WhatsApp Group Join Now
Telegram Group Join Now

ಕನ್ನಡ ಚಿತ್ರರಂಗದ ಹಾಸ್ಯನಟ ದೊಡ್ಡಣ್ಣ ಅವರು ಅನೇಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ಹೀಗೆ ಕನ್ನಡ ಚಿತ್ರರಂಗದ ಪ್ರಮುಖ ನಟರ ಸಿನಿಮಾಗಳಲ್ಲಿ ಅವರ ಜೊತೆ ನಟಿಸಿದ್ದಾರೆ. ನಮ್ಮ ಕನ್ನಡ ಚಿತ್ರರಂಗದ ಕ್ರಿಯಾಶೀಲ ಹಾಸ್ಯ ನಟರಾದ ದೊಡ್ಡಣ್ಣ ಅವರ ಕುಟುಂಬ ಜೀವನದ ಬಗ್ಗೆ ಈ ಲೇಖನದಲ್ಲಿ ನೋಡೋಣ.

ದೊಡ್ಡಣ್ಣ ಅವರು ಕನ್ನಡ ಚಿತ್ರರಂಗದ ಹೆಸರಾಂತ ಪೋಷಕ ನಟ ಹಾಗೂ ಹಾಸ್ಯ ನಟ. ಹೆಸರಿಗೆ ತಕ್ಕಂತೆ ದೇಹಾಕಾರವನ್ನು ಹೊಂದಿರುವ ಅವರು ಕನ್ನಡ ಚಿತ್ರರಂಗದ ಬಿಗ್ ಬಾಸ್. ದೊಡ್ಡಣ್ಣ ಅವರು ಖಳನಟನಾಗಿ, ಹಾಸ್ಯ ಪಾತ್ರದಲ್ಲಿ ಜೊತೆಗೆ ಪೋಷಕ ಪಾತ್ರದಲ್ಲೂ ಕೂಡ ನಟಿಸಿದ್ದಾರೆ. ದೊಡ್ಡಣ್ಣ ಅವರು 1949ರಲ್ಲಿ ಹುಟ್ಟಿದರು. ಇವರಿಗೆ ಈಗ ಎಪ್ಪತ್ತು ವರ್ಷ ವಯಸ್ಸಾಗಿದೆ ಆದರೂ ಲವಲವಿಕೆಯಿಂದ ಇರುವ ದೊಡ್ಡಣ್ಣ ಅವರು ಸದಾ ಆಕ್ಟೀವ್ ಆಗಿರುತ್ತಾರೆ. ರಂಗಭೂಮಿಯ ಹಿನ್ನೆಲೆಯಿಂದ ಬಂದಿರುವ ದೊಡ್ಡಣ್ಣ ಅವರು ಸುಮಾರು ಎಂಟುನೂರು ಸಿನಿಮಾಗಳಲ್ಲಿ ಕಾಮಿಡಿಯನ್ ಆಗಿ ನಟಿಸಿ ಜನರನ್ನು ಗೆದ್ದಿದ್ದಾರೆ. ದೊಡ್ಡಣ್ಣ ಅವರು ಸಿನಿಮಾರಂಗಕ್ಕೆ ಬರುವ ಮೊದಲು ಸ್ಟೀಲ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಾ ಥಿಯೇಟರ್ ಆರ್ಟಿಸ್ಟ್ ಆಗಿದ್ದರು.

ದೊಡ್ಡಣ್ಣ ಅವರು ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ದೊಡ್ಡಣ್ಣ ಅವರ ಪತ್ನಿಯ ಹೆಸರು ಶಾಂತಾ. ದೊಡ್ಡಣ್ಣ ಅವರಿಗೆ ಶಾಂತಾ ಅವರನ್ನು ಮದುವೆಮಾಡಿಕೊಳ್ಳಲು ಇಷ್ಟವಿರಲಿಲ್ಲ. ಮದುವೆಯಾಗಿ ಸ್ವಲ್ಪ ಸಮಯದವರೆಗೆ ಶಾಂತಾ ಅವರನ್ನು ನೋಡಿದರೆ ದೊಡ್ಡಣ್ಣ ಅವರು ಕೋಪಿಸಿಕೊಳ್ಳುತ್ತಿದ್ದರು. ಮಕ್ಕಳಾದ ನಂತರ ದೊಡ್ಡಣ್ಣ ಅವರು ತಮ್ಮ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ದೊಡ್ಡಣ್ಣ ಮತ್ತು ಶಾಂತಾ ದಂಪತಿಗೆ ಮೂವರು ಮಕ್ಕಳಿದ್ದಾರೆ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾನೆ. ದೊಡ್ಡಣ್ಣ ಅವರ ಮಗಳ ಹೆಸರು ಉಷಾ ಅವರು ರಾಜಕಾರಣಿಯಾದ ವೀರೇಂದ್ರ ಅವರನ್ನು ಮದುವೆಯಾಗಿದ್ದಾರೆ. ಉಷಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇನ್ನು ದೊಡ್ಡಣ್ಣ ಅವರ ಎರಡನೇ ಮಗಳ ಹೆಸರು ಚೈತ್ರಾ. ದೊಡ್ಡಣ್ಣ ಅವರ ಮಗನ ಹೆಸರು ಸುಗರೇಶ್. ಸುಗರೇಶ್ ಅವರು ಇತ್ತೀಚೆಗೆ ಜ್ಯೋತಿ‌ ಎಂಬುವವರನ್ನು ಮದುವೆಯಾಗಿದ್ದಾರೆ. ಇತ್ತೀಚೆಗೆ ದೊಡ್ಡಣ್ಣ ಅವರ ಮಗಳು ಉಷಾ ಅವರು ಆಸ್ಪತ್ರೆಗೆ ಸೇರಿದ್ದರು ಡಾಕ್ಟರ್ ಅವರ ಬಗ್ಗೆ ದೊಡ್ಡಣ್ಣ ಅವರ ಹತ್ತಿರ ನಿಮ್ಮ ಮಗಳು ಉಳಿಯುವುದಿಲ್ಲ ಎಂದು ಹೇಳಿದರು. ಆಗ ದೊಡ್ಡಣ್ಣ ಅವರು ಚಿಂತಿತರಾಗಿ ದೇವರ ಬಳಿ ನನಗೆ ಇನ್ನೊಂದು ಜನ್ಮ ಬೇಡ ನನ್ನ ಮಗಳನ್ನು ಉಳಿಸಿಕೊಡು ಎಂದು ಕೇಳಿದ್ದಾರೆ. ಈಗ ಉಷಾ ಅವರು ಯಾವುದೇ ಸಮಸ್ಯೆ ಇಲ್ಲದೆ ಆರಾಮಾಗಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ದೊಡ್ಡಣ್ಣ ಅವರು ಸಾಧಕರ ಸೀಟಿನಲ್ಲಿ ಕುಳಿತು ತಮ್ಮ ಜೀವನದ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಕೊರೋನ ವೈರಸ್ ಹಾವಳಿ ಹೆಚ್ಚುತ್ತಿದ್ದಂತೆ ಕೆಲವು ಕಿಡಿಗೇಡಿಗಳು ದೊಡ್ಡಣ್ಣ ಅವರು ಇನ್ನಿಲ್ಲ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿಸಿದ್ದರು ನಂತರ ದೊಡ್ಡಣ್ಣ ಅವರು ನನಗೆ ಏನು ಆಗಿಲ್ಲ, ನಾನು ಆರಾಮಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ದೊಡ್ಡಣ್ಣ ಅವರು ಹೆಚ್ಚು ಕ್ರಿಯಾಶೀಲರಾಗಿದ್ದು, ಇನ್ನೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ ಜನರಿಗೆ ಮನರಂಜನೆ ನೀಡಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: