WhatsApp Group Join Now
Telegram Group Join Now

ನಮ್ಮ ಜೀವನದಲ್ಲಿ ಧನ ಸಂಪತ್ತಿನ ಮಹತ್ವ ಎಷ್ಟಿದೆ ಎಂಬುದರ ಕುರಿತಾಗಿ ಎಲ್ಲರಿಗೂ ತಿಳಿದಿದೆ ಧನ ಸಂಪತ್ತಿನ ಕೊರತೆಯಿಂದಾಗಿ ಯಾವ ವ್ಯಕ್ತಿಯೂ ಕೂಡ ಸಂತೋಷವಾಗಿ ಇರುವುದಿಲ್ಲ ಧನಸಂಪತ್ತು ಜೀವನದಲ್ಲಿ ಎಲ್ಲವೂ ಆಗಿರುವುದಿಲ್ಲ ಅಥವಾ ಧನ ಸಂಪತ್ತಿನಿಂದ ನಾವು ಸಂತೋಷವನ್ನು ಸಂಬಂಧಗಳನ್ನು ಖರೀದಿಸುವುದಕ್ಕೆ ಸಾಧ್ಯವಾಗುವುದಿಲ್ಲ ವಾಸ್ತವದಲ್ಲಿ ಧನಸಂಪತ್ತು ಎಲ್ಲವೂ ಅಲ್ಲ ಆದರೆ ಅದು ತುಂಬಾ ಉಪಯೋಗಕ್ಕೆ ಬರುತ್ತದೆ.

ಹಣದಿಂದ ಖುಷಿಯನ್ನು ಖರೀದಿಸುವುದಕ್ಕೆ ಸಾಧ್ಯವಾಗುವುದಿಲ್ಲ ಆದರೆ ಹಣ ಹತ್ತಿರದಲ್ಲಿರುವುದರಿಂದ ಸಂತೋಷವೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಒಂದು ವೇಳೆ ಜೀವನದಲ್ಲಿ ಹಣಕ್ಕೆ ಮಹತ್ವ ಇಲ್ಲ ಎಂದಿದ್ದರೆ ಜನರು ಹಗಲು-ರಾತ್ರಿ ಹಣಕ್ಕಾಗಿ ದುಡಿಯುತ್ತಿರಲಿಲ್ಲಾ. ಎಲ್ಲರಿಗೂ ಹಣದ ಅವಶ್ಯಕತೆ ಇರುತ್ತದೆ ಪ್ರತಿಯೊಬ್ಬರು ಶ್ರೀಮಂತರಾಗುವ ಕನಸು ಕಾಣುತ್ತಿರುತ್ತಾರೆ ಪ್ರತಿಯೊಬ್ಬರಿಗೂ ಸುಖದಿಂದ ಕುಡಿದ ಜೀವನವನ್ನು ನಡೆಸುವ ಆಸೆ ಇರುತ್ತದೆ.

ಇದು ಜಗತ್ತಿನ ಕಹಿ ಸತ್ಯವಾಗಿದೆ ಯಾರ ಜೇಬಿನಲ್ಲಿ ಹಣ ವಿರುತ್ತದೆ ಅವರ ಮುಷ್ಟಿಯಲ್ಲಿ ಜಗತ್ತು ಇರುತ್ತದೆ. ಆ ಕಾರಣದಿಂದ ಎಲ್ಲರೂ ತಾಯಿ ಲಕ್ಷ್ಮಿಯ ಆರಾಧನೆಯನ್ನು ಮಾಡುತ್ತಾರೆ ಮತ್ತು ಧನ ಸಂಪತ್ತನ್ನು ಬೇಡಿಕೊಳ್ಳುತ್ತಾರೆ. ಆದರೆ ಲಕ್ಷ್ಮೀದೇವಿ ಅಷ್ಟು ಸುಲಭವಾಗಿ ಎಲ್ಲರ ಮೇಲೂ ತನ್ನ ಕೃಪೆಯನ್ನು ತೋರುವುದಿಲ್ಲ. ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದು ತುಂಬಾ ಕಷ್ಟವಾದ ಕೆಲಸವಾಗಿದೆ.

ಆದರೆ ಯಾರ ಮೇಲೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಬೀಳುತ್ತದೆ ಅವರು ಎಂದಿಗೂ ದುಃಖದಲ್ಲಿ ಇರುವುದಿಲ್ಲ ಲಕ್ಷ್ಮೀದೇವಿ ತನ್ನ ನಿಜವಾದ ಭಕ್ತರ ಮೇಲೆ ಯಾವುದಾದರೂ ಒಂದು ದಿನ ತನ್ನ ಕೃಪಾದೃಷ್ಟಿಯನ್ನು ಹರಿಸುತ್ತಾಳೆ ಲಕ್ಷ್ಮೀದೇವಿ ನಮ್ಮ ಮನೆಗೆ ಬರುವ ಮೊದಲು ಕೆಲವು ಸಂಕೇತಗಳನ್ನು ಕೊಡುತ್ತಾಳೆ. ಶಾಸ್ತ್ರಗಳಲ್ಲಿ ತಿಳಿಸಲಾದ ಈ ಸಂಕೇತಗಳು ಅತ್ಯಂತ ಶುಭ ಮತ್ತು ಲಾಭದಾಯಕವಾಗಿದೆ ನಾವಿಂದು ನಿಮಗೆ ಆ ಸಂಕೇತಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ.

ಮೊದಲನೆಯ ಸಂಕೇತ ಕಪ್ಪುಬಣ್ಣದ ಇರುವೆಗಳು. ಇದರಲ್ಲಿ ಕೆಂಪು ಬಣ್ಣದ ಮತ್ತು ಕಪ್ಪು ಬಣ್ಣದ ಇರುವೆಗಳು ಇರುತ್ತವೆ ಕೆಂಪು ಬಣ್ಣದ ಇರುವೆಗಳನ್ನು ಅಶುಭ ಎಂದು ತಿಳಿಯಲಾಗುತ್ತದೆ ಕಪ್ಪು ಬಣ್ಣದ ಇರುವೆಗಳನ್ನು ಅತ್ಯಂತ ಶುಭದಾಯಕ ಎಂದು ತಿಳಿಯಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಕಪ್ಪು ಬಣ್ಣದ ಇರುವೆಗಳನ್ನು ತಾಯಿ ಲಕ್ಷ್ಮೀದೇವಿಯ ರೂಪವೆಂದು ತಿಳಿಯಲಾಗಿದೆ.

ಅಚಾನಕ್ಕಾಗಿ ನಿಮ್ಮ ಮನೆಯಲ್ಲಿ ಕಪ್ಪು ಬಣ್ಣದ ಇರುವೆಗಳು ಗೋಲಾಕಾರದಲ್ಲಿ ತಿರುಗುತ್ತಿರುವುದು ಕಂಡುಬಂದರೆ ಅದು ತುಂಬಾ ಶುಭದಾಯಕ ಸಂಕೇತವಾಗಿರುತ್ತದೆ. ಅದು ತಾಯಿ ಲಕ್ಷ್ಮೀದೇವಿ ಮನೆಗೆ ಬರುವಂತಹ ಸಂಕೇತವು ಕೂಡ ಆಗಿರುತ್ತದೆ. ಎರಡನೆಯದಾಗಿ ಇರುವೆಗಳ ರೀತಿಯಲ್ಲಿಯೇ ಹಲ್ಲಿಗಳನ್ನು ಕೂಡ ತಾಯಿ ಲಕ್ಷ್ಮೀದೇವಿಯ ಪ್ರತೀಕವೆಂದು ತಿಳಿಯಲಾಗಿದೆ ಅಚಾನಕ್ಕಾಗಿ ಮನೆಯಲ್ಲಿ ಒಂದೇ ಸ್ಥಳದಲ್ಲಿ ಮೂರು ಹಲ್ಲಿಗಳು ನಿಮಗೆ ಕಾಣಿಸಿಕೊಂಡರೆ ಅದನ್ನು ತುಂಬಾ ಶುಭ ಎಂದು ತಿಳಿಯಲಾಗುತ್ತದೆ.

ಅದು ತಾಯಿ ಲಕ್ಷ್ಮೀದೇವಿಯ ಆಗಮನದ ಸಂಕೇತ ಕೂಡ ಆಗಿರುತ್ತದೆ. ಒಂದು ವೇಳೆ ಒಂದು ಹಲ್ಲಿ ಇನ್ನೊಂದು ಹಲ್ಲಿಯನ್ನು ಬೆನ್ನಟ್ಟುವುದು ನಿಮಗೆ ಕಂಡರೆ ಅದು ಮನೆಯ ಉನ್ನತಿಯ ಸಂಕೇತ ಆಗಿರುತ್ತದೆ ದೀಪಾವಳಿ ಹಬ್ಬದ ದಿನ ತುಳಸಿ ಸತ್ಯದ ಬಳಿ ಹಲ್ಲಿಗಳು ಕಂಡರೆ ಅದು ಅತ್ಯಂತ ಶುಭ ಎಂದು ತಿಳಿಯಲಾಗಿದೆ. ಮೂರನೆಯ ಸಂಕೇತ ಪಕ್ಷಿಗಳು ಶಾಸ್ತ್ರಗಳನ್ನು ಕೆಲವು ಪಕ್ಷಿಗಳು ನಮ್ಮ ಹತ್ತಿರದಲ್ಲಿರುವುದು ಅಶುಭ ಎಂದು ತಿಳಿಸಿದ್ದಾರೆ

ಜೊತೆಗೆ ಕೆಲವು ಪಕ್ಷಿಗಳು ನಮ್ಮ ಬಳಿ ಇರುವುದು ತಾಯಿ ಲಕ್ಷ್ಮೀದೇವಿಯ ಆಗಮನದ ಸಂಕೇತ ಎಂದು ಕೂಡಾ ತಿಳಿಸಿದ್ದಾರೆ. ನಿಮ್ಮ ಮನೆಯ ಒಳಗೆ ಯಾವುದಾದರೂ ಪಕ್ಷಿ ಬಂದು ಗೂಡು ಕಟ್ಟಿದ್ದರೆ ಅದು ತುಂಬಾ ಒಳ್ಳೆಯ ಶುಭ ಸಂಕೇತ ಎಂದು ತಿಳಿಯಲಾಗಿದೆ. ಆ ಕಾರಣದಿಂದ ಯಾವುದಾದರೂ ಪಕ್ಷಿ ಬಂದು ನಿಮ್ಮ ಮನೆಯಲ್ಲಿ ಗೂಡನ್ನು ಕಟ್ಟಿದರೆ ಅದನ್ನು ಮುರಿಯುವ ಪ್ರಯತ್ನ ಮಾಡಬೇಡಿ. ಇದರ ಬದಲಾಗಿ ಬಾವಲಿ ಅಥವಾ ಕಾಗೆಗಳು ನಿಮ್ಮ ಮನೆಗೆ ಪದೇ ಪದೇ ಬರುತ್ತಿದ್ದರೆ ಅದು ಅಶುಭದ ಸಂಕೇತ ಎಂದು ತಿಳಿಯಲಾಗಿದೆ. ತಾಯಿ ಲಕ್ಷ್ಮೀದೇವಿಯ ವಾಹನವಾದ ಗುಬೆ ಕಾಣಿಸಿಕೊಳ್ಳುವುದು ಕೂಡ ಶುಭದ ಸಂಕೇತ ಎಂದು ಹೇಳಲಾಗಿದೆ.

ನಾಲ್ಕನೆಯದಾಗಿ ಶಂಕದ ಧ್ವನಿ ಒಂದು ವೇಳೆ ದಿನದ ಯಾವುದಾದರೂ ಒಂದು ಸಮಯದಲ್ಲಿ ಅಥವಾ ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ನಿಮಗೇನಾದರೂ ಶಂಕದ ಧ್ವನಿ ಕೇಳಿ ಬಂದರೆ ಅದು ಅತ್ಯಂತ ಶುಭದಾಯಕ ಎಂದು ಹೇಳಲಾಗಿದೆ. ಅದರ ಅರ್ಥ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲಿದೆ ಎಂದು. ಐದನೆಯದಾಗಿ ನಿಮ್ಮ ಎಡಗೈಯಲ್ಲಿ ನಿರಂತರವಾಗಿ ತುರಿಕೆ ಪ್ರಾರಂಭವಾಗಿದ್ದರೆ ಅದು ಕೂಡ ಧನಪ್ರಾಪ್ತಿಯ ಶುಭ ಸಂಕೇತವಾಗಿರುತ್ತದೆ.

ಆರನೆಯದಾಗಿ ನಿರಂತರವಾಗಿ ನಿಮ್ಮ ಕನಸಿನಲ್ಲಿ ಯಾವುದಾದರೂ ಸೂಚನೆಗಳನ್ನು ನೀಡುತ್ತಲೇ ಇರುತ್ತದೆ ನೀವು ಕನಸಿನಲ್ಲಿ ಪದೇ ಪದೇ ಜಾಡು ಹಾವು ಮುಂಗುಸಿ ಗುಬೆಯನ್ನು ನೋಡಿದರೆ ಅದು ಧನ ಲಾಭವಾಗುವ ಸಂಕೇತವಾಗಿರುತ್ತದೆ. ಇದಿಷ್ಟು ಧನಲಾಭವಾಗುವುದರ ಕುರಿತು ನಿಮಗೆ ಸಿಗುವ ಸಂಕೇತಗಳ ಕುರಿತಾದ ಮಾಹಿತಿ ಆಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: