WhatsApp Group Join Now
Telegram Group Join Now

ಬೇವು-ಬೆಲ್ಲವೆಂಬುದು ಕೆಲವ ಸಿಹಿಕಹಿಯ ರುಚಿಯಲ್ಲ, ಬದಲಾಗಿ ಬದುಕಿನ ಸುಖದುಃಖಗಳ ಸಾಂಕೇತಿಕ ಅರ್ಥವಾಗಿ ಈ ಯುಗಾದಿಯಂದು ಪ್ರತಿ ಮನೆಯಲ್ಲಿಯು ಹಂಚುಲ್ಪಡುತ್ತದೆ. ಬೇವು ತಿಂದು ಬೆಲ್ಲದಂತೆ ಬದುಕು ಎನ್ನುವುದೇ ಈ ಹಬ್ಬದ ವಿಶೇಷ ವಾಕ್ಯವಾಗಿದೆ. ಯುಗಾದಿಯ ನಂತರ ಸಂವತ್ಸರದ ಬದಲಾವಣೆಯಿಂದಾಗಿ ರಾಶಿ ಭವಿಷ್ಯದಲ್ಲಿಯೂ ಬದಲಾವಣೆಗಳನ್ನು ಕಾಣುತ್ತೇವೆ.

ಅಂತೆಯೆ ಈ ಶೋಭಾಕೃತ ಸಂವತ್ಸರದಲ್ಲಿ ಕನ್ಯಾರಾಶಿಯವರ ವರ್ಷ ಭವಿಷ್ಯ ಹೇಗಿದೆ ಎನ್ನುವುದನ್ನು ತಿಳಿಯೋಣ ಬನ್ನಿ. ಮಾರ್ಚ್22 ರಿಂದ ಆರಂಭವಾಗುವ ಹೊಸ ಸಂವತ್ಸರದಲ್ಲಿ, ಕನ್ಯಾರಾಶಿಯವರ ಗ್ರಹಸ್ಥಿತಿಯು ಅಷ್ಟೊಂದು ಉತ್ತಮವಾಗಿರುವುದಿಲ್ಲ. ರಾಹು ಅಷ್ಟಮದಲ್ಲಿ ಇದ್ದು, ಶನಿಯು ಆರನೇಯ ಮನೆಯಲ್ಲಿ ಸ್ಥಿರವಾಗಿದ್ದಾನೆ. ಶನಿಯು ಶತೃಸ್ಥಾನದಲ್ಲಿ ಇದ್ದರು ಸಹ, ಕನ್ಯಾರಾಶಿಯವರಿಗೆ ಒಳ್ಳೆಯ ಸಮಯವನ್ನು ನೀಡುವುದರಲ್ಲಿ ಸಂಶಯವಿಲ್ಲ.

ಎರಡನೇ ಮನೆಯಲ್ಲಿ ಕೇತುಗ್ರಹ ಇರುವುದರಿಂದ ಸ್ವಲ್ಪ ಮಟ್ಟಿಗೆ ಸಾಲಬಾಧೆ ನಿಮ್ಮನ್ನು ಆವರಿಸಲಿದೆ. ಏಪ್ರಿಲ್22 ರ ನಂತರ ಗುರುವು ಅಷ್ಟಮ ಸ್ಥಾನಕ್ಕೆ ಬರುತ್ತಾನೆ. ಅಂದಿನಿಂದ ನೀವು ಕೆಲ ಕಾಲ ಕಷ್ಟದ ದಿನಗಳನ್ನು ಕಾಣಲಿದ್ದಿರಿ. ನಿಶ್ಚಯಿಸಿದ ಮದುವೆ ಕಾರ್ಯಗಳು ನಿಂತು ಹೋಗಿ ಅವಮಾನ ಅನುಭವಿಸುವ ಸಾಧ್ಯತೆಗಳು ನಿಚ್ಚಳವಾಗಿ ಕಾಣುತ್ತಿವೆ. ಹೊಸ ಹೊಸ ಕೆಲಸಗಳಲ್ಲಿ ತೊಡಗಿಕೊಳ್ಳುವ ಯೋಚನೆಯಿಂದಾಗಿ ಕೈಯ್ಯಲ್ಲಿರುವ ಹಣವೆಲ್ಲ ಖಾಲಿ ಮಾಡಿಕೊಳ್ಳುತ್ತಿರಿ, ಹಾಗಾಗಿ ಸದ್ಯ ಯಾವುದೇ ಹೊಸ ಯೋಜನೆಯಲ್ಲಿ ತೊಡಗಬೇಡಿ.

ಶನಿಯು ಆರನೇ ಮನೆಯಲ್ಲಿ ಉಚ್ಛ ಸ್ಥಾನದಲ್ಲಿ ಇರುವುದರಿಂದ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಈ ವರ್ಷದಲ್ಲಿ ವಾಸಿಯಾಗುತ್ತವೆ‌. ಆದರೆ ಇದಕ್ಕಾಗಿ ನೀವು ಬಹಳ ಹಣವನ್ನು ವ್ಯಯಿಸಬೇಕಾಗಿ ಬರುವುದರಿಂದ, ಬೇರೆ ಚಿಂತೆಗಳಿಂದ ಹೊಸ ಖಾಯಿಲೆಗೆ ತುತ್ತಾಗುವ ಸಂಭವವಿದ್ದು ಆದಷ್ಟು ಆರೋಗ್ಯ ರಕ್ಷಣೆ ಮಾಡಿಕೊಳ್ಳಿ. ಮಾನಸಿಕ ಚಿಂತೆಗಳಿಗೆ ಅವಕಾಶ ನೀಡಬೇಡಿ. ಈ ಸಮಯ ಕಳೆದು ಹೋಗುತ್ತದೆ ಚಿಂತೆ ಬೇಡ.

ಕನ್ಯಾರಾಶಿಯಲ್ಲಿರುವ ವಿದ್ಯಾರ್ಥಿಗಳಿಗೆ ಏಪ್ರಿಲ್‌ ತನಕ ಒಳ್ಳೆಯ ಸಮಯವಿದೆ. ಇಲ್ಲಿಯವರೆಗೆ ನೀವು ಚೆನ್ನಾಗಿ ಓದಿರುವುದರಿಂದ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುತ್ತಿರಿ. ಆದರೆ ಏಪ್ರಿಲ್ ನಂತರ ನಡೆಯುವ ಪರೀಕ್ಷೆಗಳಿಗೆ ಹೆಚ್ಚಿನ ವಿದ್ಯಾಭ್ಯಾಸದ ಅಗತ್ಯವಿದ್ದು, ಓದಿನಲ್ಲಿ ಏಕಾಗ್ರತೆ ಹೆಚ್ಚಾಗಿ ಬೇಕಾಗಿದೆ. ಸ್ನಾತಕೋತ್ತರ ಪದವಿಯನ್ನು ಪಡೆಯುವ ನಿಟ್ಟಿನಲ್ಲಿ ಬಹಳ ಶ್ರಮ ಪಡಬೇಕಾಗಿ ಬರುತ್ತದೆ.

ಶನಿ ಪಂಚಮದಲ್ಲಿ ಇರುವುದರಿಂದ ಶತೃನಾಶದ ಯೋಗವಿದೆ. ನಿಮಗೆ ಯಾರಿಂದ ಎಂತಹುದೆ ಅವಮಾನಗಳಾದರೂ ಸಹ, ಶನಿ ಉಚ್ಛ ಸ್ಥಾನದಲ್ಲಿ ಇರುವುದರಿಂದ ಆದಷ್ಟು ಬೇಗ ಸಮಸ್ಯೆಗಳ ಪರಿಹಾರವಾಗುತ್ತದೆ. ಶನಿಯ ಬಲದಿಂದ ಕೆಲವೊಂದು ಕೆಲಸಗಳು ಕೈಗೂಡಲಿವೆ. ಗುರುವಿನ ಆರಾಧನೆ ಬಹು ಮುಖ್ಯವಾಗಿ ಕನ್ಯಾರಾಶಿಯವರಿಗೆ ಬೇಕಾಗಿದೆ. ಪ್ರತಿದಿನ ಬೆಳಗ್ಗೆ ಸ್ನಾನದ ನಂತರ ಮುಖಕ್ಕೆ ಕುಂಕುಮವನ್ನು ಇಟ್ಟುಕೊಂಡು ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಂಡು ಓಂನಮಃ ಶಿವಾಯ ಎನ್ನುವ ಶಿವನ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ. ಸಾಧ್ಯವಾದಲ್ಲಿ ಸಾವಿರದೆಂಟು ಮಾಡಿದರೆ ಉತ್ತಮ ಫಲವಿದೆ.

ಶಿವನ ಆರಾಧನೆಯಿಂದ ನಿಮಗೆ ಮಾನಸಿಕ ನೆಮ್ಮದಿ ಲಭ್ಯವಾಗಲಿದ್ದು, ಗುರುವಿನಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಬರುತ್ತದೆ. ಕಡಲೆಕಾಳನ್ನು ಆಗಾಗೆ ದಾನ ಮಾಡುತ್ತಿರಿ. ತಿಳಿ ಹಳದಿ ಬಣ್ಣದ ಬಟ್ಟೆಗಳನ್ನು ಹೆಚ್ಚಾಗಿ ಉಪಯೋಗಿಸುವುದು ಒಳಿತು. ಸಾಧ್ಯವಾದರೆ ಒಮ್ಮೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿ, ಇದರಿಂದ ಎಲ್ಲ ತೊಂದರೆಗಳು ನಿವಾರಣೆಯಾಗಿ ಶುಭವಾಗುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: