WhatsApp Group Join Now
Telegram Group Join Now

ಕಂಠೀರವ ಸ್ಟುಡಿಯೋ ಎಂದಾಕ್ಷಣ ನಮಗೆ ಅಭಿಮಾನಿಗಳ ಆರಾಧ್ಯ ದೈವ ಡಾಕ್ಟರ್ ರಾಜಕುಮಾರ್ ಅವರ ಸಮಾಧಿ ನೆನಪಾಗುತ್ತದೆ ಅದನ್ನ ಎಷ್ಟೋ ಜನ ದೇವಾಲಯ ಎಂದು ಭಾವಿಸುವವರೂ ಇದ್ದಾರೆ ಪ್ರತಿನಿತ್ಯ ಬಹುತೇಕ ಮಂದಿ ಇಲ್ಲಿಗೆ ಭೇಟಿ ನೀಡಿ ಅಣ್ಣಾವ್ರನ್ನ ಸ್ಮರಿಸುತ್ತಾರೆ ಅಲ್ಲದೆ ಇದೀಗ ದೊಡ್ಡ ಮನೆಯ ಮತ್ತೊಂದು ಕುಡಿ ಪುನೀತ್ ರಾಜ್ ಕುಮಾರ ಅವರನ್ನು ಅಲ್ಲೇ ಅಂತ್ಯ ಸಂಸ್ಕಾರ ಮಾಡಿರುವುದರಿಂದ ಅಲ್ಲಿಗೆ ಭೇಟಿ ನೀಡುವ ಅಭಿಮಾನಿಗಳ ಸಂಖ್ಯೆ ಇನ್ನೂ ಹೆಚ್ಚಾಗಿದೆ

ಆದರೆ ಇದೀಗ ಇನ್ನೊಂದು ಮಾತು ಕೇಳಿಬರುತ್ತಿದೆ ಅದೇನೆಂದರೆ ಈ ಕಂಠೀರವ ಸ್ಟುಡಿಯೋ ಏನು ರಾಜ್ ಕುಮಾರ್ ಕುಟುಂಬದವರ ಸ್ವತ್ತಾ? ಕನ್ನಡದ ಚಿತ್ರರಂಗದ ಚಟುವಟಿಕೆಗಳು ನಡೆಯುವಂತಹ ಈ ಸ್ಟುಡಿಯೋವನ್ನು ಯಾಕೆ ರುಧ್ರಭೂಮಿಯನ್ನಾಗಿ ಮಾಡಿದ್ದೀರಿ ಎಂಬುದು. ಈ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವನ್ನು ನಾವು ಇಲ್ಲಿ ಮಾಡಿದ್ದೇವೆ

ಅದಕ್ಕಿಂತ ಮೊದಲು ನಾವು ಒಮ್ಮೆ ಇತಿಹಾಸವನ್ನು ನೋಡುವುದಾದರೆ ಈ ಕಂಠೀರವ ಸ್ಟುಡಿಯೋ ಪ್ರಾರಂಭವಾಗಿದ್ದು 1966 ರಲ್ಲಿ ಮತ್ತು ಶೇಕಡಾ 93 ರಷ್ಟು ಸರ್ಕಾರದ ಪಾಲಿದ್ದಾರೆ ಇನ್ನ ಬಾಕಿ 7 ಶೇಕಡಾ ಪಾಲು ಖಾಸಗಿಯದ್ದಿದೆ. ಆದರೆ ಈ ಸ್ಟುಡಿಯೋ ದಲ್ಲಿ ಅತೀ ಹೆಚ್ಚಿನ ಚಟುವಟಿಕೆಗಳೇನೂ ನಡೆಯುತ್ತಿಲ್ಲ ಮತ್ತು ಪ್ರಾರಂಭದ ದಿನಗಳಲ್ಲಿ ಈ ಸ್ಟುಡಿಯೋ ನಷ್ಟವನ್ನು ಅನುಭವಿಸಿದ್ದು ಇದೆ.

ಈ ನಡುವೆ ಎದ್ದಿರುವ ವಿವಾದಗಳನ್ನು ನೋಡುವುದಾದರೆ ರಾಜ್ ಕುಮಾರ್ ಅವರ ನಿಧನದ ಬಳಿಕ ಅವರ ಅಂತಿಮ ಸಂಸ್ಕಾರವನ್ನು ಮಾಡುವ ನಿರ್ಧಾರವನ್ನು ಅಂದಿನ ಕುಮಾರಸ್ವಾಮಿ ಯವರ ಸರ್ಕಾರ ಕಂಠೀರವ ಸ್ಟುಡಿಯೋ ದಲ್ಲಿ ಮಾಡಬೇಕೆಂದು ನಿರ್ಧಾರಿಸುತ್ತದೆ ಯಾಕಂದ್ರೆ ರಾಜ್ ಕುಮಾರ್ ಅವರು ಬರೀ ಅವರ ಕುಟುಂಬದ ಆಸ್ತಿಯಲ್ಲ ಅವರು ನಮ್ಮ ಕರ್ನಾಟಕದ ಅಸ್ತಿ ಮತ್ತು ಸಾರ್ವಜನಿಕರ ಆಸ್ತಿ ಎಂಬ ವಿಚಾರವಾಗಿ ಹಾಗಾಗಿ ಇಲ್ಲಿ ರಾಜ್ ಕುಟುಂಬದ ನಿರ್ಧಾರ ಅವರನ್ನು ಕಂಠೀರವ ಸ್ಟುಡಿಯೋ ದಲ್ಲಿ ಅಂತ್ಯ ಸಂಸ್ಕಾರ ಮಾಡುವುದಾಗಿರಲಿಲ್ಲ

ಆ ನಂತರದಲ್ಲಿ ಪಾರ್ವತಮ್ಮ ಅವರನ್ನೂ ಅಷ್ಟೇ ಕನ್ನಡ ಚಿತ್ರ ರಂಗಕ್ಕೆ ಅವರ ಕೊಡುಗೆ ಅಪರಾವಾದದ್ದು ಮತ್ತು ಸಾಕಷ್ಟು ನಟ ನಟಿಯರು ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲು ಕಾರಣ ಅವರಾಗಿದ್ದರು ಈ ಕಾರಣದಿಂದಲೇ ಅವರ ಅಂತಿಮ ವಿಧಿಯನ್ನು ಕೂಡ ಅಲ್ಲಿಯೇ ನೆರವೇರಿಸಲಾಯಿತು ಇನ್ನೂ ಆ ನಂತರದಲ್ಲಿ ನಟ ಅಂಬರೀಷ್ ಹಾಗೂ ಇತ್ತೀಚಿಗೆ ನಮ್ಮೆಲ್ಲರನ್ನೂ ಅಗಲಿದ ಅಭಿಮಾನಿಗಳ ಅಪ್ಪು ಅವರನ್ನೂ ಕೂಡ ಕಂಠೀರವ ಸ್ಟುಡಿಯೋ ದಲ್ಲಿಯೇ ಅಂತಿಮ ಸಂಸ್ಕಾರ ಮಾಡಲಾಗಿದೆ

ಹೀಗಾಗಿ ಈ ಸ್ಟುಡಿಯೋ ಯಾವುದೇ ಕಾರಣಕ್ಕೂ ರಾಜ್ ಕುಮಾರ್ ಅವರ ಕುಟುಂಬಕ್ಕೆ ಮಾತ್ರ ಸೀಮಿತವಾಗಿಲ್ಲ ಮತ್ತು ಅಲ್ಲಿ ಆ ಕುಟುಂಬಸ್ಥರನ್ನು ಅಂತ್ಯ ಸಂಸ್ಕಾರವನ್ನು ಮಾಡುವಲ್ಲಿ ಅದು ಸರ್ಕಾರದ ನಿರ್ಧಾರವೇ ಹೊರತು ರಾಜ್ ಕುಟುಂಬದ ನಿರ್ಧಾರವಲ್ಲ ಎಂಬುದನ್ನು ನಾವಿಲ್ಲಿ ಸ್ಪಷ್ಟಪಡಿಸಬೇಕಾಗುತ್ತದೆ Video Credit For Third Eye

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: