ಕನ್ನಡದ ನಿರೋಪಕಿ ಅನುಶ್ರೀ ವಯಸ್ಸು ಎಷ್ಟು ಗೊತ್ತೇ?

0

ದೂರದರ್ಶನದಲ್ಲಿ ಝೀ ಕನ್ನಡ ಕನ್ನಡವಾಹಿನಿಯಲ್ಲಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ನಿರೂಪಕಿ ಅನುಶ್ರೀ ಎಲ್ಲರಿಗೂ ಚಿರಪರಿಚಿತ. ಅವರು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಹಾಗೂ ಇತರ ಪ್ರಶಸ್ತಿಗಳು ದೊರಕಿದೆ. ಅನುಶ್ರೀ ಬೆಂಗಳೂರಿನಲ್ಲಿ ಮೂವತ್ತು ಜುಲೈ ೧೯೯೦ ರಲ್ಲಿ ಜನಿಸಿದರು. ಅನುಶ್ರೀ ಅವರ ತಂದೆ ಸಂಪತ್ ಮತ್ತು ತಾಯಿ ಶಶಿಕಲಾ ಹಾಗೂ ಅನುಶ್ರೀ ಅವರ ತಮ್ಮ ಅಭಿಜಿತ್. ಮೂಲತಃ ಮಂಗಳೂರಿನವರಾದ ಅನುಶ್ರೀ ಮನೆಯಲ್ಲಿ ಮಾತನಾಡುವ ಭಾಷೆ ತುಳು ಆಗಿತ್ತು. ಅನುಶ್ರೀ ಅವರು, ಚಿಕ್ಕವಳಿದ್ದಾಗ ಅವರ ತಂದೆ ಅನುಶ್ರೀ ಅವರ ತಾಯಿಯಿಂದ ದೂರ ಇದ್ದರು. ಅವರಿಗೆ ಪದವಿ ಮುಗಿದ ತಕ್ಷಣ ದೂರದರ್ಶನದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು.

ಅನುಶ್ರೀ ಅವರು ತಮ್ಮ ಮೊದಲ ಉದ್ಯೋಗವನ್ನು ಕಾರ್ಯಕ್ರಮ ನಿರೂಪಕಿಯಾಗಿ ಈಗ ಚಾಲ್ತಿಯಲ್ಲಿ ಇರುವ ಕಲರ್ಸ್ ಕನ್ನಡ ಅಂದರೆ ಹಳೆಯ ಈ ಟಿವಿ ಕನ್ನಡ ಕಾರ್ಯಕ್ರಮದ ಡಿಮ್ಯಾಂಡಪೊ ಡಿಮ್ಯಾಂಡು ಎಂಬ ಕಾರ್ಯಕ್ರಮದಲ್ಲಿ ಅವರ ಪ್ರತಿಭೆಯನ್ನು ತೋರಿಸಿದ್ದರು. ಅನುಶ್ರೀ ಅವರು ಬಿಗ್ ಬಾಸ್ ಎಂಬ ರಿಯಾಲಿಟಿ ಶೋನಲ್ಲಿ ಬಾಗವಹಿಸಿ ಅಲ್ಲಿ ಅವರು ೮೦ ದಿನಗಳ ಕಾಲ ಆ ಮನೆಯಲ್ಲಿದ್ದರು. ಇದಲ್ಲದೆ ಅವರು ಬೇರೆ ಕಾರ್ಯಕ್ರಮಗಳಾದ ಕಾಮಿಡಿ ಕಿಲಾಡಿಗಳು, ಕಾಮಿಡಿ ಕಪ್ ಇತ್ಯಾದಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಭಾಗವಹಿಸಿದ್ದರು. ಇಷ್ಟೇ ಅಲ್ಲದೆ ಅನುಶ್ರೀ ಅವರು ಬೆಂಕಿಪಟ್ಟಣ ಎಂಬ ಚಿತ್ರದಲ್ಲಿ ಅಭಿನಯ ಮಾಡಿ ಚಿತ್ರರಂಗಕ್ಕೆ ಪ್ರವೇಶ ಕೂಡಾ ಮಾಡಿದರು. ಅಲ್ಲಿ ಅವರು ಸಾಧನೆಯನ್ನು ಮಾಡಿ ಬೆಸ್ಟ್ ಡಿಬೇಟ್ ಎಂಬ ಪ್ರಶಸ್ತಿಯನ್ನು ಗಳಿಸಿದ್ದಾರೆ. ಹಾಗೂ ‘ಮುರಳಿ ಮೀಟ್ಸ್ ಮೀರಾ’ ಎಂಬ ಚಲನಚಿತ್ರಕ್ಕೆ ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ ದೊರಕಿದೆ.

ಪ್ರಸ್ತುತ ಝೀ ಕನ್ನಡ ವಾಹಿನಿಯ ಖ್ಯಾತ ನಿರೂಪಕಿ ಆಗಿ ಜನಮನ ಗೆದ್ದ ನಿರೂಪಕಿ ಆಗಿ ಕಾರ್ಯ ನಿರ್ವಹಿಸುತ್ತಾ ಇರುವ ಅನುಶ್ರೀ ಅವರು ಮುರಳಿ ಮೀಟ್ಸ್ ಮೀರಾ ಎಂಬ ಕನ್ನಡ ಚಲನ ಚಿತ್ರಕ್ಕೆ ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ ಪಡೆದಿದ್ದಾರೆ. ಪ್ರತೀ ವರ್ಷ ಝೀ ಕನ್ನಡ ಆಯೋಜಿಸುವ ಝೀ ಕುಟುಂಬ ಅವಾರ್ಡ್ ನ ಪ್ರಸಿದ್ಧ ನಿರೂಪಕಿ ಪ್ರಶಸ್ತಿ , ಬೆಂಕಿ ಪಟ್ಣ ಕನ್ನಡ ಚಲನ ಚಿತ್ರದಲ್ಲಿ ಉತಮ ನಾಯಕಿ ಪ್ರಶಸ್ತಿ ಹಾಗೂ ಕೆಂಪೇಗೌಡ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. ಇನ್ನು ಅನುಶ್ರೀ ಅವರು ನಿರೂಪಣೆ ಮಾಡಿದ ಕಾರ್ಯಕ್ರಮಗಳು ಈ ರೀತಿಯಾಗಿವೆ. ಟೆಲಿ ಅಂತಾಕ್ಷರಿ , ಡಿಮ್ಯಾಂಡಫ್ಫೊ ಡಿಮ್ಯಾಂಡು, ಸ್ಟಾರ್ ಲೈವ್ , ನಮಸ್ತೇ ಕಸ್ತೂರಿ , ಬಿಗ್ ಬಾಸ್ ಸ್ಪರ್ಧೆ ಆಗಿ ಭಾಗವಹಿಸಿದ್ದರು.
ಸರಿಗಮಪ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ರಿಯಾಲಿಟಿ ಶೋಗಳಲ್ಲಿ ಹಲವಾರು ಸೀಸನ್ ನಿಂದ ನಿರೂಪಕಿಯಾಗಿ ತಮ್ಮನ್ನು ಝೀ ಕನ್ನಡದಲ್ಲಿ ತೊಡಗಿಸಿಕೊಂಡಿರುವ ಅನುಶ್ರೀ ಅವರು ಅತ್ಯುತ್ತಮ ನಿರೂಪಕಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಅನುಶ್ರೀ ಅವರಿಗೆ ಈಗ ಮೂವತ್ತಮೂರು ವರ್ಷ ವಯಸ್ಸು. ಹಾಗಿದ್ದರೂ ಸಹ ಅವರಿನ್ನೂ ಮದುವೆ ಆಗಿಲ್ಲ. ಅನುಶ್ರೀ ಅವರು ಮೊದಲಿನಿಂದಲೂ ಸುದ್ದಿಯಲ್ಲಿ ಇರುವುದು ಅವರ ಮದುವೆ ವಿಚಾರದ ಸಲುವಾಗಿಯೇ. ಇನ್ನೊಮ್ಮೆ ಕೂಡಾ ಅನುಶ್ರೀ ತಮ್ಮ ಮದುವೆ ವಿಚಾರದ ಸಲುವಾಗಿ ಮತ್ತೆ ಸುದ್ದಿಯಾಗಿದ್ದಾರೆ. ಯುಗಾದಿ ಹಬ್ಬದ ಸುಸಂದರ್ಭದಲ್ಲಿ ಅನುಶ್ರೀ ಅವರು ಒಂದು ಶುಭ ಸಮಾಚಾರವನ್ನು ನೀಡಿದ್ದಾರೆ. ಅವರ ಮದುವೆಗೆ ಸಂಬಂಧಿಸಿದಂತೆ ಯುಗಾದಿ ಹಬ್ಬದ ದಿನ ಅನುಶ್ರೀ ಅವರನ್ನು ನೋಡಲು ಗಂಡಿನ ಕಡೆಯವರು ಬಂದಿದ್ದರಂತೆ. ಇವರನ್ನು ಮದುವೆ ಆಗುವ ಹುಡುಗ ಸಿನಿಮಾ ಕ್ಷೇತ್ರಕ್ಕೆ ಸಂಬಂಧ ಪಟ್ಟಿಲ್ಲ ಎಂದು ತಿಳಿದು ಬಂದಿದೆ. ಜರತಾರಿ ಸೀರೆಯನ್ನು ಉಟ್ಟ ನಗುಮುಖದ ಸುಂದರಿಯನ್ನು ನೋಡಲು ಬಂದ ಹುಡುಗ ರಿಯಲ್ ಎಸ್ಟೇಟ್ ಉದ್ಯಮ ಹೊಂದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅನುಶ್ರೀ ಅವರು ಯುಗಾದಿ ಹಬ್ಬದ ದಿನ ಈ ವಿಚಾರದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!
Footer code: