ಪ್ರಪಂಚದಲ್ಲಿರುವ ಎಲ್ಲಾ ದೇಶಗಳಲ್ಲಿ ನಮ್ಮ ದೇಶದ ಸಂಸ್ಕೃತಿಗೆ ವಿಶಿಷ್ಟ ಸ್ಥಾನವಿದೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಕೆಲವು ಮೂಢನಂಬಿಕೆಗಳನ್ನು ಆಚರಣೆ ಮಾಡುತ್ತೇವೆ. ಮೂಢನಂಬಿಕೆಗಳ ಹಿಂದೆ ಒಂದು ವಿಶೇಷ ಅರ್ಥವಿರುತ್ತದೆ ಆದರೆ ಅದು ನಮಗೆ ತಿಳಿದಿರುವುದಿಲ್ಲ. ಹಾಗಾದರೆ ಮೂಢನಂಬಿಕೆಗಳ ಹಿಂದಿರುವ ಕಾರಣವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಮನೆಯ ಮುಂದೆ ಮೆಣಸಿನಕಾಯಿ ಮತ್ತು ಲಿಂಬೆಕಾಯಿಯನ್ನು ಕಟ್ಟಿದರೆ ಕೆಟ್ಟದೃಷ್ಟಿ, ಕೆಟ್ಟ ಶಕ್ತಿಗಳು ನಾಶವಾಗುತ್ತದೆ ಎಂದು ನಂಬಲಾಗಿದೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ಇರುತ್ತದೆ ಮತ್ತು ಮೆಣಸಿನ ಕಾಯಿಗಳು ಕ್ರಿಮಿಕೀಟಗಳನ್ನು ನಾಶಪಡಿಸುವ ಗುಣವನ್ನು ಹೊಂದಿದೆ ಆದ್ದರಿಂದ ಮನೆಯ ಮುಂದೆ ಮೆಣಸಿನಕಾಯಿ ಮತ್ತು ನಿಂಬೆಕಾಯಿಯನ್ನು ಕಟ್ಟುವುದರಿಂದ ಕ್ರಿಮಿಕೀಟಗಳು ಮನೆಯ ಒಳಗೆ ಬರದಂತೆ ತಡೆಯುತ್ತದೆ. ನದಿ ನೀರಿನಲ್ಲಿ, ಬಾವಿಯಲ್ಲಿ ನಾಣ್ಯಗಳನ್ನು ಹಾಕಿದರೆ ಅದೃಷ್ಟ ಬರುತ್ತದೆ ಎಂದು ನಂಬಲಾಗಿದೆ. ಮೊದಲಿನ ಕಾಲದಲ್ಲಿ ನಾಣ್ಯಗಳು ತಾಮ್ರದಿಂದ ಮಾಡಲಾಗಿರುತ್ತಿತ್ತು. ಈ ತಾಮ್ರದ ನಾಣ್ಯಗಳನ್ನು ನೀರಿಗೆ ಹಾಕಿದಾಗ ಬಹಳ ಕಾಲ ನೀರಿನಲ್ಲಿ ಇರುವುದರಿಂದ ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಮಾಡಿ ನೀರನ್ನು ಸ್ವಚ್ಛಗೊಳಿಸುತ್ತದೆ. ಇದರಿಂದ ಆ ನೀರು ಕುಡಿಯಲು ಯೋಗ್ಯವಾಗಿರುತ್ತದೆ.

ಸೂರ್ಯಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗೆ ಬರಬಾರದು, ಬಂದರೆ ರಾಹುವಿನ ಕೆಟ್ಟದೃಷ್ಟಿ ನಮ್ಮ ಮೇಲೆ ಬೀಳುತ್ತದೆ ಎಂಬ ನಂಬಿಕೆ ಇದೆ. ಸೂರ್ಯಗ್ರಹಣದ ಸಮಯದಲ್ಲಿ ನೇರವಾಗಿ ಸೂರ್ಯನನ್ನು ನಾವು ಬರಿಗಣ್ಣಿನಿಂದ ನೋಡಿದರೆ ನಮ್ಮ ಕಣ್ಣಿನ ರೆಟಿನಾ ಘಾಸಿಗೊಳ್ಳುತ್ತದೆ. ಸೂರ್ಯನಿಂದ ಬರುವ ಯುವಿ ಕಿರಣಗಳು ಗರ್ಭಿಣಿ ಸ್ತ್ರೀಯರ ಹೊಟ್ಟೆಯಲ್ಲಿರುವ ಮಗುವಿಗೆ ಅಪಾಯಕಾರಿ ಆದ್ದರಿಂದ ಸೂರ್ಯಗ್ರಹಣದಲ್ಲಿ ಸೂರ್ಯನನ್ನು ನೋಡಬಾರದು. ದೇವಸ್ಥಾನಗಳಿಗೆ, ಶುಭಕಾರ್ಯಗಳಿಗೆ ಹಣ ಕೊಡುವಾಗ ಒಂದು ರೂಪಾಯಿಯನ್ನು ಸೇರಿಸಿ ಕೊಡಬೇಕು ಎನ್ನುತ್ತಾರೆ. ಏಕೆಂದರೆ ಉದಾಹರಣೆಗೆ ನೂರು ರೂಪಾಯಿ ಎಂದರೆ ರೌಂಡ್ ಫಿಗರ್ ಕಂಟಿನ್ಯೂಟಿ ಇರುವುದಿಲ್ಲ. ಶುಭಕಾರ್ಯಗಳಿಗೆ ಅಥವಾ ದೇವಸ್ಥಾನಕ್ಕೆ ಹಣ ಕೊಡುವಾಗ ಸೊನ್ನೆಯಿಂದ ಮುಗಿಯುವ ಸಂಖ್ಯೆಯ ಮೊತ್ತದ ಹಣ ಕೊಟ್ಟರೆ ಅವರ ಜೀವನ ನಿಂತು ಹೋಗುತ್ತದೆ ಎಂಬ ನಂಬಿಕೆ. ಒಂದು ರೂಪಾಯಿ ಸೇರಿಸಿ ಕೊಟ್ಟರೆ ಶುಭಕಾರ್ಯ ಮುಂದುವರೆಯುತ್ತದೆ ಎಂದು ಹೇಳಲಾಗುತ್ತದೆ.

ರಾತ್ರಿ ಸಮಯದಲ್ಲಿ ಉಗುರನ್ನು ಕತ್ತರಿಸುವುದು ಅಪಶಕುನ ಎಂದು ಹೇಳುತ್ತಾರೆ. ಮೊದಲಿನ ಕಾಲದಲ್ಲಿ ಕರೆಂಟ್ ಇರಲಿಲ್ಲ ಲ್ಯಾಂಪ್ ಗಳನ್ನು ಬಳಸುತ್ತಿದ್ದರು ಆದ್ದರಿಂದ ರಾತ್ರಿ ಸಮಯದಲ್ಲಿ ಸರಿಯಾಗಿ ಕಾಣದೆ ಉಗುರು ಕತ್ತರಿಸುವಾಗ ಬೆರಳುಗಳಿಗೆ ಗಾಯ ಆಗುತ್ತಿತ್ತು ಆದ್ದರಿಂದ ರಾತ್ರಿ ಸಮಯದಲ್ಲಿ ಉಗುರನ್ನು ಕತ್ತರಿಸಬಾರದು ಎಂದು ಹೇಳುತ್ತಿದ್ದರು. ರಾತ್ರಿ ಗಿಡ, ಮರಗಳ ಕೆಳಗೆ ಮಲಗಬಾರದು ಎಂದು ಹೇಳುತ್ತಾರೆ. ರಾತ್ರಿ ಗಿಡ, ಮರಗಳು ಆಕ್ಸಿಜನ್ ಅನ್ನು ತೆಗೆದುಕೊಂಡು ಕಾರ್ಬನ್ ಡೈ ಆಕ್ಸೈಡನ್ನು ಹೊರಗೆ ಹಾಕುತ್ತದೆ. ನಾವು ಅವುಗಳ ಕೆಳಗೆ ಮಲಗಿದಾಗ ಉಸಿರಾಟದ ಸಮಸ್ಯೆ ಬರುವ ಸಾಧ್ಯತೆಗಳು ಇರುತ್ತದೆ. ಮನೆಯಿಂದ ಹೊರಗಡೆ ಹೋಗುವಾಗ ಮೊಸರನ್ನು ತಿಂದು ಹೋಗುವುದು ಶುಭಕಾರಕ ಎಂದು ಹೇಳುತ್ತಾರೆ. ಮೊದಲಿನ ಕಾಲದಲ್ಲಿ ಎತ್ತಿನಗಾಡಿ, ಕುದುರೆಗಾಡಿಗಳಲ್ಲಿ ಹೋಗುತ್ತಿದ್ದರು. ಬಿಸಿಲಿನ ಸಮಯದಲ್ಲಿ ಮೊಸರನ್ನು ತಿನ್ನುವುದರಿಂದ ದೇಹವನ್ನು ಡಿಹೈಡ್ರೇಟ್ ಆಗದಂತೆ ಶರೀರದ ತಾಪವನ್ನು ಕಡಿಮೆ ಮಾಡುತ್ತದೆ. ಮೊಸರಿನ ಜೊತೆ ಸಕ್ಕರೆಯನ್ನು ಸೇರಿಸಿ ತಿನ್ನುವುದರಿಂದ ನಮ್ಮ ದೇಹಕ್ಕೆ ಬಹಳ ಒಳ್ಳೆಯದು.

ಕಪ್ಪು ಬೆಕ್ಕು ಎದುರಿಗೆ ಬಂದರೆ ಅಪಶಕುನ ಎಂದು ಹೇಳುತ್ತಾರೆ. ಮೊದಲಿನ ಕಾಲದಲ್ಲಿ ಎತ್ತಿನಗಾಡಿ, ಕುದುರೆಗಾಡಿಗಳಲ್ಲಿ ಹೋಗುವಾಗ ರಾತ್ರಿ ಸಮಯದಲ್ಲಿ ಚಿರತೆ, ಬೆಕ್ಕು ಎದುರಿಗೆ ಬರುತ್ತಿದ್ದವು. ರಾತ್ರಿ ಸಮಯದಲ್ಲಿ ಅವುಗಳ ಕಣ್ಣನ್ನು ನೋಡಿ ಎತ್ತು, ಕುದುರೆಗಳು ಭಯ ಬೀಳುತ್ತಿದ್ದವು ಆದ್ದರಿಂದ ಪ್ರಯಾಣವನ್ನು ನಿಲ್ಲಿಸಿ ಸ್ವಲ್ಪ ಸಮಯ ಅಲ್ಲಿಯೆ ಇದ್ದು, ಭಯ ಕಡಿಮೆಯಾದ ನಂತರ ಪ್ರಯಾಣವನ್ನು ಮುಂದುವರಿಸುತ್ತಿದ್ದರು. ನಂತರ ಇದು ಮೂಢನಂಬಿಕೆಯಾಗಿ ಮುಂದುವರೆಯಿತು. ಮನೆಯಲ್ಲಿ ಕನ್ನಡಿ ಒಡೆದು ಹೋಗಬಾರದು ಅಥವಾ ಒಡೆದುಹೋದ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳಬಾರದು ಎಂದು ಹೇಳುತ್ತಾರೆ. ಮೊದಲಿನ ಕಾಲದಲ್ಲಿ ಕನ್ನಡಿ ಹೆಚ್ಚು ಬೆಲೆ ಮತ್ತು ಕಡಿಮೆ ಕ್ವಾಲಿಟಿ ಇರುತ್ತಿತ್ತು ಆದ್ದರಿಂದ ಕನ್ನಡಿಗಳು ಬೇಗ ಒಡೆದು ಹೋಗುತ್ತಿತ್ತು ಮತ್ತು ತಯಾರಿಸುವುದು ಕಷ್ಟವಾಗಿತ್ತು, ಕನ್ನಡಿಗಳನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗಿತ್ತು ಆದ್ದರಿಂದ ಕನ್ನಡಿ ಒಡೆದು ಹೋಗಬಾರದು ಅಥವಾ ಒಡೆದ ಕನ್ನಡಿಯಲ್ಲಿ ಮುಖ ನೋಡಬಾರದು ಎಂದು ಹೇಳುತ್ತಾರೆ.

ಬಾವಲಿಗಳು ಮನೆಯೊಳಗೆ ಬಂದರೆ ಮೃತ್ಯವಿನ ಸಂಕೇತ ಎಂದು ಹೇಳುತ್ತಾರೆ. ಬಾವಲಿಗಳು ಕಚ್ಚಿದರೆ ಭೀಕರ ಖಾಯಿಲೆ ಉಂಟಾಗುತ್ತದೆ ಮತ್ತು ಆಗಿನ ಕಾಲದಲ್ಲಿ ಖಾಯಿಲೆಗಳಿಗೆ ಔಷಧಿ ಇರಲಿಲ್ಲ ಆದ್ದರಿಂದ ಬಾವಲಿಗಳು ಬಂದರೆ ಅಪಶಕುನ ಎಂದು ಹೇಳುತ್ತಿದ್ದರು. ಮನುಷ್ಯನ ಮೇಲೆ ಹಲ್ಲಿ ಬಿದ್ದರೆ ಕೆಟ್ಟದಾಗುತ್ತದೆ, ಅಪಶಕುನ ಎಂದು ಹೇಳುತ್ತಾರೆ. ಹಲ್ಲಿಗಳು ವಿಷ ಪ್ರಾಣಿಗಳು, ತಮ್ಮ ಶತ್ರುಗಳಿಂದ ತಪ್ಪಿಸಿಕೊಳ್ಳಲು ತಮ್ಮ ಶರೀರದಿಂದ ವಿಷವನ್ನು ಬಿಡುಗಡೆ ಮಾಡುತ್ತವೆ ಆದ್ದರಿಂದ ಹಲ್ಲಿ ಬಿದ್ದರೆ ಸ್ನಾನ ಮಾಡಬೇಕು ಮತ್ತು ಹಲ್ಲಿಬಿದ್ದ ಆಹಾರವನ್ನು ಸೇವಿಸಬಾರದು ಎಂದು ಹೇಳುತ್ತಾರೆ. ಸಾಯಂಕಾಲ ಸಮಯದಲ್ಲಿ ಮನೆಯಲ್ಲಿ ಕಸ ಗುಡಿಸುವುದು ದರಿದ್ರ ಎಂದು ಹೇಳುತ್ತಾರೆ. ಮೊದಲಿನ ಕಾಲದಲ್ಲಿ ಕರೆಂಟ್ ಇರುತ್ತಿರಲಿಲ್ಲ, ಚಿಕ್ಕ ದೀಪ ಇಟ್ಟುಕೊಳ್ಳುವುದರಿಂದ ಕತ್ತಲಾದ ನಂತರ ಕಸ ಗುಡಿಸುವುದರಿಂದ ಬೇಕಾಗುವ ವಸ್ತುಗಳು ಅಥವಾ ಬಂಗಾರದ ಆಭರಣಗಳು ಹೊರಗೆ ಹೋಗಿಬಿಡುವ ಸಾಧ್ಯತೆಗಳಿರುತ್ತದೆ ಆದ್ದರಿಂದ ರಾತ್ರಿ ಹೊತ್ತು ಕಸ ಗುಡಿಸಬಾರದು ಎಂದು ಹೇಳುತ್ತಾರೆ. ಅದು ಈಗಲೂ ಮೂಢನಂಬಿಕೆಯಾಗಿ ಮುಂದುವರೆದಿದೆ. ಯಾವುದೇ ಆಚರಣೆಯ ಹಿಂದೆ ಒಂದು ವೈಜ್ಞಾನಿಕ ಸತ್ಯ ಅಡಗಿರುತ್ತದೆ ಅದನ್ನು ತಿಳಿದುಕೊಂಡು ಆಚರಣೆ ಮಾಡುವುದು ಒಳ್ಳೆಯದು ಹಾಗೆಯೆ ನೀವು ತಿಳಿದುಕೊಂಡ ವೈಜ್ಞಾನಿಕ ಸತ್ಯವನ್ನು ಬೇರೆಯವರಿಗೂ ತಿಳಿಸಿ.

By admin

Leave a Reply

Your email address will not be published. Required fields are marked *

error: Content is protected !!
Footer code: