ಕಬ್ಜಾ ಚಿತ್ರ ನಾಯಕ ನಟಿ ಶ್ರೀಯಾ ಶರಣ್ ಮದುವೆ ಆಗಿರೋದು ಭಾರತೀಯನನ್ನಲ್ಲ, ಇವರ ವೈಯಕ್ತಿಕ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು?

ಜೀವನಶೈಲಿ

ಕಳೆದ ಹಲವಾರು ವರ್ಷಗಳಿಂದ ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸಿಕೊಂಡು ಬರುತ್ತಿರುವ ನಟಿಯರಲ್ಲಿ ನಟಿ ಶ್ರೀಯಾ ಶರಣ್ ಕೂಡ ಒಬ್ಬರಾಗಿದ್ದಾರೆ. ಶ್ರೀಯಾ ಶರಣ್ ರವರು ಕೇವಲ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ತಮ್ಮ ಜಲ್ವಾ ತೋರಿಸಿದ್ದಾರೆ. ಇತ್ತೀಚಿಗಷ್ಟೇ ಬಿಡುಗಡೆ ಆಗಿರುವ ಆರ್ ಆರ್ ಆರ್ ಸಿನಿಮಾದಲ್ಲಿ ಕೂಡ ಅಜಯ್ ದೇವಗನ್ ಅವರ ಪತ್ನಿಯ ಪಾತ್ರದಲ್ಲಿ ನಟಿಸುವ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಸದ್ಯಕ್ಕೆ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಶ್ರೀಯಾ ಶರಣ್ ತಮ್ಮ ಪಾತ್ರಕ್ಕಾಗಿ ಟೀಸರ್ ನಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಅವರ ಕುರಿತಂತೆ ನಿಮಗೆ ಕೆಲವೊಂದು ಗೊತ್ತಿರದ ವಿಚಾರಗಳನ್ನು ಇಂದು ನಾವು ಹೇಳಲು ಹೊರಟಿದ್ದೇವೆ.

20 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಶ್ರೀಯ ಶರಣ್ ರವರಿಗೆ ಈಗ 40 ವರ್ಷ ವಯಸ್ಸು. ಈಗಾಗಲೇ ಅಪ್ಪು ನಟನೆಯ ಅರಸು ಸಿನಿಮಾದಲ್ಲಿ ಕೂಡ ಈ ಹಿಂದೆ ಇವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಲವಾರು ವರ್ಷಗಳಿಂದ ಇವರು ರಷ್ಯಾದ ಆಂಡ್ರೇ ಕೊಸ್ಟೇವಾ ರವರನ್ನು ಡೇಟಿಂಗ್ ಮಾಡುತ್ತಿದ್ದರು ಕೊನೆಗೂ ಇವರು 2018ರಲ್ಲಿ ಅವರನ್ನು ಮದುವೆಯಾಗುತ್ತಾರೆ.

ಕಳೆದ ವರ್ಷ ಜನವರಿಯಲ್ಲಿ ಈ ದಂಪತಿಗಳಿಗೆ ಒಂದು ಹೆಣ್ಣು ಮಗು ಜನಿಸಿದೆ. ಸದ್ಯಕ್ಕೆ ಕಬ್ಜಾ ಸಿನಿಮಾದಲ್ಲಿ ಮಧುಮತಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಶ್ರೀಯಾ ಶರಣ್ ಸಿನಿಮಾ ಬಿಡುಗಡೆಯ ನಂತರ ತಮ್ಮ ಪಾತ್ರದ ಮೂಲಕ ಹೇಗೆ ಜನರ ಮನಸ್ಸಿನಲ್ಲಿ ಮೋಡಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *