WhatsApp Group Join Now
Telegram Group Join Now

ವ್ಯವಸಾಯದ ಜೊತೆಗೆ ಹಲವಾರು ರೈತರು ಕೋಳಿ ಸಾಕಾಣಿಕೆ, ಪಶು ಸಾಕಾಣಿಕೆ, ಕುರಿ, ಹಂದಿ ಸಾಕಾಣಿಕೆ ಮಾಡುತ್ತಿದ್ದಾರೆ. ಯಾವುದೆ ಉಪ ಕಸುಬು ಪ್ರಾರಂಭಿಸಬೇಕಾದರೆ ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಎಮ್ಮೆ ಸಾಕಾಣಿಕೆ ಮಾಡುವುದು ಹೇಗೆ, ಅದರಿಂದ ಎಷ್ಟು ಆದಾಯ ಬರುತ್ತದೆ ಎಂಬೆಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಯಾದಗಿರಿ ಜಿಲ್ಲೆಯ ಭೀಮನಹಳ್ಳಿ ಎಂಬ ಗ್ರಾಮದಲ್ಲಿ ನಾಲ್ಕು ವರ್ಷದಿಂದ ರೈತರೊಬ್ಬರು ಎಮ್ಮೆ ಸಾಕಾಣಿಕೆ ಮಾಡಿಕೊಂಡು ಬರುತ್ತಿದ್ದಾರೆ. ಮೊದಲು ಅವರು ಒಂದು ಎಮ್ಮೆಯಿಂದ ತಮ್ಮ ಪಶು ಸಾಕಾಣಿಕೆಯನ್ನು ಪ್ರಾರಂಭಿಸಿದರು. ಇದೀಗ ಅವರ ಬಳಿ ಎರಡು ಆಕಳು ಆರು ಎಮ್ಮೆಗಳಿವೆ. ಆರು ಎಮ್ಮೆಗಳು ಮುರ್ರಾ ಜಾತಿಯದ್ದಾಗಿದೆ, ನಾಲ್ಕುವರೆ ಲಕ್ಷ ರೂಪಾಯಿ ಹಣಕೊಟ್ಟು ತಂದಿದ್ದಾರೆ. ಒಂದು ಲಕ್ಷ ರೂಪಾಯಿ ಕೊಟ್ಟು ಎಮ್ಮೆ ತಂದು ಆರು ತಿಂಗಳು ಸಾಕಿ ಮಾರಾಟ ಮಾಡಿದರೆ ಲಾಸ್ ಆಗುತ್ತದೆ. ಮೂರು ಎಮ್ಮೆ ಹಾಲು ಕೊಡುವಾಗ ಇನ್ನು ಮೂರು ಎಮ್ಮೆಗಳು ಹಾಲು ಕೊಡುವುದಿಲ್ಲ ಗಬ್ಬ ಇರುತ್ತದೆ ನಂತರ ಮೂರು ಎಮ್ಮೆ ಹಾಲು ಕೊಡುತ್ತದೆ, ಮೂರು ಎಮ್ಮೆ ಹಾಲು ಕೊಡುವುದಿಲ್ಲ. ಕರಗಳು ಚೆನ್ನಾಗಿ ಹಾಲು ಕುಡಿಯಬೇಕು ಇದರಿಂದ ಆರೋಗ್ಯವಾಗಿರುತ್ತವೆ. ಕರುಗಳನ್ನು ಮಾರಾಟ ಮಾಡುವುದರಿಂದ 50ರಿಂದ 70 ಸಾವಿರ ರೂಪಾಯಿ ಆದಾಯ ಬರುತ್ತದೆ.

ಒಂದು ಎಮ್ಮೆ ದಿನಕ್ಕೆ 10 ಲೀಟರ್ ಹಾಲನ್ನು ಕೊಡುತ್ತದೆ. ಒಂದು ವರ್ಷದಲ್ಲಿ ಮೂರುತಿಂಗಳು 6 ಎಮ್ಮೆಗಳೂ ಹಾಲನ್ನು ಕೊಡುತ್ತವೆ ಆಗ ಹೆಚ್ಚಿನ ಆದಾಯ ಗಳಿಸಬಹುದು. ಎಮ್ಮೆಗಳಿಗೆ ಗೋಧಿ ತೌಡನ್ನು ಬೆಳಗ್ಗೆ 1ಕೆಜಿ ಸಂಜೆ 1ಕೆಜಿ ಹಾಕಬೇಕು, ಅದರ ಜೊತೆಗೆ ಹುಲ್ಲನ್ನು ಹಾಕಬೇಕು, ಒಟ್ಟು 3-4 ಕೆಜಿ ಆಹಾರವನ್ನು ಒಂದು ಎಮ್ಮೆಗೆ ಕೊಡಬೇಕಾಗುತ್ತದೆ. ಆಹಾರದೊಂದಿಗೆ ದಿನಕ್ಕೆ ಎರಡು ಬಾರಿ ನೀರನ್ನು ಕುಡಿಸಬೇಕು. ಎಮ್ಮೆ ಹಾಲು ಉತ್ತಮ ಗುಣಮಟ್ಟ ಹೊಂದಿದ್ದು ಪ್ಯಾಕೆಟ್ ಹಾಲಿಗಿಂತ ಹೆಚ್ಚು ಮಾರಾಟವಾಗುತ್ತದೆ. ಮೂರು ಎಮ್ಮೆಯಿಂದ ಪ್ರತಿದಿನ ಹಾಲನ್ನು ಮಾರಾಟ ಮಾಡಿ 1,500 ರಿಂದ 1,600 ರೂಪಾಯಿ ಆದಾಯವನ್ನು ಪಡೆಯುತ್ತಿದ್ದಾರೆ. ಪ್ರತಿ ತಿಂಗಳು 40 ರಿಂದ 50 ಸಾವಿರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ, ಹತ್ತರಿಂದ ಹದಿನೈದು ಸಾವಿರ ರೂಪಾಯಿ ಖರ್ಚಾಗುತ್ತದೆ. 30 ರಿಂದ 35,000 ರೂಪಾಯಿ ಸರಾಸರಿ ಆದಾಯ ಗಳಿಸಬಹುದು. ಒಂದು ಲೀಟರ್ ಗೆ ಅರವತ್ತು ರೂಪಾಯಿ ಅಂತೆ ಮಾರಾಟ ಮಾಡಲಾಗುತ್ತದೆ. ಎಮ್ಮೆ ಸಾಕಾಣಿಕೆ ಮಾಡಲು ಕಾರ್ಮಿಕರ ಅವಶ್ಯಕತೆ ಇರುವುದಿಲ್ಲ, ಹೆಚ್ಚು ಶ್ರಮ ಪಡಬೇಕಾಗಿಲ್ಲ.

10 ಎಮ್ಮೆಗಳಿದ್ದರೆ ಒಂದು ತಿಂಗಳಿಗೆ ಒಂದು ಲಕ್ಷ ರೂಪಾಯಿ ಆದಾಯ ಗಳಿಸಬಹುದು. ಕೇವಲ ವ್ಯವಸಾಯ ಮಾಡುವ ಬದಲು ಎಮ್ಮೆ ಸಾಕಾಣಿಕೆ, ಕೋಳಿ ಸಾಕಾಣಿಕೆ ಮುಂತಾದ ಉಪ ಕಸುಬುಗಳನ್ನು ಹೊಂದಿರುವುದು ಬಹಳ ಒಳ್ಳೆಯದು. ಅವರು 13 ಲೀಟರ್ ಹಾಲನ್ನು ಮನೆಗಳಿಗೆ, ಉಳಿದ ಹಾಲನ್ನು ಹೋಟೆಲ್ ಗಳಿಗೆ ಕೊಡುತ್ತಾರೆ. ಎಮ್ಮೆಗಳಿಗೆ ಶೆಡ್ ನಿರ್ಮಿಸುವಾಗ ಮೊದಲಿಗೆ ಹೆಚ್ಚು ಖರ್ಚು ಮಾಡಬಾರದು, ಸುತ್ತಲೂ ಕಂಬಗಳಿಂದ ಮೇಲೆ ತಾರ್ಪಲ್ ಹಾಕಿದ್ದಾರೆ ಮತ್ತು ಸುತ್ತಲೂ ಅರ್ಧ ಗೋಡೆ ಕಟ್ಟಿದರೆ ಸಾಕಾಗುತ್ತದೆ, ಸುತ್ತಲೂ ಸೊಳ್ಳೆ ಪರದೆ ಹಾಕಿದ್ದಾರೆ ಇದರಿಂದ ಹಾಲು ಕರೆಯಲು ಕಷ್ಟವಾಗುವುದಿಲ್ಲ. ಕೆಳಗೆ ಸಿಮೆಂಟ್ ಬೆಡ್ ಹಾಕಿದ್ದಾರೆ ಅವರು ಶೆಡ್ ನಿರ್ಮಿಸಲು ಹೆಚ್ಚು ಖರ್ಚು ಮಾಡಿಲ್ಲ. ಹೊಸದಾಗಿ ಎಮ್ಮೆ ಸಾಕಾಣಿಕೆ ಮಾಡುವವರು ಎರಡು ಎಮ್ಮೆಯಿಂದ ಪ್ರಾರಂಭ ಮಾಡಿ ಹಾಗೂ ಎಮ್ಮೆ ಸಾಕಿದ ತಕ್ಷಣ ಮೇವನ್ನು ಸಂಗ್ರಹ ಮಾಡಬೇಕು ಎಂದು ಅವರು ಹೇಳಿದ್ದಾರೆ. ಈ ಎಲ್ಲಾ ಅಂಶಗಳನ್ನು ಅನುಸರಿಸಿ ಎಮ್ಮೆ ಸಾಕಾಣಿಕೆ ಮಾಡಿದರೆ ತಿಂಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಗಳಿಸಬಹುದು. ಉದ್ಯೋಗವಿಲ್ಲದ ಯುವಕರು ಲಾಸ್ ಆಗುವ ಬಿಸಿನೆಸ್ ಪ್ರಾರಂಭಿಸುವ ಬದಲು ಮನೆಯಲ್ಲಿಯೆ ಪಶು ಸಾಕಾಣಿಕೆ ಮಾಡಬಹುದು.

By

Leave a Reply

Your email address will not be published. Required fields are marked *

error: Content is protected !!
Footer code: