ಕೆಮ್ಮು ಒಂದು ವ್ಯಾಧಿಯಲ್ಲ, ಬದಲಿಗೆ ನಮ್ಮ ರೋಗ ನಿರೋಧಕ ವ್ಯವಸ್ಥೆಯ ಒಂದು ಅಂಗವಾಗಿದೆ. ನಮ್ಮ ಶ್ವಾಸನಾಳಗಳ ಒಳಗೆ ಅಂಟಿಕೊಳ್ಳುವ ಧ್ರವ ಜಿನುಗುತ್ತದೆ,ಇದು ಗಾಳಿಯಲ್ಲಿ ತೇಲಿ ಬರುವ ರೋಗಾಣುಗಳು ಹಾಗೂ ಧೂಳನ್ನು ಅಂಟಿಸಿಕೊಳ್ಳುವ ಮೂಲಕ ಶ್ವಾಸಕೋಶಗಳ ಒಳಗೆ ಇವುಗಳ ಪ್ರವೇಶವನ್ನು ಪ್ರತಿ ಬಂದಿಸುತ್ತದೆ. ಹೀಗೆ ವೈರಾಣಗಳನ್ನು ಅಂಟಿಸಿಕೊಂಡ ದ್ರವ ಗಟ್ಟಿಯಾಗಿ ಕಫದ ರೂಪ ಪಡೆಯುತ್ತದೆ.
ಕೆಮ್ಮನ್ನು ನಿವಾರಿಸಬೇಕೆಂದರೆ ಅಂಟಿಕೊಂಡಿರುವ ಈ ಕಫವನ್ನು ನಿವಾರಿಸಬೇಕು. ಕಫ್ ಗಟ್ಟಿಯಾಗಿದ್ದಷ್ಟು ಇದನ್ನು ನಿವಾರಿಸಲು ಕಷ್ಟವಾಗುತ್ತಾ ಕೆಮ್ಮು ಅನವರತವಾಗುತ್ತದೆ. ಕೆಲವು ಸಾಮಗ್ರಿಗಳು ಈ ಕಫವನ್ನು ಸಡಿಲಿಸಲು ಸಮರ್ಥವಾಗಿದೆ. ಮಾರುಕಟ್ಟೆಯಲ್ಲಿ ಕೆಮ್ಮಿನ ಸಿರಪ್ ಗಳು ಸಿಗುತ್ತವೆ. ಇವು ಬಲವಂತವಾಗಿ ಕಫವನ್ನು ನಿವಾರಿಸುತ್ತವೆಯಾದರೂ ಇದಕ್ಕಾಗಿ ಬಳಸಲಾಗಿರುವ ಔಷಧಿಯಲ್ಲಿ ಮಾದಕ ಪದಾರ್ಥಗಳು ಇರುತ್ತವೆ. ಇವು ಶರೀರವನ್ನು ಹಾಗೂ ಸುಸ್ತು ಎದುರಾಗಬಹುದು. ಇವುಗಳ ಬದಲಿಗೆ ಕೆಲವು ಮನೆ ಮದ್ದುಗಳನ್ನು ಬಳಸಿದರೆ ಬಹು ಬೇಗ ಕಡಿಮೆ ಆಗುತ್ತದೆ..
ಲಿಂಬೆ ರಸ ಅತ್ಯುತ್ತಮ ಕಫಹಾರಿಯಾಗಿದ್ದು ವಿಶೇಷವಾಗಿ ಕೆಮ್ಮಿನ ಮೂಲಕ ಎದುರಾಗಿದ್ದ ಗಂಟಲಿನ ಕಿರಿಕಿರಿ ಹಾಗೂ ತುರಿಕೆಯನ್ನು ನಿವಾರಿಸುತ್ತದೆ.ಕೆಲವು ವೀಳ್ಯದೆಲೆಗಳನ್ನು ನುಣ್ಣಗೆ ಅರೆದು ಎದೆಯ ಮೇಲೆ ಹಚ್ಚಿ. ಇದರಿಂದ ಕೆಮ್ಮು ಕಡಿಮೆಯಾಗುತ್ತದೆ. ಕೆಮ್ಮು ಎದುರಾದರೆ ಧೂಮಾಪನ, ಮಾಂಸಹಾರ,ಸಕ್ಕರೆ, ಟೀ, ಕಾಫಿ, ಇವೆಲ್ಲಾ ಆಹಾರಗಳಿಂದ ದೂರವಿದ್ದಷ್ಟು ಒಳ್ಳೆಯದು
ಒಂದಿಂಚು ಹಸಿ ಶುಂಠಿಯನ್ನು(ಅಥವಾ ಒಣ ಶುಂಠಿ )ಸಣ್ಣಗೆ ಜಜ್ಜಿ ಹಾಗೆ ಲವಂಗವನ್ನು ಪುಡಿ ಮಾಡಿ ಒಂದು ಲೋಟ ಹಾಲಿಗೆ ಇವೆರಡರ ಮಿಶ್ರಣ ಹಾಕಿ ಕಡಿಮೆ ಉರಿಯಲ್ಲಿ ಚನ್ನಾಗಿ ಕುದಿಸಿ ಅದನ್ನು ಒಂದು ಲೋಟದಲ್ಲಿ ಶೋಧಿಸಿಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿ ಕುಡಿಯುವುದರಿಂದ ಕೆಮ್ಮು ಕಫ್ ನೆಗಡಿ ಬೇಗ ಕಡಿಮೆ ಆಗುತ್ತದೆ.