ನಾವಿಂದು ತುಮಕೂರಿನ ಸ್ಟಾರ್ಲೆಟ್ ಕಾರ್ಪೊರೇಷನ್ ನಲ್ಲಿ ಸಿಗುವ ವಿಶೇಷ ವಾಷಿಂಗ್ ಮಷೀನ್ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಇದರ ಮಾಲೀಕರು ಮೊಹಮ್ಮದ್ ರಫಿ ಅವರು. ಇವರ ಬಳಿ ನಿಮಗೆ ವಾಷಿಂಗ್ ಮಷೀನ್ ಕೇವಲ ಮೂರು ಸಾವಿರದ ಐದು ನೂರು ರೂಪಾಯಿಗೆ ಸಿಗುತ್ತದೆ. ಉತ್ತಮವಾಗಿ ಬಾಳಿಕೆ ಬರುತ್ತದೆ ಜೊತೆಗೆ ಇದನ್ನು ಇವರೇ ಸ್ವತಹ ತಯಾರಿಸುತ್ತಾರೆ ನೀವು ಅಲ್ಲಿಗೆ ಭೇಟಿ ನೀಡಿ ಅವರು ಹೇಗೆ ಅದನ್ನು ತಯಾರಿಸುತ್ತಾರೆ ಎಂಬುದನ್ನು ಕೂಡಾ ಪ್ರತ್ಯಕ್ಷವಾಗಿ ನೋಡಬಹುದು. ನೀವು ಇವರ ಬಳಿ ಮಾರಾಟ ಮಾಡುವ ಉದ್ದೇಶದಿಂದ ಖರೀದಿ ಮಾಡಿದರೆ ಅವರು ನಿಮಗೆ ಬೇಕಾದ ಬ್ರಾಂಡ್ ಹೆಸರಿನಲ್ಲಿ ಇವುಗಳನ್ನು ತಯಾರಿಸಿಕೊಡುತ್ತಾರೆ.

ಇವರು ಕಳೆದ ಎರಡು ಮೂರು ವರ್ಷಗಳಿಂದ ಈ ವಾಷಿಂಗ್ ಮಷೀನ್ ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಈ ಯಂತ್ರಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಸಿಗುವ ವಾಷಿಂಗ್ ಮಷೀನ್ ಗಳ ಒಳಗೆ ಇರುವ ಡ್ರಮ್ ಅಳತೆಯಲ್ಲಿ ಇರುತ್ತವೆ. ಇವರು ತಯಾರಿಸುವ ವಾಷಿಂಗ್ ಮಷೀನ್ ಗಳಲ್ಲಿ ಫೈಬರ್ ಮಷೀನ್ ಮತ್ತು ಸ್ಟೈನರ್ ಸ್ಟೀಲ್ ಮಷೀನ್ ಗಳು ಸಿಗುತ್ತವೆ.

ನೀವು ಫೈಬರ್ ಮಷೀನ್ ಅನ್ನು ತೆಗೆದುಕೊಂಡರೆ ಅದರಲ್ಲಿ ಆರು ಕೆಜಿ ಮತ್ತು ಎಂಟು ಕೆಜಿ ಬಟ್ಟೆಗಳನ್ನು ತೊಳೆಯುವಂತಹ ವಾಷಿಂಗ್ ಮಷೀನ್ ಸಿಗುತ್ತದೆ. ಸ್ಟೈನರ್ ಸ್ಟೀಲ್ ವಾಷಿಂಗ್ ಮಷೀನ್ ಗಳನ್ನು ತೆಗೆದುಕೊಂಡರೆ ಅದರಲ್ಲಿ ಹತ್ತು ಕೆಜಿವರೆಗೆ ಬಟ್ಟೆಗಳನ್ನು ತೊಳೆಯುವುದಕ್ಕೆ ಹಾಕಬಹುದು. ನೀವು ವಾಷಿಂಗ್ ಮಷೀನ್ ಗಳನ್ನು ಕೊಂಡುಕೊಂಡಾಗ ನಿಮಗೆ ಅದರಲ್ಲಿ ವಾರಂಟಿ ಕಾರ್ಡ್ ಕೂಡ ಸಿಗುತ್ತದೆ. ಈ ವಾಷಿಂಗ್ ಮಷೀನ್ ಗಳಿಗೆ ಟ್ರಾನ್ಸ್ಪೋರ್ಟ್ ಮಾಡುವಾಗ ಯಾವುದೇ ರೀತಿ ತೊಂದರೆ ಆಗದ ರೀತಿಯಲ್ಲಿ ಪ್ಯಾಕ್ ಮಾಡಿರುತ್ತಾರೆ.

ಇದನ್ನ ಬಳಸುವುದಕ್ಕೂ ಕೂಡ ತುಂಬಾ ಸುಲಭವಾಗಿದೆ ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ ಈ ವಾಷಿಂಗ್ ಮಷಿನ್ ಕೂಡ ತುಂಬಾ ಕಡಿಮೆ ತೂಕವನ್ನು ಹೊಂದಿದೆ ಆರಾಮವಾಗಿ ಕೈಯಲ್ಲಿ ಎತ್ತಿ ಎಲ್ಲಿ ಬೇಕಾದರೂ ಇಡಬಹುದು. ಇದರಲ್ಲಿ ಕೇವಲ ಐದು ನಿಮಿಷಗಳಲ್ಲಿ ಬಟ್ಟೆ ತೊಳೆಯುವ ಕೆಲಸ ಮುಗಿಯುತ್ತದೆ. ಇನ್ನು ಹತ್ತು ಕೆಜಿ ವಾಷಿಂಗ್ ಮಷೀನ್ ಅನ್ನು ಸ್ಟೈನರ್ ಸ್ಟೀಲ್ ಇಂದ ಮಾಡಿರಲಾಗುತ್ತದೆ ಇದಕ್ಕೆ ಯಾವುದೇ ರೀತಿಯ ತುಕ್ಕು ಹಿಡಿಯುವುದಿಲ್ಲ. ಈ ವಾಷಿಂಗ್ ಮಷೀನ್ ಗಳಿಗೆ ಸ್ಟ್ಯಾಂಡನ್ನು ಕೂಡ ಅವರೇ ನೀಡಿರುತ್ತಾರೆ. ಇದು ಕಡಿಮೆ ಕರೆಂಟನ್ನು ತೆಗೆದುಕೊಳ್ಳುತ್ತದೆ ಯುಪಿಎಸ್ ನಲ್ಲಿಯೂ ಕೂಡ ಕೆಲಸ ಮಾಡುತ್ತದೆ.

ವಾಷಿಂಗ್ ಮೆಷಿನ್ ಗಳಲ್ಲಿ ಮುವತ್ತೆರಡರಿಂದ ಮೂವತ್ತೈದು ಲೀಟರ್ ನವರೆಗೆ ನೀರು ಹಿಡಿಯುತ್ತದೆ ಈ ಯಂತ್ರಕ್ಕೆ ಬಕೆಟ್ ನಿಂದಲೂ ಕೂಡ ನೀರಿನ್ನ ಹಾಕಿಕೊಳ್ಳಬಹುದು ಪೈಪಿನ ಮೂಲಕವು ಹಾಕಬಹುದು. ನೀವು ನಾಲ್ಕರಿಂದ ಐದು ಜೊತೆ ಬಟ್ಟೆಯನ್ನು ತೊಳೆಯುವಾಗ ಅದಕ್ಕೆ ನೀರಿಗೆ ಐವತ್ತು ಎಂ ಎಲ್ ಲಿಕ್ವಿಡ್ ಅಥವಾ ಸೋಪ್ ಪೌಡರ್ ಹಾಕಬೇಕು.

ಇದನ್ನ ತುಂಬಾ ಸುಲಭವಾಗಿ ಮಿಕ್ಸಿಯ ರೀತಿಯಲ್ಲಿ ಉಪಯೋಗಿಸಬಹುದು ವಯಸ್ಸಾಗಿರುವವರು ಮಹಿಳೆಯರು ಮಕ್ಕಳು ಪುರುಷರು ಯಾರು ಬೇಕಾದರೂ ಬಳಸಬಹುದು. ಈ ವಾಷಿಂಗ್ ಮಷೀನ್ ನಲ್ಲಿ ಡ್ರೈಯರ್ ಇರುವುದಿಲ್ಲ. ಟೈಮರ್ ಅನ್ನು ನೀವು ಹೊಂದಿಸಿಕೊಳ್ಳಬೇಕು ಇಲ್ಲಿ ಬಟ್ಟೆ ಮಾತ್ರವಲ್ಲ ಕಾಲು ಒರಿಸುವ ಮ್ಯಾಟ್ ಗಳನ್ನು ಷೂಗಳನ್ನು ಎಲ್ಲವನ್ನು ಕೂಡ ತೊಳೆಯಬಹುದು. ಕಡಿಮೆ ಕೊಳೆ ಇದ್ದಾಗ ನೀವು ಐದು ನಿಮಿಷ ಟೈಮ್ ಅನ್ನು ಸೆಟ್ ಮಾಡಿಕೊಳ್ಳಬೇಕು ಹೆಚ್ಚು ಕೊಳೆ ಇದ್ದರೆ ಹದಿನೈದು ನಿಮಿಷ ಟೈಮ್ ಸೆಟ್ ಮಾಡಿಕೊಳ್ಳಬೇಕು.

ನೀವು ಮಷಿನ್ ಅನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ಓಡಿಸಿದರು ಸಹ ನೂರಾ ಎಂಬತ್ತರಿಂದ ಎರಡುನೂರು ವ್ಯಾಟ್ ವಿದ್ಯುತ್ ತೆಗೆದುಕೊಳ್ಳುತ್ತದೆ. ನೀವು ಐದು ತಾಸುಗಳ ಕಾಲ ಮಷಿನ್ ಅನ್ನು ಬಳಸಿದರು ಕೇವಲ ಒಂದು ಯೂನಿಟ್ ನಷ್ಟು ವಿದ್ಯುತ್ ಬಳಕೆಯಾಗುತ್ತದೆ. ಈ ವಾಷಿಂಗ್ ಮಷಿನ್ ಗೆ ಯಾವ ಎಲ್ಲಾ ವಸ್ತುಗಳನ್ನು ಬಳಸುತ್ತಾರೆ ಎಂಬುದನ್ನು ನೀವು ಅಲ್ಲಿ ಪ್ರತ್ಯಕ್ಷವಾಗಿ ನೋಡುವುದಕ್ಕೆ ಅವಕಾಶವಿದೆ. ಇವರಲ್ಲಿ ವಾಷಿಂಗ್ ಮಷೀನ್ ಗಳು ಮಾತ್ರವಲ್ಲದೆ ಗೀಸರ್ ಸೇರಿದಂತೆ ಇನ್ನೂ ಅನೇಕ ಉತ್ಪನ್ನಗಳು ಸಿಗುತ್ತವೆ ಯಂತ್ರಗಳು ಹೇಗೆ ತಯಾರಾಗುತ್ತದೆ ಎಂಬುದನ್ನು ಪಾರದರ್ಶಕವಾಗಿ ನೀವು ನೋಡಬಹುದು.

ಇವರು ಬಳಸುವಂತಹ ಎಲ್ಲಾ ವಸ್ತುಗಳು ಕೂಡಾ ಭಾರತದಲ್ಲಿಯೇ ಉತ್ಪಾದನೆಯಾದಂತಹ ವಸ್ತುಗಳು. ಇಲ್ಲಿ ನಿಮಗೆ ವಾಷಿಂಗ್ ಮಷೀನ್ ಗಳು ಉತ್ತಮ ಗುಣಮಟ್ಟದಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ ನೀವು ಕೂಡ ಒಮ್ಮೆ ತುಮಕೂರಿನ ಸ್ಟಾರ್ಲೆಟ್ ಕಾರ್ಪೊರೇಷನ್ ಗೆ ಭೇಟಿ ನೀಡಿ ಅಲ್ಲಿ ಕಡಿಮೆ ಬೆಲೆಗೆ ಸಿಗುವ ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಬಹುದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.

By admin

Leave a Reply

Your email address will not be published. Required fields are marked *

error: Content is protected !!
Footer code: