ಉತ್ತಮ ರುಚಿ, ಸಖತ್ ಡಿಮ್ಯಾಂಡ್ ಈ ಮೀನು ಸಾಕಿದ್ರೆ ನಿಮಗೆ ಭರ್ಜರಿ ಲಾಭ ಉಂಟು ನೋಡಿ

0

ಗದ್ದೆಯಲ್ಲಿ ಹೊಂಡ ತೆಗೆದು ಅದಕ್ಕೆ ಸಿಹಿ ನೀರು ತುಂಬಿಸಿ ಘಟ್ಟದ ಮೇಲ್ಗಡೆ ಹೆಚ್ಚು ಬೆಳೆಯುವ ಗೌರಿ, ಕಾಟ್ಲಾ, ರೋಹು ಮೀನುಗಳ ಸಾಕಣೆ ಆರಂಭಿಸಲಾಗಿದೆ. ಗದ್ದೆಯಲ್ಲೇ ಕರೆ ಹೊಂಡ ರಚಿಸಿ ತಾಳಭಾಗದಲ್ಲಿ ಪ್ಲಾಸ್ಟಿಕ್ ಹೊದಿಕೆ,ಪಂಪ್ ಸೆಟ್, ಮೀನುಗಳಿಗೆ ಆಹಾರ ಒದಗಿಸುವಿಕೆ ಸೇರಿದಂತೆ 5 ಲಕ್ಷ ಮೇಲ್ಪಟ್ಟು ವ್ಯಯವಾಗುತ್ತದೆ.ಘಟ್ಟದ ಊರುಗಳಲ್ಲಿ ಹೆಚ್ಚು ಬೆಳೆಯುವ ಗೌರಿ, ಕಟ್ಲಾಮೀನು ಬೆಳೆಸುವ ಉದ್ದೇಶದಿಂದ ಇವರು ತಮ್ಮದೇ ಗದ್ದೆಯಲ್ಲಿ 10 ಅಡಿ ಆಳ ತೆಗೆದಿದ್ದಾರೆ,170 ಅಡಿ ಉದ್ದಕ್ಕೆ ಅದನ್ನು ವಿಸ್ತರಿಸಿದ್ದಾರೆ, 50 ಅಡಿ ಅಗಲ, 170 ಅಡಿ ಉದ್ದ ಹಾಗೂ 10 ಅಡಿ ಆಳದ ಕೆರೆ ಸಿದ್ಧಗೊಳಿಸಿ ಅದಕ್ಕೆ ಸನಿಹದಲ್ಲಿ ಹರಿಯುವ ಸಿಹಿ ನೀರಿನ ಹೊಳೆಯಿಂದ ಪಂಪ್ ಮೂಲಕ ನೀರು ಹಾಯ್ಸಿದ್ದಾರೆ.

9 ತಿಂಗಳ ಹಿಂದೆ ಮೀನುಗಾರಿಕೆ ಇಲಾಖೆ ಶಿವಮೊಗ್ಗ ಹ್ಯಾಚಾರಿಯಿಂದ ಗೌರಿ, ಕಾಟ್ಲಾ ಮತ್ತು ರೋಹು ಮೀನಿನ ಮರಿಗಳನ್ನು ತಂದು ಕೃತಕ ಕೆರೆಯಲ್ಲಿ ಬಿಟ್ಟು ಅದರ ಪೋಷಣೆ ಆರಂಭಿಸಿದ್ದಾರೆ.ರೋಹು ಒಂದು ದೊಡ್ಡದಾದ ಬೆಳ್ಳಿಯ ಬಣ್ಣದ ವಿಶಿಷ್ಟವಾದ ಸಿಪ್ರಿನಿಡ್ ಆಕಾರದ ಮೀನು ಆಗಿದ್ದು, ಎದ್ದು ಕಾಣುವ ಕಾಮಾನಿನ ತಲೆಯನ್ನು ಹೊಂದಿರುತ್ತದೆ. ವಯಸ್ಕರು ಗರಿಷ್ಠ ತೂಕ 45 ಕೆಜಿ (99ಪೌಂಡು ) ಮತ್ತು  ಗರಿಷ್ಠ ಉದ್ದ 2ಮೀ (6.6ಅಡಿ )ರೋಹವು ಉತ್ತರ ಮತ್ತು ಮಧ್ಯ ಮತ್ತು ಪೂರ್ವ ಭಾರತ, ಪಾಕಿಸ್ತಾನ,ವಿಯೇಟ್ನಮ್, ಬಂಗ್ಲಾದೇಶ, ನೇಪಾಳ,ಮತ್ತು ಮಾಯನ್ಮರ್ ದಂತಹ ನದಿಗಳಲ್ಲಿ ಕಂಡುಬರುತ್ತದೆ ಮತ್ತು ಇದನ್ನು ಪೆನಿನ್ಸಲರ್ ಭಾರತ ಮತ್ತು ಶ್ರೀಲಂಕಾದ ಕೆಲವು ನದಿಗಳಲ್ಲಿ ಪರಿಚಯಸಲಾಗಿದೆ.

ತಲೆ ಮತ್ತು ಬಾಲದ ತುಂಡುಗಳನ್ನು ಹೊಂದಿರುವ ರೋಹು ಮೀನು ಪ್ರೊಟೀನ್ ಗಳಲ್ಲಿ ಸಮೃದ್ಧವಾಗಿದೆ ಮತ್ತು ಕಡಿಮೆ ಕೊಬ್ಬನ್ನು ಹೊಂದಿರುತ್ತದೆ, ಇದು ಸತು, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಸಾಕಷ್ಟು ಖನಿಜಗಳನ್ನು ಹೊಂದಿದೆ ಮತ್ತು ಒಮೆಗಾ -3 ಕೊಬ್ಬಿನಾಮ್ಲಾಗಳನ್ನು ಹೇರಾಳವಾಗಿ ಹೊಂದಿದೆ. ವಿಟಮಿನ್ ಎ ಮತ್ತು ಡಿ ಕೂಡ ಇರುತ್ತದೆ. ಉರಿಯುತದ ಗುಣ ಲಕ್ಷಣಗಳನ್ನು ಹೊಂದಿದೆ. ಇದು ಚರ್ಮ ಉಗುರುಗಳು ಮತ್ತು ಕೂದಲನ್ನು ವರ್ಧಸುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ಮತ್ತು ಹೃದಯರಕ್ತನಾಳದ ಖಾಯಿಲೆಗಳನ್ನು ತಡೆಯುತ್ತದೆ.

ಈ ಕರಿ ಕಟ್ ರೋಹು ಮೀನು ತಲೆಯೊಂದಿಗೆ ಬರುತ್ತದೆ, ಅದನ್ನು ಶುಚಿಗೊಳಿಸಲಾಗುತ್ತದೆ ಮತ್ತು ತೆಳುಗೊಳಿಸಲಾಗುತ್ತದೆ.ಇವುಗಳು ಸಿಹಿ ನೀರಿನಲ್ಲಿ ಸಹಜ ಬೆಳವಣಿಗೆ ಕಾಣುತ್ತವೆ, ಉಪ್ಪು ನೀರಿನಲ್ಲಿ ಕೆಂಬೇರಿ, ಕರುಡಿ ಮೀನಿಗಳಿಗೆ ಮೀನು ಮಾಂಸ ತ್ಯಾಜ್ಯ ಆಹಾರವಾಗಿ ಬಳಸುವ ಪರಿಪಾಠವಿದ್ದರೆ ಇವುಗಳಿಗೆ ಅದರ ಅವಶ್ಯಕತೆನೆ ಇಲ್ಲಾ. ಸಿಹಿ ನೀರಿನ ಸಹಜ ಪ್ರಾಕೃತಿಕ ವಾತಾವರಣಕ್ಕೆ ಸಮೃದ್ಧವಾಗಿ ಬೆಳೆಯುತ್ತವೆ

Leave A Reply

Your email address will not be published.

error: Content is protected !!