ವೃಷಭ ರಾಶಿಯವರ ಯುಗಾದಿ ಭವಿಷ್ಯ 2023

0

ಗ್ರಹಗಳು ನಿರಂತರ ಚಲನೆಯನ್ನು ಹೊಂದಿರುತ್ತವೆ. ವರ್ಷದ ಎಲ್ಲ ಋತುವಿನಲ್ಲಿ ಇವುಗಳ ಚಲನೆ ಒಂದೇ ಸಮವಾಗಿರುವುದಿಲ್ಲ. ಅದಕ್ಕಾಗಿ ಕಾಲ ಕಾಲಕ್ಕೆ ಜಾತಕಗಳನ್ನು ನೋಡಿ ಗ್ರಹಫಲಗಳನ್ನು ಅರಿತುಕೊಂಡು ಕೆಲಸಗಳನ್ನು ಪ್ರಾರಂಭಿಸುವ ಪದ್ಧತಿ ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿದೆ. ಹೊಸ ಸಂವತ್ಸರದ ಶುಭಾರಂಭದ ಜೊತೆಯಲ್ಲಿ ಪಂಚಾಗ ಶ್ರವಣವು ಸಹ ಅಷ್ಟೇ ಮಹತ್ವವನ್ನು ಪಡೆದುಕೊಳ್ಳುತ್ತದೆ.

ಹಾಗಿದ್ದರೆ ಮುಂಬರುವ ಶೋಭಾಕೃತ ಸಂವತ್ಸರದಲ್ಲಿ ವೃಷಭ ರಾಶಿಯ ಭವಿಷ್ಯವೇನು? ಅದರ ಸುಖದುಃಖಗಳೇನು? ಸಮಸ್ಯೆಗಳಿಗೆ ಪರಿಹಾರವೇನು? ಎನ್ನುವುದನ್ನು ಅರಿಯೋಣ. ವೃಷಭ ರಾಶಿಯು ಇಲ್ಲಿಯ ತನಕ ಬಹಳವೇ ಲಾಭವನ್ನು ಪಡೆಯುತ್ತಿರುವ ರಾಶಿಯಾಗಿದೆ. ಕೃತಿಕಾ ನಕ್ಷತ್ರದ 2,3 ನೆ ಪಾದಗಳು,, ರೋಹಿಣಿ ನಕ್ಷತ್ರದ 1,2,3,ಮತ್ತು 4ನೇ ಪಾದಗಳು ಹಾಗೂ ಮೃಗಶಿರಾ ನಕ್ಷತ್ರದ1,2 ನೆ ಪಾದಗಳು ವೃಷಭರಾಶಿಯಲ್ಲಿ ಒಳಗೊಂಡಿದೆ.

ಮೇಲ್ಕಂಡ ಎಲ್ಲ ನಕ್ಷತ್ರಗಳನ್ನು ಸೇರಿದಂತೆ ವೃಷಭ ರಾಶಿಯ ಗೋಚಾರ ಫಲಗಳು ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ. ಗುರುವು ಏಕಾದಶ ಮನೆಯಲ್ಲಿ ವರ್ಷದ ಆರಂಭದಿಂದಲೂ ಸ್ಥಿರನಾಗಿದ್ದು, ಶನಿಯು ಕುಂಭರಾಶಿಯಲ್ಲಿ ಇದ್ದಾನೆ. ರಾಹು ಹಾಗೂ ಕೇತುವಿನ ಸ್ಥಾನ ಬದಲಾವಣೆ ಆಗುತ್ತಿರುತ್ತವೆ. ರಾಹು ಗ್ರಹವು ಆಶ್ವಿನಿ ನಕ್ಷತ್ರದಿಂದ ರೇವತಿ ನಕ್ಷತ್ರದ ಕಡೆಗೆ ಅಕ್ಟೋಬರ್ 30, 2023ರ ನಂತರ ಪಯಣಿಸುತ್ತಾನೆ. ಇದರಿಂದಾಗಿ ನಿಮ್ಮ ಜೀವನ ಅಭಿವೃದ್ಧಿಯ ಕಡೆಗೆ ಸಾಗುತ್ತದೆ.

ಇದಕ್ಕೆ ಪೂರಕವಾಗಿ 2023ರ ಯುಗಾದಿಯ ನಂತರ ಕಂದಾಯ ಫಲವು 14 ಆದಾಯ ಹಾಗೂ 11 ವ್ಯಯದಿಂದ ಕೂಡಿದೆ. ನಿಮಗೆ ವರ್ಷವಿಡಿ ಆದಾಯವು ಚೆನ್ನಾಗಿದ್ದು, ಖರ್ಚು ಕಡಿಮೆಯಿರುತ್ತದೆ. ಐದು ಪಟ್ಟು ಆರೋಗ್ಯವಿದ್ದೇ ಎರಡು ಭಾಗ ಅನಾರೋಗ್ಯವಿದೆ. ಹಾಗಾಗಿ ನಿಮಗೆ ಚಿಂತೆಗೆ ಯಾವುದೇ ಕಾರಣವಿಲ್ಲ. ಸುಖದುಃಖಗಳಲ್ಲಿ ಸುಖವೇ ಹೆಚ್ಚಿನ ಪಾಲು ಪಡೆದಿದ್ದು, 6:3 ಹಾಗೆ ಗೋಚರಿಸಿದೆ. ಈ ಯುಗಾದಿಯ ನಂತರ ವಿವಾಹಕ್ಕೆ ಸುಸಮಯವಾಗಿದ್ದು, ಗುರುಬಲು ಚೆನ್ನಾಗಿ ಇರುವುದರಿಂದ ಶುಭಸ್ಯ ಶೀಘ್ರಂ ಎಂಬ ಮಾತಿನಂತೆ ಆದಷ್ಟು ಬೇಗ ವಿವಾಹ ಜೀವನಕ್ಕೆ ಕಾಲಿಡುವುದು ಉತ್ತಮ.

ಈ ಶೋಭಾಕೃತ ಸಂವತ್ಸರದಲ್ಲಿ ಸಂತಾನ ಭಾಗ್ಯದ ಯೋಗವು ಸಹ ಕೂಡಿ ಬಂದಿದ್ದು, ಹಳೆ ಮನೆಯ ಮಾರಾಟ ಮಾಡಿ ಹೊಸ ಗೃಹ ಪ್ರವೇಶ ಮಾಡಲಿದ್ದಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಣ್ಣಪುಟ್ಟ ಬದಲಾವಣೆಗಳು ಕಂಡು ಬಂದರೂ ಸಹ ಹೇಳುವಂತಹ ಸಮಸ್ಯೆಗಳು ಬಾಧಿಸುವುದಿಲ್ಲ. ವಾಹನ ಮಾರಾಟದ ಅಂಗಡಿಯನ್ನು ನಡೆಸುವವರಿಗೆ ಈ ವರ್ಷ ಉತ್ತಮ ಆದಾಯವಿದೆ. ಹೊಸ ಉದ್ಯಮವನ್ನು ಶುರು ಮಾಡಬೇಕು ಎನ್ನುವ ಯೋಜನೆ ಇರುವವರಿಗೆ ಶನಿಯಿಂದ ಹೆಚ್ಚಿನ ಅವಕಾಶಗಳು ಲಭಿಸುತ್ತವೆ.

ದಶಮದಲ್ಲಿ ಶನಿಯ ಸ್ಥಾನ ಇರುವುದರಿಂದ ನಿಮ್ಮಲ್ಲಿ ಹಠದ ಮನೋಭಾವ ಹೆಚ್ಚಾಗುತ್ತದೆ. ಬೇಕೆನಿಸಿದ್ದನ್ನು ಪಡೆಯಲೇಬೇಕು ಎಂದು ಹೊರಡುತ್ತಿರಿ, ಇದು ಒಳ್ಳೆಯದೆ ಆದರೂ ಸಹ ನಿಮ್ಮವರಿಗೆ ಇದರಿಂದ ಬೇಸರವಾಗದಂತೆ ನೋಡಿಕೊಳ್ಳಿ. ಕೃಷಿಕರಿಗೆ, ರೈತಾಪಿ ವರ್ಗದ ಜನರಿಗೆ ಅನುಕೂಲವಾಗುವಂತೆ ಸಾಮಗ್ರಿಗಳನ್ನು ಒದಗಿಸುವವರಿಗೆ ಈ ವರ್ಷ ಬಂಪರ್ ಲಾಭವಿದೆ. ಆರೋಗ್ಯದಲ್ಲಿ ಅಮೂಲಾಗ್ರ ಸುಧಾರಣೆ ಕಂಡು ಬರಲಿದ್ದು, ಕೊಂಚಮಟ್ಟಿಗೆ ನೆಮ್ಮದಿ ಕಾಣುವಿರಿ.

ಈ ವರ್ಷದ ಅಕ್ಟೋಬರ್ ನಂತರ ರಾಹುವು ಏಕಾದಶ ಸ್ಥಾನಕ್ಕೆ ಬರುವುದರಿಂದ ಪ್ರಯಾಣಗಳು ಹೆಚ್ಚಾಗುತ್ತವೆ. ಇದರ ಬಗ್ಗೆ ಮೊದಲೇ ನಿಶ್ಚಯ ಮಾಡಿಲ್ಲದಿದ್ದೆರಡ ಕೊನೆ ಗಳಿಗೆಯಲ್ಲಿ ತೊಂದರೆಗಳು ತಪ್ಪಿದ್ದಲ್ಲ, ಅಲ್ಲದೆ ಆ ಸಮಯದಲ್ಲಿ ಅನಾವಶ್ಯಕ ಖರ್ಚುಗಳು ಬಾಧಿಸಬಹುದು. ಜಾಗ್ರತೆಯಾಗಿರಿ. ನಾಳೆಯ ಬಗ್ಗೆ ಹೆಚ್ಚು ಯೋಚಿಸದೆ ನಿಮ್ಮ ಕರ್ತವ್ಯವನ್ನು ಮಾಡಿ, ಧೈರ್ಯದಿಂದ ಮುನ್ನುಗ್ಗಿದರೆ ನಿಮ್ಮೆಲ್ಲ ಕೆಲಸವು ಸುಲಭವಾಗಿ ನೇರವೇತ್ತದೆ. ಎಲ್ಲ ಕಷ್ಟಗಳಿಗೂ ಪರಿಹಾರವಿದೆ‌. ಅಂತೆಯೇ ವಿಷ್ಣುವಿನ ನಾಮ ಸ್ಮರಣೆ ಹಾಗೂ ವಿಷ್ಟು ಸಹಸ್ರನಾಮದ ಪಠಣೆಯಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ. ಶುಭವಾಗಲಿ

Leave A Reply

Your email address will not be published.

error: Content is protected !!