ಕಡಿಮೆ ಬಂಡವಾಳ ಹೆಚ್ಚು ಲಾಭ ನೀಡುವ ಈ ಬಿಸಿನೆಸ್ ನೀವು ಕೂಡ ಮಾಡಬಹುದು

0

ನಾವಿಂದು ನಿಮಗೆ ಉತ್ತಮವಾದ ಲಾಭದಾಯಕವಾದ ಉದ್ಯೋಗ ಮಾಹಿತಿಯ ಬಗ್ಗೆ ತಿಳಿಸಿಕೊಡುತ್ತೇವೆ ಅಂತಹ ಉತ್ತಮ ಲಾಭವಿರುವ ಉದ್ಯಮ ಯಾವುದು ಆ ಉದ್ಯಮವನ್ನು ಮಾಡುವುದಕ್ಕೆ ಎನೆಲ್ಲ ಬೇಕು ಅದಕ್ಕೆ ಬಂಡವಾಳ ಎಷ್ಟು ಬೇಕಾಗುತ್ತದೆ ಅದಕ್ಕೆ ಮಾರುಕಟ್ಟೆಯನ್ನು ಹೇಗೆ ಒದಗಿಸುವುದು ಅದರಿಂದ ಎಷ್ಟು ಲಾಭ ದೊರೆಯುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ. ನಾವು ಇಂದು ನಿಮಗೆ ತಿಳಿಸುತ್ತಿರುವುದು ಹೆಡ್ ರೆಸ್ಟ್ ಅಥವಾ ನೆಕ್ ರೆಸ್ಟ್ ಮಾರಾಟ ಮಾಡುವ ಉದ್ಯಮ.

ನೀವು ಕಾರಿನಲ್ಲಿ ಕುಳಿತುಕೊಳ್ಳುವಾಗ ಹೆಡ್ ರೆಸ್ಟ್ ನ್ನ ತಲೆಯ ಹತ್ತಿರ ಇಟ್ಟುಕೊಳ್ಳಬಹುದು ಇದನ್ನು ಬಳಸುವುದರಿಂದ ಕುತ್ತಿಗೆ ನೋವು ಬರುವುದಿಲ್ಲ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಕಾರಿನಲ್ಲಿ ತುಂಬಾ ದೂರ ಪ್ರಯಾಣಿಸುವವರಿಗೆ ನೋವು ಕಾಣಿಸಿಕೊಳ್ಳುವುದು ಸಹಜ ಹಾಗಾಗಿ ಕಾರಿನಲ್ಲಿ ಪ್ರಯಾಣಿಸುವವರು ಹೆಡ್ ರೆಸ್ಟ್ ಅಥವಾ ನೆಕ್ ರೆಸ್ಟ್ ನ್ನು ಬಳಸುವುದು ತುಂಬಾ ಸೂಕ್ತ.

ಇವುಗಳನ್ನು ಮಾರುಕಟ್ಟೆಯಲ್ಲಿ ಮಾಮೂಲಿಯಾಗಿ ಎರಡು ನೂರಾ ಐವತ್ತು ರೂಪಾಯಿಯಿಂದ ಮುನ್ನೂರು ರೂಪಾಯಿಗೆ ಮಾರಾಟ ಮಾಡುತ್ತಿರುತ್ತಾರೆ. ಇನ್ನೂ ಹೆಚ್ಚಿನ ಬೆಲೆಗೆ ಪಿಲ್ಲೋಗಳು ಸಹ ದೊರಕುತ್ತವೆ ನೀವು ಸಾಮಾನ್ಯವಾಗಿ ಹೆಚ್ಚು ವ್ಯಾಪಾರ ವಾಗುವಂತಹ ಪಿಲ್ಲೋಗಳನ್ನು ತೆಗೆದುಕೊಂಡು ಉದ್ಯಮವನ್ನು ಪ್ರಾರಂಭಿಸಿದರೆ ಇದರಿಂದ ಉತ್ತಮ ಲಾಭವನ್ನು ಗಳಿಸಬಹುದು.

ನೀವು ಹೆಡ್ ರೆಸ್ಟ್ ಅಥವಾ ನೆಕ್ ರೆಸ್ಟ್ ನ್ನು ದೊಡ್ಡ ಮಟ್ಟದಲ್ಲಿ ಖರೀದಿ ಮಾಡಿದಾಗ ನಿಮಗೆ ಜೋಡಿಗೆ ಒಂದು ಜೋಡಿಗೆ ಎಂಬತೈದು ರೂಪಾಯಿಯಂತೆ ದೊರೆಯುತ್ತದೆ ನೀವು ಅದನ್ನು ನಿಮಗೆ ಬೇಕಾದ ಬೆಲೆಗೆ ಮಾರಾಟ ಮಾಡಬಹುದು. ಉದಾಹರಣೆಗೆ ನೀವು ಹೆಡ್ ರೆಸ್ಟ್ ನ್ನು ಎರಡು ನೂರು ರೂಪಾಯಿಗೆ ಮಾರಾಟ ಮಾಡುತ್ತಿದ್ದೀರಿ ಎಂದರೆ ಒಂದು ಜೋಡಿ ಹೆಡ್ ರೆಸ್ಟ್ ಗೆ ಸಾರಿಗೆ ವೆಚ್ಚ ಐದು ರೂಪಾಯಿ ತೆಗೆದರೆ ನೀವು ತೊಂಬತ್ತು ರೂಪಾಯಿ ಬಂಡವಾಳ ಹೂಡಿದ ಹಾಗಾಗುತ್ತದೆ. ಅದನ್ನು ಎರಡು ನೂರು ರೂಪಾಯಿಗೆ ಮಾರಾಟ ಮಾಡಿದರೆ ನಿಮಗೆ ನೂರಾ ಹತ್ತು ರೂಪಾಯಿ ಲಾಭ ದೊರೆಯುತ್ತದೆ. ಇನ್ನು ಇದಕ್ಕೆ ನೀವು ಮಾರುಕಟ್ಟೆಯನ್ನು ಯಾವ ರೀತಿಯಾಗಿ ಒದಗಿಸಬಹುದು ಎನ್ನುವುದನ್ನು ತಿಳಿದುಕೊಳ್ಳೋಣ.

ಇದನ್ನ ಮಾರ್ಕೆಟಿಂಗ್ ಮಾಡುವುದಕ್ಕೋಸ್ಕರ ನೀವು ಎಲ್ಲೆಂದರಲ್ಲಿ ತಿರುಗಾಡುವ ಸಮಸ್ಯೆ ಇಲ್ಲ ಬದಲಾಗಿ ನೀವು ಕಾರುಗಳು ಹೆಚ್ಚಾಗಿ ಚಲಿಸುವಂತಹ ಸ್ಥಳಗಳಲ್ಲಿ ಪೆಟ್ರೋಲ್ ಬಂಕುಗಳ ಪಕ್ಕದಲ್ಲಿ ಇವುಗಳನ್ನು ಮಾರಾಟ ಮಾಡಬಹುದು. ಕಾರುಗಳನ್ನು ಬಳಸುವವರ ಬಳಿ ಹಣ ಇದ್ದೇ ಇರುತ್ತದೆ ಜೊತೆಗೆ ಅವರಿಗೆ ಕಾರಿನಲ್ಲಿ ಹೆಡ್ ರೆಸ್ಟ್ ಅಥವಾ ನೆಕ್ ರೆಸ್ಟ್ ಅವಶ್ಯಕತೆ ಇದ್ದೇ ಇರುತ್ತದೆ. ಹಾಗಾಗಿ ಇವುಗಳನ್ನು ಯಾರು ಬೇಡ ಎನ್ನುವುದಿಲ್ಲ.

ನೀವು ಒಂದು ದಿನಕ್ಕೆ ನಲವತ್ತು ಪಿಲ್ಲೋಗಳನ್ನು ಮಾರಾಟ ಮಾಡುತ್ತೇನೆ ಎಂದು ಟಾರ್ಗೆಟ್ ಇಟ್ಟುಕೊಳ್ಳಬೇಕು. ಒಂದರ ಮೇಲೆ ನೂರಾ ಹತ್ತು ರೂಪಾಯಿ ಲಾಭ ದೊರೆತರೆ ಹತ್ತು ಜೋಡಿ ಮೇಲೆ ಸಾವಿರದ ನೂರು ರೂಪಾಯಿ ಸಿಗುತ್ತದೆ ಅದೇ ನಲವತ್ತು ಜೋಡಿ ಪಿಲ್ಲೋಗಳ ಮೇಲೆ ನಾಲ್ಕು ಸಾವಿರದ ನಾಲ್ಕುನೂರು ರೂಪಾಯಿ ಲಾಭ ಸಿಗುತ್ತದೆ ಅದರಲ್ಲಿ ನಾಲ್ಕು ನೂರು ರೂಪಾಯಿಯನ್ನು ಬಿಟ್ಟರು ತಿಂಗಳಿಗೆ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಆದಾಯ ಸಿಗುತ್ತದೆ.

ನಿಮ್ಮಿಂದ ನೇರವಾಗಿ ಮಾರಾಟ ಮಾಡುವುದಕ್ಕೆ ಸಾಧ್ಯವಾಗಲಿಲ್ಲ ಎಂದರೆ ಮಾರಾಟ ಮಾಡುವವರನ್ನು ಇಟ್ಟುಕೊಳ್ಳಬಹುದು ಅವರಿಗೆ ತಿಂಗಳಿಗೆ ಹತ್ತರಿಂದ ಹನ್ನೆರಡು ಸಾವಿರ ರೂಪಾಯಿ ಸಂಬಳವನ್ನು ನೀಡಿ ಕೆಲಸವನ್ನು ಮಾಡಿಸಿಕೊಳ್ಳಬಹುದು. ಇದು ತುಂಬಾ ಶ್ರಮವಹಿಸಿ ಮಾಡಬೇಕಾದ ಕೆಲಸವೇನೂ ಅಲ್ಲ ನೀವು ಆರಾಮವಾಗಿ ಕೆಲಸವನ್ನು ಮಾಡಬಹುದು ಜೊತೆಗೆ ಪಿಲ್ಲೋಗಳನ್ನು ಮನೆಯಲ್ಲಿಯೂ ಕೂಡ ತಯಾರಿಸಬಹುದು

ಹಾಗೆ ತಯಾರಿಸಿ ಮಾರಾಟ ಮಾಡುವುದರಿಂದ ಕೂಡ ಲಾಭವನ್ನು ಗಳಿಸಬಹುದು. ನಿಮಗೂ ಕೂಡ ಸ್ವಂತ ಉದ್ಯೋಗವನ್ನು ಮಾಡುವ ಆಸೆ ಇದ್ದರೆ ನೀವು ಈ ಉದ್ಯೋಗವನ್ನು ಕೂಡ ಮಾಡಬಹುದು ಇದರಿಂದ ಕೂಡ ಉತ್ತಮ ಲಾಭ ನಿಮ್ಮದಾಗುತ್ತದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.

Leave A Reply

Your email address will not be published.

error: Content is protected !!