಯನ್ನು ಇಟ್ಟುಕೊಳ್ಳಬೇಕು. ಎಲ್ಲವನ್ನೂ ಒಂದೊಂದಾಗಿಯೇ ಹಾಕಬೇಕು. ಹಾಗೆಯೇ ಏಲಕ್ಕಿ ಮತ್ತು ಕಾಳುಮೆಣಸನ್ನು ಕುಟ್ಟಿ ಹಾಕಬೇಕು. ಲಿಂಬೆಹಣ್ಣನ್ನು ಕೊನೆಯದಾಗಿ ಹಾಕಬೇಕು. ಈಗಲೇ ಹಾಕಬಾರದು. ಐದು ನಿಮಿಷಗಳ ಕಾಲ ಕುದ್ದಿದ ನಂತರ ಒಲೆಯ ಉರಿಯನ್ನು ಆಫ್ ಮಾಡಿ ಮುಚ್ಚಳವನ್ನು ಮುಚ್ಚಿ ಇಡಬೇಕು. ಹಾಗೆಯೇ ಐದು ನಿಮಿಷಗಳ ನಂತರ ಇದಕ್ಕೆ ಲಿಂಬೆರಸವನ್ನು ಹಾಕಬೇಕು. ಇದನ್ನು ಬಹಳ ಬಿಸಿ ಇದ್ದಾಗ ಕುಡಿಯಬಾರದು. ಉಗುರು ಬೆಚ್ಚಗಿನ ಬಿಸಿ ಇದ್ದಾಗ ಇದನ್ನು ಕುಡಿಯಬೇಕು. ಚಿಕ್ಕ ಮಕ್ಕಳಿಗೆ ಕೊಡುವುದಾದರೆ ಬೆಲ್ಲವನ್ನು ಹಾಕಬೇಕು. ಕೊನೆಯದಾಗಿ ಇದನ್ನು ಸೋಸಿಕೊಂಡು ಕುಡಿಯಬೇಕು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: