ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿಯಿರುವ ಹುದ್ದೆಗಳ ಕುರಿತು ಇಲ್ಲಿದೆ ಮಾಹಿತಿ

0

ನಮ್ಮ ದೇಶದಲ್ಲಿ ಪ್ರತಿದಿನ ಲಕ್ಷಾಂತರ ಜನರು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಓದಿಗೆ ಸರಿಯಾದ ಉದ್ಯೋಗ ಸಿಗುವುದಿಲ್ಲ ಒಳ್ಳೆಯ ಉದ್ಯೋಗ ಪಡೆಯುವುದು ಕನಸಿನ ಮಾತಾಗಿದೆ. ಕೇಂದ್ರೀಯ ವಿದ್ಯಾಲಯ ಸಂಘಟನೆಯಿಂದ ನಿರುದ್ಯೋಗಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ, ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ. ಹಾಗಾದರೆ ಹುದ್ದೆಗಳ ಸಂಪೂರ್ಣ ವಿವರ ಈ ಲೇಖನದ ಮೂಲಕ ತಿಳಿಯೋಣ.

ಕೇಂದ್ರೀಯ ವಿದ್ಯಾಲಯ ಸಂಘಟನೆಯಲ್ಲಿ ಕೆವಿಎಸ್ ನಲ್ಲಿ 7,000-10,000 ಹುದ್ದೆಗಳು ಖಾಲಿ ಇದ್ದು ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪಿಜಿಟಿ, ಪಿಆರ್ ಟಿ, ಟಿಜಿಟಿ ಟೀಚರ್ಸ್ ಹುದ್ದೆಗಳು ಖಾಲಿ ಇವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 20,000 ರೂಪಾಯಿಯಿಂದ 50,000 ರೂಪಾಯಿವರೆಗೆ ವೇತನ ಇರುತ್ತದೆ. ಟಿಜಿಟಿ 1,693 ಹುದ್ದೆಗಳು, ಪ್ರೈಮರಿ ಟೀಚರ್ಸ್ 2,048, ಮ್ಯೂಸಿಕ್ ಟೀಚರ್ಸ್ 198, ಕೆವಿಎಸ್ ನಾನ್ ಟೀಚಿಂಗ್ ಸ್ಟಾಫ್ 4,768 ಹುದ್ದೆಗಳು ಖಾಲಿ ಇದ್ದು ಒಟ್ಟು 10,000 ಹುದ್ದೆಗಳು ಖಾಲಿ ಇದೆ. ಟೀಚರ್ಸ್ ಹುದ್ದೆಗೆ ಪಿಜಿ ಹಾಗೂ ಬಿಎಡ್ ಮಾಡಿದವರು ಅಪ್ಲೈ ಮಾಡಬಹುದು.

ಟಿಜಿಟಿ ಹುದ್ದೆಗೆ ಡಿಗ್ರಿ ಜೊತೆಗೆ ಬಿಎಡ್ ಓದಿದವರು ಅಪ್ಲೈ ಮಾಡಬಹುದು. ಪಿಆರ್ ಟಿ ಪ್ರೈಮರಿ ಟೀಚರ್ ಹುದ್ದೆಗೆ ಸೆಕೆಂಡ್ ಪಿಯುಸಿ ಅಥವಾ 4 ವರ್ಷಗಳ ಡಿಪ್ಲೊಮಾ ಅಥವಾ ಜೊತೆಗೆ ಬಿಎಡ್ ಓದಿದವರು ಅಪ್ಲೈ ಮಾಡಬಹುದು. ಲೈಬ್ರರಿಯನ್ ಹುದ್ದೆಗೆ ಲೈಬ್ರರಿ ಸೈನ್ಸ್ ನಲ್ಲಿ ಡಿಗ್ರಿ ಓದಿದವರು ಅಥವಾ ಲೈಬ್ರರಿ ಸೈನ್ಸ್ ನಲ್ಲಿ ಒಂದು ವರ್ಷದ ಡಿಪ್ಲೊಮಾ ಮಾಡಿದವರು ಅಪ್ಲೈ ಮಾಡಬಹುದು. ಪ್ರಿನ್ಸಿಪಾಲ್ ಹುದ್ದೆಗೆ ಪಿಜಿ ಜೊತೆಗೆ ಬಿಎಡ್ ಮತ್ತು ಅನುಭವ ಹೊಂದಿದವರು ಈ ಹುದ್ದೆಗೆ ಅಪ್ಲೈ ಮಾಡಬಹುದು. ವೈಸ್ ಪ್ರಿನ್ಸಿಪಾಲ್ ಹುದ್ದೆಗೆ ಪಿಜಿ ಜೊತೆಗೆ ಬಿಎಡ್ ಹಾಗೂ 5 ವರ್ಷಗಳ ಅನುಭವ ಹೊಂದಿರಬೇಕು. ಟೀಚರ್ ಹುದ್ದೆಗೆ ಅರ್ಜಿ ಸಲ್ಲಿಸುವವರು 40 ವರ್ಷದೊಳಗಿರಬೇಕು, ಟಿಜಿಟಿ ಹುದ್ದೆಗೆ 35 ವರ್ಷದೊಳಗಿರಬೇಕು. ಪಿಆರ್ ಟಿ ಹುದ್ದೆಗೆ 30 ವರ್ಷ, ಲೈಬ್ರರಿಯನ್ ಹುದ್ದೆಗೆ 35 ವರ್ಷ, ಪ್ರಿನ್ಸಿಪಾಲ್ ಹುದ್ದೆಗೆ 35-50 ವರ್ಷ, ವೈಸ್ ಪ್ರಿನ್ಸಿಪಾಲ್ ಹುದ್ದೆಗೆ 35-45 ವರ್ಷದೊಳಗಿರುವವರು ಅಪ್ಲೈ ಮಾಡಬಹುದು.

ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಪಿಜಿಟಿ ಪರೀಕ್ಷೆ ಪಾರ್ಟ್ ಒಂದರಲ್ಲಿ ಜನರಲ್ ಇಂಗ್ಲಿಷ್ ಮತ್ತು ಜನರಲ್ ಹಿಂದಿ 10 ಮಾರ್ಕ್ಸ್ ನ ಪ್ರಶ್ನೆಗಳಿರುತ್ತದೆ. ಪಾರ್ಟ್ ಎರಡರಲ್ಲಿ ಜನರಲ್ ನಾಲೆಜ್, ಕರೆಂಟ್ ಅಫೇರ್ 10 ಮಾರ್ಕ್ಸ್, ರೀಸನಿಂಗ್ ಅಬಿಲಿಟಿ 10 ಮಾರ್ಕ್ಸ್, ಕಂಪ್ಯೂಟರ್ ಲಿಟ್ರಸಿ 10 ಮಾರ್ಕ್ಸ್, ಪಿಡ್ಯೋಜಿ 20 ಮಾರ್ಕ್ಸ್, ಸಬ್ಜೆಕ್ಟ್ 80 ಮಾರ್ಕ್ಸ್ ಒಟ್ಟು 150 ಮಾರ್ಕ್ಸ್ ನ ಪರೀಕ್ಷೆ ಇರುತ್ತದೆ. ಟಿಜಿಟಿ ಹುದ್ದೆಗೆ ಪರೀಕ್ಷೆಯಲ್ಲಿ ಜನರಲ್ ಇಂಗ್ಲಿಷ್ 10 ಮಾರ್ಕ್ಸ್, ಜನರಲ್ ಹಿಂದಿ 10 ಮಾರ್ಕ್ಸ್, ಜನರಲ್ ನಾಲೆಜ್ ಮತ್ತು ಕರೆಂಟ್ ಅಫೇರ್ 40 ಮಾರ್ಕ್ಸ್, ರೀಸನಿಂಗ್ ಅಬಿಲಿಟಿ 40 ಮಾರ್ಕ್ಸ್, ಕಂಪ್ಯೂಟರ್ ಲಿಟ್ರಸಿ 10 ಮಾರ್ಕ್ಸ್, ಪಿಡ್ಯೋಜಿ 40 ಮಾರ್ಕ್ಸ್ ಒಟ್ಟು 150 ಮಾರ್ಕ್ಸ್ ನ ಪರೀಕ್ಷೆ ನಡೆಸಲಾಗುತ್ತದೆ. ಪಿಆರ್ ಟಿ ಹುದ್ದೆಗೆ ನಡೆಸುವ ಪರೀಕ್ಷೆಯಲ್ಲಿ ಜನರಲ್ ಇಂಗ್ಲಿಷ್ 10 ಮಾರ್ಕ್ಸ್, ಜನರಲ್ ಹಿಂದಿ 10 ಮಾರ್ಕ್ಸ್ ಜನರಲ್ ನಾಲೆಜ್ ಮತ್ತು ಕರೆಂಟ್ ಅಫೇರ್ 10 ಮಾರ್ಕ್ಸ್, ರೀಸನಿಂಗ್ ಅಬಿಲಿಟಿ 10 ಮಾರ್ಕ್ಸ್, ಕಂಪ್ಯೂಟರ್ ಲಿಟ್ರಸಿ, 10 ಮಾರ್ಕ್ಸ್, ಪಿಡ್ಯೋಜಿ 10 ಮಾರ್ಕ್ಸ್, ಸಬ್ಜೆಕ್ಟ್ 80 ಮಾರ್ಕ್ಸ್ ಒಟ್ಟು 150 ಮಾರ್ಕ್ಸ್ ನ ಪರೀಕ್ಷೆ ನಡೆಸಲಾಗುತ್ತದೆ.

ಪ್ರಿನ್ಸಿಪಾಲ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 78,800 ರೂಪಾಯಿಯಿಂದ 2,09,200 ರೂಪಾಯಿವರೆಗೆ ವೇತನ ನೀಡಲಾಗುತ್ತದೆ. ವೈಸ್ ಪ್ರಿನ್ಸಿಪಾಲ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 56,000 ರೂಪಾಯಿಯಿಂದ 1,77,500 ರೂಪಾಯಿವರೆಗೆ ವೇತನ ನೀಡಲಾಗುತ್ತದೆ. ಪಿಜಿಟಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 47,600 ರೂಪಾಯಿಯಿಂದ 1,51,100 ರೂಪಾಯಿವರೆಗೆ ವೇತನ ನೀಡಲಾಗುತ್ತದೆ. ಟಿಜಿಟಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 44,900 ರೂಪಾಯಿಯಿಂದ 1,42,400 ರೂಪಾಯಿವರೆಗೆ ವೇತನ ನೀಡಲಾಗುತ್ತದೆ. ಲೈಬ್ರರಿಯನ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 44,900 ರೂಪಾಯಿಯಿಂದ 1,42,400 ರೂಪಾಯಿವರೆಗೆ ವೇತನ ನೀಡಲಾಗುತ್ತದೆ.

ಪ್ರೈಮರಿ ಟೀಚರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 35,400 ರೂಪಾಯಿಯಿಂದ 1,12,400 ರೂಪಾಯಿವರೆಗೆ ವೇತನ ನೀಡಲಾಗುತ್ತದೆ. ಮ್ಯೂಸಿಕ್ ಟೀಚರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ 35,400 ರೂಪಾಯಿಯಿಂದ 1,12,400 ರೂಪಾಯಿವರೆಗೆ ವೇತನ ಕೊಡಲಾಗುತ್ತದೆ. ಈ ಹುದ್ದೆಗಳಿಗೆ ಅಪ್ಲೈ ಮಾಡಲು ದಿನಾಂಕವನ್ನು ಮುಂದಿನ ದಿನಗಳಲ್ಲಿ ನಿಗದಿ ಪಡಿಸಲಾಗುತ್ತದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಹಾಗೂ ಮುಂದಿನ ಮಾಹಿತಿಗಾಗಿ ಕಾದು ಉದ್ಯೋಗ ಪಡೆಯಿರಿ.

Leave A Reply

Your email address will not be published.

error: Content is protected !!
Footer code: